For Quick Alerts
ALLOW NOTIFICATIONS  
For Daily Alerts

ನವರಾತ್ರಿಯಂದು ದುರ್ಗಾ ಸಪ್ತಶತಿಯನ್ನು ಪಠಿಸುವುದು ಅತಿ ಮುಖ್ಯ ಏಕೆ?

By Jaya Subramanya
|

ದುರ್ಗಾಮಾತೆಯು ಅವತಾರವನ್ನು ತಾಳಿರುವುದು ದುಷ್ಟ ಮಹಿಷಾಸುರನನ್ನು ಮಧಿಸುವುದಕ್ಕಾಗಿದೆ. ವಿಶಿಷ್ಟ ವರವೊಂದನ್ನು ಬೇಡಿಕೊಂಡಿದ್ದ ಮಹಿಷಾಸುರನನ್ನು ವಧಿಸುವುದಕ್ಕೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆ ಎರೆದು ಪ್ರಬಲ ಶಕ್ತಿಯೊಂದನ್ನು ರೂಪಿಸುತ್ತಾರೆ. ಅವರೇ ದುರ್ಗಾಮಾತೆಯಾಗಿದ್ದಾರೆ.

ಇನ್ನೇನು ಈ ವರ್ಷ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 7ರವರೆಗೆ ನವರಾತ್ರಿ ಹಬ್ಬ ಆರಂಭವಾಗುತ್ತಿದೆ. ಈ ವೇಳೆ ಸಕಲ ದುಷ್ಟಶಕ್ತಿಗಳಿಂದ ಕಾಪಾಡುವ ದೇವಿಯನ್ನು ನೆನೆಯುವುದು ಇಂದು ಪ್ರತಿಯೊಂದು ಮನೆಗಳಲ್ಲಿ ಸಂಪ್ರದಾಯವಾಗಿದೆ. ಹೆಚ್ಚಿನ ಬಲಿಷ್ಠ ಶಕ್ತಿಗಳನ್ನು ಹೊಂದಿರುವ ದುರ್ಗಾಮಾತೆಯು ಜಗನ್‌ಮಾತೆ ಎಂದೆನಿಸಿಕೊಂಡಿದ್ದಾರೆ. ಯಾವುದೇ ಕಾರ್ಯದಲ್ಲಿ ಯಶಸ್ಸು ನಮ್ಮದಾಗಬೇಕು ಎಂದಾದಲ್ಲಿ ದುರ್ಗೆಯನ್ನು ಮನಸ್ಸಿನಲ್ಲಿ ಪ್ರಾರ್ಥಿಸಿದರೆ ಸಾಕು ಆ ಕೆಲಸದಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳುತ್ತೇವೆ.

Durga Pooja

ರಾವಣನನ್ನು ಸೋಲಿಸಲು ರಾಮನ ಕೂಡ ಯುದ್ಧಕ್ಕೆ ಮೊದಲು ದುರ್ಗೆಯನ್ನು ಪ್ರಾರ್ಥಿಸಿಕೊಂಡಿದ್ದರು ಎಂಬುದಾಗಿ ಪುರಾಣಗಳು ಹೇಳುತ್ತಿವೆ. ಹೀಗೆ ದುರ್ಗೆಯನ್ನು ನೆನೆದವರನ್ನು ಆಕೆ ಸದಾಕಾಲವೂ ಕಾಪಾಡುತ್ತಾರೆ. ಇಂದಿನ ಲೇಖನದಲ್ಲಿ ಆಕೆಯ ಶಕ್ತಿ ಸ್ವರೂಪವಾದ ಚಂಡಿ ಪಥದ ಬಗ್ಗೆ ಅರಿತುಕೊಳ್ಳೋಣ. ಚಂಡಿ ಎಂಬುದು ಸಂಸ್ಕೃತದಲ್ಲಿ ಭಯವನ್ನು ಹೋಗಲಾಡಿಸುವುದು ಎಂಬುದಾಗಿ ಅರ್ಥವನ್ನು ನೀಡುತ್ತದೆ. ಅಂದರೆ ಭಯವನ್ನು ನಿವಾರಿಸುವ ರಕ್ಷಾ ಕವಚವಾಗಿ ಈ ಚಂಡಿ ಪಥ ಕಾರ್ಯನಿರ್ವಹಿಸುತ್ತದೆ.

ಇದನ್ನು ದುರ್ಗಾ ಸಪ್ತಶತಿ ಎಂಬುದಾಗಿ ಕೂಡ ಕರೆಯುತ್ತಾರೆ. ಮಾರ್ಕಂಡೇಯ ಪುರಾಣದ 13 ನೇ ಅಧ್ಯಾಯನದಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ದೇವರು ಮತ್ತು ದುಷ್ಟ ಶಕ್ತಿಯ ನಡುವಿನ ಕಥೆಯನ್ನು ಇದು ಹೇಳುತ್ತದೆ. ಮಹಿಷಾಸುರನನ್ನು ದುರ್ಗಾಮಾತೆಯು ಹೇಗೆ ವಧಿಸಿದರು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದೇ ಮಾತೆಯು ಲಕ್ಷ್ಮೀ ಸ್ವರೂಪದಲ್ಲಿ ಅವತಾರವನ್ನು ತಳೆದು ತನ್ನ ಭಕ್ತರಿಗೆ ಧನ ಕನಕ ಸಂಪತ್ತುಗಳನ್ನು ಹಂಚಿ ಮಗುವಿನಂತೆ ನೋಡಿಕೊಳ್ಳುತ್ತಾರೆ.

ಆದರೆ ಅದುವೇ ಕೆಟ್ಟದ್ದು ನಡೆದ ಸಂದರ್ಭದಲ್ಲಿ ದುರ್ಗೆಯ ಅವತಾರವನ್ನು ತಾಳಿ ದಮನ ಮಾಡುತ್ತಾರೆ. ಇದು 700 ಮಂತ್ರಗಳನ್ನು ಹೊಂದಿದ್ದು ಏಕಾಗ್ರತೆಯಿಂದ ತಪ್ಪಿಲ್ಲದೆ ಇದರ ಉಚ್ಛಾರಣೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಇದನ್ನು ಓದುವವರಿಗೆ ಮಾತೆಯ ಅನುಗ್ರಹ ದೊರೆಯುತ್ತದೆ. ಚೈತ್ರ ಅಥವಾ ಶರದ್ ಋತುವಿನಲ್ಲಿ ಈ ಮಂತ್ರವನ್ನು ಪಠಿಸಬೇಕು. ಹೋಮಗಳನ್ನು ಮಾಡುವಾಗ ಈ ಮಂತ್ರಗಳನ್ನು ಪಠಿಸುತ್ತಿದ್ದರು.

ಚಂಡಿ ಪಥದಲ್ಲಿರುವುದರ ಪ್ರಯೋಜನಗಳು
ಈ ಮಂತ್ರವನ್ನು ಪಠಿಸುವುದು ಓದುಗರಿಗೆ ಧನಾತ್ಮಕವಾಗಿ ಪರಿಣಾಮವನ್ನು ಉಂಟುಮಾಡಲಿದ್ದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇದು ವ್ಯಕ್ತಿಗೆ ಧೈರ್ಯವನ್ನು ನೀಡುತ್ತದೆ ಮತ್ತು ಅವರಲ್ಲಿದ್ದ ಭಯವನ್ನು ದೂರಮಾಡುತ್ತದೆ. ಇದು ದೈಹಿಕವಾಗಿ ಕೂಡ ನಮ್ಮನ್ನು ಸ್ವಾಸ್ಥ್ಯರನ್ನಾಗಿಸಲು ಸಹಕಾರಿಯಾಗಿದೆ. ಇದನ್ನು ಸರಿಯಾದ ಉಚ್ಛಾರಣೆಯಲ್ಲಿ ಆರೋಹಣ ಮತ್ತು ಅವರೋಹಣದಲ್ಲಿ ಪಠಿಸುವುದರಿಂದ ಓದುವವರಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ.

English summary

Significance Of Reciting Chandi Path During Durga Pooja

Goddess Durga is the divine being. She is the protector of all good things. She is the invincible power created by all the gods to destroy the evil Mahishasura. Mahishasura obtained special powers, which made it impossible for any of the Gods to destroy him. Therefore, all the gods created a supreme entity to destroy him. Durga Maa was created
X
Desktop Bottom Promotion