For Quick Alerts
ALLOW NOTIFICATIONS  
For Daily Alerts

ದೀಪಾವಳಿ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ

By Manu
|

ದೀಪಾವಳಿ ಹಿಂದೂ ಕ್ಯಾಲೆಂಡರ್‌ನ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಕೆಲವೆಡೆ ನಾಲ್ಕು ದಿನಗಳ ಕಾಲ (ಮೊದಲ ದಿನ -ನರಕ ಚತುರ್ದಶಿ, ಎರಡನೇ ದಿನ-ಲಕ್ಷ್ಮೀಪೂಜೆ, ಮೂರನೆಯ ದಿನ-ಕಾರ್ತಿಕ ಶುದ್ಧ ಪಾಡ್ಯ ಅಥವಾ ಬಲಿ ಪಾಡ್ಯಮಿ, ನಾಲ್ಕನೆಯ ದಿನ-ಯಮ ದ್ವಿತೀಯ) ಮತ್ತು ಕೆಲವೆಡೆ ಐದು ದಿನಗಳ ಕಾಲ (ಮೊದಲ ದಿನ - ಧಾಂತೆರಾಸ್, ಎರಡನೆ ದಿನ -ಕಾಲಿ ಚೌದಾಸ್, ಮೂರನೆ ದಿನ - ಲಕ್ಷ್ಮೀ ಪೂಜೆ, ನಾಲ್ಕನೆಯ ದಿನ-ಗೋವರ್ಧನ ಪೂಜೆ ಮತ್ತು ಐದನೆಯ ದಿನ ಭಾಯ್ ಧೂಜ್) ಆಚರಿಸಲಾಗುತ್ತದೆ. ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ

ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಮೂರರಿಂದ ನಾಲ್ಕು ದಿನಗಳವರೆಗೂ ಉತ್ತರ ಭಾರತದಲ್ಲಿ ಐದು ದಿನಗಳವರೆಗೂ ಆಚರಿಸಲಾಗುತ್ತದೆ. ಆದರೆ ಎರಡೂ ವಿಧಾನಗಳಲ್ಲೂ ಲಕ್ಷ್ಮೀಪೂಜೆ ಸಲ್ಲಿಸುವುದು ದೀಪಾವಳಿಯ ಪ್ರಮುಖ ಧಾರ್ಮಿಕ ಕ್ರಿಯೆಯಾಗಿದೆ. ಲಕ್ಷ್ಮೀಪೂಜೆಯನ್ನು ಮನೆಯಲ್ಲಿ ಮತ್ತು ಕೆಲವು ಪಂಗಡಗಳಲ್ಲಿ ತಮ್ಮ ವ್ಯಾಪಾರ ಸ್ಥಳದಲ್ಲಿಯೇ ಆಚರಿಸಲಾಗುತ್ತದೆ.

ಲಕ್ಷ್ಮಿಯನ್ನು ಪೂಜಿಸುವ ಮೂಲಕ ಮನೆ ಮತ್ತು ವ್ಯಾಪಾರದಲ್ಲಿ ಪ್ರಗತಿ, ಶಾಂತಿ, ಧನಾಗಮನ ಮತ್ತು ಏಳ್ಗೆಯನ್ನು ಅಪೇಕ್ಷಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಈ ಲಕ್ಷ್ಮೀಪೂಜೆಯನ್ನು ನೆರವೇರಿಸುವ ಬಗೆಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ, ಮುಂದೆ ಓದಿ...

ಮನೆಯನ್ನು ಸ್ವಚ್ಛಗೊಳಿಸಿ

ಮನೆಯನ್ನು ಸ್ವಚ್ಛಗೊಳಿಸಿ

ಪೂಜೆಗೆ ಒಂದು ಅಥವಾ ಎರಡು ದಿನ ಹಿಂದೆಯೇ ಮನೆಯ ಒಳಭಾಗ ಮತ್ತು ಹೊರಪರಿಸರವನ್ನು ಸ್ವಚ್ಛಗೊಳಿಸುವುದು ಅಗತ್ಯ. ಸ್ವಚ್ಛಗೊಳಿಸಿದ ಬಳಿಕ ಮನೆಯ ಸುತ್ತಮುತ್ತ ಗಂಗಾಜಲವನ್ನು ಪ್ರೋಕ್ಷಳಿಸಿ ಮನೆಗೆ ಯಾವುದೇ ದುಷ್ಟಶಕ್ತಿಯನ್ನು ಬಾರದಂತೆ ತಡೆಯುವ ಎಲ್ಲಾ ಕ್ರಮ ಕೈಗೊಳ್ಳಿರಿ. ನಿಮ್ಮ ಮನೆಯ ಸದಸ್ಯರನ್ನು, ಮಕ್ಕಳನ್ನೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಲೂ ನೆರವಾಗಿ.

ವೇದಿಕೆ ಸಿದ್ಧ ಪಡಿಸಿ

ವೇದಿಕೆ ಸಿದ್ಧ ಪಡಿಸಿ

ವಿಗ್ರಹ ಕೊಂಚ ಮೇಲಕ್ಕೆ ಕಾಣುವಂತೆ ಚಿಕ್ಕ ವೇದಿಕೆಯನ್ನು ಮನೆಯೊಳಗಿನ ನಡುಕೋಣೆ ಅಥವಾ ಹಜಾರದಲ್ಲಿ ಸ್ಥಾಪಿಸಿ. ಈ ವೇದಿಕೆಯ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಇದರ ನಡುವೆ ಅಷ್ಟಧಾನ್ಯಗಳನ್ನು ಇರಿಸಿ. ದೀಪಾವಳಿಗೆ ಮನೆ ಅಲಂಕಾರಕ್ಕೆ ವಾಸ್ತು ಟಿಪ್ಸ್

ನಡುವೆ ಕಳಸವನ್ನಿರಿಸಿ

ನಡುವೆ ಕಳಸವನ್ನಿರಿಸಿ

ಲಕ್ಷ್ಮಿಪೂಜೆಗೆ ಅತ್ಯಗತ್ಯವಾದ ಕಳಸವನ್ನು ಸಿದ್ಧಪಡಿಸಿ. ಇದಕ್ಕಾಗಿ ಕಳಸದಲ್ಲಿ ಮುಕ್ಕಾಲು ಭಾಗ ಸ್ವಚ್ಛನೀರನ್ನು ತುಂಬಿ ಒಂದು ಅಡಿಕೆ, ಒಂದು ಗೊಂಡೆಹೂವು, ಒಂದು ನಾಣ್ಯ ಮತ್ತು ಕೊಂಚ ಅಕ್ಕಿಯನ್ನು ತುಂಬಿ. ಮೇಲಕ್ಕೆ ಐದು ಮಾವಿನ ಎಲೆಗಳನ್ನು ವೃತ್ತಾಕಾರದಲ್ಲಿ ತುದಿಭಾಗ ಹೊರಗಿರುವಂತೆ ಇಟ್ಟು ನಡುವೆ ಇಡಿಯ ತೆಂಗಿನ ಕಾಯಿಯನ್ನಿರಿಸಿ. ಕೆಲವರು ಇದಕ್ಕೆ ವಿಭೂತಿ, ಓಂಕಾರ ಮೊದಲಾದವನ್ನೆಲ್ಲಾ ಹಚ್ಚುತ್ತಾರೆ, ಇವು ಐಚ್ಛಿಕವೇ ಹೊರತು ಕಡ್ಡಾಯವಲ್ಲ.

ಲಕ್ಷ್ಮಿದೇವಿಯ ವಿಗ್ರಹವನ್ನಿರಿಸಿ

ಲಕ್ಷ್ಮಿದೇವಿಯ ವಿಗ್ರಹವನ್ನಿರಿಸಿ

ಒಂದು ಸಾಮಾನ್ಯ ಗಾತ್ರದ ತಟ್ಟೆಯಲ್ಲಿ ಅಕ್ಕಿಯನ್ನು ಚಿಕ್ಕ ಕೋನಾಕಾರದಲ್ಲಿ ಸುರಿಯಿರಿ. ತಟ್ಟೆಯಲ್ಲಿಯೇ ಅರಿಶಿನದ ನೀರಿನಿಂದ ಕಮಲದ ಚಿತ್ರವನ್ನು ಬಿಡಿಸಿ. ತಟ್ಟೆಯ ನಡುವೆ ಲಕ್ಷ್ಮಿದೇವಿಯ ವಿಗ್ರಹವನ್ನಿರಿಸಿ ಅದರ ಎದುರು ಕೆಲವು ಚಿಲ್ಲರೆ ನಾಣ್ಯಗಳನ್ನಿರಿಸಿ.

ಪಕ್ಕದಲ್ಲಿ ಗಣೇಶನ ವಿಗ್ರಹವನ್ನಿರಿಸಿ

ಪಕ್ಕದಲ್ಲಿ ಗಣೇಶನ ವಿಗ್ರಹವನ್ನಿರಿಸಿ

ಪ್ರತಿ ಪೂಜೆಯಲ್ಲಿಯೂ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವಂತೆಯೇ ಲಕ್ಷ್ಮೀಪೂಜೆಯಲ್ಲಿಯೂ ವಿನಾಯಕನಿಗೆ ವಿಶೇಷ ಸ್ಥಾನವಿದೆ. ಅಂತೆಯೇ ಕಳಸದ ನೈಋತ್ಯ ದಿಕ್ಕಿನಲ್ಲಿ ಗಣೇಶನ ಚಿಕ್ಕ ವಿಗ್ರಹವನ್ನಿರಿಸಿ. ಅರಿಶಿನದ ತಿಲಕ ಮತ್ತು ಕುಂಕುಮವನ್ನು ಹಚ್ಚಿ. ಕೆಲವು ಅಕ್ಕಿಕಾಳುಗಳನ್ನು ವಿಗ್ರಹದ ಮೇಲೆ ಎರಚಿ.

ಪುಸ್ತಕಗಳನ್ನಿರಿಸಿ

ಪುಸ್ತಕಗಳನ್ನಿರಿಸಿ

ನಿಮ್ಮ ಮನೆಯ ದಾಖಲೆ ಅಥವಾ ಯಾವುದಾದರೂ ಅಮೂಲ್ಯ ಪುಸ್ತಕಗಳನ್ನಿರಿಸಿ. ಇವು ನಿಮ್ಮ ವ್ಯಾಪಾರ, ವಹಿವಾಟು ಅಥವಾ ನಿಮ್ಮ ಆದಾಯಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಾಗಬಹುದು. ಪುಸ್ತಕಗಳನ್ನು ವಿಗ್ರಹದ ಹಿಂಭಾಗದಲ್ಲಿ ಕೊಂಚಭಾಗ ಮಾತ್ರ ಕಾಣುವಂತಿಡಿ.

ದೀಪವನ್ನು ಬೆಳಗಿಸಿ

ದೀಪವನ್ನು ಬೆಳಗಿಸಿ

ಚಿಕ್ಕ ದೀವಟಿಗೆಯನ್ನು ಬೆಳಗಿಸಿ ತಟ್ಟೆಯ ಒಂದು ಪಕ್ಕದಲ್ಲಿಡಿ. ಇದರ ಅಕ್ಕಪಕ್ಕ ಕೊಂಚ ಅರಿಶಿನ, ಕುಂಕುಮ ಮತ್ತು ಅಕ್ಕಿಯ ಕಾಳುಗಳನ್ನಿರಿಸಿ. ಕೆಲವರು ಚಂದನದ ಲೇಪ, ಕಸ್ತೂರಿಯ ಲೇಪ, ಸುಗಂಧದ್ರವ್ಯ, ಗುಲಾಬಿ ನೀರು ಮೊದಲಾದವುಗಳನ್ನಿರಿಸುತ್ತಾರೆ. ಇವೂ ಐಚ್ಛಿಕವಾಗಿದ್ದು ಕಡ್ಡಾಯವಲ್ಲ.

ಪೂಜೆ/ಆರತಿಯೊಂದಿಗೆ ಪ್ರಾರಂಭಿಸಿ

ಪೂಜೆ/ಆರತಿಯೊಂದಿಗೆ ಪ್ರಾರಂಭಿಸಿ

ಲಕ್ಷ್ಮೀಪೂಜೆಯನ್ನು ಆರತಿಯೊಂದಿಗೆ ಪ್ರಾರಂಭಿಸಿ. ಮೊದಲಿಗೆ ಕಳಸಕ್ಕೆ ತಿಲಕವನ್ನಿರಿಸಿ. ನೀರು ತುಂಬಿಸಿದ ಚಿಕ್ಕ ಲೋಟಕ್ಕೂ ತಿಲಕ ಹಚ್ಚಿ. ಬಳಿಕ ವಿಗ್ರಹ ಮತ್ತು ಲೋಟಕ್ಕೆ ಹೂದಳಗಳನ್ನು ಅರ್ಪಿಸಿ. ದೀಪಾವಳಿಗೆ ಲಕ್ಷ್ಮಿಯನ್ನು ಸ್ವಾಗತಿಸಲು ಮನೆ ಅಲಂಕಾರ

ದಿಪಾವಳಿ ಮಂತ್ರವನ್ನು ಉಚ್ಛರಿಸಿ

ದಿಪಾವಳಿ ಮಂತ್ರವನ್ನು ಉಚ್ಛರಿಸಿ

ಅಕ್ಕಿ ಕಾಳುಗಳು ಮತ್ತು ಹೂದಳಗಳನ್ನು ಸಿದ್ಧವಾಗಿಟ್ಟುಕೊಂಡಿರಿ. ಎರಡೂ ಕೈಗಳನ್ನು ಮುಗಿದು ಕಣ್ಣು ಮುಚ್ಚಿಕೊಳ್ಳಿ. ಧ್ಯಾನಾವಸ್ಥೆಯಲ್ಲಿ ಕೆಲವು ನಿಮಿಷಗಳ ಕಾಲ ದೀಪಾವಳಿ ಮಂತ್ರವನ್ನು ಪಠಿಸಿ. ಮಂತ್ರ ಗೊತ್ತಿಲ್ಲದಿದ್ದರೆ ಲಕ್ಷ್ಮೀಯ ಹೆಸರನ್ನೇ ಪುನರಾವರ್ತಿಸುತ್ತಾ ಧ್ಯಾನಿಸಿ. ನಿಮ್ಮ ಧ್ಯಾನ ಮತ್ತು ಮಗ್ನತೆಯೇ ಆಕೆಗೆ ಇಷ್ಟ. ಈ ದೀಪಾವಳಿಗೆ ಮಾಡಬೇಕಾದ 7 ಮುಖ್ಯ ಕೆಲಸಗಳು

ಹೂವುಗಳನ್ನು ಅರ್ಪಿಸಿ

ಹೂವುಗಳನ್ನು ಅರ್ಪಿಸಿ

ಧ್ಯಾನ ಮತ್ತು ಪೂಜೆಯ ಬಳಿಕ ಅಕ್ಕಿ ಕಾಳುಗಳನ್ನು ಮತ್ತು ಹೂದಳಗಳನ್ನು ಅರ್ಪಿಸಿ.

ಲಕ್ಷ್ಮೀ ವಿಗ್ರಹಕ್ಕೆ ಅಭಿಷೇಕ ಮಾಡಿಸಿ

ಲಕ್ಷ್ಮೀ ವಿಗ್ರಹಕ್ಕೆ ಅಭಿಷೇಕ ಮಾಡಿಸಿ

ಲಕ್ಷ್ಮೀಪೂಜೆಯ ಮುಂದಿನ ಅಂಗವಾಗಿ ಲಕ್ಷ್ಮೀವಿಗ್ರಹಕ್ಕೆ ಅಭಿಷೇಕ ಮಾಡಿಸಿ. ಇದಕ್ಕಾಗಿ ಇನ್ನೊಂದು ಅಗಲವಾದ ತಟ್ಟೆಯನ್ನು ತೆಗೆದುಕೊಂಡು ಮೊದಲು ನೀರಿನಿಂದ, ಬಳಿಕ ಪಂಚಾಮೃತದಿಂದ ಅಭಿಷೇಕ ಮಾಡಿ. ಬಳಿಕ ಮತ್ತೊಮ್ಮೆ ನೀರಿನ ಅಭಿಷೇಕ ಮಾಡಿ. ನಂತರ ಸ್ವಚ್ಛವಾದ ಬಟ್ಟೆಯಿಂದ ವಿಗ್ರಹವನ್ನು ಒರೆಸಿ ಮೊದಲಿದ್ದಲ್ಲೇ ಇಡಿ.

ಹೂವಿನ ಹಾರ

ಹೂವಿನ ಹಾರ

ಈಗ ವಿಗ್ರಹಕ್ಕೆ ಮತ್ತೊಮ್ಮೆ ಅರಿಶಿನ ಮತ್ತು ಕುಂಕುಮದ ತಿಲಕಗಳನ್ನಿರಿಸಿ. ಐಚ್ಛಿಕವಾಗಿ ಗಂಧದ ಲೇಪ, ಕಸ್ತೂರಿಯ ಲೇಪ, ಸುಗಂಧದ್ರವ್ಯ ಅಥವಾ ಗುಲಾಬಿನೀರನ್ನೂ ಬಳಸಬಹುದು. ಜೊತೆಗೆ ಅಕ್ಕಿಕಾಳುಗಳನ್ನೂ ಅರ್ಪಿಸಿ. ಬಳಿಕ ಹತ್ತಿಯ ಮಣಿಗಳ ಹಾರವನ್ನು ದೇವಿಗೆ ಧರಿಸಿ. ಪಕ್ಕದಲ್ಲಿ ಕೆಲವು ಗೊಂಡೆಹೂವು ಮತ್ತು ಬೇಲದ ಎಲೆಗಳನ್ನು ಇರಿಸಿ. ಅಕ್ಕಪಕ್ಕದಲ್ಲಿ ಕೆಲವಾರು ಊದುಬತ್ತಿ ಮತ್ತು ಧೂಪಗಳನ್ನು ಹಚ್ಚಿ ವಾತಾವರಣವನ್ನು ಪಾವನವಾಗಿಸಿ.

ತೆಂಗಿನ ಕಾಯಿ ಮತ್ತು ಸಿಹಿಯನ್ನು ಅರ್ಪಿಸಿ

ತೆಂಗಿನ ಕಾಯಿ ಮತ್ತು ಸಿಹಿಯನ್ನು ಅರ್ಪಿಸಿ

ಪೂಜೆಯ ಕೊನೆಯ ಹಂತದಲ್ಲಿ ತೆಂಗಿನ ಕಾಯಿಯನ್ನು ಒಡೆದು ನೀರನ್ನು ಅರ್ಪಿಸಿ. ಇದು ನಮ್ಮ ಮನದೊಳಗಿದ್ದ ಅಹಂಭಾವದ ಕಟ್ಟೆಯನ್ನು ಒಡೆದು ತಿಳಿನೀರಿನ ವಾತ್ಯಲ್ಯ ಹೊರಬರುವ ಸಂಕೇತವಾಗಿದೆ. ಬಳಿಕ ಕೊಂಚ ಸಿಹಿತಿಂಡಿ, ಒಂದು ಅಡಿಕೆಯ ಎಲೆಯ ಮೇಲೆ ಅಡಿಕೆ ಇಟ್ಟು ಅರ್ಪಿಸಿ. ಇದರ ಮೇಲೆ ಕೊಂಚ ಅರಿಶಿನ, ಕುಂಕುಮ ಮತ್ತು ಅಕ್ಕಿಕಾಳುಗಳನ್ನು ಅರ್ಪಿಸಿ. ಬಳಿಕ ಕೊಂಚ ಮಂಡಕ್ಕಿ, ಧನಿಯ, ಜೀರಿಗೆಯನ್ನು ದೇವಿಯ ವಿಗ್ರಹಕ್ಕೆ ಅರ್ಪಿಸಿ. ವಿಗ್ರಹದ ಎದುರು ಕೆಲವು ಸಿಹಿತಿಂಡಿಗಳು, ದೀಪಾವಳಿಯ ವಿಶೇಷ ಖಾದ್ಯಗಳು, ಕೆಲವು ಹಣ್ಣುಗಳು, ಕೊಂಚ ಧನ (ನಗದು ರೂಪದಲ್ಲಿ), ಮನೆಯ ಚಿನ್ನದ ಆಭರಣಗಳನ್ನು ಇರಿಸಿ.

ಆರತಿ ಎತ್ತಿ

ಆರತಿ ಎತ್ತಿ

ಅಂತಿಮವಾಗಿ ಲಕ್ಷ್ಮೀದೇವಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿ. ಮಂಗಳಾರತಿಯನ್ನು ನೆರೆದ ಮನೆಯ ಸದಸ್ಯರಿಗೆ ಮತ್ತು ಆಹ್ವಾನಿತ ಅತಿಥಿಗಳಿಗೆ ವಿತರಿಸಿ ಎಲ್ಲರಿಗೂ ಲಕ್ಷ್ಮೀದೇವಿಯ ಕೃಪೆಯುಂಟಾಗಲು ನೆರವಾಗಿ.

English summary

Significance Of Lakshmi Puja In Diwali

Diwali the ‘festival of lights’ is known to be celebrated to commemorate the return of Lord Ram to Ayodhya after 14 years of exile and killing Raavan but this is not the only reason. Diwali is also celebrated because it is on this very day of the month of Kartik emerged the goddess of wealth and prosperity,
X
Desktop Bottom Promotion