Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ದೀಪಾವಳಿಗೆ ಮಾಡಬೇಕಾದ 7 ಮುಖ್ಯ ಕೆಲಸಗಳು
ಬೆಳಕಿನ ಹಬ್ಬವಾದ ದೀಪಾವಳಿಗೆ ಏನೆಲ್ಲಾ ಮಾಡಬೇಕು ಎಂದು ಈಗಾಗಲೇ ಪ್ಲಾನ್ ರೆಡಿಯಾಗಿದೆಯಾ? ಹಬ್ಬಕ್ಕೆ ಮನೆ ಅಲಂಕಾರ ಹೇಗಿರಬೇಕು? ಹಬ್ಬದ ಅಡುಗೆ ಏನೇನು ಮಾಡಬೇಕು? ಮಗಳು ಮತ್ತು ಅಳಿಯನಿಗೆ ಉಡುಗೊರೆಯಾಗಿ ಏನೇನು ಕೊಡಬೇಕು ಎಂಬೆಲ್ಲಾ ಯೋಚನೆಗಳು ನಿಮ್ಮಲ್ಲಿರಬಹುದು.
ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬಕ್ಕೆ ಸರಿಯಾದ ಪ್ಲಾನ್ ಇದ್ದರೆ ಹಬ್ಬದ ಸಂತೋಷ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲೂ ಈ ದೀಪಾವಳಿಗೆ ನೀವೇನು ಮಾಡಬಹುದೆಂದು ನಮ್ಮ ಐಡಿಯಾಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ. ಈ ಐಡಿಯಾಗಳು ನಿಮ್ಮ ಬಜೆಟ್ ಗೆ ತಕ್ಕ ಹಾಗೇ ಹಬ್ಬವನ್ನು ಅತ್ಯಂತ ಸಂತಷದಿಂದ ಆಚರಿಸಲು ಸಹಕಾರಿಯಾಗುವುದು.

ಶಾಪಿಂಗ್:
ದೀಪಾವಳಿ ಹಬ್ಬದಲ್ಲಿ ನಾವು ಮೊದಲು ಮಾಡುವ ಕೆಲಸವೆಂದರೆ ಶಾಪಿಂಗ್. ಆದರೆ ಈ ರೀತಿ ಶಾಪಿಂಗ್ ಮಾಡುವಾಗ ತುಂಬಾ ಎಚ್ಚರಹಿಸಬೇಕು. ಅಂಗಡಿಗಳಲ್ಲಿ ಅನೇಕ ಹಬ್ಬದ ಆಫರ್ ಗಳಿರುತ್ತವೆ. ಆಫರ್ ಇದೆ ಎಂದು ಕೊಂಡುಕೊಳ್ಳುವ ಮೊದಲು ಅವುಗಳ ಗುಣಮಟ್ಟ ಪರೀಕ್ಷಿಸಿ ಹಾಗೂ ಬಜೆಟ್ ನ ಒಳಗೆ ಶಾಪಿಂಗ್ ಮಾಡಿ. ಇಲ್ಲದಿದ್ದರೆ ತಿಂಗಳ ಕೊನೆಯಲ್ಲಿ ಹಣ ಖಾಲಿಯಾಗಿ ಪರದಾಡ ಬೇಕಾಗುತ್ತದೆ. ಆದ್ದರಿಂದ ಶಾಪಿಂಗ್ ಮಾಡುವ ಮುನ್ನ ಇಷ್ಟು ಹಣ ಹಣ ಅಂತ ತೆಗೆದಿಡಿ.

ಮನೆ ಅಲಂಕಾರ:
ಮನೆ ಅಲಂಕಾರಕ್ಕೆ ತುಂಬಾ ದುಡ್ಡು ಖರ್ಚು ಮಾಡುವ ಬದಲು ಮನೆಯಲ್ಲಿರುವ ವಸ್ತುಗಳಿಂದ ಮನೆಯನ್ನು ಅಲಂಕರಿಸಿ, ನಂತರ ಹಣತೆಗಳಿಂದ ಅಲಂಕರಿಸಿದರೆ ಸಾಕು ಮನೆ ತುಂಬಾ ಆಕರ್ಷಕವಾಗಿ ಕಾಣುವುದು.

ಮನೆಯವರ ಜೊತೆ ಬೆರೆಯುವ ಅವಕಾಶ:
ಈಗೆಲ್ಲಾ ಒಂದು ಮನೆಯಲ್ಲಿ 2-4 ಜನರಿರುವುದೇ ಹೆಚ್ಚು. ಕೆಲಸದ ಕಾರಣದಿಂದ ಅಥವಾ ಮದುವೆಯಾಗಿ ನಮ್ಮ ಸಹೋದರಾ-ಸಹೋದರಿಯರು ಬೇರೆ-ಬೇರೆ ಕಡೆ ವಾಸಿಸುತ್ತಿರುತ್ತಾರೆ. ಅದೇ ಹಬ್ಬ ಬಂದಾಗ ಎಲ್ಲರೂ ಜೊತೆ ಸೇರುತ್ತೇವೆ. ಈ ಸಮಯದಲ್ಲಿ ಹಬ್ಬದ ಅಡುಗೆ ಮಾಡಿ ಸಂತೋಷದಿಂದ ಇರುವ ಜತೆಗೆ ಎಲ್ಲರೂ ಸೇರಿ ಸಿನಿಮಾಕ್ಕೆ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವುದು ಮಾಡಿದರೆ ಹಬ್ಬ ಮತ್ತಷ್ಟು ಮಸ್ತ್ ಆಗಿರುತ್ತದೆ.

ಕಡಿಮೆ ಕ್ಯಾಲೋರಿಯಾ ಅಡುಗೆ:
ಹಬ್ಬದ ಅಡುಗೆಯೆಂದರೆ ಕ್ಯಾಲೋರಿ ಅಧಿಕವಿರುತ್ತದೆ. ಆದರೆ ಈ ಭಾರಿ ಹಬ್ಬಕ್ಕೆ ಕಡಿಮೆ ಕ್ಯಾಲೋರಿಯ ಅಡುಗೆ ಬಗ್ಗೆ ಹೆಚ್ಚು ಗಮನ ಕೊಡಿ. ಕ್ಯಾಲೋರಿ ಅಧಿಕ ತಿಂದು ಕಷ್ಟ ಪಡುವುದು ಏಕೆ ಅಲ್ವಾ?

ಇತರರಿಗೆ ಬೆಳಕಾಗಿ:
ಸಾಧ್ಯವಾದರೆ ಇತರರ ಜೀವನದಲ್ಲಿ ಬೆಳಕು ತರಲು ಪ್ರಯತ್ನಿಸಿ. ಅನಾಥಶ್ರಮಗಳಿಗೆ ಅವರಿಗೆ ಸಿಹಿ ಹಂಚಿ ಅವರ ಸಂತೋಷದಲ್ಲಿ ಭಾಗಿಯಾಗಿ, ಆಗ ದೀಪಾವಳಿ ತುಂಬಾ ಸ್ಪೆಷೆಲ್ ಅನಿಸುವುದು.

ಪಟಾಕಿ ಬೇಕೆ?:
ಪಟಾಕಿಯಿಂದ ಸಾಕಷ್ಟು ಅನಾಹುತಗಳು ಆಗಿದ್ದನ್ನು ನೋಡಿದ್ದೇವೆ. ಖುಷಿಯಾಗಿರುವಾಗ ಪಟಾಕಿಯಿಂದ ಏನಾದರೂ ಸಂಭವಿಸಿ ದುಃಖದ ಛಾಯೆ ಏಕೆ ಅಲ್ವಾ? ಆದ್ದರಿಂದ ಅದನ್ನು ಬಳಸದಿರುವುದು ಒಳ್ಳೆಯದು, ನೀವು ಈ ರೀತಿ ಮಾಡಿದರೆ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಭಾರಿ ಕೊಡುಗೆ ಕೊಟ್ಟಂತೆ ಆಗುವುದು.

ಗೆಳೆಯರ ಜೊತೆ ಬೆರೆಯುವುದು:
ಎಲ್ಲಾ ಗೆಳೆಯರು ಹಬ್ಬದ ಸಮಯದಲ್ಲಿ ಊರಿಗೆ ಬರುವುದರಿಂದ ಎಲ್ಲರೂ ಸೇರಿ ಒಂದು ಕಡೆ ಭೇಟಿಯಾಗಿ. ಇದರಿಂದ ಈ ದೀಪಾವಳಿ ನಿಮಗೆ ತುಂಬಾ ಸ್ಪೆಷೆಲ್ ಅನಿಸುವುದು. ಚಿಯರ್ಸ್...



Click it and Unblock the Notifications
