Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ದೀಪಾವಳಿಯಂದು ಬೆಳಗಿಸುವ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ
ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು....
ಹಿಂದೂ ಧರ್ಮದಲ್ಲಿ ದೀಪಗಳ ಹಬ್ಬ ದೀಪಾವಳಿಗೆ ಹೆಚ್ಚಿನ ಸ್ಥಾನಮಾನವಿದೆ. ಅಕ್ಟೋಬರ್ ಇಲ್ಲವೇ ನವೆಂಬರ್ ಮಾಸದಲ್ಲಿ ಬರುವ ಈ ಹಬ್ಬ ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ನಮ್ಮ ಮನೆ ಮನದಲ್ಲಿ ಪಸರಿಸುತ್ತದೆ. ದೀಪಾವಳಿ ಅಂದರೆ 'ದೀಪಗಳ ಸಾಲು" ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ.

ದೀಪಾವಳಿ ಸಮಯದಲ್ಲಿ ಪ್ರತಿ ಮನೆಯಲ್ಲಿ ಎಣ್ಣೆ ದೀಪಗಳು, ಮೇಣದ ಬತ್ತಿಗಳು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಹಚ್ಚಿ ಅಲಂಕರಿಸುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲೂ ದೀಪಾವಳಿ ಹಬ್ಬದಂದು ಮಣ್ಣಿನ ಹಣತೆ, ಗೂಡುದೀಪ, ಇಲೆಕ್ಟ್ರಿಕ್ ಬಲ್ಬ್ಗಳ ಸಂಭ್ರಮ ಇದ್ದೇ ಇರುತ್ತದೆ.
ಅದಾಗ್ಯೂ ಮಣ್ಣಿನ ಹಣತೆ ಹಚ್ಚಿಡುವುದೇ ಶುಭ ದೀಪಾವಳಿಯ ಸಂಕೇತವಾಗಿದೆ. ದೀಪಗಳನ್ನು ಹಚ್ಚಿಟ್ಟುಕೊಂಡೇ ದೀಪಾವಳಿಯನ್ನು ಏಕೆ ಆಚರಿಸಬೇಕು ಎಂಬುದು ನಿಮ್ಮ ಮನದಲ್ಲಿ ಮೂಡಿರುವ ಸಂದೇಹವಾಗಿದ್ದರೆ ಇಂದಿನ ಲೇಖನದಲ್ಲಿ ಇದರ ಇತಿಹಾಸವನ್ನು ನಿಮಗೆ ತಿಳಿಸಲಿದ್ದೇವೆ.
ದೀಪಗಳನ್ನು ಹಚ್ಚಿಡುವುದರ ಹಿಂದಿರುವ ದಂತಕಥೆ
ಭಾರತದ ಉತ್ತರ ಭಾಗದಲ್ಲಿ ದೀಪಗಳನ್ನು ಏಕೆ ಹಚ್ಚಿಡುತ್ತಾರೆ ಎಂಬುದಕ್ಕೆ ಇತಿಹಾಸವಿದ್ದು ರಾಮನು 14 ವರ್ಷಗಳ ಕಾಲ ವನವಾಸವನ್ನು ಮುಗಿಸಿಕೊಂಡು ತನ್ನ ಪತ್ನಿ ಮತ್ತು ತಮ್ಮನೊಂದಿಗೆ ಅಯೋಧ್ಯೆಗೆ ಮರಳುವ ಸಂಭ್ರಮಕ್ಕಾಗಿ ದೀಪಗಳನ್ನು ಹಚ್ಚಿ ಪ್ರಜೆಗಳು ಸ್ವಾಗತಿಸುತ್ತಾರೆ ಎಂಬುದಾಗಿ ತಿಳಿಸಲಾಗಿದೆ.
ಭಾರತದ ದಕ್ಷಿಣ ಭಾಗಗಳಲ್ಲಿ ನರಕಾಸುರನನ್ನು ದೇವಿಯು ವಧಿಸಿದ ದ್ಯೋತಕವಾಗಿ ವಿಜಯವನ್ನು ಆಚರಿಸಲು ನರಕ ಚತುರ್ದಶಿಯ ದಿನಂದು ದಕ್ಷಿಣ ಭಾಗದ ಜನರು ದೀಪಗಳನ್ನು ಹಚ್ಚಿಡುತ್ತಾರೆ. ಅಸುರೀ ಶಕ್ತಿಯ ವಿರುದ್ಧ ದೈವ ಬಲದ ವಿಜಯ ಎಂಬುದರ ದ್ಯೋತಕವಾಗಿ ದೀಪಗಳನ್ನು ಹಚ್ಚಿಟ್ಟು ಕತ್ತಲೆಯನ್ನು ದೂರಗೊಳಿಸುತ್ತಾರೆ. ದೀಪಾವಳಿ ವಿಶೇಷ: ನರಕ ಚತುರ್ದಶಿ ಹಬ್ಬದ ಹಿನ್ನೆಲೆ
ದೀಪಗಳನ್ನು ಹಚ್ಚುವುದರ ಮಹತ್ವ
ಹಿಂದೂ ಧರ್ಮದಲ್ಲಿ ದೀಪ ಒಂದು ಮಹತ್ವವುಳ್ಳ ವಿಷಯ ಯಾಕೆಂದರೆ ಅದು ಪವಿತ್ರತೆ, ಒಳ್ಳೆಯತನ ಮತ್ತು ಶಕ್ತಿ ಇವುಗಳ ಸಂಕೇತವಾಗಿದೆ. ಬೆಳಕಿದೆಯೆಂದರೆ ಕತ್ತಲೆ ಮತ್ತು ದುಷ್ಟ ಶಕ್ತಿಗಳ ಇರುವುದಿಲ್ಲ ಎನ್ನುವ ನಂಬಿಕೆ. ಅಮಾವಾಸ್ಯೆಯ ರಾತ್ರಿ ಎಲ್ಲೆಡೆಯಲ್ಲೂ ಸಂಪೂರ್ಣ ಕತ್ತಲೆ ಇರುವಾಗ ಜನರು ಲಕ್ಷಾಂತರ ದೀಪಗಳನ್ನು ಬೆಳಗಿ ಕತ್ತಲನ್ನು ತೊಡೆದುಹಾಕಲು ದೀಪಾವಳಿಯನ್ನು ಆಚರಿಸುತ್ತಾರೆ.
ದುಷ್ಟ ಶಕ್ತಿಗಳು ಮತ್ತು ಅವುಗಳ ಪಡೆಗಳು ಕತ್ತಲಲ್ಲಿ ಸಕ್ರಿಯವಾಗುತ್ತಾರೆಂಬ ನಂಬಿಕೆ ಜನರಿಗೆ ಇದೆ. ಆದ್ದರಿಂದ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಲು ಮನೆಯ ಪ್ರತಿಯೊಂದು ಮೂಲೆಯಲ್ಲೂ ದೀಪಗಳನ್ನು ಬೆಳಗುತ್ತಾರೆ. ವ್ಯಕ್ತಿಯ ಅಂತರಿಕ ಆಧ್ಯಾತ್ಮಿಕ ಬೆಳಕು ಹೊರಗೂ ಸೂಚಿಸಬೇಕೆಂಬ ಸಂದೇಶವನ್ನು ಸಾರಲು ಪ್ರತಿ ಮನೆಯ ಬಾಗಿಲ ಹೊರಗೆ ದೀಪಗಳನ್ನು ಬೆಳಗುತ್ತಾರೆ. ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ
ಒಂದು ದೀಪದಿಂದ ಹಲವಾರು ದೀಪಗಳನ್ನು ತನ್ನ ಬೆಳಕಿಗೆ ಧಕ್ಕೆಯಾಗದಂತೆ ಬೆಳಗಲು ಸಮರ್ಥವಾಗಿದೆ. ಆದ್ದರಿಂದ ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗುವುದು ಆಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲಾ ಮನುಷ್ಯರಿಗೆ ಗಮನಾರ್ಹವಾಗಿ ಅನ್ವಯಿಸುತ್ತದೆ.



Click it and Unblock the Notifications















