For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ಮನೆ ಅಲಂಕಾರಕ್ಕೆ ವಾಸ್ತು ಟಿಪ್ಸ್

|

ನಮ್ಮ ಜೀವನವೇ ನಂಬಿಕೆ ಮೇಲೆ ನಡೆಯುತ್ತಿದೆ. ನಾವೆಲ್ಲಾ ಆಚಾರಗಳನ್ನು ನಂಬುತ್ತೇವೆ, ಧರ್ಮದ ಆಚರಣೆಗಳನ್ನು ನಂಬಿ ನಡೆಸಿಕೊಂಡು ಬರುತ್ತೇವೆ, ಇಂದು ಯಾವುದ ೊಂದು ಸಮಸ್ಯೆಯಿದ್ದರೆ, ನಾಳೆ ಆ ಕಷ್ಟ ದೂರವಾಗಿ ಬದುಕು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿ ಜೀವನವನ್ನು ನಡೆಸುತ್ತೇವೆ ಅಲ್ಲವೇ?

ನಮ್ಮಲ್ಲಿ ಹೆಚ್ಚಿನವರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ಮನೆ ಕಟ್ಟುವಾಗ ವಾಸ್ತು ಪ್ರಕಾರ ಮನೆ ಕಟ್ಟಿಸುತ್ತೇವೆ. ಮನೆ ಸಾಮಾನುಗಳನ್ನು ವಾಸ್ತು ಪ್ರಕಾರ ಇಡುತ್ತೇವೆ. ಈ ದೀಪಾವಳಿಯಲ್ಲಿ ಮನೆ ಅಲಂಕಾರ ಮಾಡುವಾಗ ನೀವು ವಾಸ್ತು ಶಾಸ್ತ್ರ ನಂಬುವುದಾದರೆ ಈ ಕೆಳಗಿನ ವಾಸ್ತು ಟಿಪ್ಸ್ ನಂತೆ ಮನೆಯನ್ನು ಅಲಂಕರಿಸಿ. ಈ ಟಿಪ್ಸ್ ನಿಮ್ಮ ಮನೆಗೆ ಸುಖ, ಸತೋಷ, ಸಮೃದ್ಧಿಯನ್ನು ತರುತ್ತದೆ.

ಮನೆ ಶುಚಿತ್ವ:

ಮನೆ ಶುಚಿತ್ವ:

ಮನೆಯನ್ನು ಶುದ್ಧವಾಗಿಟ್ಟರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಹೊಸ ವಸ್ತುಗಳನ್ನು ತಂದಿಡಲು ಜಾಗ ಮಾಡಿಡಬೇಕು. ದೀಪಾವಳಿ ಹಬ್ಬದ ಮಾರನೆಯ ದಿನ ಮನೆಯನ್ನು ಶುದ್ಧ ಮಾಡಲು ಮರೆಯಬಾರದು.

ವಸ್ತುಗಳನ್ನು ಬದಲಾಯಿಸಬೇಕು:

ವಸ್ತುಗಳನ್ನು ಬದಲಾಯಿಸಬೇಕು:

ವಾಸ್ತು ಪ್ರಕಾರ ಮನೆಯಲ್ಲಿ 27 ವಸ್ತುಗಳನ್ನು ಬದಲಾಯಿಸಿಟ್ಟರೆ ಶುಭ ಉಂಟಾಗುತ್ತದೆ ಎನ್ನಲಾಗುತ್ತದೆ. 27 ವಸ್ತುಗಳನ್ನು ಹೇಗಪ್ಪಾ ಬದಲಾಯಿಸಿವುದು ಎಂದು ಚಿಂತೆಯಾಗುತ್ತಿದೆಯೇ? ಸೋಫಾ ಇಟ್ಟ ಜಾಗವನ್ನು ಬದಲಾಯಿಸಿ, ಕುರ್ಚಿಗಳಿಟ್ಟ ಸ್ಥಳವನ್ನು ಬದಲಾಯಿಸಿ ಈ ರೀತಿ ಮಾಡಿದರೆ ಸುಲಭವಾಗಿ ವಸ್ತುಗಳನ್ನು ಬದಲಾಯಿಸಬಹುದು.

ಉಪ್ಪು ನೀರನ್ನು ಚಿಮುಕಿಸಿ:

ಉಪ್ಪು ನೀರನ್ನು ಚಿಮುಕಿಸಿ:

ಉಪ್ಪು ನೀರನ್ನು ಮನೆಯೆಲ್ಲಾ ಚಿಮುಕಿಸಿದೆ ವಾಸ್ತು ಪ್ರಕಾರದ ಉಪ್ಪು ನೀರು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತದೆ .

ಮನೆಯಲ್ಲಿ ಸಿಹಿ ಇರಬೇಕು:

ಮನೆಯಲ್ಲಿ ಸಿಹಿ ಇರಬೇಕು:

ದೀಪಾವಳಿಯಲ್ಲಿ ಮನೆಯಲ್ಲಿ ಸಾಕಷ್ಟು ಸಿಹಿ ಪದಾರ್ಥಗಳ ಜೊತೆ ಸಕ್ಕರೆ ಅಥವಾ ಬೆಲ್ಲ ಇರಬೇಕು. ಆ ದಿನ ಸಕ್ಕರೆ ಕಡಿಮೆ ಇರಬಾರದು.

ಬಾಗಿಲು:

ಬಾಗಿಲು:

ಲಕ್ಷ್ಮಿಯು ಮುಂಬಾಗಿಲಿನಿಂದ ಒಳಕ್ಕೆ ಬರುತ್ತಾಳೆ, ಆದ್ದರಿಂದ ಬಾಗಿಲಿಗೆ ಅಡ್ಡವಾಗಿ ಏನೂ ಇಡಬಾರದು. ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು ಮನೆ ಮುಂದೆ ರಂಗೋಲಿ ಹಾಕಿರಬೇಕು ಹಾಗೂ ಬಾಗಿಲನ್ನು ಸಂಪೂರ್ಣವನ್ನು ತೆರೆದು ಇಡಬೇಕು.

ಮನೆಯ ಉತ್ತರ ಭಾಗದಲ್ಲಿ ದೇವರ ಮೂರ್ತಿ:

ಮನೆಯ ಉತ್ತರ ಭಾಗದಲ್ಲಿ ದೇವರ ಮೂರ್ತಿ:

ಕುಬೇರನು ಉತ್ತರ ಭಾಗದಲ್ಲಿ ನೆಲೆಸುತ್ತಾನೆ. ಆದ್ದರಿಂದ ಲಕ್ಷ್ಮಿಯ ಮೂರ್ತಿಯನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಲಕ್ಷ್ಮಿಯ ಬಲ ಭಾಗದಲ್ಲಿ ಗಣಪನ ಮೂರ್ತಿ ಹಾಗೂ ಎಡ ಭಾಗದಲ್ಲಿ ಸರಸ್ವತಿ ದೇವತೆಯ ಮೂರ್ತಿಯನ್ನು ಇಡಬೇಕು.

ಹರಿಯುವ ನೀರು:

ಹರಿಯುವ ನೀರು:

ಹರಿಯುವ ನೀರು ಮನೆಗೆ ಸೌಭಾಗ್ಯವನ್ನು ತರುತ್ತದೆ. ಆದ್ದರಿಂದ ಮನೆಯಲ್ಲಿ ಉತ್ತರ-ಪೂರ್ವದ ಕಡೆಗೆ ಚಿಕ್ಕ ನೀರಿನ ಕಾರಂಜಿ ಅಥವಾ ನೀರು ಹರಿಯಲು ವ್ಯವಸ್ಥೆ ಮಾಡಬೇಕು.

English summary

Vastu Tips To Make Diwali Prosperous

Diwali celebrations are incomplete without the puja of Lord Ganesh and Goddess Lakshmi All these pujas will be wasted if the Vastu of your home is improper. Thus, before you get started with the Diwali celebrations and pujas, implement these Vastu tips for sure.
X
Desktop Bottom Promotion