For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ನಾನ್‌ವೆಜ್‌ ತಿನ್ನಲೇಬಾರದು ಎಂಬುವುದರ ಹಿಂದಿದೆ ಈ ಧಾರ್ಮಿಕ, ವೈಜ್ಞಾನಿಕ ಕಾರಣಗಳು

|

ಕನ್ನಡ ಶ್ರಾವಣ ಮಾಸ ಜುಲೈ 29ಕ್ಕೆ ಪ್ರಾರಂಭವಾಗಿದೆ. ಶ್ರಾವಣ ಮಾಸವೆಂದರೆ ಅದು ಹಬ್ಬಗಳ ಮಾಸ, ಹೌದು ಶ್ರಾವಣ ಮಾಸದ ಬಹುತೇಕ ದಿನಗಳು ವಿಶೇಷತೆಯಿಂದ ಕೂಡಿರುತ್ತೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರಮಹಾಲಕ್ಷ್ಮಿ ಪೂಜೆ ಹೀಗೆ ಹಲವಾರು ಹಬ್ಬಗಳು ಈ ತಿಂಗಳಿನಲ್ಲಿದೆ.

ಶ್ರಾವಣ ಮಾಸದ ಆಹಾರ ಪದ್ಧತಿಯಲ್ಲೂ ಕೆಲವೊಂದು ನಿಯಮಗಳಿವೆ. ಈ ತಿಂಗಳಿನಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಎಮಬ ನಿಯಮವಿದೆ, ಈ ತಿಂಗಳಿನಲ್ಲಿ ಕಡ್ಡಾಯವಾಗಿ ಸಸ್ಯಾಹಾರ ಮಾತ್ರ ಸೇವಿಸಬೇಕು ಎಂದು ಹೇಳಲಾಗುವುದು, ಆದ್ದರಿಂದ ಶ್ರಾವಣ ಮಾಸದ ವ್ರತ ನಿಯಮಗಳನ್ನು ಪಾಲಿಸುವವರು ಸಸ್ಯಾಹಾರ ಮಾತ್ರ ಸೇವಿಸುತ್ತಾರೆ.

ಶ್ರಾವಣ ಮಾಸದಲ್ಲಿ ಸಸ್ಯಾಹಾರ ಮಾತ್ರ ಏಕೆ ಸೇವಿಸಬೇಕು ಎಂಬುವುದಕ್ಕೆ ಕೆಲವೊಂದು ಕಾರಣಗಳಿವೆ, ಇದರ ಹಿಂದೆ ಧಾರ್ಮಿಕ ಕಾರಣಗಳು ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ. ಅವು ಏನೆಂದು ತಿಳಿಯೋಣ ಬನ್ನಿ:

 ಧಾರ್ಮಿಕ ಕಾರಣಗಳು

ಧಾರ್ಮಿಕ ಕಾರಣಗಳು

ಹಿಂದೂ ಧರ್ಮದ ಬಹುತೇಕ ಪೂಜೆ, ಹಬ್ಬಗಳಲ್ಲಿ ಮಾಂಸಾಹಾರ ಸೇವನೆ ನಿರ್ಬಂಧವಾಗಿದೆ. ದೇವರಿಗೆ ಸಾತ್ವಿಕ ಆಹಾರವನ್ನಷ್ಟೇ ಅರ್ಪಿಸಲಾಗುವುದು, ಈ ತಿಂಗಳಿನಲ್ಲಿ ನಾಗರ ಪಂಚಮಿ, ಕೃಷ್ಣ ಜ್ನಮಾಷ್ಟಮಿ, ರಕ್ಷಾ ಬಂಧನ, ವರ ಮಹಾಲಕ್ಷ್ಮಿ ಹೀಗೆ ಅನೇಕ ಹಬ್ಬಗಳಿವೆ, ಈ ಕಾರಣದಿಂದಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದು ತರವಲ್ಲ.

ವೈಜ್ಞಾನಿಕ ಕಾರಣಗಳು

ವೈಜ್ಞಾನಿಕ ಕಾರಣಗಳು

ಈ ತಿಂಗಳಿನಲ್ಲಿ ಸೂರ್ಯನ ಕಿರಣಗಳು ಮೈ ಮೇಲೆ ಬೀಳುವುದು ಕಡಿಮೆ, ಇದರಿಂದ ನಮ್ಮ ಜೀರ್ಣಕ್ರಿಯೆ ದುರ್ಬಲವಾಗಿರುತ್ತೆ, ಆದ್ದರಿಂದ ಮಾಂಸಾಹಾರ ಸೇವನೆ ಮಾಡಿದಾಗ ಜೀರ್ಣಕ್ರಿಯೆಗೆ ಕಷ್ಟವಾಗುವುದು, ಇದರಿಂದಾಗಿ ಶ್ರಾವಣ ಮಾಸದಲ್ಲಿ ಲಘು ಆಹಾರ ಸೇವನೆ ಒಳ್ಳೆಯದು. ಅಲ್ಲದೆ ಪ್ರಾಣಿಗಳ ಮಾಂಸದಲ್ಲಿ ಈ ಸಮಯದಲ್ಲಿ ಬ್ಯಾಕ್ಟಿರಿಯಾ, ವೈರಸ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಇಂಥ ಆಹಾರ ಸೇವನೆ ಮಾಡಿದಾಗ ಅನಾರೋಗ್ಯ ಉಂಟಾಗುವುದು. ಇದರಿಂದ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ.

 ಇತರ ಕಾರಣಗಳು

ಇತರ ಕಾರಣಗಳು

ಇನ್ನು ಮಳೆಗಾಲದಲ್ಲಿ ಮೀನು ಮತ್ತಿತರ ಜಲಚರಗಳು ಹಾಗೂ ಪ್ರಾಣಿಗಳು ಸಂತಾನೋತ್ಪತ್ತಿ ಮಾಡುವ ಸಮಯ. ಅವುಗಳನ್ನು ಈ ಸಮಯದಲ್ಲಿ ಹಿಡಿದು ತಿಂದರೆ ಸಂತಿತಿ ಕಡಿಮೆಯಾಗುವುದು, ಇದರಿಂದ ಪ್ರಕೃತಿಯಲ್ಲಿ ಅಸಮತೋಲನವಾಗುವುದು. ಈ ಕಾರಣದಿಂದ ಕೂಡ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುವುದು.

English summary

Shravan Maas: Religious and Scientific Reasons Why Hindus Don’t Eat Non-Veg During Shravan Month

Sawan Maas 2022: Do you know why nonveg should not eat in savan masa, here are religious and scientific reason read on,
X
Desktop Bottom Promotion