For Quick Alerts
ALLOW NOTIFICATIONS  
For Daily Alerts

Makar Sankranti 2023 : ಮಕರ ಸಂಕ್ರಾಂತಿಗೆ ಪಾಲಿಸುವ ಈ ಪದ್ಧತಿಗಳ ಹಿಂದಿದೆ ಮಹತ್ವದ ಉದ್ದೇಶ

|

ಸೂರ್ಯನು ಮಕರ ಸಂಕ್ರಾಂತಿಗೆ ಸಂಚರಿಸಿದ ದಿನವನ್ನು ಮಕರ ಸಂಕ್ರಾಂತಿ' ಎಂದು ಆಚರಿಸಲಾಗುವುದು. 2023 ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 14, ಶನಿವಾರದಂದು ಆಚರಿಸಲಾಗುವುದು.

ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು.

ಈ ಸಂಕ್ರಾಂತಿ ಹಬ್ಬದ ದಿನ ದಿಂದಲೇ ವರ್ಷದ ಎಲ್ಲಾ ಹಬ್ಬಗಳು ಪ್ರಾರಂಭವಾಗುತ್ತವೆ ಎಂದು ಹಿಂದಿನ ಕಾಲದಿಂದಲೂ ನಂಬಲಾಗಿದೆ. ಉತ್ತರಾಯಣ ಕಾಲದಲ್ಲಿ ಮರಣವೊಂದಿದರೆ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ.

ಎಳ್ಳು -ಬೆಲ್ಲ ಹಂಚಿ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಸಂಪ್ರದಾಯ ಕರ್ನಾಟಕದಲ್ಲಿದೆ. ದೇಶದೆಲ್ಲಡೆ ಸಂಕ್ರಾಂತಿ ಹಬ್ಬವನ್ನು ಒಂದೊಂದು ಹೆಸರಿನಿಂದ ಆಚರಿಸಲಾಗುವುದು.

Makar Sankranti

ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ್ಲ ನೀಡುವ ಮೂಲಕ ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವುದು ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಹಂಚುವುದರ ಹಿಂದಿನ ಉದ್ದೇಶವಾಗಿದೆ.

ಮಕರ ಸಂಕ್ರಾಂತಿಯಲ್ಲಿ ಕೆಲವೊಂದು ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗುವುದು. ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಂದು ಕೆಲವೊಂದು ಪದ್ಧತಿಗಳನ್ನು ಆಚರಿಸಿಕೊಂಡು ಬರಲಾಗುವುದು. ಇದರ ಬಗ್ಗೆ ಮಾಹಿತಿ ಇಲ್ಲಿದೆ:

ಎಳ್ಳು-ಬೆಲ್ಲ ನೀಡುವುದು:

ಎಳ್ಳು-ಬೆಲ್ಲ ನೀಡುವುದು:

ಸಂಕ್ರಾಂತಿಯಲ್ಲಿ ಎಳ್ಳಿಗೆ ತುಂಬಾನೇ ಪ್ರಾಮುಖ್ಯತೆ, ಎಳ್ಳು ಸತ್ತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುವುದು, ಎಳ್ಳು ಸೇವಿಸುವುದರಿಂದ ದೇಹದೊಳಗಿರುವ ಕಶ್ಮಲಗಳನ್ನು ಹೊರ ಹಾಕಬಹುದು. ಅಲ್ಲದೆ ಚಳಿಗಾಲದಲ್ಲಿ ಎಳ್ಳು-ಬೆಲ್ಲದ ಸೇವನೆಯಿಂದ ಆರೋಗ್ಯ ವೃದ್ಧಿಸುವುದು.

ದಾನದ ಮಹತ್ವ : ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿ ಈ ಬಗೆಯ ವಸ್ತುಗಳನ್ನು ಮಕರ ಸಂಕ್ರಾಂತಿಯಂದು ದಾನ ಮಾಡಬೇಕು ಎಂದು ಹೇಳಲಾಗುವುದು. ನಮ್ಮ ಶಕ್ತಿಗೆ ಅನುಸಾರ ದಾನ ಮಾಡಬಹುದು. ಸಾಮಾನ್ಯವಾಗಿ ಈ ದಿನದಂದು ಎಳ್ಳು-ಬೆಲ್ಲವನ್ನು ಹೆಚ್ಚಾಗಿ ದಾನ ಮಾಡುತ್ತಾರೆ.

ಬಾಗಿನ ಕೊಡುವ ಪದ್ಧತಿ

ಬಾಗಿನ ಕೊಡುವ ಪದ್ಧತಿ

ಸಂಕ್ರಾಂತಿಗೆ ಬಾಗಿನ ನೀಡಲಾಗುವುದು. ರವಿಕೆ, ಬಳೆ ಈ ರೀತಿಯ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ವಸ್ತುಗಳನ್ನು ಬಾಗಿನದಲ್ಲಿ ಇಟ್ಟು ನೀಡಬಹುದು.

ಬಾಗಿನ ನೀಡುವಾಗ ನಿಡುವವರು ಸೆರಗಿನ ತುದಿಯನ್ನು ಬಾಗಿನಕ್ಕೆ ಆಧಾರ ನೀಡಿ ಕೊಡಬೇಕು. ಸಂಕ್ರಾಂತಿಯಲ್ಲಿ ನೀಡುವ ಬಾಗಿನದಿಂದ ದೇವತೆಗಳು ಬೇಗನೇ ಪ್ರಸನ್ನರಾಗಿ ಮುತ್ತೈದೆ ಬಯಸಿದ ಫಲ ಸಿಗುವುದು.

ಬಾಗಿನಕ್ಕೆ ಸಾತ್ವಿಕ ವಸ್ತುಗಳನ್ನೇ ಬಾಗಿನವಾಗಿ ನೀಡಬೇಕು. ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವಾಗ ಉದ್ದೇಶವು ಶುದ್ಧ ಮತ್ತು ಪ್ರೇಮಭಾವವು ಅಧಿಕವಾಗಿರುವುದರಿಂದ ನಿರಪೇಕ್ಷತೆಯು ಬರುತ್ತದೆ. ಇದರಿಂದ ಕೊಡು - ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ

ಈ ದಿನ ತೀರ್ಥ ಸ್ನಾನದ ಮಹತ್ವ

ಈ ದಿನ ತೀರ್ಥ ಸ್ನಾನದ ಮಹತ್ವ

ಮಕರ ಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಸಮಯದಲ್ಲಿ ಮಾಡುವ ಸ್ನಾನಕ್ಕೆ ತುಂಬಾನೇ ಮಹತ್ವ. ಗಂಗಾ, ಯಮುನಾ, ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳಲ್ಲಿ ಈ ದಿನ ಪವಿತ್ರ ಸ್ನಾನ ಮಾಡಲಾಗುವುದು.

ಎಳ್ಳು-ಬೆಲ್ಲ

ಸಂಕ್ರಾಂತಿಯ ಆಚರಣೆಗಳಲ್ಲಿ ಎಳ್ಳು-ಬೆಲ್ಲ ನೀಡುವುದು ಕೂಡ ಪ್ರಮುಖವಾಗಿದೆ. ಎಳ್ಳು-ಬೆಲ್ಲ ನೀಡುವುದರ ಹಿಂದೆಯೂ ಕಾರಣವಿದೆ. ಎಳ್ಳು ಆತಂರಿಕ ಶುದ್ಧಿ ಮಾಡುತ್ತದೆ. ಎಳ್ಳು-ಬೆಲ್ಲವನ್ನು ಹಂಚುವುದರಿಂದ ಸಕಾರಾತ್ಮಕತೆ ಹೆಚ್ಚಾಗುವುದು.

 ಮಡಕೆ ಹಂಚುವುದು

ಮಡಕೆ ಹಂಚುವುದು

ಸಂಕ್ರಾಂತಿ ಹಬ್ಬದಲ್ಲಿ ಮಡಕೆ ಹಂಚುವ ಪದ್ಧತಿ ಕೂಡ ಇದೆ. ಮಡಕೆಯಲ್ಲಿ ಬೋರೇಹಣ್ಣು, ಕಬ್ಬಿನ ತುಂಡು, ಎಳ್ಳು ಬೆಲ್ಲ, ನೆಲಗಡಲೆ, ಅರಿಶಿಣ, ಕುಂಕುಮ ಮುಂತಾದ ವಸ್ತುಗಳನ್ನು ತುಂಬಿ ಬಾಗಿನ ರೂಪದಲ್ಲಿ ನೀಡಲಾಗುವುದು.

ಶಿವನಿಗೆ ಎಳ್ಳು-ಅಕ್ಕಿಯನ್ನು ಅರ್ಪಿಸಲಾಗುವುದು

ಮಕರ ಸಂಕ್ರಾಂತಿ ಸಮಯದಲ್ಲಿ ಎಳ್ಳಿಗೆ ತುಂಬಾನೇ ಮಹತ್ವವಿದೆ, ಈ ದಿನ ಶಿವನಿಗೆ ಎಳ್ಳು ಮತ್ತು ಅಕ್ಕಿ ಅರ್ಪಿಸುವುದರಿಂದ ಪಾಪವಿಮೋಚನೆಯಾಗುವುದು ಎಂಬ ನಂಬಿಕೆ.

ಅರಿಶಿಣ -ಕುಂಕುಮ ನೀಡಲಾಗುವುದು

ಮಕರ ಸಂಕ್ರಾಂತಿಯಿಂದ ರಥ ಸಪ್ತಮಿಯವರೆಗೆ ಮನೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅರಿಶಿಣ-ಕುಂಕುಮದ ತಾಂಬೂಲ ನೀಡುವ ಪದ್ಧತಿ ಇದೆ. ಮುತ್ತೈದೆಯರಿಗೆ ಅರಿಶಿಣ-ಕುಂಕುಮ ನೀಡಿದರೆ ಆದಿಶಕ್ತಿಯನ್ನು ಪೂಜಿಸಿದಷ್ಟು ಫಲ ಸಿಗುವುದು ಎಂಬ ನಂಬಿಕೆ.

English summary

Rituals Followed On Makar Sankranti In Karnataka

Makar Sankranti: These are rituals will follow in makar sankranti iN Karnataka read on...
X
Desktop Bottom Promotion