For Quick Alerts
ALLOW NOTIFICATIONS  
For Daily Alerts

ಗಣೇಶ ದೇವರನ್ನು ಮೊದಲು ಪೂಜಿಸಲು ಕಾರಣಗಳೇನು?

|

ಹಿಂದೂ ಧರ್ಮದಲ್ಲಿ ಗಣೇಶ ದೇವರು ಮೊದಲ ಆರಾಧ್ಯರು. ಗಜಮುಖ, ದೊಡ್ಡ ಹೊಟ್ಟೆ, ಸೊಂಡಿಲು ಮತ್ತು ಅವರ ವಾಹನ ಸಣ್ಣ ಇಲಿಯಿಂದ ಗಣೇಶ ದೇವರು ಗುರುತಿಸಲ್ಪಡುತ್ತಾರೆ. ಗಣೇಶ ದೇವರು ಬುದ್ದಿವಂತಿಕೆ ಮತ್ತು ಜ್ಞಾನದ ಪ್ರತೀಕ. ಗಣೇಶ ದೇವರನ್ನು ವಿಘ್ನನಿವಾರಕ ಅಥವಾ ಎಲ್ಲಾ ಅಡೆತಡೆಗಳನ್ನು ನಿವಾರಿಸುವಾತ ಎಂದು ಕರೆಯಲಾಗುತ್ತದೆ. ಗಣೇಶ ದೇವರ ಆನೆಯ ತಲೆಯು ಬುದ್ದಿವಂತಿಕೆಯ ಪ್ರತೀಕ.

ಅಗಲವಾದ ಕಿವಿಗಳು ಭಕ್ತರು ಹೇಳುವ ಪ್ರತಿಯೊಂದು ವಿಷಯವನ್ನು ಕೇಳುತ್ತಾರೆಂಬ ಸೂಚಕ. ಭಾರತದಲ್ಲಿ ಯಾವುದೇ ಕೆಲಸ ಮಾಡಬೇಕಿದ್ದರೂ ಅದಕ್ಕೆ ಮೊದಲು ಗಣೇಶ ದೇವರನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪ್ರತಿಯೊಂದು ಆಚರಣೆಯಲ್ಲೂ ಗಣೇಶ ದೇವರನ್ನು ಪ್ರಥಮವಾಗಿ ಪೂಜಿಸಲಾಗುತ್ತದೆ. ಯಾವುದೇ ಕೆಲಸದ ಆರಂಭಕ್ಕೆ ಸಮಾನಾರ್ಥವೇ ಗಣೇಶ ದೇವರು. ಗಣೇಶ ದೇವರನ್ನು ಮೊದಲು ಯಾಕೆ ಪೂಜಿಸಲಾಗುತ್ತದೆ ಎನ್ನುವ ಬಗ್ಗೆ ನಿಮಗೆ ಅಚ್ಚರಿಯಾಗುತ್ತಿದೆಯಾ? ಹಾಗಾದರೆ ಅದರ ಬಗ್ಗೆ ತಿಳಿದುಕೊಳ್ಳುವ.

Reasons Why We Worship Ganesha First

ಗ್ರಂಥಗಳು ಏನು ಹೇಳುತ್ತದೆ
ಗಣಪತಿ ಉಪನಿಷದ್‌ನ ಪ್ರಕಾರ ಗಣೇಶ ದೇವರು ಪ್ರಕೃತಿ ಮತ್ತು ಪುರುಷನಿಂದ ಮೊದಲೇ ಇದ್ದರು. ಇದರಿಂದಾಗಿ ಯಾವುದೇ ಕಾರ್ಯಕ್ಕೆ ಮೊದಲು ಗಣೇಶ ದೇವರನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಗಣೇಶ ದೇವರು ಅನಂತ ಮತ್ತು ಸೃಷ್ಟಿಯ ಮೊದಲೇ ಇದ್ದರೆನ್ನುತ್ತಿದೆ.

ಗೌರಿ ಗಣೇಶ ಹಬ್ಬ ಆಚರಣೆಯ ಮಹತ್ವವೇನು?

ಪುರಾಣಗಳು
ಒಂದು ಸಲ ಪಾರ್ವತಿ ದೇವಿಯು ಗಣೇಶ ದೇವರನ್ನು ದ್ವಾರಪಾಲಕನಾಗಿ ನೇಮಿಸಿ, ಒಳಗೆ ಯಾರನ್ನೂ ಬಿಡಬಾರದೆಂದು ಆಜ್ಞೆ ಮಾಡುತ್ತಾಳೆ. ಗಣೇಶ ದ್ವಾರ ಕಾಯುತ್ತಿದ್ದಂತೆ ಶಿವನು ಅಲ್ಲಿಗೆ ಬಂದು ತನ್ನ ಕೋಣೆಯತ್ತ ಹೋಗುತ್ತಾನೆ. ಆ ವೇಳೆ ಗಣೇಶನು ಕೋಣೆಯೊಳಗೆ ಪ್ರವೇಶಿಸದಂತೆ ಶಿವನನ್ನು ತಡೆಯುತ್ತಾಳೆ. ಈ ವೇಳೆ ಕೋಪೋದ್ರಿಕ್ತರಾದ ಶಿವನು ಗಣೇಶನ ತಲೆಯನ್ನು ಕಡಿಯುತ್ತಾನೆ. ಗಣೇಶನ ಬೊಬ್ಬೆ ಕೇಳಿದ ಪಾರ್ವತಿ ಓಡಿಬಂದಾಗ ಗಣೇಶನ ತಲೆ ಕಡಿದಿರುವುದನ್ನು ನೋಡಿ ಸಿಟ್ಟಿಗೇಳುತ್ತಾಳೆ.
ತನ್ನ ಮಗನಿಗೆ ಜೀವ ನೀಡದಿದ್ದರೆ ಇಡೀ ವಿಶ್ವವನ್ನೇ ಧ್ವಂಸ ಮಾಡುತ್ತೇನೆಂದು ಹೇಳುತ್ತಾಳೆ. ಇದನ್ನು ಕಂಡು ಶಿವನು ಗಣೇಶ ದೇವರಿಗೆ ಆನೆಯ ತಲೆಯನ್ನು ತಂದು ಜೋಡಿಸಿ, ಜೀವ ನೀಡುತ್ತಾನೆ. ಈ ಸ್ಥಿತಿ ನೋಡಿ ಪಾರ್ವತಿ ತುಂಬಾ ಸಂಕಷ್ಟಪಡುತ್ತಾಳೆ. ಇದನ್ನು ಕಂಡ ಶಿವನು ಗಣೇಶನಿಗೆ ದೈವಿ ಶಕ್ತಿ ನೀಡಿ, ಗಣೇಶನ ಹೆಸರು ಜಪಿಸದೆ ಮತ್ತು ಆರ್ಶೀವಾದ ಪಡೆಯದೆ ಯಾವುದೇ ಪೂಜೆ ಅಥವಾ ಕಾರ್ಯ ಆಗದು ಎಂದು ಶಿವನು ಆಜ್ಞೆ ನೀಡುತ್ತಾನೆ.
ಇದರ ಬಳಿಕ ಗಣೇಶ ದೇವರು ‘ಪ್ರಥಮ ಪೂಜ್ಯ ಅಥವಾ ಮೊದಲು ಪೂಜಿಸಲ್ಪಡುವ ದೇವರು. ಗಣೇಶ ದೇವರನ್ನು ಮೊದಲು ಪೂಜಿಸುವ ಬಗ್ಗೆ ಇರುವ ಮತ್ತೊಂದು ಕಾರಣವೆಂದರೆ, ಒಂದು ದಿನ ಗಣೇಶನ ಹಿರಿಯ ಸೋದರ ಕಾರ್ತಿಕೇಯ ದೇವರುಗಳಲ್ಲಿ ನಾನೇ ಶ್ರೇಷ್ಠನೆಂದು ಘೋಷಿಸುತ್ತಾನೆ. ಇದನ್ನು ಕಂಡ ಶಿವನು, ಕಾರ್ತಿಕೇಯ ಮತ್ತು ಗಣೇಶನು ಇಡೀ ಪೃಥ್ವಿಗೆ ಒಂದು ಸುತ್ತು ಬರಬೇಕೆಂದು ಆಜ್ಞೆ ಮಾಡುತ್ತಾನೆ. ಕಾರ್ತಿಕೇಯ ತನ್ನ ವಾಹನ ನವಿಲನ್ನೇರಿ ಭೂಮಿಗೆ ಸುತ್ತು ಬರಲು ಹೋಗುತ್ತಾನೆ. ಆದರೆ ಬುದ್ದಿವಂತ ಗಣೇಶನು ಶಿವ ಮತ್ತು ಪಾರ್ವತಿಗೆ ಸುತ್ತು ಬರುತ್ತಾನೆ ಮತ್ತು ತಂದೆ-ತಾಯಿಯೇ ನನಗೆ ವಿಶ್ವ ಎಂದು ಹೇಳುತ್ತಾನೆ. ಗಣೇಶ ಇದನ್ನು ಗೆದ್ದ ಕಾರಣ ಮೊದಲಿಗೆ ಆತನನ್ನು ಪೂಜಿಸಲಾಗುತ್ತದೆ.

ಯೋಗದ ನಂಬಿಕೆ
ಯೋಗದ ದೃಷ್ಟಿಕೋನದ ಪ್ರಕಾರ ನಾವು ಏನೇ ಮಾಡಿದರೂ ಅದು ಎರಡು ವಿಭಾಗಗಳಲ್ಲಿ ವಿಂಗಡನೆಯಾಗುತ್ತದೆ. ಅವುಗಳೆಂದರೆ ಪ್ರಾಪಂಚಿಕ ಅಥವಾ ಆಧ್ಯಾತ್ಮಿಕ. ಗಣೇಶ ದೇವರು ನಮ್ಮ ದೇಹದಲ್ಲಿರುವ ‘ಮೂಲಾಧಾರ ಚಕ್ರದ ಒಡೆಯ. ‘ಮೂಲಾಧಾರ'ವು ಪ್ರಾಪಂಚಿಕ ಮತ್ತು ಆಧ್ಯಾತ್ಮ ಜಗತ್ತಿನ ಸಂಪರ್ಕ ಸಾಧನ. ಗಣೇಶ ದೇವರು ಈ ಎರಡನ್ನು ನಿಯಂತ್ರಿಸುತ್ತಾರೆ. ಅವರು ವಿಶ್ವದಲ್ಲಿ ಪ್ರಾಪಂಚಿಕ ಸಂತೋಷ ಕೊಡುತ್ತಾನೆ.
ಹುಟ್ಟು ಮತ್ತು ಸಾವಿನ ಅಂತ್ಯವಿಲ್ಲದ ಚಕ್ರದಿಂದ ವಿಮುಕ್ತಿ ನೀಡುತ್ತಾನೆ. ಯೋಗದ ತತ್ವಗಳ ಪ್ರಕಾರ ನಮ್ಮ ಪ್ರಾಪಂಚಿಕ ಜೀವನವು ಗಣೇಶ ನಿಯಂತ್ರಿಸುವ ಮೂಲಾಧಾರ ಚಕ್ರದಿಂದ ಆರಂಭವಾಗುತ್ತದೆ. ಜೀವನದಲ್ಲಿ ಯಾವುದೇ ಅಡೆತಡೆಗಳು ಬರದಿರಲು ಗಣೇಶ ದೇವರ ಆರ್ಶೀವಾದ ಬೇಕಾಗುತ್ತದೆ. ಇದರಿಂದ ಗಣೇಶ ದೇವರು ನಮ್ಮ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾರೆ. ಇದರಿಂದಾಗಿಯೇ ನಾವು ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು ಗಣೇಶ ದೇವರನ್ನು ಪೂಜಿಸುತ್ತೇವೆ.

English summary

Reasons Why We Worship Ganesha First

Lord Ganesha is a popular deity of Hinduism. He is denoted by His elephant head, big belly, His mount and a small mouse. Ganesha epitomises wisdom and knowledge. He is the Vighnaharta or the destroyer of all obstacles.
Story first published: Thursday, August 28, 2014, 10:28 [IST]
X
Desktop Bottom Promotion