For Quick Alerts
ALLOW NOTIFICATIONS  
For Daily Alerts

ದೀಪಾವಳಿ 2019: ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಹಿಂದಿನ ಕಾರಣಗಳು

ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು.

By Jaya subramanya
|

ದೀಪಗಳ ಹಬ್ಬ ದೀಪಾವಳಿಯನ್ನು ನಾವೆಲ್ಲರೂ ಬಹು ಸಂಭ್ರಮದಿಂದಲೇ ಆಚರಿಸುತ್ತೇವೆ. ಎಲ್ಲಾ ಹಬ್ಬಗಳು ಹೇಗೆ ಮಹತ್ವತೆಯನ್ನು ಪಡೆದುಕೊಂಡಿದೆಯೋ ಅಂತೆಯೇ ದೀಪಾವಳಿ ಕೂಡ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ.

ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬವು ಈ ಬಾರಿ 25ರಿಂದ ಆರಂಭವಾಗಿ 29ರವರೆಗೆ ಐದು ದಿನಗಳ ಕಾಲ ನಡೆಯುತ್ತದೆ. ಅಕ್ಟೋಬರ್ 27ರಂದು ನರಕ ಚತುರ್ದಶಿ ಹಾಗೂ 28ರಂದು ಲಕ್ಷ್ಮೀಪೂಜೆಯನ್ನು ಕರ್ನಾಟಕದಲ್ಲಿ ಪ್ರಮುಖವಾಗಿ ಹಬ್ಬವಾಗಿ ಆಚರಿಸಲಾಗುತ್ತದೆ.

ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ ಇದರ ಮಹತ್ವವೇನು ಎಂದು ಯಾರನ್ನಾದರೂ ಕೇಳಿದರೆ ಅವರುಗಳೆಲ್ಲಾ ತಮಗೆ ತೋಚಿದ ಉತ್ತರವನ್ನೇ ನೀಡುತ್ತಾರೆ. ಆದರೆ ದೀಪಾವಳಿ ಹಬ್ಬ ಆಚರಣೆಯು ಮುಖ್ಯವಾದ ಅಂಶವನ್ನು ಒಳಗೊಂಡಿದೆ.

ಹಿಂದೂಗಳು ತಮ್ಮ ಧಾರ್ಮಿಕ ನಂಬಿಕೆ ಮತ್ತು ತತ್ವಗಳಿಗೆ ಅನುಸಾರವಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನದಂದು ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಾರೆ ಮತ್ತು ನಿಯಮಗಳನ್ನು ಪಾಲಿಸುತ್ತಾರೆ. ದೀಪಾವಳಿ ವಿಶೇಷ: ನರಕ ಚತುರ್ದಶಿ ಹಬ್ಬದ ಹಿನ್ನೆಲೆ

ಇಂದಿನ ಲೇಖನದಲ್ಲಿ ಜನರು ತಮ್ಮ ನಂಬಿಕೆಗಳಿಗೆ ಅನುಸಾರವಾಗಿ ದೀಪಾವಳಿ ಹಬ್ಬದ ಆಚರಣೆಯನ್ನು ಹೇಗೆ ಮಾಡುತ್ತಾರೆ ಮತ್ತು ಅವರು ಯಾವ ಅಂಶಗಳನ್ನು ನಂಬಿಕೊಂಡು ಬಂದಿದ್ದಾರೆ ಎಂಬುದನ್ನು ಕಂಡುಕೊಳ್ಳೋಣ....

ಅಯೋಧ್ಯೆಗೆ ರಾಮನು ಮರಳಿ ಬಂದಿದ್ದು

ಅಯೋಧ್ಯೆಗೆ ರಾಮನು ಮರಳಿ ಬಂದಿದ್ದು

ಭಾರತದ ಉತ್ತರಭಾಗಗಳಲ್ಲಿ, ರಾಮನು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿ ಬಂದಿರುವ ಸೂಚನೆಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಗಳನ್ನು ಹಚ್ಚಿ ರಾಮನನ್ನು ಅಯೋಧ್ಯಾವಾಸಿಗಳು ಬರಮಾಡಿಕೊಂಡರು ಎಂಬುದಾಗಿ ಕಥೆ ಸಾರುತ್ತದೆ.

ಲಕ್ಷ್ಮೀ ಪೂಜೆ

ಲಕ್ಷ್ಮೀ ಪೂಜೆ

ದೀಪಾವಳಿಯಂದು ಅತಿಮುಖ್ಯವಾಗಿರುವಂತಹದ್ದು ಗಣಪತಿ ಮತ್ತು ಲಕ್ಷ್ಮೀ ಪೂಜೆಯಾಗಿದೆ. ವರ್ಷದ ಗಾಢಾಂಧಕಾರದ ದಿನ ಪೂಜೆಯನ್ನು ನಡೆಸಲಾಗುತ್ತದೆ. ಅಶ್ವಿನ್ ಮಾಸದ ಮೂರ್ಣ ಚಂದ್ರ ದಿನ ಇದಾಗಿದೆ. ಮೇಣದ ಬತ್ತಿಗಳನ್ನು ಹಚ್ಚಿ ಹಣತೆಯನ್ನು ಹಚ್ಚಿ,ರಂಗೋಲಿಯನ್ನು ಮನೆಮನೆಗಳಲ್ಲಿ ಬಿಡಿಸಿ ಶೃಂಗರಿಸುತ್ತಾರೆ. ಲಕ್ಷ್ಮೀ ಪೂಜೆಯನ್ನು ರಾತ್ರಿ ನಡೆಸುತ್ತಾರೆ.ದೀಪಾವಳಿ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ

ಹೊಸ ವರ್ಷ

ಹೊಸ ವರ್ಷ

ಭಾರತೀಯ ವ್ಯವಹಾರಸ್ಥರಿಗೆ ದೀಪಾವಳಿ ಎಂಬುದು ಹೊಸ ವರ್ಷದ ಆಗಮನವಾಗಿದೆ. ಹಳೆಯ ಪುಸ್ತಕಗಳಿಗೆ ವಿದಾಯ ಹೇಳಿ ಹೊಸ ಪುಸ್ತಕದಿಂದ ತಮ್ಮ ಲೆಕ್ಕಾಚಾರವನ್ನು ಮಾಡುತ್ತಾರೆ. ಹಿಂದೂ ಹೊಸ ವರ್ಷದ ಆಗಮನ ಎಂಬುದರ ದ್ಯೋತಕವಾಗಿ ಕೆಲವರು ಮನೆಗೆ ಪೇಂಟಿಂಗ್ ಅನ್ನು ಮಾಡಿಸುತ್ತಾರೆ.

ಕಾಳಿ ಪೂಜೆ

ಕಾಳಿ ಪೂಜೆ

ಒಡಿಶಾ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ದೀಪಾವಳಿಯ ರಾತ್ರಿಯಂದು ಮಹಾಕಾಳಿ ಅಥವಾ ನಿಶಿ ಪೂಜೆಯನ್ನು ನಡೆಸಲಾಗುತ್ತದೆ. ಪಾರ್ವತಿ ದೇವಿಯು ಕಾಳಿ ಅವತಾರವನ್ನು ತಾಳಿ ಅಸುರರ ತಲೆಯನ್ನು ಕತ್ತರಿಸಿ ಚಂಡಾಡಿದ ದಿನ ಎಂಬುದಾಗಿ ಕೂಡ ಕಾಣಲಾಗುತ್ತದೆ. ತಡರಾತ್ರಿಯಲ್ಲಿ ಕಾಳಿ ಪೂಜೆಯನ್ನು ಆರಂಭಿಸುತ್ತಾರೆ ಮತ್ತು ಮುಂಜಾನೆ ಆದಷ್ಟು ಬೇಗನೇ ಪೂಜೆಯನ್ನು ಮುಗಿಸುತ್ತಾರೆ.

ಗುರು ನಾನಕ್

ಗುರು ನಾನಕ್

ಹಿಂದೂಗಳು ಮಾತ್ರವಲ್ಲದೆ ಸಿಖ್ಖರು ಕೂಡ ದೀಪಾವಳಿಯನ್ನು ಆಚರಿಸುತ್ತಾರೆ. ಏಕೆಂದರೆ ಗುರು ಹರ್ ಗೋಬಿಂದ್ ಜಿ, ಸಿಖ್ಖರ ಆರನೆಯ ಗುರು ಖಾರಾಗೃಹದಿಂದ 62 ಹಿಂದೂ ರಾಜರುಗಳನ್ನು ಬಿಡಿಸುತ್ತಾರೆ. ಅವರುಗಳನ್ನು ಬಿಡುಗಡೆ ಮಾಡಿ ಅವರು ಗೋಲ್ಡನ್ ಟೆಂಪಲ್‎ಗೆ ಭೇಟಿ ನೀಡುತ್ತಾರೆ. ಅಮೃತಸರದ ಎಲ್ಲಾ ಜನರು ಅವರನ್ನು ಮೇಣದ ಬತ್ತಿ ಮತ್ತು ದೀಪಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಗುರುನಾನಕ್ ಜಯಂತಿ ಮಹತ್ವ, ಐತಿಹಾಸಿಕ ಹಿನ್ನೆಲೆ

ಭರವಸೆಯ ಬೆಳಕು

ಭರವಸೆಯ ಬೆಳಕು

ವರ್ಷದ ಗಾಡಾಂಧಕಾರದ ಸಂದರ್ಭದಲ್ಲೇ ದೀಪಗಳ ಹಬ್ಬ ದೀಪಾವಳಿಯ ಆಗಮನವಾಗುತ್ತದೆ ಎಂಬುದಾಗಿ ನಂಬಲಾಗಿದೆ. ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಭರವಸೆಯ ಬೆಳಕು

ಭರವಸೆಯ ಬೆಳಕು

ದೀಪಾವಳಿ ಹಬ್ಬದ ಕುರಿತಾದ ಮಹತ್ವದ ಅಂಶಗಳು ಇದಾಗಿದ್ದು ನೀವು ಬೇರೆ ಯಾವುದಾದರೂ ಕಾರಣಕ್ಕೆ ದೀಪಾವಳಿಯನ್ನು ಆಚರಿಸುತ್ತೀರಾ ಎಂಬುದನ್ನು ನಮಗೆ ಬರೆದು ಕಳುಹಿಸಿ.

ನರಕಾಸುರನ ದಂತಕಥೆ

ನರಕಾಸುರನ ದಂತಕಥೆ

ಈ ಕಥೆಯ ಪ್ರಕಾರ ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನ. ನರಕಾಸುರನು ವಿಷ್ಣುವಿನಿಂದ ದೀರ್ಘಾಯುಷ್ಯದ ವರವನ್ನು ಪಡೆದುಕೊಂಡಿದ್ದನು. ತ್ರಿಲೋಕದಲ್ಲಿ ಇರುವ ಮಹಿಳೆಯರು ಹಾಗೂ ರಾಣಿಯರ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೆ ಅವರನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದನು. ಈ ದುಷ್ಟನನ್ನು ಶ್ರೀಕೃಷ್ಣನು ಕೊಂದು, ಮಹಿಳೆಯರನ್ನು ಬಿಡುಗಡೆಮಾಡಿದನು. ಹಾಗಾಗಿಯೇ ಆ ದಿನವನ್ನು ನರಕಚತುರ್ದಶಿ ಎಂದು ಕರೆಯಲಾಯಿತು.

 ಬಲಿ ರಾಜನ ಕಥೆ

ಬಲಿ ರಾಜನ ಕಥೆ

ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ ಬಲಿರಾಜನು ಮಣ್ಣಲ್ಲಿ ಮಣ್ಣಾದನು. ಈ ಸಂದರ್ಭವೂ ದೀಪಾವಳಿ ಹಬ್ಬದಂದೇ ನಡೆಯಿತು ಎನ್ನಲಾಗುತ್ತದೆ.

ವಿಕ್ರಮಾದಿತ್ಯನ ಪಟ್ಟಾಭಿಷೇಕ

ವಿಕ್ರಮಾದಿತ್ಯನ ಪಟ್ಟಾಭಿಷೇಕ

ರಾಜ ವಿಕ್ರಮಾದಿತ್ಯನ ರಾಜ್ಯ ಪಟ್ಟಾಭಿಷೇಕವು ದೀಪಾವಳಿಯ ದಿನದಂದೆ ನೆರವೇರಿತು ಎನ್ನಲಾಗುತ್ತದೆ. ಆ ದಿನದಂದು ಅಲ್ಲಿಯ ಜನರು ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು ಎನ್ನಲಾಗುತ್ತದೆ.

ದೀಪಾವಳಿಯು ಸುಗಿಯ ಸಂದರ್ಭದ ಹಬ್ಬ

ದೀಪಾವಳಿಯು ಸುಗಿಯ ಸಂದರ್ಭದ ಹಬ್ಬ

ಪುರಾತನ ಕಾಲದಲ್ಲಿ ದೀಪಾವಳಿಯನ್ನು ಪೈರನ್ನು ಕೊಯ್ಯುವ ಸಂದರ್ಭದಲ್ಲಿ ಆಚರಿಸಲಾಗುತ್ತಿತ್ತು. ಭಾರತದ ರೈತರು ತಾವು ಬೆಳೆದ ಬೆಳೆಯ ಮೊದಲ ಕೊಯ್ಲನ್ನು ತಂದು ದೇವಿ ಲಕ್ಷ್ಮಿಗೆ ನೀಡುವ ಮೂಲಕ ಪೂಜೆ ಮಾಡುತ್ತಿದ್ದರು ಎನ್ನಲಾಗುತ್ತದೆ. ದೇವಿಯು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಿದ್ದಳು ಎನ್ನುವ ನಂಬಿಕೆಯಿದೆ.

ಜೈನ್ ದರ್ಮದಲ್ಲಿ ದೀಪಾವಳಿ ಮಹತ್ವ

ಜೈನ್ ದರ್ಮದಲ್ಲಿ ದೀಪಾವಳಿ ಮಹತ್ವ

ಈ ದಿನದಂದು ಮಹಾರಾಜ (ಕೊನೆಯ ಜೈನ ತೀರ್ಥಂಕರ)ನಿರ್ವಾಣವನ್ನು ತಲುಪಿದ ಕಾರಣ ದೀಪಾವಳಿ ಉತ್ಸವ ಜೈನರಿಗೆ ಹೆಚ್ಚು ಪ್ರಾಮುಖ್ಯವಾಗಿದೆ. ಮಹಾವೀರ ಮಹಾವೀರನನ್ನು ಜ್ಞಾನೋದಯಗೊಳಿಸಿದ ಅನೇಕ ದೇವರುಗಳ ಉಪಸ್ಥಿತಿಯಲ್ಲಿ ನಿರ್ವಾಣವನ್ನು ಪಡೆದುಕೊಂಡನು ಮತ್ತು ಅವನ ಜೀವನದಿಂದ ಕತ್ತಲನ್ನು ತೆಗೆದುಹಾಕಿದ್ದನೆಂದು ಹೇಳಲಾಗುತ್ತದೆ. ಅಲ್ಲದೆ, ಗಣಧರ ಗೌತಮ್ ಸ್ವಾಮಿ (ಮಹಾವೀರನ ಮುಖ್ಯ ಶಿಷ್ಯ) ಈ ದಿನ ಸಂಪೂರ್ಣ ಜ್ಞಾನ ಪಡೆದುಕೊಂಡನು.

ಬೌದ್ಧರಲ್ಲಿ ದೀಪಾವಳಿಯ ಪ್ರಾಮುಖ್ಯತೆ

ಬೌದ್ಧರಲ್ಲಿ ದೀಪಾವಳಿಯ ಪ್ರಾಮುಖ್ಯತೆ

ಈ ದಿನದಂದೇ ಚಕ್ರವರ್ತಿ ಅಶೋಕನು ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡನು. ಈ ಹಿನ್ನೆಲೆಯಲ್ಲಿಯೇ ಬೌದ್ಧರು ಈ ಹಬ್ಬವನ್ನು ಅಶೋಕ ವಿಜಯದಶಮಿ ಎಂದು ಕರೆಯುತ್ತಾರೆ. ಈ ದಿನವನ್ನು ಮಠವನ್ನು ಅಲಂಕರಿಸುವುದು ಹಾಗೂ ಪ್ರಾರ್ಥನೆ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸುತ್ತಾರೆ.

English summary

Reasons to Celebrate Diwali Festival of Lights

If you ask anyone, why we celebrate Diwali, you will get vague answers. They might tell you that we light lamps or diyas on Diwali or burst fire crackers on Diwali. But there are many reasons for which Diwali is one of the few pan-Indian festivals. Almost all of India celebrates Diwali but their myths and rituals for this festival are different. Here are few reason of why we celebrate Diwali
X
Desktop Bottom Promotion