For Quick Alerts
ALLOW NOTIFICATIONS  
For Daily Alerts

ರಥ ಯಾತ್ರೆ: ಐತಿಹಾಸಿಕ ಜಗನ್ನಾಥ ರಥಯಾತ್ರೆ 2021ರ ವಿಶೇಷಗಳು

|

ವಿಶ್ವ ವಿಖ್ಯಾತ ಪುರಿ ಜಗ್ನನಾಥ ಯಾತ್ರೆ ಜುಲೈ 11ರಂದು ಪ್ರಾರಂಭವಾಗಿದೆ. ಈ ರಥೆ ಯಾತ್ರೆ ಒಡಿಶಾ ರಾಜ್ಯದಲ್ಲಿ ನಡೆಯುವುದಾದರೂ ವಿಶ್ವದ ವಿವಿಧ ಮೂಲೆಗಳಿಂದ ಈ ರಥೆಯಾತ್ರೆಯ ಸೊಬಗು ನೋಡಲು ಭಕ್ತರು, ಯಾತ್ರಿಗಳು ಭಾಗವಹಿಸುತ್ತಾರೆ. ಇದು ಪುರಿ ಜಗನ್ನಾಥ ರಥ ಯಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

ratha yathra

ಪುರಿ ಜಗನ್ನಾಥ ರಥ ಯಾತ್ರೆಗೆ 5000 ವರ್ಷಗಳಿಗೂ ಅಧಿಕ ಇತಿಹಾಸವಿದೆ. ಭಾರತದ ವಿವಿಧ ಕಡೆ ಇರುವ ಜಗನ್ನಾಥ ದೇವಾಲಯಗಳಲ್ಲಿ ಇದೇ ದಿನದಂದು ರಥಯಾತ್ರೆ ಮಾಡಲಾಗುವುದು. ಪುರಿಯಲ್ಲಿ ಬಹಳ ವೈಭೋಗದಿಂದ ಈ ರಥಯಾತ್ರೆ ನಡೆಸಲಾಗುವುದು.

ಪ್ರತೀವರ್ಷ ಈ ರಥಯಾತ್ರೆ ನಡೆಸಲಾಗುವುದು, ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ರಥಯಾತ್ರೆಗೆ ಅಷ್ಟೊಂದು ಜನರು ಸೇರಲು ಅನುಮತಿ ನೀಡುತ್ತಿಲ್ಲ.

ಪ್ರತೀವರ್ಷ ಹೊಚ್ಚ ಹೊಸ ರಥಗಳ ನಿರ್ಮಾಣ

ಪ್ರತೀವರ್ಷ ಹೊಚ್ಚ ಹೊಸ ರಥಗಳ ನಿರ್ಮಾಣ

ಈ ರಥಯಾತ್ರೆಗೆ ಪ್ರತೀವರ್ಷ ಜಗನ್ನಾಥ, ಬಲಭದ್ರ, ಸುಭದ್ರರನ್ನು ಕರೆದೊಯ್ಯಲು 3 ಹೊಚ್ಚ ಹೊಸ ರಥಗಳನ್ನು ಮರದಿಂದ ನಿರ್ಮಿಸುವುದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.

ಈ ರಥ ನಿರ್ಮಾಣವನ್ನು ಅಕ್ಷಯ ತೃತೀಯದಂದು ಪ್ರಾರಂಭಿಸುತ್ತಾರೆ. ಈ ರಥಗಳಿಗೆ ಪ್ರಕಾಶಮಾನವಾದ ಬಣ್ಣಗಳನ್ನು ಬಳಿಯಲಾಗುವುದು. ಜಗನ್ನಾಥ ಸ್ವಾಮಿಯ ರಥವು ಕೆಂಪು ಮತ್ತು ಹಳದಿ ಛತ್ರಿಗಳನ್ನು, ಬಲಭದ್ರ ಸ್ವಾಮಿಯ ರಥವು ಕೆಂಪು ಮತ್ತು ಹಸಿರು ಹಾಗು ಸುಭದ್ರಳ ರಥವು ಕೆಂಪು ಮತ್ತು ಕಪ್ಪು ಛತ್ರಿಗಳನ್ನು ಹೊಂದಿರುತ್ತದೆ.

 2021ರ ರಥಯಾತ್ರೆ

2021ರ ರಥಯಾತ್ರೆ

ಚಾಂದ್ರಮಾನ ಕ್ಯಾಲೆಂಡರ್‌ ಪ್ರಕಾರ ರಥ ಯಾತ್ರೆ ಆಷಾಢದ ಎರಡನೇ ಚಂದ್ರಮಾನದಂದು (ಉತ್ತರ ಭಾರತದ ಕಡೆಯ ಆಷಾಢ) ಪ್ರಾರಂಭವಾಗಿ 8 ದಿನಗಳವರೆಗೆ ಇರುತ್ತದೆ.

ತಿಥಿ ಪ್ರಾರಂಭ: ಜಯಲೈ 11, 2021 ಬೆಳಗ್ಗೆ 07:47ಕ್ಕೆ

ತಿಥಿ ಮುಕ್ತಾಯ: ಜುಲೈ 12, 2021 ಬೆಳಗ್ಗೆ 08:19ಕ್ಕೆ

ಮೂರು ಅರ್ಥವನ್ನು ಹೇಳುವ 3 ರಥಗಳು

ಮೂರು ಅರ್ಥವನ್ನು ಹೇಳುವ 3 ರಥಗಳು

ಜಗನ್ನಾಥ ಸ್ವಾಮಿಯ ರಥವನ್ನು ಸಂದಿಘೋಷ್ ಅಥವಾ ಚಕ್ರಧ್ವಜ ಎಂದು ಕರೆಯಲಾಗುತ್ತದೆ. ಇದರರ್ಥ ಕೇಳಲು ಇಂಪಾದ ಧ್ವನಿ ಎಂಬುವುದಾಗಿದೆ. ಈ ರಥವು 65 ಟನ್‍ಗಳಷ್ಟು ಭಾರವನ್ನು ಹೊಂದಿರುತ್ತದೆ. ಬಲಭದ್ರ ಸ್ವಾಮಿಯ ರಥವು ತಾಳಧ್ವಜ ಎಂದು ಹೆಸರಾಗಿದೆ. ಇದರರ್ಥ ಶಕ್ತಿಯುತವಾದ ತಾಳ ಎಂದರ್ಥ. ಸುಭದ್ರಳ ರಥವನ್ನು ಪದ್ಮ ಧ್ವಜ ಅಥವಾ ದರ್ಪದಲನ್ ಎಂದು ಕರೆಯುತ್ತಾರೆ. ಇದರರ್ಥ ಗರ್ವದ ನಾಶ ಮಾಡುವುದು ಎಂಬುವುದಾಗಿದೆ.

 ಈ ವರ್ಷವೂ ಭಕ್ತಾದಿಗಳಿಗೆ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ

ಈ ವರ್ಷವೂ ಭಕ್ತಾದಿಗಳಿಗೆ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ರಥೆಯಾತ್ರೆಗೆ ಭಕ್ತಾದಿಗಳಿಗೆ ಅವಕಾಶ ನೀಡಬಾರದೆಂದು ಒಡಿಶಾ ಸರ್ಕಾರಕ್ಕೆ ಆದೇಶ ನೀಡಿದೆ. ಯಾರು ರಥವನ್ನು ಎಳೆಯುತ್ತಾರೋ ಅವರಲ್ಲಿ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಿ ಇರಬೇಕು. 1000 ಜನರು ರಥವನ್ನು ಎಳೆಯಲು ಅವಕಾಶ ನೀಡಿದೆ.

ಕೊರೊನಾ ನಿಯಮಗಳನ್ನು ಅನುಸರಿಸಿ ಪುರಿ ಜಗ್ನನಾಥ ದೇವಾಲಯದಲ್ಲಿ ಮಾತ್ರ ರಥಯಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ಏನಾದರೂ ಆಗಲಿ ರಥಯಾತ್ರೆ ನಡೆಯುತ್ತಿದೆ ಅಷ್ಟೇ ಸಾಕು ಎನ್ನುವುದು ಎಂದು ಜಗನ್ನಾಥನ ಭಕ್ತರು ಹರ್ಷ ಪಟ್ಟಿದ್ದಾರೆ.

English summary

Rath Yatra 2021 Date, Schedule, Religious Importance and Significance in kannada

Rath yatra 2021 date, schedule, religious importance and significance in kannada, read on,
Story first published: Sunday, July 11, 2021, 9:12 [IST]
X
Desktop Bottom Promotion