For Quick Alerts
ALLOW NOTIFICATIONS  
For Daily Alerts

2019 ರಕ್ಷಾ ಬಂಧನ: ದಿನಾಂಕ ಹಾಗೂ ಮುಹೂರ್ತ

|

ಸೋದರ ಸೋದರಿಯರ ನಡುವೆ ಇರುವ ಪವಿತ್ರ ಬಾಂಧವ್ಯ ವರ್ಣನಾತೀತ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ರಕ್ತವನ್ನು ಹಂಚಿಕೊಂಡು ಬಂದ ಸಂಬಂಧ ಎನಿಸಿಕೊಳ್ಳುತ್ತದೆ. ಇಂತಹ ಒಂದು ಪವಿತ್ರ ಸಂಬಂಧಕ್ಕೆ ಹಿಂದೂಧರ್ಮದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಅಂತೆಯೇ ಶ್ರಾವಣ ಮಾಸದ ಹುಣ್ಣಿಮೆಯ ದಿನ ರಕ್ಷಾ ಬಂಧನ ಎನ್ನುವ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಹಬ್ಬ ಹೇಗೆ ಬಂತು? ಏಕೆ ಆಚರಿಸುತ್ತಾರೆ? ಎನ್ನುವ ಪ್ರಶ್ನೆಗಳಿಗೆ ವಿವಿಧ ಕಥೆ-ಪುರಾಣಗಳ ಇತಿಹಾಸ ಇರುವುದನ್ನು ನಾವು ಕಾಣಬಹುದು.

ಈ ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

Raksha Bandhan

ರಕ್ಷಾ ಬಂಧನ ಹಬ್ಬವನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇದೀಗ ಭಾರತ ದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ಮನದಲ್ಲಿ ಮೂಡಿಸುತ್ತವೆ.

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.

Raksha Bandhan

ರಕ್ಷಾ ಬಂಧನ ಆಚರಣೆಯ ಹಿಂದಿನ ಒಂದು ಕಥೆ

ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧವಾಗುತ್ತಿರುತ್ತದೆ. ಯುದ್ಧದ ಸಮಯದಲ್ಲಿ ದೇವತೆಗಳು ಸೋಲುವ ಘಟ್ಟ ತಲುಪುತ್ತಾರೆ. ಸೋಲುವ ಭೀತಿಯಲ್ಲಿದ್ದ ಇಂದ್ರ ದೇವನು ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರ ಮೊರೆ ಕೇಳಿದ ಬೃಹಸ್ಪತಿ ದೇವನು ಇಂದ್ರನ ಪತ್ನಿ ಇಂದ್ರಾಣಿಗೆ ಸಲಹೆ ನೀಡುತ್ತಾನೆ. ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿ ರೇಷ್ಮೆಯ ದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜಯದ ಸಂಕೇತವಾಗಿ ರೇಷ್ಮೆಯ ದಾರವೊಂದನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯ ಸಾಧಿಸುತ್ತಾನೆ. ಈ ಹಿನ್ನೆಲೆಯಲ್ಲೇ ರಜಪೂತರು ಯುದ್ಧದ ಸಮಯದಲ್ಲಿ ಹೊರಡುವಾಗ ಗಂಡುಮಕ್ಕಳ ಹಣೆಗೆ ಕುಂಕುಮ ಹಚ್ಚಿ ರಕ್ಷಣೆಯ ಸಂಕೇತವಾಗಿ ರೇಷ್ಮೆ ದಾರ ಕಟ್ಟಿ ಜಯ ಸಾಧಿಸಲೆಂದು ಹಾರೈಸುತ್ತಿದ್ದು. ಹಿಂದೂ ರಾಣಿಯರು ಸಹ ರಾಜರಿಗೆ ರಾಖಿಯನ್ನು ಕಟ್ಟಿ ಸಹೋರತೆಯ ಸಂಬಂಧ ಬೆಳೆಸುತ್ತಿದ್ದರು. ಇದರಂತೆ ರಾಖಿ ಭಾವನಾತ್ಮಕ ಸಂಕೇತವಾಗಿ ರಾಜರು ಸಹೋದರಿಯರ ರಕ್ಷಣೆಗೆ ನಿಲ್ಲುತ್ತಿದ್ದರು. ಇಂದು ಕಾಲಕಳೆಯುತ್ತಿದ್ದಂತೆ ಸಂಪ್ರದಾಯವಾಗಿ ಬೆಳೆಯ ತೊಡಗಿ ರಕ್ಷಾ ಬಂಧನ ದಿನವಾಗಿದೆ.

Most Read: ರಕ್ಷಾ ಬಂಧನದ ಮಹತ್ವ ಮತ್ತು ರಾಖಿ ಕಟ್ಟುವ ಶುಭ ಸಮಯ

Raksha Bandhan

ಪೌರಾಣಿಕ ಕಥೆ :

ಕೃಷ್ಣ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ.

ಇದನ್ನು ಕಂಡ ಶ್ರೀಕೃಷ್ಣ ತನಗೆ ಏನು ಬೇಕು ಎಂದು ಕೇಳಿಕೋ ಎಂದು ಹೇಳುತ್ತಾನೆ. ಈ ವೇಳೆ ದ್ರೌಪದಿ ಜೀವನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಎಂದು ಹೇಳುತ್ತಾಳೆ.

ದ್ರೌಪದಿಯ ಈ ಮಾತುಗಳನ್ನು ಕೇಳಿದ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ನಿಂತು ಸಂಕಷ್ಟದ ಸಮಯದಲ್ಲಿ ಕಾಪಾಡುವುದಾಗಿ ಹೇಳುತ್ತಾನೆ. ಇದರಂತೆ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ದಯಪಾಲಿಸಿ ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಉತ್ತರ ಭಾರತದಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತಿದ್ದು, ಈ ಹಬ್ಬವನ್ನು ರಾಖಿ ಪೂರ್ಣಿಮಾ ದಿನ ಎಂದು ಕರೆಯಲಾಗುತ್ತದೆ.

Raksha Bandhan

ನುಗುಲು ಹುಣ್ಣಿಮೆ/ ಯಜುರ್ ಉಪಾಕರ್ಮ:

ರಕ್ಷಾ ಬಂಧನದ ದಿನದಂದೇ ಯಜುರ್ ಉಪಾಕರ್ಮವನ್ನು ಆಚರಿಸಲಾಗುತ್ತದೆ. ಅಂದರೆ ಶ್ರಾವಣ ಮಾಸದ ಹುಣ್ಣಿಮೆಯಂದು ಪ್ರತಿಯೊಬ್ಬರೂ ತಮ್ಮ ಜನಿವಾರವನ್ನು ಬದಲಿಸಿಕೊಳ್ಳುತ್ತಾರೆ. ಜೀವನದಲ್ಲಿ ಸದ್ಗುಣಿಯಾಗಿ ಬದುಕಲು ಅಥವಾ ಜೀವನ ಸಾಗಿಸಲು ಒಂದು ಧಾರ್ಮಿಮಿಕ ರೀತಿ-ನೀತಿಗಳು ಇರುತ್ತವೆ. ಅದರ ಅನುಗುಣವಾಗಿಯೇ ತಮ್ಮ ಕೆಲಸ, ಜವಾಬ್ದಾರಿ ಹಾಗೂ ಪಾಲನೆಯನ್ನು ಮಾಡಿದರೆ ಬದುಕು ಉತ್ತಮವಾಗುತ್ತದೆ ಎಂದು ಹೇಳುತ್ತಾರೆ. ಆ ನಿಯಮಗಳನ್ನು ಪಾಲನೆ ಮಾಡಿದರೆ ಶಿವನ ಅನುಗ್ರಹಕ್ಕೆ ಒಳಗಾಗುತ್ತಾರೆ ಎಂದು ಋಷಿ ಮುನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಹಿಂದೂ ಧರ್ಮದ ಕೆಲವು ಜನಾಂಗದವರು ಗಂಡು ಮಕ್ಕಳಿಗೆ ಉಪನಯನ ಅಥವಾ ಉಪಾಕರ್ಮವನ್ನು ಮಾಡುತ್ತಾರೆ. ಉಪಾಕರ್ಮ ಮಾಡಿಸಿಕೊಂಡವರು ನಿತ್ಯವೂ ಜನಿವಾರ ಧರಿಸಬೇಕು. ಜೊತೆಗೆ ನಿತ್ಯವೂ ಸಂಧ್ಯಾವಂದನೆ ಮತ್ತು ಗಾಯತ್ರಿ ಮಂತ್ರವನ್ನು ಜಪಿಸಬೇಕು. ಆಗಲೇ ಜೀವನದಲ್ಲಿ ಸದ್ಗತಿ ಹಾಗೂ ಉತ್ತಮ ಭವಿಷ್ಯ ಎದುರಾಗುವುದು ಎನ್ನಲಾಗುತ್ತದೆ.

ಈ ವಿಧಿ ವಿಧಾನಗಳನ್ನು ಸಾಮಾನ್ಯವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು, ಅನುಸರಿಸುತ್ತಾರೆ. ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾ ನಿತ್ಯದ ಕೆಲಸ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಜೊತೆಗೆ ವರ್ಷದಲ್ಲೊಮ್ಮೆ ಬರುವ ಶ್ರಾವಣ ಮಾಸದ ಹುಣ್ಣಿಮೆಯ ದಿನ ತಮ್ಮ ಹಳೆಯ ಜನಿವಾರವನ್ನು ತೆಗೆದು, ಹೊಸ ಜನಿವಾರವನ್ನು ಧರಿಸುತ್ತಾರೆ. ಈ ಒಂದು ಕ್ರಮಕ್ಕೆ ಒಂದು ಪವಿತ್ರ ಅರ್ಥ ಹಾಗೂ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಹಾಗಾಗಿಯೇ ಆ ದಿನವನ್ನು ಒಂದು ಹಬ್ಬದ ರೂಪವಾಗಿಯೂ ಆಚರಿಸಲಾಗುವುದು.

ನಮ್ಮ ಕರ್ತವ್ಯ:

ಈ ಹಬ್ಬ ಪುರಾತನ ಕಾಲದಿಂದಲೂ ವಿವಿಧ ಕಥೆಯ ಹಿನ್ನೆಲೆಯಲ್ಲಿ ಹಾಗೂ ವಿಶೇಷ ಸಂಗತಿಗಾಗಿ ಆಚರಿಸಲಾಗುತ್ತಿದೆ. ಈ ಸಂಸ್ಕøತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದು ನಮ್ಮ ಕರ್ತವ್ಯ. ಅಂತೆಯೇ ಸದಾ ಸಹೋದರ ಹಾಗೂ ಸಹೋದರಿಯರ ನಡುವೆ ಪ್ರೀತಿ-ವಿಶ್ವಾಸವನ್ನು ತೋರುತ್ತಾ, ಪರಸ್ಪರ ರಕ್ಷಣೆಯ ಭದ್ರತಾ ಭಾವನೆ ನೀಡುವುದು ಇಬ್ಬರ ಕರ್ತವ್ಯವೂ ಆಗಬೇಕು. ಆಗಲೇ ಆಚರಣೆ ಹಾಗೂ ಹಬ್ಬಕ್ಕೂ ಒಂದು ಮಹತ್ವದ ಅರ್ಥ ದೊರೆಯುವುದು.

Most Read: ರಕ್ಷಾ ಬಂಧನ ಆಚರಣೆಯ ಪ್ರಾಮುಖ್ಯತೆ ಏಕೆ ವಿಶಿಷ್ಟವಾಗಿದೆ?

Raksha Bandhan

ರಕ್ಷಾ ಬಂಧನ ಆಚರಣೆಯ ಮುಹೂರ್ತದ ಸಮಯ:

ರಕ್ಷಾ ಬಂಧನ 2019 ಆಗಸ್ಟ್ 15 ರಂದು ಆಚರಿಸಲಾಗುವುದು. ಪೂರ್ಣಿಮೆಯು ಆಗಸ್ಟ್ 14ರ ಸಾಯಂಕಾಲದಿಂದಲೇ ಆರಂಭವಾಗಿ, ಆಗಸ್ಟ್ ರಾತ್ರಿಯ ವರೆಗೆ ಇರುವುದು. ಹಾಗಾಗಿ ರಾಖಿ/ರಕ್ಷಾ ಬಂಧನವನ್ನು ಮುಂಜಾನೆ 5.53ರಿಂದ ಸಾಯಂಕಾಲ 5.58ರ ಒಳಗೆ ಕಟ್ಟಬೇಕು.

English summary

Raksha Bandhan Date and Muhurat 2019

In India, the festival that reinforces the bond between a brother and sister is Raksha Bandhan. Every sister waits to tie the sacred thread, called ‘Rakhi ‘on her brothers’ wrist every year. This festival is celebrated on the Full moon day in the month of Shravan. It is one of the most popular festivals of India. There are many stories related to the origin of this festival.If we go back to where this festival started from, it was not to mark the love between a brother and sister but for victory in a war.
Story first published: Thursday, August 8, 2019, 12:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X