ನವ ದಿನಗಳ ಕಾಲ ಆರಾಧಿಸುವ ದೇವಿಗೆ ಪ್ರಿಯವಾದ ಸರಳ ಪ್ರಸಾದಗಳು

By: Divya pandith
Subscribe to Boldsky

ದೇವಿಗೆ ಮೀಸಲಾದ ಹಬ್ಬಗಳಲ್ಲಿ ನವರಾತ್ರಿಯು ಪ್ರಮುಖವಾದದ್ದು. ಹಿಂದೂ ಸಮುದಾಯದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಈ ಹಬ್ಬಕ್ಕೆ ವಿಶೇಷವಾದ ಪುರಾಣ ಇತಿಹಾಸವಿದೆ. ಒಂಬತ್ತು ದಿನಗಳಕಾಲ ದೇವಿ ತನ್ನ ವಿಭಿನ್ನ ರೂಪದಲ್ಲಿ ಅವತರಿಸುತ್ತಾಳೆ. ಆ ವಿಶಿಷ್ಟವಾದ ದಿನದಂದು ಬಗೆ ಬಗೆಯ ನೈವೇದ್ಯಗಳನ್ನು ಮಾಡಲಾಗುತ್ತದೆ. ದೇವಿಯ ಒಂದೊಂದು ಅವತಾರಕ್ಕೂ ವಿಭಿನ್ನ ಬಗೆಯ ಉಡುಗೆ, ನೈವೇದ್ಯ ಹಾಗೂ ಹೂಗಳಿಂದ ಶೃಂಗರಿಸುತ್ತಾರೆ.

ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ

ದುಷ್ಟ ಶಕ್ತಿಗಳ ಸಂಹಾರ ಮತ್ತು ಶಿಷ್ಟರ ಪಾಲನೆಗೆ ಪ್ರಖ್ಯಾತವಾದ ಈ ಹಬ್ಬ ನಮ್ಮ ನಾಡಿಗೆ ದೊಡ್ಡದು. ಸಮೀಪಿಸುತ್ತಿರುವ ನವರಾತ್ರಿ ಹಬ್ಬಕ್ಕೆ ನೀವು ಸಿದ್ಧರಾಗಬೇಕು ಹಾಗೂ ವಿವಿಧ ಪ್ರಸಾದಗಳ ಮಾಹಿತಿಯನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಈ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಶೈಲ ಪುತ್ರಿ ದೇವಿಯ ಪ್ರಸಾದ

ಶೈಲ ಪುತ್ರಿ ದೇವಿಯ ಪ್ರಸಾದ

ನವರಾತ್ರಿ ಹಬ್ಬದ ಮೊದಲ ದಿನದ ಆರಾಧನೆಯನ್ನು ಶೈಲ ಪುತ್ರಿಗೆ ಮಾಡಲಾಗುತ್ತದೆ. ಶೈಲ ಪುತ್ರಿಗೆ ಪ್ರಿಯವಾದದ್ದು ಶುದ್ಧ ತುಪ್ಪ. ಈ ಹಬ್ಬದಂದು ದೇವಿಯ ಕಾಲುಗಳ ಮೇಲೆ ತುಪ್ಪವನ್ನು ಸುರಿಯಲಾಗುತ್ತದೆ. ಈ ಪೂಜೆ ಮಾಡುವುದರಿಂದ ಕಷ್ಟದಲ್ಲಿರುವ ಭಕ್ತರ ಕಷ್ಟ, ಕಾಯಿಲೆ ಸಮಸ್ಯೆ ಹಾಗೂ ಹಿಂಸೆಗೆ ಒಳಗಾದ ಜೀವನವನ್ನು ನಡೆಸುತ್ತಿದ್ದರೆ ಅವುಗಳೆಲ್ಲವನ್ನು ನಿವಾರಿಸಿ, ತಾಯಿ ಒಳ್ಳೆಯ ಜೀವನವನ್ನು ಆಶೀರ್ವದಿಸುತ್ತಾಳೆ ಎನ್ನುವ ನಂಬಿಕೆ ಇದೆ.

ಬ್ರಹ್ಮಚಾರಿಣಿ ದೇವಿಗೆ ಪ್ರಸಾದ

ಬ್ರಹ್ಮಚಾರಿಣಿ ದೇವಿಗೆ ಪ್ರಸಾದ

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವತೆಗೆ ಸಮರ್ಪಿಸಲಾಗುತ್ತದೆ. ಅಶ್ವಿನ್ ತಿಂಗಳ ದ್ವಿತೀಯ ತಿಥಿಗಳ ಮೇಲೆ ನಡೆಸಲಾಗುತ್ತದೆ. ಇದನ್ನು ಪಾರ್ವತಿ ದೇವಿಯ ಪ್ರತಿರೂಪ ಎಂದು ಆರಾಧಿಸಲಾಗುವುದು. ಶಿವನನ್ನು ಇನ್ನೊಮ್ಮೆ ತನ್ನ ಪತಿಯನ್ನಾಗಿ ಮಾಡಿಕೊಳ್ಳಲು ಪ್ರಾಯಶ್ಚಿತ ಮಾಡಿಕೊಂಡಳು ಎನ್ನುವ ಇತಿಹಾಸವಿದೆ. ಈ ದೇವಿಗೆ ಪ್ರಸಾದವನ್ನಾಗಿ ಸಕ್ಕರೆಯನ್ನು ನೀಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಕುಟುಂಬ ಸದಸ್ಯರಿಗೆ ದೀರ್ಘಾವಧಿಯ ಜೀವನ ಪ್ರಾಪ್ತಿಯಾಗುತ್ತದೆ ಎನ್ನಲಾಗುವುದು.

ಬ್ರಹ್ಮಚಾರಿಣಿ ದೇವಿಗೆ ಪ್ರಸಾದ

ಬ್ರಹ್ಮಚಾರಿಣಿ ದೇವಿಗೆ ಪ್ರಸಾದ

ನವರಾತ್ರಿಯ ಮೂರನೇ ದಿನ ಚಂದ್ರಘಂತ ದೇವಿಯನ್ನು ಆರಾಧಿಸಲಾಗುತ್ತದೆ. ಇದು ಅಶ್ವಿನ್ ತಿಂಗಳದಲ್ಲಿ ಶುಕ್ಲ ಪಕ್ಷದ ತೃತೀಯ ತಿಥಿಯಾಗಿರುತ್ತದೆ. ಈ ದಿನ ಚಂದ್ರನು ಅರ್ಧ ಚಂದ್ರಾಕಾರದಲ್ಲಿ ಕಾಣುತ್ತಾನೆ. ಅಲ್ಲದೆ ದೇವಿಯ ತಲೆಯ ಮೇಲೆ ಅರ್ಧ ಚಂದ್ರನ ಚಿತ್ರವಿರುತ್ತದೆ. ಹಾಗಾಗಿ ಈ ದೇವಿಗೆ ಚಂದ್ರಘಂತ ದೇವಿ ಎಂದು ಜನರು ಕರೆಯುತ್ತಾರೆ. ಈ ದಿನ ದೇವಿಗೆ ಹಾಲು ಅಥವಾ ಶುದ್ಧ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ನೈವೇದ್ಯವನ್ನಾಗಿ ಇಡಬಹುದು. ಈ ದಿನ ಬ್ರಾಹ್ಮಣರಿಗೆ ಊಟವನ್ನು ನೀಡಿ ದಕ್ಷಿಣೆಯನ್ನು ನೀಡಬೇಕು. ಹೀಗೆ ಮಾಡಿದರೆ ದೇವಿಗೆ ಸಂತೋಷವಾಗುತ್ತದೆ. ಜೊತೆಗೆ ಭಕ್ತನಿಗೂ ಒಳ್ಳೆಯದಾಗಲಿ ಎಂದು ಸಂತೋಷದಿಂದ ಹರಸುತ್ತಾಳೆ.

ಕುಷ್ಮಾಂಡ ದೇವಿಗೆ ಪ್ರಸಾದ

ಕುಷ್ಮಾಂಡ ದೇವಿಗೆ ಪ್ರಸಾದ

ನವರಾತ್ರಿಯ ನಾಲ್ಕನೇ ದಿನವನ್ನು ಕುಷ್ಮಾಂಡ ದೇವಿಯ ಆರಾಧನೆ ಮಾಡಲಾಗುತ್ತದೆ. ಈ ದಿನ ಭಕ್ತರು ದೇವಿಯ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ದೇವಿಯು ಭಕ್ತರ ಎಲ್ಲಾ ಕಷ್ಟ ಹಾಗೂ ರೋಗಗಳಿಂದ ಮುಕ್ತಿ ಹೊಂದಲು ಆಶೀರ್ವಾದ ಮಾಡುತ್ತಾಳೆ. ಈ ದಿನ ದೇವಿಗೆ ಮಾಲ್ಪುವಾ ಸಿಹಿ ತಿಂಡಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಇದರಿಂದ ಭಕ್ತರಿಗೆ ಹೆಚ್ಚು ಬುದ್ಧಿಶಕ್ತಿ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ಸ್ಕಂದ ಮಾತೆಗೆ ಪ್ರಸಾದ

ಸ್ಕಂದ ಮಾತೆಗೆ ಪ್ರಸಾದ

ನವರಾತ್ರಿಯ 5ನೇ ದಿನದಂದ ಸ್ಕಂದ ಮಾತೆಗೆ ಪೂಜೆ ಮಾಡಲಾಗುವುದು. ಸ್ಕಂದ ಮಾತೆಯು ಕಾರ್ತಿಕೇಯ ದೇವನ ತಾಯಿಯ ಸುಂದರ ರೂಪ ಎಂದು ಹೇಳಲಾಗುವುದು. ಈ ರೂಪದಲ್ಲಿರುವ ತಾಯಿಯು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಈ ದಿನ ದೇವಿಗೆ ಬಾಳೆ ಹಣ್ಣನ್ನು ನೈವೇದ್ಯವನ್ನಾಗಿ ನೀಡಬೇಕು. ಆಗ ದೇವಿಯು ಆರೋಗ್ಯಕರ ಜೀವನವನ್ನು ಆಶೀರ್ವದಿಸುತ್ತಾಳೆ ಎನ್ನಲಾಗುತ್ತದೆ.

ಕಾತ್ಯಾಯಿನಿ ದೇವಿಗೆ ಪ್ರಸಾದ

ಕಾತ್ಯಾಯಿನಿ ದೇವಿಗೆ ಪ್ರಸಾದ

ನವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿಗೆ ಪೂಜಿಸಲಾಗುವುದು. ಈ ದೇವಿಗೆ ಪ್ರಸಾದವನ್ನಾಗಿ ಜೇನುತುಪ್ಪವನ್ನು ನೀಡಬೇಕು. ಇದರಿಂದ ಭಕ್ತರಿಗೆ ಸುಂದರವಾದ ಮತ್ತು ಆಕರ್ಷಕ ವ್ಯಕ್ತಿತ್ವ ಹಾಗೂ ಜೀವನವನ್ನು ದೇವಿ ಆಶೀರ್ವದಿಸುತ್ತಾಳೆ.

ಕಾಲರತ್ರಿ ದೇವಿಗೆ ಪ್ರಸಾದ

ಕಾಲರತ್ರಿ ದೇವಿಗೆ ಪ್ರಸಾದ

ನವರಾತ್ರಿಯ 7ನೇ ದಿನ ಕಾಲರತ್ರಿ ದೇವಿಗೆ ಪೂಜಿಸಲಾಗುವುದು. ಇದು ದೇವಿಯ ಉಗ್ರ ರೂಪ ಎನ್ನಲಾಗುವುದು. ಈ ದೇವಿಯು ದುಷ್ಟ ಶಕ್ತಿ ಮತ್ತು ಅನೇಕ ಅಡೆತಡೆಗಳನ್ನು ನಿವಾರಿಸುತ್ತಾಳೆ. ದೇವಿಗೆ ಬೆಲ್ಲವನ್ನು ಪ್ರಸಾದವನ್ನಾಗಿ ನೀಡಬೇಕು. ದೇವಿಯು ಭಕ್ತನ ಎಲ್ಲಾ ನೋವುಗಳನ್ನು ನಿವಾರಿಸುತ್ತಾಳೆ.

ಗೌರಿ ದೇವಿಗೆ ಪ್ರಸಾದ

ಗೌರಿ ದೇವಿಗೆ ಪ್ರಸಾದ

ನವರಾತ್ರಿಯ 8ನೇ ದಿನದಂದು ಮಹಾಗೌರಿಗೆ ಪೂಜಿಸಲಾಗುತ್ತದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಅನುವುಮಾಡಿಕೊಡುವಂತೆ ದೇವಿಯಲ್ಲಿ ಪ್ರಾರ್ಥಿಸಿಕೊಂಡು ಪೂಜಿಸಲಾಗುತ್ತದೆ. ಈ ದೇವಿಗೆ ತೆಂಗಿನಕಾಯಿ ಬಹಳ ಪ್ರಿಯವಾದದ್ದು. ಈ ದಿನ ದೇವಿಗೆ ತೆಂಗಿನಕಾಯನ್ನು ನೈವೇದ್ಯವನ್ನಾಗಿ ನೀಡಬೇಕು. ಈ ದಿನ ಬ್ರಾಹ್ಮಣರಿಗೆ ತೆಂಗಿನಕಾಯಿ ದಾನ ಮಾಡಬೇಕು. ಇದರಿಂದ ಮಕ್ಕಳಿಲ್ಲದ ದಂಪತಿಗಳಿಗೆ ದೇವಿ ಸಂತತಿ ಭಾಗ್ಯವನ್ನು ಹರಸುತ್ತಾಳೆ.

ಸಿದ್ಧಿದಾತ್ರಿ ದೇವಿಗೆ ಪ್ರಸಾದ

ಸಿದ್ಧಿದಾತ್ರಿ ದೇವಿಗೆ ಪ್ರಸಾದ

ನವರಾತ್ರಿಯ ಕೊನೆಯ ದಿನದಂದು ಸಿದ್ಧಿದಾತ್ರಿ ದೇವಿಗೆ ಪೂಜಿಸಲಾಗುತ್ತದೆ. ಈ ದೇವಿಗೆ ಎಳ್ಳು ಬಹಳ ಪ್ರಿಯವಾದ್ದರಿಂದ ಎಳ್ಳಿನ ನೈವೇದ್ಯ ನೀಡಬೇಕು. ದೇವಿಯು ಭಕ್ತ ಸಮುದಾಯಕ್ಕೆ ಶುಭವನ್ನು ಹಾರೈಸುತ್ತಾಳೆ. ಅಲ್ಲದೆ ಭಕ್ತನ ಸಾವಿನ ಭಯ ಹಾಗೂ ಅಹಿತಕರ ಘಟನೆಯಿಂದ ಮುಕ್ತಿ ಹೊಂದಲು ಸಹಾಯ ಮಾಡುತ್ತಾಳೆ.

 

English summary

Prasads For The Mother Goddess On Each Day Of Navratri

The festival of Navratri is one of the most important festivals that is celebrated by the Hindu community. This festival is all the more important to the devotees of Mother Goddess. The festival of Navratri lasts for nine days. Each day is dedicated to a different form of the Mother Goddess, or in other words, Goddess Durga. Each of the Navadurgashas a unique personality and set of characteristics. To please the Navadurgas, the devotees offer specific items to them. They wear clothes of certain colour and offer food items and flowers as per the tastes and likings of the respective form of the Goddess.
Subscribe Newsletter