For Quick Alerts
ALLOW NOTIFICATIONS  
For Daily Alerts

ನಿಮ್ಮ ಕೆಲವೊಂದು ತಪ್ಪು ಕಾರ್ಯಗಳಿಂದಲೇ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುವುದಂತೆ!

|

ಮನೆಯಲ್ಲಿ ಎಲ್ಲವೂ ಧನಾತ್ಮಕವಾಗಿದ್ದರೆ ಆಗ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲವೆಂದು ಹೇಳಲಾಗುತ್ತದೆ. ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಹಿಂದಿನಿಂದಲೂ ನಮ್ಮ ಹಿರಿಯರು ಅಳವಡಿಸಿಕೊಂಡು ಬಂದಿದ್ದಾರೆ. ಇದು ನಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಉಂಟು ಮಾಡುವುದು. ಅದೇ ರೀತಿಯಾಗಿ ನಾವು ಮಾಡುವಂತಹ ಕೆಲವೊಂದು ತಪ್ಪು ಕ್ರಮಗಳಿಂದಾಗಿ ಮನೆಯಲ್ಲಿ ದುಷ್ಟಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳು ಆವರಿಸಿಕೊಂಡು ಬಿಡುವುದು ಎಂದು ನಂಬಲಾಗಿದೆ. ಚಿತ್ರ ವಿಚಿತ್ರ ಘಟನೆಗಳು ಜಗತ್ತಿನಲ್ಲಿ ಯಾವಾಗಲೂ ನಡೆಯುತ್ತಲೇ ಇರುವುದು.

Practices That Attract Negative Energies In Your House

ಆದರೆ ನಾವು ಜೀವನದಲ್ಲಿ ಮುಂದುವರಿಯಬೇಕಾದರೆ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಬೇಕಾದರೆ ಧನಾತ್ಮಕ ಶಕ್ತಿಯು ಅತೀ ಅಗತ್ಯವಾಗಿರುವುದು. ಇದರಿಂದ ಧನಾತ್ಮಕ ಶಕ್ತಿ ಪಡೆಯಲು ಕೆಲವೊಂದು ನಿಯಮಗಳನ್ನು ಪಾಲಿಸುವುದು ಅತೀ ಅಗತ್ಯ. ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ಕೆಲಸಗಳನ್ನು ಮಾಡುತ್ತೇವೆ. ಇದರಿಂದ ನಕರಾತ್ಮಕ ಶಕ್ತಿಯು ನಮ್ಮ ಮನೆಯೊಳಗೆ ಬರುವುದು. ಈ ಲೇಖನದಲ್ಲಿ ನೀವು ಮಾಡುವ ಯಾವ ಕಾರ್ಯಗಳಿಂದ ನಕರಾತ್ಮಕ ಶಕ್ತಿಯು ಮನೆಯೊಳಗೆ ಬರುವುದು ಎಂದು ನಾವು ತಿಳಿಯುವ...

ರಾತ್ರಿ ವೇಳೆ ಸುಗಂಧ ದ್ರವ್ಯಗಳನ್ನು ಬಳಸುವುದು

ರಾತ್ರಿ ವೇಳೆ ಸುಗಂಧ ದ್ರವ್ಯಗಳನ್ನು ಬಳಸುವುದು

ಸುಗಂಧಿತ ದ್ರವ್ಯಗಳನ್ನು ರಾತ್ರಿ ವೇಳೆ ಬಳಸಬಾರದು ಎಂದು ಹೇಳಲಾಗುತ್ತದೆ. ಹೀಗೆ ನಾವು ಸುಗಂಧಿತ ದ್ರವ್ಯಗಳನ್ನು ಬಳಸುವ ಕಾರಣದಿಂದಾಗಿ ನಕಾರಾತ್ಮಕ ಶಕ್ತಿಯು ಬರುವುದು. ರಾತ್ರಿ ವೇಳೆ ಕತ್ತಲಾಗಿರುವ ಕಾರಣದಿಂದಾಗಿ ನಕಾರಾತ್ಮಕ ಶಕ್ತಿಯು ಹೆಚ್ಚು ಕ್ರಿಯಾಶೀಲವಾಗಿರುವುದು ಮತ್ತು ದುಷ್ಟಶಕ್ತಿಗಳಿಗೆ ಕತ್ತಲೆಯು ತುಂಬಾ ಇಷ್ಟ. ಕತ್ತಲೆ ಹಾಗೂ ಸುಗಂಧಿತ ದ್ರವ್ಯ ಎರಡು ಮಿಶ್ರಣಗೊಂಡರೆ ಆಗ ದುಷ್ಟಶಕ್ತಿ ಹಾಗೂ ನಕಾರಾತ್ಮಕತೆಯು ತಮ್ಮ ಕಾರ್ಯ ಆರಂಭಿಸುವುದು.

ನಿರ್ಜನ ಸ್ಥಳಗಳು

ನಿರ್ಜನ ಸ್ಥಳಗಳು

ಗರ್ಭಿಣಿ ಮಹಿಳೆಯರು ಯಾವತ್ತೂ ನಿರ್ಜನ ಪ್ರದೇಶಗಳಿಗೆ ಹೋಗಲೇಬಾರದು. ಇಂತಹ ಪ್ರದೇಶಗಳಿಗೆ ಹೋದರೆ ಆಗ ನಿಮ್ಮೊಂದಿಗೆ ನಕಾರಾತ್ಮಕ ಶಕ್ತಿಯು ಬರುವುದು. ಗರ್ಭಿಣಿ ಮಹಿಳೆಯರನ್ನು ನಕಾರಾತ್ಮಕ ಶಕ್ತಿಗಳು ಸೆಳೆಯುವುದು ಹೆಚ್ಚು. ಇದರಿಂದ ನಿಮ್ಮ ಹಾಗೂ ನಿಮ್ಮ ಮಗುವಿನ ಜೀವವನ್ನು ಕಾಪಾಡಿಕೊಳ್ಳಲು ಗರ್ಣಿಣಿಯರು ಯಾವಾಗಲೂ ನಿರ್ಜನ ಪ್ರದೇಶಕ್ಕೆ ಹೋಗಬಾರದು ಎಂದು ಹೇಳಲಾಗುತ್ತದೆ.

Most Read: ಮನೆಯ ಶಾಂತಿ ನೆಮ್ಮದಿಗೆ-ಒಂದು ಲೋಟ 'ಉಪ್ಪು' ನೀರಿನ ಪರೀಕ್ಷೆ!

ಆತ್ಮಸ್ಥೈರ್ಯ ಕಡಿಮೆ ಇರುವ ವ್ಯಕ್ತಿಗಳು

ಆತ್ಮಸ್ಥೈರ್ಯ ಕಡಿಮೆ ಇರುವ ವ್ಯಕ್ತಿಗಳು

ಆತ್ಮಸ್ಥೈರ್ಯ ಕಡಿಮೆ ಇರುವಂತಹ ವ್ಯಕ್ತಿಗಳನ್ನು ದುಷ್ಟಶಕ್ತಿಗಳು ಬೇಗನೆ ಆವರಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳ ಮನಸ್ಸಿನ ಮೇಲೆ ದುಷ್ಟಶಕ್ತಿಗಳು ತಮ್ಮ ಪ್ರಾಬಲ್ಯ ಸಾಧಿಸುತ್ತವೆ ಮತ್ತು ತಮ್ಮ ಕೆಟ್ಟ ಕೆಲಸಗಳನ್ನು ಮಾಡಲು ಆರಂಭಿಸುತ್ತವೆ. ಆತ್ಮಸ್ಥೈರ್ಯವು ದುರ್ಬಲವಾಗಿರುವ ಕಾರಣದಿಂದಾಗಿ ದುಷ್ಟಶಕ್ತಿಗಳನ್ನು ತಡೆಯಲು ಇದರಿಂದ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಪ್ರತಿಯೊಬ್ಬರು ಬಲಿಷ್ಠ ಆತ್ಮಸ್ಥೈರ್ಯ ಹೊಂದಿರಬೇಕು. ಆತ್ಮಸ್ಥೈರ್ಯವು ದುರ್ಬಲವಾಗಿರುವ ವ್ಯಕ್ತಿಗಳಿಂದ ದೂರವಿದ್ದರೆ ಅದರಿಂದ ಒಲಿತು.

Most Read: ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

ಕೆಲವೊಂದು ಆಹಾರ ಪದಾರ್ಥಗಳು

ಕೆಲವೊಂದು ಆಹಾರ ಪದಾರ್ಥಗಳು

ರಾತ್ರಿ ವೇಳೆ ಊಟಕ್ಕೆ ಯಾರೂ ಮಾಂಸಾಹಾರದ ಅಡುಗೆ ಮಾಡಬಾರದು. ಮಾಂಸಾಹಾರದ ಅಡುಗೆ ಮಾಡುವ ಕಾರಣದಿಂದಾಗಿ ಈಗಾಗಲೇ ಇರುವಂತಹ ನಕಾರಾತ್ಮಕ ಶಕ್ತಿಗಳು ಮತ್ತಷ್ಟು ಕ್ರಿಯಾಶೀಲವಾಗುವುದು. ಇವುಗಳು ಮಾಂಸಾಹಾರದ ಸುವಾಸನೆಯನ್ನು ಇಷ್ಟಪಡುವುದು ಮಾತ್ರವಲ್ಲದೆ ಇದು ಅವುಗಳಿಗೆ ತುಂಬಾ ಇಷ್ಟವಾಗುವುದು. ಸಿಹಿ ತಿಂಡಿ ತಿಂದ ತಕ್ಷಣ ನೀವು ರಾತ್ರಿ ವೇಳೆ ಹೊರಗಡೆ ಹೋಗಬಾರದು.

English summary

Practices That Attract Negative Energies In Your House

Hindu texts offer a huge collection of such writings which are a doorway to the unknown mysteries of the universe. They offer a world beyond this world. What is intangible and what cannot be seen by the common man can be read about and understood through these books. There are texts that even talk about how some practices can attract ghosts.
X
Desktop Bottom Promotion