Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಓಂ ನಮಃ ಶಿವಾಯ ಎನ್ನುವುದರಿಂದ ಉಂಟಾಗುವ ಫಲಗಳು
ಹಿಂದೂಗಳ ಶ್ರೇಷ್ಠ ದೇವರು ಎಂದರೆ ಶಿವ. ದೇವಾದಿ ದೇವ ಎಂದು ಭಗವಾನ್ ಶಿವನನ್ನು ಕರೆಯಲಾಗುತ್ತದೆ. ಪ್ರಪಂಚದ ಲಯವು ಭಗವಾನ್ ಶಿವನಿಂದಲೇ ಉಂಟಾಗುವುದು. ಶಿವನಿಗೆ ಯಾವುದೇ ಆರಂಭ ಮತ್ತು ಅಂತ್ಯ ಎನ್ನುವುದು ಇಲ್ಲ. ಶಿವನ ರೂಪ ಸರ್ವ ಶ್ರೇಷ್ಠ ಮತ್ತು ಸರ್ವ ಶಕ್ತ ರೂಪ ಎಂದು ಹೇಳಲಾಗುವುದು. ಶಿವನ ಭಕ್ತರಿಗೆ ಸದಾ ಒಳ್ಳೆಯ ವಿಮೋಚನೆ ದೊರೆಯುವುದು. ಪುರಾಣ ಇತಿಹಾಸದಲ್ಲಿ ಶಿವನಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ.
ದೇವಾದಿ ದೇವ ಶಿವನ ನಾಮ ಸ್ಮರಣೆಯಿಂದ ಆಧ್ಯಾತ್ಮಿಕವಾಗಿ ಪುಣ್ಯ ಲಭಿಸುವುದು. ಅಂತೆಯೇ ವೈಜ್ಞಾನಿಕವಾಗಿಯೂ ಮಾನಸಿಕ ನೆಮ್ಮದಿ ಹಾಗೂ ಅನೇಕ ಅನುಕೂಲಗಳು ಉಂಟಾಗುವುದು ಎಂದು ಹೇಳಲಾಗುತ್ತದೆ. ಇಂದಿನ ಆಧುನಿಕ ಸಮಾಜದಲ್ಲಿ ಅನೇಕರು ಒತ್ತಡದ ಜೀವನ ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹವರಿಗೆ ಮಾನಸಿಕ ನೆಮ್ಮದಿಯನ್ನು ಮರಳಿ ತರಲು ಶಿವನಾಮ ಸ್ಮರಣೆ ಹಾಗೂ ಓಂ ನಮಃ ಶಿವಾಯ ಮಂತ್ರವು ಅಧಿಕ ಪ್ರಭಾವವನ್ನು ನೀಡುವುದು....

ಮಾನಸಿಕವಾಗಿ ನೆಮ್ಮದಿ ನೀಡುವುದು
ಜೀವನ ಎನ್ನುವುದು ಹೂವಿನ ಹಾಸಿಗೆಯಲ್ಲ. ಅನೇಕ ಗೊಂದಲಗಳು ಹಾಗೂ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿರುವುದು. ಮಾನಸಿಕ ಒತ್ತಡ ಹೆಚ್ಚಾದಂತೆ ಮಾನಸಿಕ ನೆಮ್ಮದಿ ಹಾಳಾಗುವುದು. ಅಂತಹ ಸಂದರ್ಭದಲ್ಲಿ ನಮ್ಮ ಮಾಣಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಅಥವಾ ಆರೈಕೆ ಮಾಡಲು ಇರುವ ಏಕೈಕ ವಿಧಾನವೆಂದರೆ "ಓಂ ನಮಃ ಶೀವಾಯ" ಎನ್ನುವ ಮಂತ್ರದ ಪಠಣೆ ಎನ್ನಲಾಗುತ್ತದೆ.

ಶಿವನಿಗೆ ಬಾಗುವುದು
"ಓಂ ನಮಃ ಶಿವಾಯ" ಎನ್ನುವ ಮಂತ್ರದ ನಿಜವಾದ ಅರ್ಥ ಶಿವನಿಗೆ ಬಾಗುವುದು ಎಂದಾಗುತ್ತದೆ. ಮನುಷ್ಯನಲ್ಲಿ ಆಂತರಿಕವಾಗಿ ಸ್ವಭಿಮಾನ ಮತ್ತು ಅಹಮ್ ಎನ್ನುವುದು ಅಧಿಕವಾಗಿಯೇ ಇರುತ್ತದೆ. ಈ ಮಂತ್ರವನ್ನು ಜಪಿಸುವುದರಿಂದ ಆಂತರಿಕ ಶುದ್ಧತೆಯನ್ನು ಹೊಂದಿ, ಶಿವನಿಗೆ ಶರಣಾಗುವುದು ಎಂದಾಗುತ್ತದೆ.

ಮಂತ್ರದ ಶಕ್ತಿ
"ಓಂ ನಮಃ ಶಿವಾಯ" ಮಂತ್ರವು ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯುತವಾದ ಮಂತ್ರ ಎಂದು ಹೇಳಲಾಗುತ್ತದೆ. ಈ ಮಂತ್ರವನ್ನು ನಾವು ಮನಸ್ಸಿನಲ್ಲಿ ನಿರಂತರವಾಗಿ ಹೇಳುತ್ತಿದ್ದರೆ ಯಾವುದೇ ಧಾರ್ಮಿಕ ಆಚರಣೆಯನ್ನು ಮಾಡಬೇಕೆಂದಿಲ್ಲ. ಈ ಮಂತ್ರವನ್ನು ಹೇಳಲು ಯಾರಿಗೂ ನಿರ್ಬಂಧವಿಲ್ಲ. ಯಾರೂ ಬೇಕಾದರೂ ಹೇಳಬಹುದು ಅಥವಾ ಜಪವನ್ನು ಮಾಡಬಹುದು. ಪುಣ್ಯದ ಜೊತೆಗೆ ಒಂದಿಷ್ಟು ಆರೋಗ್ಯವೂ ವೃದ್ಧಿಯಾಗುವುದು.

ಐದು ಗುಣಲಕ್ಷಣದ ಮಹತ್ವ
ಈ ಮಂತ್ರವು ಪ್ರಮುಖವಾಗಿ 5 ಉಚ್ಚಾರಾಂಶಗಳನ್ನು ಒಳಗೊಂಡಿದೆ. "ನಾ, ಮಾ, ಶಿ, ವಾ, ಯಾ" ಎನ್ನುವುದು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಸ್ಥಳ ಎಂದಾಗುತ್ತಾದೆ. ಈ ಪಂಚ ಭೂತಗಳಲ್ಲಿಯೂ ಶಿವನು ಇರುತ್ತಾನೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದ ಮಹತ್ವ
ಕೆಲವರಿಗೆ ಈ ಮಂತ್ರವನ್ನು ಏಕೆ ಹೇಳಬೇಕು? ಎನ್ನುವ ಗೊಂದಲ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮಂತ್ರವು ಅಧಿಕ ಶಕ್ತಿಯನ್ನು ಒಳಗೊಂಡಿದೆ. ಈ ಮಂತ್ರವನ್ನು ಹೇಳುವುದರಿಂದ ನಕಾರಾತ್ಮಕ ಗ್ರಹಗಳ ಪ್ರಭಾವವನ್ನು ಕಡಿಮೆಗೊಳಿಸುವುದು. ನಕ್ಷತ್ರಗಳ ಫಲದಿಂದ ಅನುಭವಿಸಬೇಕಾದ ಅನೇಕ ಪರಿಣಾಮಗಳನ್ನು ಕಡಿಮೆಗೊಳಿಸಿ ಚೇತರಿಕೆ ಕಂಡುಕೊಳ್ಳಬಹುದು.

ಸೌಂಡ್ ಥೆರಪಿ
ಋಷಿಮುನಿಗಳು ಈ ಮಂತ್ರವನ್ನು ನಿರಂತರವಾಗಿ ಹೇಳುವುದರಿಂದ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೆ ಆತ್ಮಕ್ಕೆ ಶಾಂತಿ ಲಭಿಸುವುದು. ಹೃದಯ ಹಾಗೂ ಮನಸ್ಸಿನಲ್ಲಿ ಸದಾ ಸಂತೋಷವು ನೆಲೆಸುವುದು. ಜೊತೆಗೆ ಗೊಂದಲವನ್ನು ನಿವಾರಿಸುವಂತಹ ಶಕ್ತಿಯನ್ನು ತುಂಬುವುದು. ದಿನದ ಆರಂಭವನ್ನು ಶಿವನ ಸ್ಮರಣೆಯಿಂದ ಅಥವಾ "ಓಂ ನಮಃ ಶಿವಾಯ" ಎನ್ನುವ ಮಂತ್ರದಿಂದ ಪ್ರಾರಂಭಿಸಿದರೆ ಉತ್ತಮ ಆರೋಗ್ಯ ಹಾಗೂ ಅದೃಷ್ಟದ ಜೀವನವನ್ನು ಕಾಣುವಿರಿ.



Click it and Unblock the Notifications
