For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ ಹಬ್ಬದ ವಿಶೇಷ: ಶಿವ ಪೂಜೆಯ ವಿಧಿವಿಧಾನ

ಅಂತೆಯೇ ಶಿವರಾತ್ರಿ ಆಚರಣೆಯನ್ನೂ ಕೂಡ ಶ್ರದ್ಧೆ ಭಕ್ತಿಭಾವಗಳಿಂದ ನಡೆಸುತ್ತಾರೆ ಮತ್ತು ಶಿವನಿಗಾಗಿ ಈ ದಿನ ವ್ರತವನ್ನು ಕೈಗೊಳ್ಳುತ್ತಾರೆ. ಒಂದು ದಿನ ಇಡೀ ಉಪವಾಸವಿದ್ದು ಮರುದಿನವೇ ವ್ರತವನ್ನು ಸಮಾಪ್ತಿ ಗೊಳಿಸಲಾಗುತ್ತದೆ.

By Jaya Subramanya
|

ಈ ಬಾರಿ ಮಹಾಶಿವರಾತ್ರಿಯನ್ನು ಫೆಬ್ರವರಿ 24 ನೇ ಶುಕ್ರವಾರದಂದು ಆಚರಿಸಲಾಗುತ್ತಿದೆ. ಶಿವನನ್ನು ಆರಾಧಿಸುವ ಭಕ್ತರಿಗೆ ಶಿವರಾತ್ರಿಯು ಹೆಚ್ಚು ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಎಂದೆನಿಸಿದೆ. ಈ ದಿನದಂದು ಭಕ್ತರು ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ವೃತವನ್ನು ಕೈಗೊಂಡು ದೇವರಿಗೆ ಅರ್ಚನೆ ಪೂಜೆಗಳನ್ನು ನೆರವೇರಿಸುತ್ತಾರೆ. ಭಾರತದಲ್ಲಿ ಹೆಚ್ಚಿನ ಹಬ್ಬಗಳನ್ನು ಹೆಚ್ಚು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಮಹಾ ಶಿವರಾತ್ರಿ ಹಬ್ಬದ ಮಹತ್ವ ಹಾಗೂ ರೋಚಕ ಕಥಾನಕ...

ಅಂತೆಯೇ ಶಿವರಾತ್ರಿ ಆಚರಣೆಯನ್ನೂ ಕೂಡ ಶ್ರದ್ಧೆ ಭಕ್ತಿಭಾವಗಳಿಂದ ನಡೆಸುತ್ತಾರೆ ಮತ್ತು ಶಿವನಿಗಾಗಿ ಈ ದಿನ ವ್ರತವನ್ನು ಕೈಗೊಳ್ಳುತ್ತಾರೆ. ಒಂದು ದಿನ ಇಡೀ ಉಪವಾಸವಿದ್ದು ಮರುದಿನವೇ ವ್ರತವನ್ನು ಸಮಾಪ್ತಿ ಗೊಳಿಸಲಾಗುತ್ತದೆ. ಮಹಾಶಿವರಾತ್ರಿಯಂದು 'ಭಾಂಗ್' ಅನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ. ಕ್ಯಾನಬೀಸ್ ಗಿಡದಿಂದ ಈ ಪಾನೀಯವನ್ನು ತಯಾರಿಸುತ್ತಾರೆ.

Pooja On Maha Shivaratri

ಪೂಜೆಗೆ ಬೇಕಾದ ಸಾಮಾಗ್ರಿಗಳು
ಶಿವನು ಎಂದಿಗೂ ತನ್ನ ಭಕ್ತರಲ್ಲಿ ಕಟ್ಟುನಿಟ್ಟಿನ ವ್ರತವನ್ನು ಕೈಗೊಳ್ಳುವಂತೆ ಬಯಸುವುದಿಲ್ಲ. ಅಂತೆಯೇ ಶ್ರದ್ಧೆ ಭಕ್ತಿಯಿಂದ ಶಿವನನ್ನು ಪೂಜಿಸುವುದು ಅತ್ಯವಶ್ಯಕವಾಗಿದೆ. ಶಿವನಿಗೆ ಫಲಪುಷ್ಟಗಳನ್ನು ಅರ್ಪಿಸುವುದಕ್ಕಿಂತ ಬಿಲ್ವವನ್ನು ಅರ್ಪಿಸಿ ಪೂಜಿಸಿದರೂ ಸಾಕು ಆ ಮಹಾದೇವ ಸಂತೃಪ್ತಗೊಳ್ಳುತ್ತಾನೆ. ಭೋಲೇನಾಥನನ್ನು ಮೆಚ್ಚಿಸಲು ನಿಮ್ಮ ಮನದಲ್ಲಿ ಶುದ್ಧವಾದ ಆಚರಣೆ ಮತ್ತು ನಿಷ್ಕಲ್ಮಶವಾದ ಭಕ್ತಿ ಇದ್ದರೆ ಸಾಕು. ಅದಾಗ್ಯೂ ಎಲ್ಲಾ ಪೂಜೆಗಳನ್ನು ವಿಧಿವತ್ತಾಗಿ ಮಾಡಬೇಕು ಎಂಬುದು ನಿಮ್ಮ ಬಯಕೆಯಾಗಿದ್ದಲ್ಲಿ ಪೂಜೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿ ಇಲ್ಲಿದೆ. ಮಹಾಶಿವರಾತ್ರಿ ಪೂಜೆಯನ್ನು ನಡೆಸಲು ಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ. ಶಿವರಾತ್ರಿ ಉಪವಾಸ, ಹೆಚ್ಚಿಸುವುದು ಆರೋಗ್ಯ

ಪೂಜೆ ನಡೆಸಲು ಬೇಕಾದ ವಸ್ತುಗಳು:
*ಶಿವಲಿಂಗ ಅಥವಾ ಶಿವದೇವರ ಫೋಟೋ
*ಉಣ್ಣೆಯಿಂದ ಮಾಡಿದ ಮ್ಯಾಟ್
*ದೀಪ ನಿಮಗೆ ಬೇಕಾದಷ್ಟು ಆದರೂ ಒಂದು ದೀಪ ಕಡ್ಡಾಯ
*ಹತ್ತಿ ಬತ್ತಿಗಳು
*ಗಂಟೆ
*ಕಲಶ ಅಥವಾ ತಾಮ್ರದ ಮಡಿಕೆ
*ಆರತಿ
*ಶಿವಲಿಂಗ ಅಥವಾ ದೇವರ ಫೋಟೋವನ್ನು ಇರಿಸಲು ಬಿಳಿಯ ಬಟ್ಟೆ


*ಬೆಂಕಿ ಪಟ್ಟಿಗೆ
*ಧೂಪದ್ರವ್ಯ
*ಧೂಪ
*ಸುಗಂಧ ಅಥವಾ ಅತ್ತಾರ್
*ಅಶ್ವಗಂಧ- ಸುಗಂಧಿತ ಹುಡಿ
*ಶ್ರೀಗಂಧದ ಪೇಸ್ಟ್
*ತುಪ್ಪ
*ಕರ್ಪೂರ
*ಕುಂಕುಮ
*ವಿಭೂತಿ
*ಅರ್ಕ ಹೂವು
*ಬಿಲ್ವ ಪತ್ರೆ
*ಧತ್ತೂರ ಹೂವುಗಳು
*ಹೂವುಗಳ ಹಾರ
*ಅಕ್ಕಿ (ಅಕ್ಷತೆ)
*ಹಣ್ಣುಗಳು - ಬಾಳೆಹಣ್ಣು ಮುಖ್ಯವಾದುದು
*ಗಂಗಾ ಜಲ
*ದನದ ಹಸಿ ಹಾಲು
*ಮೊಸರು
*ಒಣ ಹಣ್ಣು
*ಎಳನೀರು
*ತೆಂಗಿನಕಾಯಿ
*ಸಕ್ಕರೆ
*ಜೇನು
*ಪಂಚಾಮೃತ - ಮೊಸರು, ಜೇನು, ತುಪ್ಪ, ಸಕ್ಕರೆ ಮತ್ತು ಹಾಲಿನಿಂದ ತಯಾರಿಸಿದ್ದು
*ಅಡಿಕೆ
*ವೀಳ್ಯದೆಲೆ
ನಿಮಗೆ ಬೇಕಾದಲ್ಲಿ ಇವುಗಳನ್ನು ಆರಿಸಿಕೊಳ್ಳಬಹುದು:
*ಗಣೇಶನ ವಿಗ್ರಹ
*ಲಕ್ಷ್ಮೀ ವಿಗ್ರಹ
*ಆಸನ - ಮರದ ಸಣ್ಣ ಮಣೆ ಕುಳಿತುಕೊಳ್ಳಲು
*ಸಣ್ಣ ಪಾತ್ರೆಗಳು
*ಚಮಚಗಳು
*ಗ್ಲಾಸ್‌ಗಳು
*ಅಭಿಷೇಕವನ್ನು ಮಾಡಲು ದೊಡ್ಡ ಪಾತ್ರೆ
*ಏಲಕ್ಕಿ ಅಥವಾ ದಾಲ್ಚಿನ್ನಿ
*ಜನಿವಾರ (ನೀವು ಬ್ರಾಹ್ಮಣ ಪೂಜಾರಿಗಳಿಂದ ಪೂಜೆ ನೆರವೇರಿಸುತ್ತಿದ್ದಲ್ಲಿ)
*ಹೂವುಗಳು - ಬಿಳಿ ಮತ್ತು ಗುಲಾಬಿ ತಾವರೆ ಹೂವುಗಳು
*ಭಾಂಗ್
*ಲವಂಗ
*ಪನ್ನೀರು
*ಝೈಪಾಲ್
*ಗುಲಾಲ್ ಈ ಪಟ್ಟಿಯಲ್ಲಿರುವ ಪ್ರತಿಯೊಂದನ್ನು ನೀವು ಹೊಂದಿರಬೇಕು ಎಂಬುದು ಕಡ್ಡಾಯವಲ್ಲ.

ಪೂಜೆ ನೆರವೇರಿಸುವುದು
ಪೂಜೆಯನ್ನು ರಾತ್ರಿ ಮಾಡಲಾಗುತ್ತದೆ. ರಾತ್ರಿಪೂರ್ತಿ ಒಂದು ಬಾರಿ ಅಥವಾ ನಾಲ್ಕು ಬಾರಿ ಪೂಜೆಯನ್ನು ನಡೆಸಬಹುದಾಗಿದೆ. ನೀವು ನಾಲ್ಕು ಬಾರಿ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ, ರಾತ್ರಿ ವೇಳೆಯನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ. ನಾಲ್ಕು ವೇಳೆಯಲ್ಲೂ ನೀವು ಪೂಜೆಯನ್ನು ನಡೆಸಬಹುದಾಗಿದೆ. ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ

ಒಂದು ಬಾರಿ ಪೂಜೆಯನ್ನು ನಡೆಸಿದರೆ ಸಾಕು ಎಂಬುದು ನಿಮ್ಮ ವಿಚಾರವಾಗಿದ್ದರೆ, ಒಮ್ಮೆ ಮಾತ್ರ ರಾತ್ರಿ ವೇಳೆಯಲ್ಲಿ ಪೂಜೆ ನಡೆಸಿ, ನಂತರ ಹಾಲು, ಶ್ರೀಗಂಧ, ಮೊಸರು, ತುಪ್ಪು, ಜೇನು, ಸಕ್ಕರೆ, ಪನ್ನೀರು ಮತ್ತು ನೀರಿನಿಂದ ಅಭಿಷೇಕವನ್ನು ಮಾಡಿ.

ನಾಲ್ಕು ಪ್ರಹಾರಗಳಲ್ಲಿ ನೀವು ಪೂಜೆಯನ್ನು ನಡೆಸುತ್ತೀರಿ ಎಂದಾದಲ್ಲಿ, ಮೊದಲಿಗೆ ನೀರಿನಿಂದ ಅಭಿಷೇಕವನ್ನು ಮಾಡಿ. ಎರಡನೇ ಪ್ರಹಾರದಲ್ಲಿ ಅಭಿಷೇಕ ಮಾಡಲು ಮೊಸರು ಬಳಸಿ. ಅಂತೆಯೇ ಮೂರನೇ ಮತ್ತು ನಾಲ್ಕನೆಯ ಪ್ರಹಾರದಲ್ಲಿ ಜೇನು ಮತ್ತು ತುಪ್ಪವನ್ನು ಅಭಿಷೇಕ ನಡೆಸಲು ಬಳಸಿ. ನಾಲ್ಕು ಅಭಿಷೇಕಗಳ ನಡುವೆ ಇತರ ಸಾಮಾಗ್ರಿಗಳನ್ನು ಬಳಸಿಕೊಂಡು ನಿಮಗೆ ದೇವರನ್ನು ಪೂಜಿಸಬಹುದಾಗಿದೆ...

English summary

Pooja Samagri List Required For Performing Pooja On Maha Shivaratri

Most religious festivals in India are celebrated with great pomp and show. But Maha Shivaratri is a day when the devotees keep a fast and meditate on the Lord's name. Another distinctive feature of Maha Shivaratri is that the fast of Maha Shivaratri lasts a whole day and can be broken only on the next day, unlike other fasts that we usually keep.
X
Desktop Bottom Promotion