For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ ಉಪವಾಸ, ಹೆಚ್ಚಿಸುವುದು ಆರೋಗ್ಯ

|
Shivaratri Fasting benefits
ಇವತ್ತು ಮಹಾಶಿವರಾತ್ರಿ. ಶಿವನ ಭಕ್ತರು ಈ ದಿನ ವೃತವನ್ನು ಕೈಗೊಳ್ಳುತ್ತಾರೆ. ಒಂದು ದಿನ ಉಪವಾಸ ಮತ್ತು ರಾತ್ರಿ ಜಾಗರಣೆ ಇದ್ದು ಶಿವನ ಜಪಮಾಡುತ್ತಾರೆ. ಈ ಆಚಾರವನ್ನು ವೈಜ್ಞಾನಿಕವಾಗಿ ನೋಡುವುದಾದರೆ ಆರೋಗ್ಯಕ್ಕೆ ಅನೇಕ ಪ್ರಯೋಜಗಳಿವೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಉಪವಾಸದ ಪ್ರಯೋಜನಗಳು:

1.ಹಿಂದೂ ಧರ್ಮದ ಪ್ರಕಾರ ಈ ರೀತಿ ವೃತ ಮಾಡುವುದರಿಂದಎರಡು ಮುಖ್ಯ ಗುಣಗಳನ್ನು ಬೆಳಸಬಹುದು.
*ರಾಜಸ ಗುಣ - ತಾಳ್ಮೆಯನ್ನು ಕಲಿಸುತ್ತದೆ.
*ತಾಮಸ ಗುಣ- ಕೆಟ್ಟದ್ದನ್ನು ನಿರ್ಲಕ್ಷ್ಯ ಮಾಡುವ ಗುಣ
2. ಉಪವಾಸದಿಂದ ಇದ್ದು ಶಿವನಾಮ ಜಪಿಸುತ್ತಾ ಇದ್ದರೆ ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯ ದೊರೆಯುತ್ತದೆ.
3. ಕೆಟ್ಟ ಗುಣಗಳಾದ ಕೋಪ, ಹೊಟ್ಟೆಕಿಚ್ಚು ಈ ಗುಣಗಳು ವಿಜೃಂಭಿಸಲು ಅವಕಾಶಕೊಡುವುದಿಲ್ಲ.
4. ರಾತ್ರಿಯಲ್ಲಿ ಜಾಗರಣೆ ಇರುವುದರಿಂದ ಕೆಟ್ಟ ಗುಣಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ.

ಉಪವಾಸ ಮಾಡುವಾಗ ಅನುಸರಿಸಬೇಕಾದ ನಿಯಮಗಳು :
1. ಬೆಳಗ್ಗೆ ಎದ್ದು ಎಣ್ಣೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ ಶಿವನ ಗುಡಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
2. ಈ ದಿನಾ ಪೂರ್ತಿ ಶಿವಭಕ್ತರು ಓಂ ನಮಾಃ ಶಿವಾಯ ಅಂತ ಶಿವ ನಾಮ ಜಪಿಸುತ್ತದೆ. ಈ ರೀತಿ ಮಾಡಿದರೆ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುವುದು.

ಶಿವರಾತ್ರಿಗೆ ಡಯಟ್ :
1. ಈ ದಿನ ಅಕ್ಕಿ ಮತ್ತು ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಈ ದಿನ ಹಣ್ಣು ಮತ್ತು ಹಾಲು, ಟೀ ಇವುಗಳನ್ನು ಸೇವಿಸಬಹುದು.
2. ಇನ್ನು ಕೆಲವರು ಈ ದಿನ ಬೆಳಗ್ಗೆಯಿಂದ ಸಾಯಾಂಕಾಲದವರೆಗೆ ನೀರ ಹನಿ ಕೂಡ ಮುಟ್ಟುವುದಿಲ್ಲ. ಅಂತಹವರು ಸಾಯಾಂಕಾಲ ಪೂಜೆ ಮುಗಿಸಿದ ಮೇಲೆ ಪ್ರಸಾದ ತಿಂದು ಗಸಗಸೆ ಪಾಯಸ ಕುಡಿಯುತ್ತಾ ಉಪವಾಸವನ್ನು ಮುಕ್ತಾಯಗೊಳಿಸುವುದು ವಾಡಿಕೆ.
3. ಈ ದಿನ ಆಹಾರಗಳನ್ನು ತಯಾರಿಸುವಾಗ ಕಲ್ಲುಪ್ಪು ಬಳಸುತ್ತಾರೆ (ಪುಡಿ ಉಪ್ಪು ಬಳಸುವುದಿಲ್ಲ).
4. ಈ ದಿನ ಹೆಚ್ಚಾಗಿ ಸಿಹಿಕುಂಬಳಕಾಯಿ ಪ್ಯಾನ್ ಕೇಕ್ ಮತ್ತು ಸೋರೆಕಾಯಿ ಹಲ್ವಾ ತಯಾರಿಸಲಾಗುವುದು.

English summary

Health benefits From Shivaratri Fasting | Tips For Health | ಶಿವರಾತ್ರಿ ಉಪವಾಸದ ಪ್ರಯೋಜನಗಳು | ಆರೋಗ್ಯಕ್ಕಾಗಿ ಕೆಲ ಸಲಹೆ

According to Hindu mythology vrat on Mahashivratri helps one to attain control over the two great forces that afflict man - rajas guna (the quality of passionate activity) and tamas guna (the quality of ignorance).
Story first published: Monday, February 20, 2012, 14:37 [IST]
X
Desktop Bottom Promotion