For Quick Alerts
ALLOW NOTIFICATIONS  
For Daily Alerts

ಪಿತೃ ಪಕ್ಷ 2020: ಶ್ರಾದ್ದ ದಿನಗಳು, ತರ್ಪಣ ಹೇಗೆ ಮಾಡಬೇಕು, ಶ್ರಾದ್ದದ ವಿಧಿ ವಿಧಾನಗಳು ಹೇಗಿರಬೇಕು?

|

ಮನುಷ್ಯನ ಮೇಲೆ ದೇವ ಋಣ, ಪಿತೃ ಋಣ ಮತ್ತು ಋಷಿ ಋಣ ಎಂಬ ಮೂರು ಪ್ರಕಾರದ ಋಣಗಳಿರುತ್ತವೆ. ಅದರಲ್ಲೂ ನಮ್ಮ ಶರೀರದ ಹುಟ್ಟಿಗೆ ಪೀತೃಗಳೇ ಕಾರಣ. ಅವರಿಂದ ಪಡೆದ ಈ ಶರೀರಕ್ಕಾಗಿ ನಾವು ಅವರಿಗೆ ಋಣಿಯಾಗಿರಬೇಕು. ಅದಕ್ಕಾಗಿಯೇ ಈ ಪಿತೃ ದರ್ಪಣ. ಬಾದೃಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯದ 15 ದಿನಗಳು ಪಿತೃ ಪಕ್ಷವಾಗಿದ್ದು, ಶ್ರಾದ್ದಾ ವಿಧಿಗಳಿಗೆ ಈ ದಿನಗಳು ಪ್ರಶಸ್ತವಾಗಿದೆ.

ಈ ದಿನ ಮರಣವೊಂದಿದ ಪಿತೃ ನೆನೆಸಿ ಅವರಿಗೆ ಕಾರ್ಯ ಮಾಡುವುದು ತುಂಬಾ ಪುಣ್ಯಕಾರ್ಯ ಎಂಬ ನಂಬಿಕೆ ಇದೆ. ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ನಿಜ, ಅವರು ಮರಣವೊಂದಿದ ಬಳಿಕ ಅವರನ್ನು ಶ್ರಾದ್ದದ ಮೂಲಕ ನೆನಪು ಮಾಡಿಕೊಳ್ಳುವುದು, ಈ ಮೂಲಕ ಅವರಿಗೆ ಋಣಿಯಾಗಿರುವುದೇ ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಪಿತೃ ಶ್ರಾದ್ದ ಮಹತ್ವದ ಬಗ್ಗೆ ಶ್ರೀಕೃಷ್ಣ ಏನು ಹೇಳಿದ್ದಾನೆ ಗೊತ್ತಾ?

ಪಿತೃ ಶ್ರಾದ್ದ ಮಹತ್ವದ ಬಗ್ಗೆ ಶ್ರೀಕೃಷ್ಣ ಏನು ಹೇಳಿದ್ದಾನೆ ಗೊತ್ತಾ?

ಪಿತೃಪಕ್ಷ ಹಾಗೂ ಇದರ ಕಾರ್ಯ ವಿಧಾನಗಳ ಬಗ್ಗೆ ವೇದಗಳು, ರಾಮಾಯಣ, ಮಹಾಭಾರತ ಹಾಗೂ ಪುರಾಣ ಕತೆಗಳಲ್ಲಿ ಉಲ್ಲೇಖವಿದೆ ಹಾಗೂ ಇದನ್ನು ಆಚರಿಸುವ ನಿಯಮಗಳ ಬಗ್ಗೆ ಹೇಳಲಾಗಿದೆ. ಶ್ರಾದ್ದವನ್ನು ವರ್ಷದಲ್ಲಿ ಒಂದು ಬಾರಿ ಮಾಡುವುದಾದರೂ ಅದರ ಫಲ ಪಿತೃಗಳಿಗೆ ವರ್ಷಪೂರ್ತಿ ಇರುತ್ತದೆ ಎಂದು ಹೇಳಲಾಗುತ್ತದೆ. ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಪುತ್ರರು ನೀಡುವ ಪಿಂಡತಿಲ ದರ್ಪಣಗಳು ಪಿತೃರಿಗೆ ನೇರವಾಗಿ ತಲುಪುತ್ತದೆ ಎಂದು ಹೇಳಿದ್ದಾನೆ.

ಶ್ರೀಕೃಷ್ಣ ಪಿತೃ ಶ್ರಾದ್ದದ ಮಹತ್ವದ ಬಗ್ಗೆ ಹೇಳುತ್ತಾ ಮನುಷ್ಯ ಹೆತತ್ವರಿಗೆ ಪೂಜ್ಯ ಸ್ಥಾನ ನೀಡಬೇಕು. ಅವರು ಬದುಕಿದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸತ್ತ ಮೇಲೆ ಅವರನ್ನು ಸ್ಮರಿಸಿ ಶ್ರಾದ್ದ ಮಾಡುವುದು ಧರ್ಮ ಎಂದು ಹೇಳಿದ್ದಾನೆ.

ಪಿತೃರಿಗೆ ತರ್ಪಣ ಬಿಡುವ ವಿಧಾನ

ಪಿತೃರಿಗೆ ತರ್ಪಣ ಬಿಡುವ ವಿಧಾನ

ದೇವಯಜ್ಞ, ಋಷಿಯಜ್ಞ ಹಾಗೂ ಪಿತೃಯಜ್ಞದಲ್ಲಿ ತರ್ಪಣ ಬಿಡುವ ವಿಧಾನದಲ್ಲಿ ಭಿನ್ನತೆ ಇದೆ. ದೇವಯಜ್ಞದಲ್ಲಿ ದೈವವನ್ನು ತೃಪ್ತಿಗೊಳಿಸಲು ಆರ್ಘ್ಯದ ಮೂಲಕ ಹವಿಸ್ಸನ್ನು ನೀಡುತ್ತೇವೆ. ಅಂಗೈಯಲ್ಲಿ ಜಲವನ್ನು ಹಿಡಿದುಕೊಂಡು ನರವಾಗಿ ನೀಡಿದಾಗ ಅದು ದೇವ ದರ್ಪಣವಾಗುತ್ತದೆ. ಅದೇ ಜಲವನ್ನು ಅಂಗುಷ್ಟದಿಂದ ಕೊಟ್ಟಾಗ ಪಿತೃ ತರ್ಪಣವಾಗುತ್ತದೆ, ಕಿರು ಬೆರಳಿನ ಭಾಗದಿಂದ ಕೊಟ್ಟಾಗ ಋಷಿ ತರ್ಪಣವಾಗುತ್ತದೆ.

ಶ್ರಾದ್ದದಲ್ಲಿ ಧರ್ಬೆಯ ಮಹತ್ವ

ಶ್ರಾದ್ದದಲ್ಲಿ ಧರ್ಬೆಯ ಮಹತ್ವ

ಶ್ರಾದ್ದ ಕಾರ್ಯ ಮಾಡುವಾಗ ಧರ್ಬೆ ಪಾತ್ರ ಪ್ರಮುಖವಾಗಿರುತ್ತದೆ. ದರ್ಬೆಯನ್ನು ಬೇರು ಸಮೇತ ಕಿತ್ತು ತಂದು ಬಳಸುವುದೇ ಶ್ರೇಷ್ಠ ಎಂದು ಹೇಳಲಾಗುತ್ತದೆ. ಧರ್ಬೆಯಲ್ಲಿ ತೇಜಸ್ಸು ಹಾಗೂ ಜಲಾಂಶ ಗುಣವಿರುವುದರಿಂದ ಇದನ್ನು ಬಳಸುವುದರಿಂದ ಸಾತ್ವಿಕ ಗುಣ ವೃದ್ಧಿಸುತ್ತದೆ. ಆದ್ದರಿಂದ ಪಿತೃರಿಗೆ ಶ್ರಾದ್ದ ಮಾಡುವಾಗ ಧರ್ಬೆ ಬಳಸಲಾಗುತ್ತದೆ.

 ಪಂಚಾಂಗ ಪ್ರಕಾರ 2020 ಪಿತೃ ಶ್ರಾದ್ದ ದಿನಾಂಕ

ಪಂಚಾಂಗ ಪ್ರಕಾರ 2020 ಪಿತೃ ಶ್ರಾದ್ದ ದಿನಾಂಕ

ಸೆಪ್ಟೆಂಬರ್ 1: ಪೂರ್ಣಿಮಾ ಶ್ರಾದ್ದ

ಸೆಪ್ಟೆಂಬರ್ 2: ಪ್ರತಿಪದ ಶ್ರಾದ್7

ಸೆಪ್ಟೆಂಬರ್ 3: ದ್ವಿತೀಯಾ ಶ್ರಾದ್ದ

ಸೆಪ್ಟೆಂಬರ್ 5: ತ್ರಿತೀಯಾ ಶ್ರಾದ್ದ

ಸೆಪ್ಟೆಂಬರ್ 6: ಚತುರ್ಥಿ ಶ್ರಾದ್ದ

ಸೆಪ್ಟೆಂಬರ್ 7: ಪಂಚಮಿ ಶ್ರಾದ್ದ

ಸೆಪ್ಟೆಂಬರ್ 8: ಷಷ್ಠಿ ಶ್ರಾದ್ದ

ಸೆಪ್ಟೆಂಬರ್ 9: ಸಪ್ತಮಿ ಶ್ರಾದ್ದ

ಸೆಪ್ಟೆಂಬರ್ 10: ಅಷ್ಟಮಿ ಶ್ರಾದ್ದ

ಸೆಪ್ಟೆಂಬರ್ 11: ನವಮಿ ಶ್ರಾದ್ದ

ಸೆಪ್ಟೆಂಬರ್ 12: ದಶಮಿ ಶ್ರಾದ್ದ

ಸೆಪ್ಟೆಂಬರ್ 13: ಏಕಾದಶಿ ಶ್ರಾದ್ದ

ಸೆಪ್ಟೆಂಬರ್ 14: ದ್ವಾದಶಿ ಶ್ರಾದ್ದ

ಸೆಪ್ಟೆಂಬರ್ 15: ತ್ರಿಯೋದಶಿ ಶ್ರಾದ್ದ

ಸೆಪ್ಟೆಂಬರ್ 16: ಚತುರ್ದಶಿ ಶ್ರಾದ್ದ

ಸೆಪ್ಟೆಂಬರ್ 17: ಸರ್ವ ಪಿತೃ ಅಮವಾಸ್ಯೆ ಶ್ರಾದ್ದ

ಪಿತೃ ಪಕ್ಷದ 15 ದಿನಗಳು ಕಾಲದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ

ಪಿತೃ ಪಕ್ಷದ 15 ದಿನಗಳು ಕಾಲದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ

ಶ್ರಾದ್ದ ಮಾಡಲು ಬಳಸುವ ಈ 15 ದಿನಗಳು ಕಾಲದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ. ಹೇಗೆ ಒಂದು ದಿನದಲ್ಲಿ ರಾತ್ರಿಕಾಲ ನಿದ್ರೆಗೂ, ಹಗಲು ಪ್ರವೃತ್ತ ಜೀವನಕ್ಕೂ ಮತ್ತು ಸಂಧ್ಯಾ ಕಾಲ ಭಗವಂತನ ಆರಾಧನೆಗೂ ಸೂಕ್ತವಾಗಿದೆಯೋ ಹಾಗೆಯೇ ಒಂದು ವರ್ಷದ ದಿನಗಳಲ್ಲಿ ಕೆಲವೊಂದು ದಿನಗಳನ್ನು ದೇವತೆಗಳ ಅನುಗ್ರಹಕ್ಕೆ ಮೀಸಲಿಟ್ಟರೆ ಈ 15 ದಿನಗಳು ಪಿತೃರ ಅನುಗ್ರಹ ಪಡೆಯಲು ಪ್ರಶಸ್ತ ಪರಿಗಣಿಸಲ್ಪಡುತ್ತದೆ. ಪಿತೃ ದೇವತೆಗಳ ಸಾನ್ನಿಧ್ಯ ವಿಶೇಷವಾಗಿ ಕೂಡಿ ಬಂದು ಅವರ ಅನುಗ್ರಹ ಹರಿಯುವುದಕ್ಕೆ ವಿಶೇಷವಾಗಿರುವ ಅವಧಿ ಎಂದರೆ ಈ ಪಿತೃ ಪಕ್ಷ. ಈ ಕಾಲಾವಧಿಯಲ್ಲಿ ಪಂಚ ಮಹಾ ಯಜ್ಞಗಳಲ್ಲೊಂದಾದ ಪಿತೃ ಯಜ್ಞದ ಆಚರಣೆ ವಿಶೇಷ ಫಲವನ್ನು ನೀಡುವುದರಿಂದ ಪಿತೃ ಪಕ್ಷವು ಮಹತ್ವವನ್ನು ಪಡೆಯುತ್ತದೆ.

English summary

Pitru Paksha 2020: Shraddha Dates, Puja Vidhi, Rituals and How to Perform in Kannada

Pitru Paksha 2020: Shraddha Dates, Rituals and How to Perform,
Story first published: Wednesday, August 26, 2020, 17:22 [IST]
X
Desktop Bottom Promotion