For Quick Alerts
ALLOW NOTIFICATIONS  
For Daily Alerts

ಮಹಾಭಾರತ: ನಿಮ್ಮನ್ನು ದ್ವೇಷಿಸುವವರ ಮನೆಯಲ್ಲಿ ಯಾವತ್ತೂ ಊಟ ಮಾಡಬೇಡಿ!

|

ಮಹಾಭಾರತ ಮತ್ತು ರಾಮಯಣವು ಹಿಂದೂ ಧರ್ಮದಲ್ಲಿನ ಎರಡು ಪ್ರಮುಖ ಗ್ರಂಥಗಳು. ಇದರಲ್ಲಿ ಮಹಾಭಾರತದಲ್ಲಿ ಶ್ರೀಕೃಷ್ಣ ದೇವರು ನೀಡಿರುವಂತಹ ಉಪದೇಶವನ್ನು ಭಗವದ್ಗೀತೆ ಎಂದು ಪರಿಗಣಿಸಲಾಗಿದೆ. ಇದು ಹಿಂದೂಗಳ ಧರ್ಮಗ್ರಂಥ ಕೂಡ. ಮಹಾಭಾರತವು ನಡೆದು ಸಾವಿರಾರು ವರ್ಷಗಳು ಕಳೆದಿದ್ದರೂ ಅದರಲ್ಲಿನ ಕೆಲವೊಂದು ಉಪದೇಶಗಳು ಇಂದಿಗೂ ಸ್ಪೂರ್ತಿ ಮತ್ತು ಇಂದಿನ ಕಾಲಕ್ಕೂ ಅದು ಹೊಂದಾಣಿಕೆ ಆಗುವುದು. ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಹ ವ್ಯಕ್ತಿಗಳು ಮಹಾಭಾರತದ ಕೆಲವೊಂದು ಉಪದೇಶವನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಅವರ ಸಂಕಷ್ಟಗಳೆಲ್ಲವೂ ನಿವಾರಣೆ ಆಗುವುದು.

ಮಹಾಭಾರತವು ಕತ್ತಲಲ್ಲಿ ಇರುವವರಿಗೆ ಬೆಳಕನ್ನು ತೋರಿಸುವುದು. ನೀವು ಸಾಂಸಾರಿಕ ಜೀವನ ಅಥವಾ ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಲಿದ್ದರೂ ಶ್ರೀಕೃಷ್ಣ ದೇವರು ನೀಡಿರುವಂತಹ ಉಪದೇಶವು ನಿಮಗೆ ಖಂಡಿತವಾಗಿಯೂ ದಾರಿ ತೋರಿಸುವುದು. ಶ್ರೀಕೃಷ್ಣ ದೇವರು ನೀಡಿರುವಂತಹ ಉಪದೇಶವು ಇಂದಿಗೂ ಪ್ರಸ್ತುತವಾಗಿದೆ. ಇದರಿಂದಾಗಿಯೇ ಇಂದಿಗೂ ಮಹಾಭಾರತವನ್ನು ಹೆಚ್ಚಿನ ಜನರು ಓದುತ್ತಾರೆ. ಅದರಲ್ಲೂ ಧರ್ಮದಲ್ಲಿ ನಂಬಿಕೆ ಇಲ್ಲದೆ ಇರುವಂತಹ ವ್ಯಕ್ತಿಗಳು ಕೂಡ ಮಹಾಭಾರತವನ್ನು ಓದಿ ಅದರಲ್ಲಿ ಇರುವಂತಹ ಕೆಲವೊಂದು ನೀತಿಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಿರುವರು.

ಮಹಾಭಾರತದಲ್ಲಿ ವಿವರಿಸಲಾಗಿರುವಂತಹ ಹಲವಾರು ಘಟನೆಗಳಲ್ಲಿ ನೈತಿಕವಾಗಿ ಈ ಲೋಕದಲ್ಲಿ ಯಾವ ರೀತಿಯಾಗಿ ಶಾಂತಿ ಪಡೆಯಬಹುದು ಎಂದು ತಿಳಿಸುವುದು. ನಾವು ನಿರ್ಧಾರಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕು ಮತ್ತು ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಇದು ಹೇಳುತ್ತದೆ. ಮಹಾಭಾರತದಲ್ಲಿ ವಿವರಿಸಲಾಗಿರುವಂತಹ ಹಲವಾರು ಘಟನೆಗಳಿಂದ ಆಯ್ಕೆ ಮಾಡಿಕೊಂಡು ಶ್ರೀಕೃಷ್ಣ ದೇವರು ನೀಡಿರುವಂತಹ ಉಪದೇಶವು ಓದುಗರಿಗೆ ಯಾವ ರೀತಿ ಶ್ರೇಷ್ಠ ಪಾಠವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಪಾಂಡವರು ಕೌರವರ ಜತೆಗೆ ಶಾಂತಿ ಬಯಸಿದ್ದರು…

ಪಾಂಡವರು ಕೌರವರ ಜತೆಗೆ ಶಾಂತಿ ಬಯಸಿದ್ದರು…

ಮಹಾಭಾರತದಲ್ಲಿ ಹಸ್ತಿನಾಪುರಕ್ಕಾಗಿ ದೊಡ್ಡ ಮಟ್ಟದ ಯುದ್ಧವು ನಡೆಯಲಿದೆ ಎಂದು ಕೌರವರು ಹಾಗೂ ಪಾಂಡವರು ನಿರ್ಧರಿಸಿದ್ದರು. ಆದರೆ ಒಂದು ಹಂತದಲ್ಲಿ ಪಾಂಡವರ ಮನವು ಕರಗಿದ ಪರಿಣಾಮ ಅವರು ಶಾಂತಿಯನ್ನು ಬಯಸಿದ್ದರು. ಇವರು ಕೌರವವೊಂದಿಗೆ ಶಾಂತಿಯಿಂದ ಇರಲು ಬಯಸಿದರು ಮತ್ತು ಅವರಿಗೆ ಶಾಂತಿಯ ಪ್ರಸ್ತಾವವನ್ನು ಇಡಲು ಬಯಸಿದರು. ಈ ಬಗ್ಗೆ ಪಾಂಡವರು ಕೃಷ್ಣನ ಮುಂದೆ ತಮ್ಮ ಮಾತನ್ನು ಇಟ್ಟಾಗ ಶ್ರೀಕೃಷ್ಣ ಶಾಂತಿದೂತನಾಗಿ ಕೌರವರ ಮುಂದೆ ಹೋಗಲು ನಿರ್ಧರಿಸಿದ. ಪಾಂಡವರ ಪರವಾಗಿ ಶ್ರೀಕೃಷ್ಣನು ಶಾಂತಿ ಪ್ರಸ್ತಾಪವನ್ನಿಟ್ಟ. ಪಾಂಡವರು ಎಲ್ಲರು ಶ್ರೀಕೃಷ್ಣನನ್ನು ಶಾಂತಿದೂತನಾಗಿ ಕಳುಹಿಸಲು ಒಪ್ಪಿಕೊಂಡರು.

ಕುಶಸ್ಥಳದಲ್ಲಿ ಶ್ರೀಕೃಷ್ಣನು ವಿಶ್ರಾಂತಿ ಪಡೆದ….

ಕುಶಸ್ಥಳದಲ್ಲಿ ಶ್ರೀಕೃಷ್ಣನು ವಿಶ್ರಾಂತಿ ಪಡೆದ….

ಶ್ರೀಕೃಷ್ಣ ದೇವರು ಹಸ್ತಿನಾಪುರದತ್ತ ಪ್ರಯಾಣ ಬೆಳೆಸಿದರು. ಈ ಪ್ರಯಾಣವು ತುಂಬಾ ದೀರ್ಘ ಮತ್ತು ಬಳಲಿಕೆ ಉಂಟು ಮಾಡುವ ಕಾರಣದಿಂದಾಗಿ ಶ್ರೀಕೃಷ್ಣ ದೇವರು ಕುಶಸ್ಥಳದಲ್ಲಿ ವಿಶ್ರಾಂತಿ ಪಡೆದು ಬಳಿಕ ಹಸ್ತಿನಾಪುರಕ್ಕೆ ಪ್ರಯಾಣ ಮುಂದುವರಿಯಲು ನಿರ್ಧರಿಸಿದರು. ಜಾಣ ರಾಜತಾಂತ್ರಿಕರಾಗಿದ್ದ ಶ್ರೀಕೃಷ್ಣ ದೇವರು ಕೌರವರೊಂದಿಗೆ ಭೇಟಿಯ ವೇಳೆ ಏನು ನಡೆಯಬಹುದು ಎಂದು ಆಲೋಚನೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಪೂರ್ಣ ವಿಶ್ರಾಂತಿ ಪಡೆದುಕೊಂಡ ಶ್ರೀಕೃಷ್ಣ ದೇವರು ಅಲ್ಲಿ ತನ್ನ ಭೇಟಿಯ ಯೋಜನೆಗಳನ್ನು ರೂಪಿಸಿದರು. ಇದರ ಬಳಿಕ ಕೌರವರ ರಾಜಧಾನಿಗೆ ಪ್ರಯಾಣ ಬೆಳೆಸಿದರು.

Most Read: ಮಹಾಭಾರತ ಎಂದಾಕ್ಷಣ ಇವರು ಮಾತ್ರ ಪದೇ ಪದೇ ನೆನಪಾಗುತ್ತಾರೆ!

ತನ್ನನ್ನು ಒಲಿಸಿಕೊಳ್ಳುವ ದುರ್ಯೋಧನನ ಪ್ರಯತ್ನವನ್ನು ಶ್ರೀಕೃಷ್ಣ ದೇವರು ಕಡೆಗಣಿಸಿದರು…

ತನ್ನನ್ನು ಒಲಿಸಿಕೊಳ್ಳುವ ದುರ್ಯೋಧನನ ಪ್ರಯತ್ನವನ್ನು ಶ್ರೀಕೃಷ್ಣ ದೇವರು ಕಡೆಗಣಿಸಿದರು…

ಕೌರವರಲ್ಲಿ ಹಿರಿಯ ಪುತ್ರನಾಗಿದ್ದ ದುರ್ಯೋಧನನು ಶ್ರೀಕೃಷ್ಣ ದೇವರನ್ನು ಸ್ವಾಗತಿಸಲು ನಗರದಲ್ಲಿ ಹಲವಾರು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದ. ಅದಾಗ್ಯೂ, ಶ್ರೀಕೃಷ್ಣ ದೇವರು ಈ ಎಲ್ಲಾ ವ್ಯವಸ್ಥೆಯನ್ನು ಕಡೆಗಣಿಸಿದರು ಮತ್ತು ಇದೆಲ್ಲವನ್ನು ನೋಡಿಯೇ ಇಲ್ಲವೆನ್ನುವಂತೆ ವರ್ತಿಸಿದರು. ಇದರ ಬಳಿಕ ಅವರು ಅರಮನೆ ಕಡೆ ಸಾಗಿದರು. ಅಲ್ಲಿ ಅವರನ್ನು ಕೌರವರೆಲ್ಲರೂ ತುಂಬಾ ಭವ್ಯವಾಗಿ ಸ್ವಾಗತಿಸಿದರು.

ಶ್ರೀಕೃಷ್ಣ ದೇವರಿಗೆ ದುರ್ಯೋಧನನ ವಿನಂತಿ

ಶ್ರೀಕೃಷ್ಣ ದೇವರಿಗೆ ದುರ್ಯೋಧನನ ವಿನಂತಿ

ಆರಂಭದ ಕೆಲವು ಕಾರ್ಯಕ್ರಮಗಳು ನೆರವೇರಿದ ಬಳಿಕ ದುರ್ಯೋಧನನು ಶ್ರೀಕೃಷ್ಣ ದೇವರಲ್ಲಿ ತಮ್ಮೊಂದಿಗೆ ಊಟ ಮಾಡುವಂತೆ ವಿನಂತಿ ಮಾಡುತ್ತಾನೆ ಮತ್ತು ರಾತ್ರಿ ವೇಳೆ ಅರಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಕೇಳಿಕೊಳ್ಳುತ್ತಾನೆ. ಮರುದಿನ ಅವರು ಶಾಂತಿ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲಿದ್ದರು. ಅದಾಗ್ಯೂ, ಶ್ರೀಕೃಷ್ಣ ದೇವರು ಕೌರವರು ಪ್ರಸ್ತಾಪಿಸಿದ ರಾತ್ರಿಯ ಊಟವನ್ನು ತಿರಸ್ಕರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಆ ರಾತ್ರಿ ಶ್ರೀಕೃಷ್ಣ ದೇವರು ವಿಧುರನ ಮನೆಯಲ್ಲಿ ತಂಗಿದರು ಮತ್ತು ಅಲ್ಲೇ ಊಟ ಮಾಡಿದರು.

ವಿಧುರ ಯಾರು?

ವಿಧುರ ಯಾರು?

ವಿಧುರನು ಪಾಂಡವರು ಮತ್ತು ಕೌರವರ ಮಲಸೋದರನಾಗಿದ್ದ. ಆತ ವ್ಯಾಸ ಮಹರ್ಷಿ ಮತ್ತು ರಾಣಿಯರಾದ ಅಂಬಿಕಾ ಮತ್ತು ಅಂಬಾಲಿಕರ ಮಗ. ಕೌರವರ ಸಭೆಯಲ್ಲಿ ದ್ರೌಪತಿಯನ್ನು ಎಳೆದು ತಂದು ಕಿರುಕುಳ ನೀಡಿದಾಗ ವಿಧುರ ಮಾತ್ರ ಇದನ್ನು ವಿರೋಧಿಸಿದ್ದರು.

ಕೌರವರು ತಮ್ಮ ಐಷಾರಾಮ ಮತ್ತು ಊಟವನ್ನು ನೀಡಿ ತನ್ನನ್ನು ಒಲಿಸಿಕೊಳ್ಳಲು ಬಯಸಿದ್ದಾರೆ ಎಂದು ಶ್ರೀಕೃಷ್ಣ ದೇವರು ಮೊದಲೇ ಅರ್ಥ ಮಾಡಿಕೊಂಡಿದ್ದರು. ಅದಾಗ್ಯೂ, ವಿಧುರನು ತನ್ನ ಮನೆಯಲ್ಲಿ ಶ್ರೀಕೃಷ್ಣ ದೇವರಿಗೆ ಊಟ ಬಡಿಸಿದಾಗ ಅದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ.

Most Read: 2019ರಲ್ಲಿ ಮೂರು ರಾಶಿಯವರು ವೃತ್ತಿ ಜೀವನದಲ್ಲಿ ಸ್ಟಾರ್ ರೀತಿಯಲ್ಲಿ ಯಶಸ್ಸನ್ನು ಕಾಣುವರು

ದುರ್ಯೋಧನ ಕಾರಣ ಕೇಳಿದ

ದುರ್ಯೋಧನ ಕಾರಣ ಕೇಳಿದ

ಮರುದಿನ ಶಾಂತಿ ಸಭೆ ನಡೆಯುವ ಮೊದಲು ದುರ್ಯೋಧನನು ತನ್ನ ಅರಮನೆಯಲ್ಲಿ ಶ್ರೀಕೃಷ್ಣನು ಮಲಗದಿರುವ ಮತ್ತು ಊಟ ಮಾಡದಿರುವ ಬಗ್ಗೆ ಕೇಳಿದ ಮತ್ತು ವಿಧುರನ ಮನೆಯಲ್ಲಿ ಊಟ ಮಾಡಿದ್ದು ಯಾಕೆ ಎಂದು ಕೇಳಿದ. ಇದಕ್ಕೆ ಉತ್ತರಿಸಿದ ಶ್ರೀಕೃಷ್ಣ ದೇವರು ಈ ರೀತಿ ಹೇಳುವರು...

ದ್ವಿಶ್ದನ್ನಂ ನಾ ಭಕ್ತಿವಾಮ್ ದ್ವಿಶಂಠಮ್ ನೈಜ ಭೋಜಯೆತ್ ಪಾಂಡವನ್ ದ್ವಿಶೇಸ್ ರಾಜನ್ ಮಾಮ್ ಪ್ರಾಣ ಹಿ ಪಾಂಡವಹ್!

ಇದರ ಅರ್ಥವೆಂದರೆ ತಮ್ಮ ದ್ವೇಷಿಸುವವರ ಮನೆಯಲ್ಲಿ ಯಾರೂ ಕೂಡ ಊಟ ಮಾಡಬಾರದು. ಅದೇ ರೀತಿ ನಾವು ದ್ವೇಷಿಸುವವರಿಗೆ ಆಹಾರವನ್ನು ನೀಡಬಾರದು.

ಓ ದೊರೆಯೇ! ನೀವು ಪಾಂಡವರನ್ನು ದ್ವೇಷಿಸುತ್ತಿದ್ದೀಯಾ, ಆದರೆ ಪಾಂಡವರು ನನಗೆ ಜೀವ.

ಶ್ರೀಕೃಷ್ಣ ದೇವರು ಮುಂದುವರಿಯುತ್ತಾ, ``ಪಾಂಡವರು ಸದ್ಗುಣ ಹೊಂದಿರುವವರು ಮತ್ತು ನ್ಯಾಯ ಮಾರ್ಗದಲ್ಲಿ ನಡೆಯುವರು. ಅವರನ್ನು ದ್ವೇಷಿಸುವವರು ನನ್ನನ್ನು ಕೂಡ ದ್ವೇಷಿಸಿದಂತೆ. ಅವರನ್ನು ಯಾರು ಪ್ರೀತಿಸುತ್ತಾರೆಯಾ ಅವರು ನನ್ನನ್ನು ಕೂಡ ಪ್ರೀತಿಸಿದಂತೆ. ‘'ಪಾಂಡವರ ಬಗ್ಗೆ ಯಾವುದೇ ರೀತಿಯ ಒಳ್ಳೆಯ ಅಭಿಪ್ರಾಯ ಇಲ್ಲದೆ ಮತ್ತು ಅವರನ್ನು ದ್ವೇಷಿಸುವಂತಹ ಮನೆಯಲ್ಲಿ ಶ್ರೀಕೃಷ್ಣ ದೇವರು ಊಟ ಮಾಡಲು ಬಯಸಲಿಲ್ಲ. ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಪಾಠವೆಂದರೆ, ನಮ್ಮನ್ನು ದ್ವೇಷಿಸುವಂತಹ ಜನರ ಮನೆಯಲ್ಲಿ ಯಾವತ್ತೂ ಊಟ ಮಾಡಬಾರದು ಮತ್ತು ಅವರಿಗೆ ಕೂಡ ನಮ್ಮ ಮನೆಯಲ್ಲಿ ಊಟ ಹಾಕಬಾರದು. ಇದು ಮಹಾಭಾರತದಲ್ಲಿ ಶ್ರೀಕೃಷ್ಣ ದೇವರು ನೀಡಿರುವ ಸಂದೇಶ.

English summary

One Should Not Eat At The House Of The One Who Does Not Love Him

Mahabharata, the biggest epic, has a lot to offer to the seeker of knowledge. The great quotes from Lord Krishna and the incidents narrated in the holy book relate to the life of the common man. As a result, they are a source of inspiration for many people going through an intellectual crisis or a dilemma in dealing with the common issues of life.
Story first published: Saturday, December 22, 2018, 12:49 [IST]
X
Desktop Bottom Promotion