Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಶನಿ ಜಯಂತಿಯಂದು ತಪ್ಪಿಯೂ ಈ ಕೆಲಸ ಮಾಡದಿರಿ
ಮೇ 22ರಂದು ವೈಶಾಖ ಮಾಸದ ಅಮವಾಸ್ಯೆ, ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಶನೇಶ್ವರ ಜನಿಸಿದ ದಿನವಾಗಿದ್ದು, ಅವನನ್ನು ಆರಾಧನೆ ಮಾಡುವುದರಿಂದ, ಕಷ್ಟಗಳು ದೂರವಾಗಿ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಈ ದಿನ ಶನಿ ದೇವನಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನವರತ್ನ ಹಾರಗಳನ್ನು ಅರ್ಪಿಸಿ ಪೂಜಿಸಲಾಗುವುದು. ಎಳ್ಳೆಣ್ಣೆ ಅರ್ಪಿಸಿದರೆ ಶನಿಯ ಕೃಪೆಗೆ ಪಾತ್ರರಾಗುವಿರಿ ಹಾಗೂ ಕಷ್ಟಗಳು ದೂರವಾಗುವುದು, ಅವಮಾನಗಳು ತಪ್ಪುವುದು. ಶನಿ ಜಯಂತಿಯಂದು ಒಳಿತು ಉಂಟಾಗಲು ಕಪ್ಪು ವಸ್ತ್ರ, ಕಪ್ಪು ಧಾನ್ಯಗಳನ್ನು ದಾನ ಮಾಡಬೇಕು ಅಂತಾರೆ. ಅದೇ ಆ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಕೂಡ ಹೇಳುತ್ತಾರೆ. ಇಲ್ಲಿ ಶನಿ ಜಯಂತಿಯಂದು ತಪ್ಪಿಯೂ ಮಾಡಬಾರದ ಕೆಲವು ಕಾರ್ಯಗಳ ಬಗ್ಗೆ ಹೇಳಿದ್ದೇವೆ. ಒಂದು ವೇಳೆ ಈ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ ಜಾಗ್ರತೆ....

1. ಹಸಿದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು
ಬಡವರು , ನಿರ್ಗತಿಕರು ಹಸಿದ ಹೊಟ್ಟೆಯಲ್ಲಿ ಮನೆ ಮುಂದೆ ಬಂದರೆ ಅವರನ್ನು ಖಾಲಿ ಹೊಟ್ಟೆ ಹಾಗೂ ಖಾಲಿ ಕೈಯಲ್ಲಿ ಕಳುಹಿಸಬೇಡಿ. ಹಸಿದ ಹೊಟ್ಟೆ ತುಂಬಿಸಿದರೆ ಶನಿಗೆ ಖುಷಿಯಾಗುತ್ತದೆ, ಆಗ ಆತ ನಿಮ್ಮ ಕಡೆಯಿದ್ದತನ್ನ ದೃಷ್ಟಿಯನ್ನು ಬೇರೆಯೆಡೆಗೆ ತಿರುಗಿಸಿ, ನಿಮಗೆ ಕಷ್ಟ ಬರುವುದನ್ನು ತಪ್ಪಿಸುತ್ತಾನೆ.

2. ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು
ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಅಮಂಗಳ ಎಂದು ಹೇಳಲಾಗಿದೆ. ಶನಿ ದೇವ ಹುಟ್ಟಿದ ದಿನ ಯಾರು ಇದನ್ನೆಲ್ಲಾ ಮಾಡುತ್ತಾರೋ ಅವರ ಜೊತೆಯೇ ಶನಿ ಇರುತ್ತಾನೆ, ಅಂದರೆ ಅವನಿಗೆ ಆರ್ಥಿಕ ತೊಂದರೆಗಳು ಉಂಟಾಗುವುದು. ಅಲ್ಲದೆ ಸಮಾಜದಲ್ಲಿ ಕೆಲವೊಂದು ಅವಮಾನಗಳನ್ನು ಎದುರಿಸುವ ಪರಿಸ್ಥಿತಿ ಕೂಡ ಬರಬಹುದು.

3. ಶನಿಯ ದೃಷ್ಟಿಗೆ ಬೀಳುವುದು
ಶನಿ ಜಯಂತಿಯಂದು ದರ್ಶನ ಮಾಡುವಾಗ ಆತನ ದೃಷ್ಟಿಗೆ ಬೀಳಬಾರದು ಎಂದು ಹೇಳುತ್ತಾರೆ. ಶನಿಯ ದೃಷ್ಟಿ ವಕ್ರವಾಗಿರುತ್ತದೆ. ಆದ್ದರಿಂದ ಶನಿಯ ಕಣ್ಣುಗಳನ್ನು ನೀವು ನೋಡಬೇಕು, ಇಲ್ಲದಿದ್ದರೆ ಶನಿಯ ಶಾಪ ಸಿಗುವುದು ಎಂದು ಹೇಳಲಾಗುತ್ತದೆ.

4. ಮಹಿಳೆಯರನ್ನು ನಿಂದಿಸಬಾರದು
ಶನಿ ಜಯಂತಿಯಂದು ಮಹಿಳೆಯರನ್ನು ನಿಂದಿಸುವುದು ಮಾಡಬಾರದು. ಮಹಿಳೆಯರ ಮನಸ್ಸಿಗೆ ನೋವಾದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಹಿಳೆಯರನ್ನು ನಿಂದಿಸಿದರೆ ಶನಿ ತನ್ನ ದೃಷ್ಟಿಯನ್ನು ನಿಮ್ಮ ಮೇಲೆ ಬೀರುತ್ತಾನೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

5. ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು
ಶನಿಯ ಹುಟ್ಟಿದ ದಿನ ಯಾವುದೇ ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು, ಹೊಸ ಬಟ್ಟೆ ಧರಿಸುವುದರಿಂದ ಕೆಡಕು ಉಂಟಾಗುವುದು. ಈ ದಿನ ಕಪ್ಪು ಬಟ್ಟೆ ಧರಸಿದರೆ ಒಳ್ಳೆಯದು. ಶನಿ ದೇವನ ಮಂತ್ರ ಹೇಳುತ್ತಾ, ಉಪವಾಸವಿದ್ದು ಪೂಜೆ ಮಾಡುವುದರಿಂದ ಬದುಕಿನಲ್ಲಿದ್ದ ಕಷ್ಟಗಳು ದೂರವಾಗುವುದು.



Click it and Unblock the Notifications
