For Quick Alerts
ALLOW NOTIFICATIONS  
For Daily Alerts

ದೀಪಾವಳಿಯ ನೀರು ತುಂಬುವ ಹಬ್ಬ ಹಾಗೂ ಎಣ್ಣೆ ಸ್ನಾನದ ಮಹತ್ವ

By Divya Pandith
|

ದೀಪಾವಳಿಯ 4ನೇ ದಿನದಂದು ಅಥವಾ ನರಕ ಚತುರ್ದಶಿಯ ದಿನದಂದು ಎಣ್ಣೆಯ ಸ್ನಾನ ಮಾಡುತ್ತೇವೆ. ಇದು ನರಕ ಚತುರ್ಥಿಯ ಮುಖ್ಯ ಆಚರಣೆಯೂ ಹೌದು. ಮುಂಜಾನೆ ಸೂರ್ಯ ಉದಯಿಸುವ ಮುನ್ನ ಅಥವಾ ಚಂದ್ರನ ಏರಿಕೆಯ ಸಮಯದಲ್ಲಿಯೇ ಎದ್ದೇಳಬೇಕು. ಎಳ್ಳೆಣ್ಣೆ, ತೆಂಗಿನ ಎಣ್ಣೆಗಳಿಂದ ದೇಹವನ್ನು ಮಸಾಜ್ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಸಮಯವನ್ನು ಬಿಟ್ಟು ಸ್ನಾನ ಮಾಡಿದರೆ ಅದು ಅಭ್ಯಂಗ ಸ್ನಾನವಾಗುತ್ತದೆ. ಹಾಗೊಮ್ಮೆ ಯಾರಾದರೂ ಈ ಪದ್ಧತಿಯನ್ನು ಅನುಸರಿಸದಿದ್ದರೆ ಅಂತಹವರು ನರಕಕ್ಕೆ ಹೋಗುತ್ತಾರೆ ಎನ್ನಲಾಗುವುದು.

coconut Oil

ದೀಪಾವಳಿಯ ಈ ದಿನವನ್ನು ಕೆಲವು ಪ್ರದೇಶಗಳಲ್ಲಿ ಕಾಳಿ ಚೌದಾಸ್, ಛೋಟಿ ದೀಪಾವಳಿ, ರೂಪ್ ಚತುರ್ದಶಿ ಅಥವಾ ರೂಪ್ ಚೌದಾಸ್ ಎಂದು ಕರೆಯುತ್ತಾರೆ. ಅನೇಕ ಕಡೆ ಈ ದಿನ ಮತ್ತು ಲಕ್ಷ್ಮಿ ಪೂಜೆಯ ದಿನವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಕೆಲವೆಡೆ ದೀಪಾವಳಿಯ ಮೊದಲ ದಿನದಂದು ಅಭ್ಯಂಗ ಸ್ನಾನ ಮಾಡಿದ ನಂತರ ಪರಸ್ಪರ ಉಡುಗೊರೆಯನ್ನು ಹಂಚಿಕೊಳ್ಳುತ್ತಾರೆ. ಬಳಿಕ ಮನೆಯ ಅಲಂಕಾರ ಹಾಗೂ ದೀಪ ಬೆಳಗುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

musturd Oil

ಎಣ್ಣೆ ಸ್ನಾನ

ಹಬ್ಬದ ಹಿಂದಿನ ದಿನ ಮನೆಯಲ್ಲಿರುವ ಹಂಡೆ ಹಾಗೂ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರನ್ನು ತಂಬಿ ಇಡಲಾಗುತ್ತದೆ. ತ್ರಯೋದಶಿಯ ದಿನ ಸಂಜೆ ನೀರನ್ನು ತುಂಬುವ ಈ ಕಾರ್ಯಕ್ಕೆ ನೀರು ತುಂಬುವ ಹಬ್ಬ ಎಂದು ಕರೆಯುತ್ತಾರೆ. ಮನೆಯಲ್ಲಿ ಪ್ರತಿಯೊಂದು ಪಾತ್ರೆಗಳಲ್ಲಿ ನೀರನ್ನು ತುಂಬಿ ಇಡುವುದರಿಂದ ಗಂಗಾದೇವಿಯನ್ನು ಮನೆಗೆ ಆಹ್ವಾನಿಸಿದಂತೆ. ಶುದ್ಧತೆಯ ಪ್ರತೀಕವಾದ ಗಂಗಾ ದೇವಿಯನ್ನು ಸಾಂಪ್ರದಾಯಿಕವಾಗಿ ಆಹ್ವಾನಿಸಲಾಗುತ್ತದೆ. ವಿಷ್ಣು ದೇವರ ಪಾದವನ್ನು ತೊಳೆಯುವುದರ ಮೂಲಕ ಶುದ್ಧತೆಯನ್ನು ಗಂಗಾ ದೇವಿ ಪಡೆದುಕೊಂಡಿದ್ದಾಳೆ ಎನ್ನುವ ಕಥೆಯಿದೆ.

Lord Lakshmi

ಹಿಂದಿನ ಕಾಲದಲ್ಲಿ ಮನೆಯ ಹಂಡೆಗೆ ನೀರನ್ನುತುಂಬಬೇಕೆಂದರೆ ಬಾವಿಯಿಂದ ಎತ್ತಿ ತುಂಬ ಬೇಕಿತ್ತು. ಈಗ ಹಾಗಿಲ್ಲ. ನಲ್ಲಿ ಹಾಗೂ ಪೈಪ್‍ಗಳ ಸಹಾಯದಿಂದ ಬಹು ಬೇಗ ತುಂಬಬಹುದು. ಆದರೂ ಪದ್ಧತಿಯನ್ನು ಬಿಡಬಾರದು ಎನ್ನುವ ತಿಳಿವಳಿಕೆಯನ್ನು ಧಾರ್ಮಿಕ ಶಾಸ್ತ್ರ ನೀಡುತ್ತದೆ. ಮರುದಿನ ಬೆಳಗ್ಗೆ ಎಣ್ಣೆ ಸ್ನಾನಕ್ಕೆ ತುಂಬಿದ ನೀರನ್ನೇ ಬಳಸಿಕೊಳ್ಳಬೇಕು ಎನ್ನುವ ನಂಬಿಕೆಯಿದೆ.

ದೀಪಾವಳಿ ದಿನ ಮನೆಗೆ ಉಪ್ಪು ತರಬೇಕು ಹೇಳುತ್ತಾರೆ, ಯಾಕೆ ಗೊತ್ತೇ?

ಉಬ್ತಾನ್ ಸ್ನಾನ

ಉಬ್ತಾನ್ ಸ್ನಾನವು ಕೇವಲ ದೀಪಾವಳಿ ಹಬ್ಬಕ್ಕಷ್ಟೇ ಸೀಮಿತವಾಗಿಲ್ಲ. ಈ ಸ್ನಾನವನ್ನು ನಿತ್ಯ ಅಥವಾ ವಾರಕ್ಕೊಮ್ಮೆ ಮಾಡುವುದರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆ ಆಗುವುದನ್ನು ಕಾಣಬಹುದು. ಎಣ್ಣೆ ಹಾಗೂ ಬಿಸಿ ನೀರಿನ ಸ್ನಾನಮಾಡುವುದರಿಂದ ಎಣ್ಣೆ ಸ್ನಾನ ಎನಿಸಿಕೊಳ್ಳುವುದಿಲ್ಲ. ಹಿಂದಿನ ದಿನ ನೀರನ್ನು ತುಂಬಿ ಪೂಜಿಸಿರುವ ನೀರಿನಲ್ಲಿಯೇ ಸ್ನಾನ ಮಾಡಬೇಕು. ಎಣ್ಣೆಯಲ್ಲಿ ಲಕ್ಷ್ಮಿ ದೇವಿ ಇರುತ್ತಾಳೆ ಎನ್ನುವ ನಂಬಿಕೆ ಇರುವುದರಿಂದ ತಲೆ ಹಾಗೂ ಮೈಗೆ ಎಣ್ಣೆಯ ಮಸಾಜ್ ಮಾಡಿಕೊಂಡು, ಸ್ವಲ್ಪ ಸಮಯ ಬಿಡಬೇಕು. ನಂತರ ಉಬ್ತಾನ್ ಪುಡಿಯನ್ನು ಉಜ್ಜಿಕೊಂಡು ಸ್ನಾನ ಮಾಡಬೇಕು. ಆಗ ಲಕ್ಷ್ಮಿ ದೇವಿ ಹಾಗೂ ಗಂಗಾದೇವಿಯ ಆಶೀರ್ವಾದ ಲಭಿಸುತ್ತದೆ.

ಎಣ್ಣೆ ಸ್ನಾನಕ್ಕೆ ಇರುವ ಉದ್ದೇಶ

ಎಣ್ಣೆ ಸ್ನಾನಕ್ಕೆ ಧಾರ್ಮಿಕ ಹಿನ್ನೆಲೆಯೂ ಇದೆ. ನರಕಾಸುರನನ್ನು ಕೊಂದು, ಜೈಲಿನಲ್ಲಿರುವ 16108 ರಾಜಕುಮಾರಿಯರನ್ನು ಮುಕ್ತ ಗೊಳಿಸಿದನು ಶ್ರೀಕೃಷ್ಣ. ರಾಜಕುಮಾರಿಯರು ಮೂಲತಃ ಅಗ್ನಿ ಪುತ್ರಿಯರು. ಇವರು ಜೈಲಿನಿಂದ ಬಿಡುಗಡೆ ಹೊಂದಿರುವ ಹಿನ್ನೆಲೆಯಲ್ಲಿ ಎಣ್ಣೆಯ ಸ್ನಾನ ಪದ್ಧತಿ ಹುಟ್ಟಿಕೊಂಡಿತು ಎನ್ನಲಾಗುತ್ತದೆ ಅಗ್ನಿಯು ಜ್ಞಾನದ ಸಂಕೇತ, ಎಣ್ಣೆಯು ಲಕ್ಷ್ಮಿಯ ಸಂಕೇತ, ಹೃದಯದ ನಿರ್ಮಲತೆಯನ್ನು ನೀರು ಪ್ರತಿಬಿಂಬಿಸುತ್ತದೆ.

Lord Krishna

ಕೃಷ್ಣ ಬಳಸಿದ ಶಸ್ತ್ರಾಸ್ತಗಳು ಬಂಧವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಸ್ನಾನ ಮಾಡುವುದರಿಂದ ಬಂಧನದಿಂದ ವಿಮೋಚನೆ ಸಿಗುತ್ತದೆ ಎಂದು ಹೇಳಲಾಯಿತು. ನರಕಾಸುರನು ಕೃಷ್ಣನೊಂದಿಗೆ ಸೋತು ಮರಣ ಹೊಂದಿದನು. ಅಂದಿನಿಂದ ರಾಜ ಕುಮಾರಿಯರ ಬದುಕಿನಲ್ಲಿ ಅಂದಕಾರ ಕಳೆದು ಬೆಳಕು ಮೊಳಗಿತು ಎನ್ನುವ ಸಂದೇಶವನ್ನು ಅಥೋರ್ವೋಪನಿಷತ್ ಹೇಳುತ್ತದೆ.

"ಪ್ರಣವೋ ಧನುಃ ಶರೋಹ್ಯಾತ್ಮಾ ಬ್ರಹ್ಮಾತಲ್ಲಕ್ಯಾಮುಚ್ಚ್ಯತೇ.

ಅಪ್ರಮತ್ತೇನ ವೇಧವ್ಯಮ್ ಶರವಾತ್ನಮ್ಯೋಪ ಭವತೇ."

ಈ ಶ್ಲೋಕದ ಅರ್ಥ : ಪ್ರಣವ ಎಂದರೆ ಬೌಲ್ ಎಂದಾಗುತ್ತದೆ. ( ಪ್ರಣವ ಅಥವಾ ಔಮ್ ಎನ್ನುವುದು ವೇದದಲ್ಲಿ ಪ್ರಮುಖ ವಾದದ್ದು. ಇದು ಪ್ರಮುಖವಾಗಿ 3 ಭಾಗವನ್ನು ಹೊಂದಿದೆ. ಪ್ರಣವ ಪ್ರತಿಪಾದ್ಯ ವೇದದ ಒಂದು ಭಾಗ. ಇದನ್ನು ಭಗವಾನ್ ವಿಷ್ಣುವು ಶ್ಲಾಘಿಸಿದ್ದಾನೆ ಎನ್ನಲಾಗುತ್ತದೆ.) ಬಾಣ ಎನ್ನುವುದು ವ್ಯಕ್ತಿಯ ಆತ್ಮವಾದರೆ, ಗುರಿ ಎನ್ನುವುದು ದೇವರು. ನಮ್ಮ ಗುರಿಯನ್ನು ತಲುಪಬೇಕಾದರೆ ಬಾಣದ ಸಹಾಯ ಇರಬೇಕು. ಹಾಗೆಯೇ ನಮ್ಮನ್ನು ನಾವು ಸ್ವತಃ ವೇದದಲ್ಲಿ ಅಳವಡಿಸಿಕೊಳ್ಳಬೇಕು. ದೇವರು ನಮ್ಮ ಗುರಿಯಾಗಬೇಕು. ಆಗಲೇ ವ್ಯಕ್ತಿಯ ಆತ್ಮವು ದೇವರಿಗೆ ಸೇರುತ್ತದೆ.

ವಿಷ್ಣುವಿನ ಸುತ್ತ ಕೇಂದ್ರೀಕರಿಸಿದ ಒಂದು ಆಳವಾದ ತತ್ತ್ವಚಿಂತನೆಯ ಚಿಂತನೆ, ವಿಮೋಚನೆ ಮತ್ತು ಅದರ ಕಾರ್ಯ ವಿಧಾನವು ನರಕ ಚತುರ್ದಶಿ ಆಚರಣೆಯ ಅಸ್ತಿತ್ವದಲ್ಲಿದೆ. ಎಣ್ಣೆಯ ಮಸಾಜ್ ಮತ್ತು ಸ್ನಾನ ಮಾಡುವುದರಿಂದ ದೇವರ ಕೃಪೆ ಹಾಗೂ ಸಂಯೋಗದ ಉಪಕರಣವಾಗಬಹುದು.

ಹೆಚ್ಚುವರಿ ಚಿಂತನೆಗಳು

1. ಎಣ್ಣೆಯ ಮಸಾಜ್ ಕೇವಲ ಒಂದು ಬಾರಿಯ ಪ್ರಕ್ರಿಯೆಯಲ್ಲ. ಇದು ಪುನರಾವರ್ತಿತಗೊಳ್ಳುತ್ತಿರುತ್ತದೆ. ದೇಹವು ಎಷ್ಟು ಎಣ್ಣೆಯನ್ನು ಹೀರಿಕೊಳ್ಳುತ್ತದೆಯೋ ಅಷ್ಟು ಬಾರಿ ಎಣ್ಣೆ ಮಸಾಜ್ ಮಾಡಬೇಕು. ಜೊತೆಗೆ ಸ್ನಾನ ಮಾಡಬೇಕು ಎನ್ನಲಾಗುವುದು. ಆತ್ಮವು ಒಂದು ಪ್ರಕೃತಿ ಇದ್ದಂತೆ. ಇದು ಅಜ್ಞಾನ ಮತ್ತು ಬಂಧನ ಎನ್ನುವ ಹಲವಾರು ಪದರಗಳಿಂದ ಮರೆಯಾಗಿರುತ್ತದೆ ಎನ್ನಲಾಗುವುದು.

narakasura

2. ನರಕಾಸುರನನ್ನು ಕೊಂದು ರಾಜಕುಮಾರಿಯರನ್ನು ಬಿಡುಗಡೆ ಮಾಡಿದಾಗ, ವಿಶ್ವದ ಸದ್ಗುಣ ಶೀಲರು ಸಂತೋಷ ಪಟ್ಟರು. ಅವರ ಸಂತೋಷವು ಪಟಾಕಿಯಂತೆ ಸಿಡಿಯಿತು. ಇದರ ಪ್ರತೀಕವಾಗಿಯೇ ಪಟಾಕಿ/ ಸುಡುಮದ್ದುಗಳನ್ನು ಹಬ್ಬದಲ್ಲಿ ಬೆಳಗಲಾಗುತ್ತದೆ ಎನ್ನುವ ನಂಬಿಕೆಯಿದೆ. ಪಟಾಕಿ ಸಿಡಿದು ಝೇಂಕರಿಸುವಾಗ ಮುಗ್ಧ ಮನಸ್ಸಿನ ಮಕ್ಕಳು ಹಾಗೂ ವಯಸ್ಕರು ಆನಂದಿಸುತ್ತಾರೆ. ಆತ್ಮವೂ ಯಾವುದೇ ಕಾರಣವಿಲ್ಲದೆ ಹಿಗ್ಗುತ್ತದೆ ಹಾಗೂ ಮೋಕ್ಷದ ಆನಂದವನ್ನು ಅಭಿವ್ಯಕ್ತಪಡಿಸುತ್ತದೆ.

ದೀಪಾವಳಿ ವಿಶೇಷ: ಈ ಪವಿತ್ರ ವಸ್ತುಗಳಿದ್ದರೆ ಲಕ್ಷ್ಮಿ ನಿಮ್ಮ ಮನೆಗೆ ಬರುವಳು!

3. ತ್ರಿವಿಯಾ: ಧನ್ವಿ, ವಿಷ್ಣು ಸಹಸ್ರನಾಮದಲ್ಲಿ ಇರುವ ಹೆಸರು. ಬಿಲ್ಲುಗಳೊಂದಿಗಿನ ಒಂದು ಅರ್ಥ ಇದು. ಇದು 77ನೇ ಹೆಸರು ಎಂದು ಹೇಳಲಾಗುತ್ತದೆ. 7+7 =14 ಕೃಷ್ಣನು ನರಕಾಸುರನನ್ನು ಕೊಂದ ದಿನ. ಅದು ಆಶ್ವೀಜ, ಕೃಷ್ಣ ಪಕ್ಷದ 14 ನೇ ದಿನವನ್ನು ನರಕಚತುರ್ದಶಿ ಎಂದು ಕರೆಯಲಾಯಿತು.

ಇನ್ನು ಅಭ್ಯಂಗ ಸ್ನಾನದ ಪ್ರಾಮುಖ್ಯತೆ ಬಗ್ಗೆ ತಿಳಿಯೋಣ..

ಸಾಂಪ್ರದಾಯಿಕವಾಗಿ ಅನೇಕ ಪದ್ಧತಿಗಳು ಹಾಗೂ ಅದರ ಹಿಂದೆ ವೈಜ್ಞಾನಿಕ ಮಹತ್ವವನ್ನು ಒಳಗೊಂಡಿರುವ ಹಬ್ಬ ದೀಪಾವಳಿ. ವರ್ಷಕ್ಕೊಮ್ಮೆ ಬರುವ ಈ ಪವಿತ್ರವಾದ ಹಬ್ಬ ಬಾಂಧವ್ಯವನ್ನು ಬೆಸೆಯುವ ಹಬ್ಬ ಎಂದರೂ ತಪ್ಪಾಗಲಾರದು. ಅಮ್ಮನ ಮಡಿಲಲ್ಲಿ ಕುಳಿತು ಪರಿಮಳ ಭರಿತ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಸಿಕೊಳ್ಳುವುದು. ತಂಗಿ-ತಮ್ಮಂದಿರಿಗೆ ಎಣ್ಣೆ ಮಸಾಜ್ ಮಾಡಿಕೊಡುವುದು ಎಲ್ಲವೂ ಸುಂದರ ಅನುಭವವನ್ನು ನೀಡುತ್ತದೆ. ನಿಜ, ದೀಪಾವಳಿ ಹಬ್ಬದ ಒಂದು ಪ್ರಮುಖ ಪದ್ಧತಿಯೆಂದರೆ ಮನೆ ಮಂದಿಗೆಲ್ಲಾ ತಲೆಗೆ ಎಣ್ಣೆಯನ್ನು ಹಚ್ಚುವುದು, ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬವನ್ನು ಆರಂಭಿಸುವುದು ಅತ್ಯಂತ ಪವಿತ್ರವಾದದ್ದು. ಹಬ್ಬದ ದಿನ ಮಾಡುವ ಈ ಅಭ್ಯಂಗ ಸ್ನಾನವು ಕೇವಲ ಧಾರ್ಮಿಕ ಪದ್ಧತಿಯಷ್ಟೇ ಅಲ್ಲ. ವೈಜ್ಞಾನಿಕವಾಗಿ ಆರೋಗ್ಯದ ಸುಧಾರಣೆಗೂ ಒಳ್ಳೆಯದು ಎಂದು ಹೇಳಲಾಗುತ್ತದೆ.

ಸಾಂಪ್ರದಾಯಿಕವಾಗಿ ಮಾಡುವ ಅಭ್ಯಂಗ ಸ್ನಾನದ ಹಿನ್ನೆಲೆ ಹಾಗೂ ಅದರಿಂದಾಗುವ ಅನುಕೂಲತೆಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಬೇಕು ಎನಿಸಿದರೆ ನಾವಿಲ್ಲಿ ನೀಡಿರುವ ಮಾಹಿತಿಯನ್ನು ಓದಿ. ಹಾಗೆಯೇ ನೀವು ನಿಮ್ಮ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ಅಭ್ಯಂಗ ಸ್ನಾನದಿಂದ ಪ್ರಾರಂಭಿಸಿ.

ಅಭ್ಯಂಗ ಸ್ನಾನದ ಕಾರ್ಯವಿಧಾನಗಳು

ತಜ್ಞರ ಹೇಳಿಕೆಯ ಪ್ರಕಾರ ಅಭ್ಯಂಗ ಸ್ನಾನದಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆ ಉಂಟಾಗುವುದನ್ನು ನೋಡಬಹುದು. ನಿತ್ಯವೂ ಅಭ್ಯಂಗ ಸ್ನಾನ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ತ್ವಚೆಯ ಮೇಲಿರುವ ಸತ್ತ ಜೀವಕೋಶಗಳು ಸ್ವಚ್ಛವಾಗುತ್ತವೆ. ಚರ್ಮವು ಮೃದು ಹಾಗೂ ಕೋಮಲವಾಗಿ ಇರುತ್ತದೆ. ಸಂಪೂರ್ಣವಾಗಿ ದೇಹವೂ ಉಲ್ಲಾಸದಿಂದ ಕೂಡಿರುತ್ತದೆ. ಎಣ್ಣೆಯ ಪರಿಮಳ ಮನಸ್ಸನ್ನು ಶಾಂತವಾಗಿರುವಂತೆ ಮಾಡುತ್ತದೆ.

-ಹಬ್ಬದ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದೇಳಬೇಕು.

-ಇಡೀ ದೇಹವನ್ನು ಪರಿಮಳ ಯುಕ್ತ ಎಣ್ಣೆಯಿಂದ ಮಸಾಜ್ ಮಾಡಬೇಕು.

-ಸುಮಾರು ಅರ್ಧ ಗಂಟೆ ಬಿಡಬೇಕು. ಆಗ ತೈಲವನ್ನು ತ್ವಚೆ ಹೀರಿಕೊಳ್ಳುತ್ತದೆ.

-ನಂತರ ಉಟೇನ್ ಅಥವಾ ಉಪ್ತಾನ್ ನಿಂದ ಮಸಾಜ್ ಮಾಡಿ, ನೀರಿನಲ್ಲಿ ನೆನೆಸಿ.

-ಗುಲಾಬಿ, ಶ್ರೀಗಂಧ ಅಥವಾ ಯಾವುದಾದರೂ ನೈಸರ್ಗಿಕ ಗಿಡಮೂಲಿಕೆಯ ಸೋಪ್‍ಗಳನ್ನು ಬಳಸಿ ಸ್ನಾನ ಮಾಡಬಹುದು.

- ನಂತರ ಹೊಸ ಉಡುಗೆಯನ್ನು ತೊಟ್ಟು, ಸಾಂಪ್ರದಾಯಿಕ ಕಾರ್ಯವಿಧಾನವನ್ನು ಮುಂದುವರಿಸಿ.

ಉಟೇನ್ ಅಥವಾ ಉಪ್ತಾನ್ ಎಂದರೇನು?

ಉಟೇನ್ ಎಂದರೆ ಮಸಾಜ್ ಮಾಡುವ ಉತ್ಪನ್ನಗಳ ರಾಜ ಎಂದು ಕರೆಯುತ್ತಾರೆ. ಮಸಾಜ್‍ಗೆ ಬಳಸುವ ಈ ಹಿಟ್ಟನ್ನು ಅನೇಕ ಗಿಡಮೂಲಿಕೆಗಳ ಬಳಕೆಯಿಂದ ತಯಾರಿಸಲಾಗಿರುತ್ತದೆ. ಆಯುರ್ವೇದ ಗುಣಗಳನ್ನು ಹೊಂದಿರುವ ಇದು ತ್ವಚೆಯ ಆರೋಗ್ಯಕ್ಕೆ ಒಳ್ಳೆಯ ಸಾಥ್ ನೀಡುತ್ತದೆ. ಇದರಿಂದ ಮಸಾಜ್ ಮಾಡುವುದರಿಂದ ತ್ವಚೆಯಲ್ಲಿರುವ ಡೆಡ್ ಸ್ಕಿನ್‍ಗಳ ನಿರ್ಮೂಲವಾಗಿ ಹೆಚ್ಚು ಮೃದು ಹಾಗೂ ಕಾಂತಿಯಿಂದ ಕೂಡಿರುತ್ತದೆ. ಇದು ಚಂದನ, ಶ್ರೀಂಗಧ, ಕರ್ಪೂರ, ಮಂಜಿಸ್ತಾ, ಗುಲಾಬಿ ದಳ, ಕಿತ್ತಳೆ ಸಿಪ್ಪೆ, ಅರಿಶಿನಗಳಂತಹ ಪದಾರ್ಥಗಳ ಮಿಶ್ರಣವನ್ನು ಹೊಂದಿದೆ.

ಅಭ್ಯಂಗ ಸ್ನಾನದ ಪ್ರಾಮುಖ್ಯತೆ

ಐದು ದಿನಗಳ ದೀಪಾವಳಿ ಹಬ್ಬದ ಆಚರಣೆಯ ಮೊದಲ ದಿನ ನರಕ ಚತುರ್ಥಿ. ಮಂಗಳಕರವಾದ ಈ ದಿನದಂದು ಕೃಷ್ಣನು ನರಕಾಸುರನನ್ನು ಕೊಂದನು ಎನ್ನುವ ಪೌರಾಣಿಕ ಇತಿಹಾಸವಿದೆ. ಇಂದು ಒಳ್ಳೆಯ ವಿಚಾರಗಳಿಗೆ ಹಾಗೂ ವ್ಯಕ್ತಿಗಳಿಗೆ ಜಯ ಸಿಗುತ್ತದೆ ಎನ್ನಲಾಗುವುದು. ನರಕ ಚತುರ್ದಶಿಯನ್ನು ಸಣ್ಣ ದೀಪಾವಳಿ ಎಂದು ಕರೆಯುತ್ತಾರೆ. ರಾಕ್ಷಸರ ಅರಸ ನರಕಾಸುರನ ಮೂರ್ತಿಗೆ ಪಟಾಕಿ ಹಚ್ಚುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

Diwali Rangoli

ಮುಂಜಾನೆಯ ಸ್ನಾನವು ಮಹತ್ವದ್ದು. ಏಕೆಂದರೆ ಪವಿತ್ರವಾದ ನೀರು ದುಷ್ಟಶಕ್ತಿಗಳ ಅಂತ್ಯವನ್ನು ಸಂಕೇತಿಸುತ್ತದೆ. ಸೂರ್ಯೋದಯಕ್ಕೂ ಮೊದಲು ಸ್ನಾನ ಮಾಡಿದರೆ ಗಂಗಾ ನದಿಯಲ್ಲಿ ಸ್ನಾನಮಾಡಿದಷ್ಟೇ ಪವಿತ್ರ ಮತ್ತು ಪುಣ್ಯ ಎಂದು ಪರಿಗಣಿಸಲಾಗುವುದು. ಅಭ್ಯಂಗ ಸ್ನಾನದ ನಂತರ ಮಹಿಳೆಯರು ವರಾಂಡದಲ್ಲಿ ರಂಗೋಲಿಯನ್ನು ಹಾಕಿ, ದೀಪವನ್ನು ಬೆಳಗಬೇಕು. ದೀಪಗಳ ಪ್ರಭೆಯು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ.

Diwali Lamp

ಕುಟುಂಬದವರೆಲ್ಲಾ ದೇವರಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಒಬ್ಬರಿಗೊಬ್ಬರು ಸಿಹಿ ತಿನಿಸುವುದರ ಮೂಲಕ ಸಂತಸವನ್ನು ಹಂಚಿಕೊಳ್ಳಬೇಕು. ಕುಟುಂಬದ ಹಿರಿಯರಿಗೆ ಕಿರಿಯರು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಸಾಧ್ಯವಾದರೆ ಕುಟುಂಬದವರೆಲ್ಲಾ ಒಟ್ಟಾಗಿ ದೇವಾಲಯಕ್ಕೆ ಹೋಗಬೇಕು. ದೇವರ ಆಶೀರ್ವಾದ ಪಡೆದು ಸುಖಕರ ಜೀವನ ನಡೆಸಲು ಅನುವಾಗುವುದು.

English summary

Oil Bath and Anusandhana Rituals during Diwali

During on the 4th day of Diwali or the Narak Chaturdashi or Roop Chaudas, we have head bath with scented oil. The most important ritual of the Naraka Chaturdashi is, people wake up early in the morning (before sunrise) or during moon-rise, apply ubtan (made up of til oil, herbs, flowers as well as some crucial elements) on their body and take holy bath or Abhyang Snan. It is considered that someone who fails doing such ritual at this special occasion goes to the hell. The day is also popular as Kali Chaudas, Choti Diwali, Roop Chaturdashi or Roop Chaudas.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more