For Quick Alerts
ALLOW NOTIFICATIONS  
For Daily Alerts

ಗಣೇಶನಿಗೆ ಸಿಂಧೂರವನ್ನು ಅರ್ಪಿಸಿದರೆ, ಕಷ್ಟ-ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ

|
ಗಣೇಶನಿಗೆ ಇವುಗಳನ್ನ ಅರ್ಪಿಸಿದರೆ ಸಂತುಷ್ಟನಾಗಿ ಎಲ್ಲಾ ಸಮಸ್ಯೆಗಳನ್ನ ಪರಿಹರಿಸುತ್ತಾನೆ | Oneindia kannada

ಗಣಗಳ ಈಶ ಗಣೇಶ. ಸಮಸ್ಯೆಗಳನ್ನು ನಿವಾರಿಸಿ ಯಶಸ್ಸನ್ನು ತಂದುಕೊಡುವವನು ಗಣೇಶ. ಯಾವುದೇ ಕೆಲಸ ಕಾರ್ಯ ಅಥವಾ ಶುಭ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಶ್ರೀಗಣೇಶನ ಸ್ಮರಣೆ ಹಾಗೂ ಪೂಜೆ ಕೈಗೊಂಡರೆ ಕೆಲಸವು ಬಲು ಸುಲಭವಾಗಿ ನೆರವೇರುವುದು. ಅಲ್ಲಿ ಯಾವುದೇ ವಿಘ್ನಗಳು ಉಂಟಾಗದು ಎಂದು ಹೇಳಲಾಗುತ್ತದೆ. ಶಿವ-ಪಾರ್ವತಿಯ ಮಗನಾದ ಇವನು ಕೇವಲ ಮನು ಕುಲವನ್ನಷ್ಟೇ ಕಾಡುವುದಿಲ್ಲ. ಬದಲಿಗೆ ಇಡೀ ಸೃಷ್ಟಿಯ ಪಾಲನೆಯನ್ನು ಮಾಡುವನು.

Lord Ganesha

ಆನೆಯ ಮುಖ, ದಪ್ಪದಾದ ದೇಹ, ತೀಕ್ಷ್ಣ ಬುದ್ಧಿಯ ಗಣಪನು ಏಕೆ ಎಲ್ಲರ ಪ್ರಿಯನು? ಅವನ ಪೂಜೆ ಹಾಗೂ ಆರಾಧನೆಯಿಂದ ಯಾವೆಲ್ಲಾ ಒಳ್ಳೆಯತು ಸಂಭವಿಸುವುದು? ಎಂತಹ ವಿಗ್ರಹಗಳು ಗಣೇಶನಿಗೆ ಶ್ರೇಷ್ಠವಾದದ್ದು ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಗಣೇಶನು ಸಕಲರಿಗೂ ಇಷ್ಟವಾದವನು

ಗಣೇಶನು ಸಕಲರಿಗೂ ಇಷ್ಟವಾದವನು

ಹಿಂದೂ ದೇವತೆಗಳಲ್ಲಿ ಒಬ್ಬನಾದವನು ಗಣೇಶ. ಇವನು ಪವಿತ್ರ ಉಪಸ್ಥಿತಿಯೊಂದಿಗೆ ಎಲ್ಲಾ ರೀತಿಯ ತೊಂದರೆಯನ್ನು ನೀವಾರಿಸುವವನು. ಗಣೇಶನಿಗೆ ವಿವಿಧ ಹೆಸರುಗಳಿಂದ ಕರೆಯಲಾಗುವುದು. ವಿಘ್ನೇಶ್ವರ-ಎಂದರೆ ವಿಘ್ನಗಳನ್ನು ನಿವಾರಿಸುವವನು ಎಂದು, ವಿನಾಯಕ-ಎಂದರೆ ಶಾಶ್ವತವಾದ ನಾಯಕ ಎಂದು, ಲಂಬೋದರ ಎಂದರೆ ದೊಡ್ಡ ಹೊಟ್ಟೆಯನ್ನು ಹೊಂದಿರುವವನು ಹಾಗೂ ಸರಳವಾಗಿಯೇ ಮೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಹೀಗೆ ಪ್ರತಿಯೊಂದು ಹೆಸರಿಗೂ ವಿಶೇಷ ಅರ್ಥಗಳನ್ನು ಪಡೆದುಕೊಂಡಿದೆ. ಜನರಿಗೆ ಸುಲಭವಾಗಿಯೇ ಆಶೀರ್ವಾದ ಹಾಗೂ ಸಂಕಷ್ಟಗಳನ್ನು ನಿವಾರಿಸುವುದರಿಂದ ಗಣೇಶನು ಎಲ್ಲರಿಗೂ ಇಷ್ಟವಾಗುವ ದೇವರು ಎಂದು ಹೇಳಲಾಗುತ್ತದೆ.

ಗಣೇಶನ ಮಹತ್ವದ ಉಪಸ್ಥಿತಿ:

ಗಣೇಶನ ಮಹತ್ವದ ಉಪಸ್ಥಿತಿ:

ಹಿಂದೂಗಳು ಪೂಜೆ, ಆಚರಣೆ, ಚಿಕ್ಕ ಕೆಲಸದಿಂದ ಹಿಡಿದು ದೊಡ್ಡ ದೊಡ್ಡ ಕೆಲಸ ಕಾರ್ಯಗಳಲ್ಲೂ ಮೊದಲು ಗಣೇಶನ ಆರಾಧನೆ ಮಾಡಲಾಗುತ್ತದೆ. ಮದುವೆ-ಮುಂಜಿಯಂತಹ ಮಂಗಳಕರ ಕೆಲಸದಲ್ಲೂ ಮೊದಲು ಗಣೇಶನನ್ನು ಪೂಜಿಸಿಯೇ ಮಾಡಲಾಗುತ್ತದೆ.

ಗಣೇಶನನ್ನು ಮೆಚ್ಚಿಸುವುದು ಹೇಗೆ?

ಗಣೇಶನನ್ನು ಮೆಚ್ಚಿಸುವುದು ಹೇಗೆ?

ಗಣೇಶನು ಬಹಳ ಸರಳ ಹಾಗೂ ಬಹುಬೇಗ ಆಶೀರ್ವಾದ ನೀಡುವ ದೇವರು. ಧೈರ್ಯಕಾರಕನಾದ ಗಣೇಶನಿಗೆ ಇಷ್ಟವಾದ ಮೋದಕ, ಉಂಡೆ, ಚಕ್ಕುಲಿ, ದೂರ್ವೆ ಹಗೂ ಸಿಂಧೂರಗಳನ್ನು ನೀಡುವುದರ ಮೂಲಕ ಅವನ ಕೃಪೆಗೆ ಒಳಗಾಗಬಹುದು. ಹನುಮಾನ್ ಮತ್ತು ಭೈರವನಾಥ್ ದೇವರನ್ನು ಹೊರತು ಪಡಿಸಿದರೆ ಗಣೇಶನು ಸಹ ಸಿಂಧೂರವನ್ನು ಇಷ್ಟಪಡುವ ದೇವರ ಪಟ್ಟಿಯಲ್ಲಿ ಬರುತ್ತಾನೆ.

ಗಣೇಶನಿಗೆ ಏಕೆ ಸಿಂಧೂರವನ್ನು ನೀಡಬೇಕು?

ಗಣೇಶನಿಗೆ ಏಕೆ ಸಿಂಧೂರವನ್ನು ನೀಡಬೇಕು?

ಬುಧವಾರ ಗಣೇಶನಿಗೆ ಸಿಂಧೂರವನ್ನು ನೀಡಿದರೆ ನಿಮ್ಮ ದುಃಖ, ನೋವುಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುವನು.

ಗಣೇಶನಿಗೆ ಸಿಂಧೂರ ನೀಡುವುದರ ಪ್ರಯೋಜನಗಳು:

ಗಣೇಶನಿಗೆ ಸಿಂಧೂರ ನೀಡುವುದರ ಪ್ರಯೋಜನಗಳು:

ಪಾಲ್ಗುಣ ತಿಂಗಳಲ್ಲಿ ಗಣೇಶನಿಗೆ ಸಿಂಧೂರ ನೀಡುವುದರಿಂದ ಪರಿಣಾಮಕಾರಿ ಬದಲಾವಣೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಈ ದಿನದಲ್ಲಿ ಸಿಂಧೂರ ನೀಡಿದರೆ ದೈಹಿಕ ನೋವುಗಳು ಮರೆಯಾಗುತ್ತವೆ ಎಂದು ಹೇಳಲಾಗುವುದು.

ವಿಶೇಷ ಮಂತ್ರಗಳೊಂದಿಗೆ ಸಿಂಧೂರ

ವಿಶೇಷ ಮಂತ್ರಗಳೊಂದಿಗೆ ಸಿಂಧೂರ

ಸ್ನಾನದ ನಂತರ ಹಳದಿ ಬಟ್ಟೆಯನ್ನು ತೊಟ್ಟು, ಗಣೇಶನಿಗೆ ಸಿಂಧೂರ ಮತ್ತು ಗುಲಾಲ್ ಅನ್ನು ಅರ್ಪಿಸಲಾಗುವುದು. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು "ಸಿಂಧೂರ ಶೋಭನಮ್ ರಕ್ತಮ್ ಸೌಭಾಗ್ಯಂ ಸುಖವರ್ಧನಮ್, ಶುಭದಂ ಕಾಮದಮ್ ಚೌವ ಸಿಂಧೂರಮ್ ಪ್ರತಿಗ್ಯತಮ್." ಎನ್ನುವ ಮಂತ್ರವನ್ನು ಪಠಿಸಬೇಕು.

ಉದ್ಯೋಗದಲ್ಲಿ ಯಶಸ್ಸು

ಉದ್ಯೋಗದಲ್ಲಿ ಯಶಸ್ಸು

ಸಿಂಧೂರವನ್ನು ತುಪ್ಪ ಅಥವಾ ಜಾಸ್ಮಿನ್ ಎಣ್ಣೆಯಲ್ಲಿ ಬೆರೆಸಿ, ಬೆಳ್ಳಿ ಅಥವಾ ಚಿನ್ನದ ನಾಣ್ಯದಲ್ಲಿ ಗಣೇಶನಿಗೆ ಲೇಪಿಸಬೇಕು. ಹೀಗೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುವುದು. ಅಲ್ಲದೆ ವೃತ್ತಿಯಲ್ಲಿ ಉತ್ತಮ ಯಶಸ್ಸು ದೊರೆಯುವುದು.

ಗಣೇಶನಿಗೆ ಮೆಚ್ಚುಗೆ ಆಗುವ ವಿಚಾರಗಳು

ಗಣೇಶನಿಗೆ ಮೆಚ್ಚುಗೆ ಆಗುವ ವಿಚಾರಗಳು

ಸಿಂಧೂರವನ್ನು ಹೊರತು ಪಡಿಸಿದರೆ ಅನೇಕ ವಿಷಯಗಳು ಗಣೇಶನಿಗೆ ಪ್ರಿಯವಾದದ್ದು. ಅವುಗಳ ಮೂಲಕ ಗಣೇಶನ ಆಶೀರ್ವಾದ ಪಡೆದುಕೊಳ್ಳಬಹುದು.

ಎರುಕು/ಎಕ್ಕದ ಹೂವು

ಎರುಕು/ಎಕ್ಕದ ಹೂವು

ಎಕ್ಕದ ಹೂವು ಗಣೇಶನಿಗೆ ಅತ್ಯಂತ ಪ್ರಿಯವಾದ ಹೂವು. ಎಕ್ಕದ ಹೂವು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ನಕಾರಾತ್ಮಕ ಚಿಂತನೆಗಳನ್ನು ತೆಗೆದುಹಾಕುವ ಸಾಮಥ್ರ್ಯವನ್ನು ಒಳಗೊಂಡಿದೆ. ಗಣೇಶನಿಗೆ ಎಕ್ಕದ ಹೂವನ್ನು ಹಾರಮಾಡಿ ಹಾಕುವುದರಿಂದ ಆರೋಗ್ಯಕರ ಜೀವನವನ್ನು ಪಡೆದುಕೊಳ್ಳಬಹುದು.

ಶಂಖ

ಶಂಖ

ಶಂಖವು ಹಿಂದೂಗಳ ಧಾರ್ಮಿಕ ಕಾರ್ಯಗಳಲ್ಲಿ ಪವಿತ್ರವಾದ ಸಾಧನ. ಇದು ವಿಷ್ಣು ದೇವರಿಗೆ ಸಮರ್ಪಿತವಾಗಿದ್ದು ಎಂದು ಸಹ ಹೇಳಲಾಗುವುದು. ಪೂಜೆ ಗೈಯುವಾಗ ಶಂಖ ಊದುವುದರಿಂದ ಪವಿತ್ರವಾದ ಹಾಗೂ ಸಕಾರಾತ್ಮಕ ಶಕ್ತಿ ಹೊರಹೊಮ್ಮುವುದು ಎಂದು ಹೇಳಲಾಗುವುದು. ಗಣೇಶನ ಒಂದು ಕೈಯಲ್ಲಿ ಶಂಖವು ಇರುತ್ತದೆ. ಗಣೇಶನ ಪೂಜೆಯ ಸಂದರ್ಭದಲ್ಲಿ ಶಂಖ ಊದುವುದರಿಂದ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುವುದು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣು ಎಲ್ಲಾ ಋತುಗಳಲ್ಲೂ ಲಭ್ಯವಾಗುವ ಹಣ್ಣು. ಇದನ್ನು ಎಲ್ಲಾ ಸಮಯದಲ್ಲೂ ಗಣೇಶನ ಪೂಜೆಗೆ ಇಡಬಹುದು. ಆನೆಯ ತಲೆಯನ್ನು ಹೊಂದಿರುವುದರಿಂದ ಬಾಳೆಹಣ್ಣು ಬಹು ಪ್ರಿಯವಾದ ಹಣ್ಣು ಎಂದು ಸಹ ಹೇಳಲಾಗುವುದು. ಹಾಗಾಗಿಯೇ ಗಣೇಶನ ಮೂರ್ತಿಯನ್ನು ಬಾಳೆ ಎಲೆಗಳಿಂದಲೂ ಸಿಂಗರಿಸುತ್ತಾರೆ ಎನ್ನಲಾಗುವುದು.

ಬಿಳಿ ಹೂವನ್ನು ನೀಡಲಾಗುವುದು

ಬಿಳಿ ಹೂವನ್ನು ನೀಡಲಾಗುವುದು

ಗಣೇಶನಿಗೆ ಬಿಳಿ ಹೂವನ್ನು ನೀಡಿದರೆ ಯಶಸ್ಸು ಮತ್ತು ಕೀರ್ತಿ ಲಭ್ಯವಾಗುವುದು. ಬಿಳಿಯ ದಾಸವಾಳದ ಹೂವನ್ನು ಸಹ ನೀಡಬಹುದು. ಈ ಹೂವು ಗಣೇಶನಿಗೆ ಬಹು ಪ್ರಿಯವಾದದ್ದು.

ಗರಿಕೆ

ಗರಿಕೆ

ಗರಿಕೆಯ ಹುಲ್ಲು ಗಣೇಶನಿಗೆ ಬಹಳ ಪ್ರಿಯವಾದದ್ದು. ಇದನ್ನು ನಿತ್ಯದ ಪೂಜೆಯಲ್ಲಿ ಗಣೇಶನಿಗೆ ಅರ್ಪಿಸಿದರೆ ಅದೃಷ್ಟ, ಸಮೃದ್ಧಿ, ಸಂತಾನ ಎಲ್ಲವೂ ದೊರೆಯುವುದು. ಪುಷ್ಪಂಜಲಿ ಮಂತ್ರವನ್ನು ಪಠಿಸುವ ಮೂಲಕ ಈ ಹೂವನ್ನು ಸಲ್ಲಿಸಿದರೆ ಹಿಂದೆ ಮಾಡಿದ ತಪ್ಪುಗಳನ್ನು ಗಣೇಶನು ಕ್ಷಮಿಸುವನು ಎಂದು ಹೇಳಲಾಗುತ್ತದೆ.

ಗಣೇಶನ ವಿಗ್ರಹ ಇಡಲು ಸೂಕ್ತ ಸ್ಥಳ

ಗಣೇಶನ ವಿಗ್ರಹ ಇಡಲು ಸೂಕ್ತ ಸ್ಥಳ

ಉತ್ತಮ ಸಂಪತ್ತು, ಸಮೃದ್ಧಿಯನ್ನು ಹೊಂದಲು ನೀವು ಬಯಸುತ್ತೀರಿ ಎಂದಾದರೆ ಮೊದಲು ಮನೆಯಲ್ಲಿ ಬಿಳಿಯ ಗಣೇಶನನ್ನು ಪೂಜಿಸಿ. ಅದು ಅಂಟಿಸಿರುವ ಚಿತ್ರ ಸಹ ಆಗಿರಬಹುದು. ಅದ್ಭುತ ಫಲವನ್ನು ನೀಡುವುದು. ಮೂರ್ತಿಯ ಹಿಂಭಾಗವು ಮನೆಯ ಹೊರಭಾಗದಲ್ಲಿ ಎದುರಾಗುತ್ತಿರುವಂತೆ ಗಣೇಶನ ಮೂರ್ತಿಯನ್ನು ಇರಿಸಬೇಕು.

ಗಣೇಶನ ಮೂರ್ತಿ

ಗಣೇಶನ ಮೂರ್ತಿ

ಮನೆಯಲ್ಲಿ ನಿತ್ಯದ ಪೂಜೆಗೆ ಮಾವು, ಬೇವು ಮತ್ತು ಅಶ್ವತ್ತ್ಥ ಮರದಿಂದ ಮಾಡಿದ ಮೂರ್ತಿಯನ್ನು ಹೊಂದಿರಬೇಕು. ಇದು ಅತ್ಯಂತ ಅದೃಷ್ಟ ಎಂದು ಪರಿಗಣಿಸಲಾಗುವುದು. ಇವುಗಳ ಬಾಗಿಲನ್ನು ಹೊಂದಿದ್ದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಎಂದು ಹೇಳಲಾಗುತ್ತದೆ.

ಹಸುವಿನ ಸಗಣಿ

ಹಸುವಿನ ಸಗಣಿ

ಹಸುವಿನ ಸಗಣಿಯಲ್ಲಿ ತಯಾರಿಸಿದ ಗಣೇಶನ ವಿಗ್ರಹವು ಅತ್ಯಂತ ಅದೃಷ್ಟ ಹಾಗೂ ಪ್ರತಿಷ್ಟೆಯನ್ನು ತಂದುಕೊಡುವುದು. ಇದರ ವಿಗ್ರಹ ನಿಮಗೆ ಸಿಕ್ಕಿತು ಅದನ್ನು ನೀವು ಪೂಜಿಸುತ್ತಿದ್ದೀರಿ ಎಂದಾದರೆ ದುಃಖ ಅಥವಾ ನಕಾರಾತ್ಮಕ ಶಕ್ತಿ ದೂರವಾಗಿ ದೈವ ಶಕ್ತಿಯು ಆಕರ್ಷಿಸುವುದು.

ಸ್ಫಟಿಕದ ಗಣೇಶ

ಸ್ಫಟಿಕದ ಗಣೇಶ

ಸ್ಫಟಿಕದ ಗಣೇಶನ ಮೂರ್ತಿಯನ್ನು ಪೂಜಿಸುವುದರಿಂದ ಎಲ್ಲಾ ಬಗೆಯ ದೋಷಗಳು ನಿರ್ಮೂಲವಾಗುವುದು. ಸಾಮಾನ್ಯವಾಗಿ ಸ್ಫಟಿಕದ ವಿಗ್ರಹ ದುಬಾರಿ ಬೆಲೆಯದ್ದಾಗಿರುತ್ತದೆ. ಆದರೂ ಇದರ ಸಣ್ಣ ಪ್ರತಿಮೆಯನ್ನು ಇಟ್ಟು ಪೂಜಿಸುವುದರಿಂದ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾವಣೆ ಕಾಣುವುದು.

ಅರಿಶಿನದ ಗಣೇಶ

ಅರಿಶಿನದ ಗಣೇಶ

ಅರಿಶಿನದಿಂದ ತಯಾರಿಸಿದ ಗಣೇಶನನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಹೆಚ್ಚು ಪರಿಶ್ರಮ ಪಡದೆಯೇ ಕಷ್ಟಗಳು ದೂರವಾಗುವುದು. ಅಲ್ಲದೆ ಮನೆಗೆ ಮಂಗಳಕರವಾದದ್ದು ಎಂದು ಹೇಳಲಾಗುತ್ತದೆ.

English summary

Offer sindoor to Lord Ganesha to solve all your problems

Lord Ganesha is one of the few Hindu Gods, who is said to solve all kinds of troubles and touch all aspects of human life with his holy presence. Called by many names like Vighnaharta – the remover of hurdles, Sumukha – the one with an attractive face, Vinayaka – the eternal leader, Lambodara – the one with a big stomach, you can impress Ganesha without much effort. He is worshipped and adored in all his forms.
X
Desktop Bottom Promotion