Just In
Don't Miss
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗುರುವಾರ ಮಾಡುವ ಉಪವಾಸದ ಫಲವೇನು?
ಹಿಂದೂ ಧರ್ಮದಲ್ಲಿ ಪ್ರತಿ ದಿನವು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಆಯಾಯ ದಿನದಂದು ದೇವರನ್ನು ಪೂಜಿಸಿದರೆ ಅದರಿಂದ ಸಿಗುವಂತಹ ಆಶೀರ್ವಾದವು ಹೆಚ್ಚು ಎನ್ನಲಾಗುತ್ತದೆ. ಇದಕ್ಕಾಗಿ ಕೆಲವರು ತಮ್ಮ ಇಷ್ಟದೇವರ ದಿನದಂದು ಉಪವಾಸ ಮಾಡುವರು. ಅದರಲ್ಲೂ ಗುರುವಾರದಂದು ಉಪವಾಸ ಮಾಡಿದರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಗುರುವಾರವು ಬೃಹಸ್ಪತಿ ದೇವರ ವಾರವಾಗಿದೆ.
ಗುರು ಗ್ರಹವನ್ನು ಕೂಡ ಬ್ರಹಸ್ಪತಿ ಎಂದು ಕರೆಯಲಾಗುತ್ತದೆ. ತಿಂಗಳ ಶುಕ್ಲ ಪಕ್ಷದಲ್ಲಿ ಉಪವಾಸ ಮಾಡಬೇಕೆಂದು ಹಿಂದೂ ಪುರಾಣಗಳು ಹೇಳುತ್ತವೆ.
ಈ ಗುರುವಾರವು ಶುಕ್ಲ ಪಕ್ಷದ ಮೊದಲ ಗುರುವಾರವಾಗಿದೆ. ಈ ಗುರುವಾರದಂದು ನೀವು ಉಪವಾಸ ಕೈಗೊಳ್ಳಬಹುದು. ಗುರುವಾರದ ಉಪವಾಸವು ಮಹಿಳೆಯರಿಗೆ ಸೀಮಿತ. ಈ ದಿನದಂದು ಉಪವಾಸ ಮಾಡಿದರೆ ಸಂಪತ್ತು ಹಾಗೂ ಸಮೃದ್ಧಿ ಸಿಗುವುದು. ಈ ಲೇಖನದಲ್ಲಿ ಗುರುವಾರ ನಡೆಸುವ ಉಪವಾಸದ ವೇಳೆ ಕೈಗೊಳ್ಳಬೇಕಾಗಿರುವಂತಹ ಪೂಜಾ ವಿಧಿವಿಧಾನಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಗುರುವಾರ ಬ್ರಹಸ್ಪತಿ ದೇವರನ್ನು ಪೂಜಿಸಲಾಗುವುದು. ಗುರು ಗ್ರಹದ ದೇವರೆಂದು ಇವರನ್ನು ಕರೆಯಲಾಗುತ್ತದೆ. ಇವರು ವಿಷ್ಣು ದೇವರ ಪ್ರತಿರೂಪ. ಇದರಿಂದ ವಿಷ್ಣು ದೇವರ ಮೂರ್ತಿ ಅಥವಾ ಬ್ರಹಸ್ಪತಿ ದೇವರ ಮೂರ್ತಿಗೆ ಪೂಜೆ ಮಾಡಬಹುದು.
Most Read: ಇಂತಹ ವಸ್ತುಗಳನ್ನು ಭಗವಾನ್ ಹನುಮಂತನಿಗೆ ಅರ್ಪಿಸಿ- ಆತ ಸಂತುಷ್ಟನಾಗುವನು
ಸೂರ್ಯ ಉದಯಿಸುವ ಮೊದಲು ಎದ್ದು ಸ್ನಾನ ಮಾಡಬೇಕು. ಈ ದಿನ ಕೂದಲು ಮತ್ತು ಬಟ್ಟೆ ತೊಳೆಯಬಾರದು. ಒಂದು ಪೂಜೆಯ ತಟ್ಟೆ ತಯಾರು ಮಾಡಿ. ಇದರಲ್ಲಿ ದೀಪ, ಬೇಳೆಕಾಳು, ಕಡಲೆಹಿಟ್ಟಿನಿಂದ ತಯಾರಿಸಿದ ಸಿಹಿತಿಂಡಿ ಮತ್ತು ಬಾಳೆಹಣ್ಣನ್ನು ಇಡಿ. ದಿನದಲ್ಲಿ ಒಂದು ಸಲ ಮಾತ್ರ ಊಟ ಮಾಡಬೇಕು. ಆದರೆ ಉಪ್ಪನ್ನು ಸೇವನೆ ಮಾಡಲೇಬಾರದು. ಬೇಳೆಕಾಳಿನಿಂದ ಮಾಡಿರುವಂತಹ ಹಳದಿ ಬಣ್ಣದ ಆಹಾರ ಮಾತ್ರ ಸೇವನೆ ಮಾಡಬೇಕು. ಇದಕ್ಕೆ ಉಪ್ಪು ಹಾಕಬಾರದು.
Most Read: ಗುರುವಾರ ವಿಷ್ಣುವಿಗೆ ಪೂಜೆ ಮಾಡಿ ಲಕ್ಷ್ಮೀ ದೇವಿಯನ್ನು ಮನೆಗೆ ಬರಮಾಡಿಕೊಳ್ಳಿ
ಗುರುವಾರದ ಉಪವಾಸಕ್ಕೆ ವ್ರತದ ಕಥೆ
ಒಂದು ಕಾಲದಲ್ಲಿ ತುಂಬಾ ಸಂಪತ್ತಿನಿಂದ ಕೂಡಿದ ಕುಟುಂಬವೊಂದಿತ್ತು. ಐಷಾರಾಮಿ ಜೀವನ ಸಾಗಿಸುತ್ತಿದ್ದ ಈ ಮನೆಯ ಮಹಿಳೆ ದಾನ ಮಾಡಲು ಮತ್ತು ಒಂದೇ ಒಂದು ಪೈಸೆ ಬೇರೆಯವರಿಗೆ ಕಷ್ಟಕ್ಕೆ ನೀಡುತ್ತಿರಲಿಲ್ಲ. ಒಂದು ಸಲ ಸನ್ಯಾಸಿಯೊಬ್ಬರು ಇವರ ಮನೆ ಬಾಗಿಲಿಗೆ ಬಂದು ದಾನ ಕೇಳುವರು. ಆದರೆ ತನ್ನ ಕೆಲಸದಲ್ಲಿ ನಿರತಳಾಗಿದ್ದ ಮಹಿಳೆಯು ಇದರ ಬಗ್ಗೆ ಗಮನಹರಿಸಲೇ ಇಲ್ಲ. ಸನ್ಯಾಸಿ ಮರುದಿನ ಬಂದರೂ ಇದೇ ನಡೆಯಿತು. ಮತ್ತೊಂದು ದಿನ ಬಂದು ದಾನ ಕೇಳಿದರು. ಆದರೆ ಮಹಿಳೆಯು ತನ್ನ ಮಗನಿಗೆ ಊಟ ಬಡಿಸುತ್ತಿದ್ದೇನೆ ಮತ್ತು ನನಗೆ ಸಮಯವಿಲ್ಲವೆಂದು ಹೇಳುವಳು. ನಾಳೆ ಬರುವಂತೆ ಆಕೆ ಹೇಳುವಳು. ಮೂರನೇ ಸಲ ಸನ್ಯಾಸಿಯು ಬಂದು ದಾನ ಕೇಳುವರು. ಈ ಸಲ ಕೂಡ ಮಹಿಳೆ ವ್ಯಸ್ತಳಿರುವಂತೆ ನಟಿಸುವಳು. ನಿನ್ನ ವ್ಯಸ್ತ ಬದುಕಿನಿಂದ ಶಾಶ್ವತ ಮುಕ್ತಿ ಸಿಕ್ಕಿದರೆ ಹೇಗಿರಬಹುದು ಎಂದು ಸನ್ಯಾಸಿಯು ಮಹಿಳೆಯಲ್ಲಿ ಕೇಳುವರು. ಇದು ನಡೆದರೆ ನಾನು ತುಂಬಾ ಸಂತೋಷಪಡುವೆನು ಎಂದು ಆಕೆ ಹೇಳುವಳು.
ಇದನ್ನು ಕೇಳಿದ ಸನ್ಯಾಸಿಯು ಆಕೆಗೆ ಕೆಲವೊಂದು ಸಲಹೆಗಳನ್ನು ನೀಡುವರು ಮತ್ತು ಇದರಿಂದ ಸಮಯ ಸಿಗುವುದು ಎಂದು ಹೇಳುವರು. ಸಲಹೆಗಳು ಹೀಗೆ ಇದ್ದವು...ಸೂರ್ಯ ಉದಯಿಸಿದ ಬಳಿಕ ಎದ್ದೇಳಬೇಕು ಮತ್ತು ಸ್ನಾನ ಮಾಡಬಾರದು, ಹಳದಿ ವಸ್ತ್ರ ಧರಿಸಬಾರದು, ಗುರುವಾರ ಕೂದಲು ತೊಳೆಯಬೇಕು, ಹಳದಿ ಮಣ್ಣಿನಿಂದ ನೆಲವನ್ನು ಸಾರಿಸಬಾರದು, ಗುರುವಾರ ಮನೆಯ ಪುರುಷರು ಕೂದಲು ಕತ್ತರಿಸಿಕೊಳ್ಳಬೇಕು ಮತ್ತು ಗುರುವಾರವೇ ಬಟ್ಟೆ ಒಗೆಯಬೇಕು. ಸೂರ್ಯ ಮುಳುಗಿದ ಬಳಿಕವಷ್ಟೇ ದೇವರಿಗೆ ದೀಪ ಹಚ್ಚಬೇಕು ಮತ್ತು ಅಡುಗೆಮನೆಯ ಹಿಂದುಗಡೆ ತಯಾರಿಸಿದ ಆಹಾರವನ್ನಿಡಬೇಕು.
ಸನ್ಯಾಸಿ ಹೇಳಿದ ಎಲ್ಲಾ ಸಲಹೆಗಳನ್ನು ಪಾಲಿಸಿದ ಮಹಿಳೆಯ ಮನೆಯ ಸಂಪತ್ತು ಕೆಲವೇ ವಾರಗಳಲ್ಲಿ ನೀರಿನಂತೆ ಕರಗಿ ಹೋಯಿತು ಮತ್ತು ತಿನ್ನಲು ಆಹಾರ ಕೂಡ ಇರಲಿಲ್ಲ. ಕೆಲವು ದಿನಗಳ ಬಳಿಕ ಸನ್ಯಾಸಿಯು ಮತ್ತೆ ಬಂದು ದಾನ ಕೇಳಿದರು. ಮಹಿಳೆಯ ಬಳಿಯಲ್ಲಿ ಬೇಕಾದಷ್ಟು ಸಮಯವಿತ್ತು. ಆದರೆ ದಾನ ಮಾಡಲು ಏನೂ ಇರಲಿಲ್ಲ. ದಾನ ಮಾಡಲು ಏನೂ ಇಲ್ಲದೆ ಇದ್ದ ಕಾರಣದಿಂದಾಗಿ ಆಕೆಗೆ ತನ್ನ ತಪ್ಪಿನ ಅರಿವಾಯಿತು ಮತ್ತು ಕ್ಷಮೆ ನೀಡುವಂತೆ ಕೇಳಿಕೊಂಡಳು.
Most Read: ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!
ತನ್ನ ಸಂಪತ್ತು ಹಾಗೂ ಸಮೃದ್ಧಿ ಮರಳಿ ಬರುವಂತೆ ಏನಾದರೂ ಪರಿಹಾರ ಸೂಚಿಸಬೇಕೆಂದು ಮಹಿಳೆಯು ಕೇಳಿಕೊಳ್ಳುವರು. ಈ ವೇಳೆ ಸನ್ಯಾಸಿಯು ಗುರುವಾರ ಬೇಗನೆ ಎದ್ದು, ಹಳದಿ ಮಣ್ಣು ಮತ್ತು ಸೆಗಣಿಯಿಂದ ನೆಲ ಸಾರಿಸಬೇಕು. ಸೂರ್ಯ ಮುಳುಗುವ ಹೊತ್ತಿಗೆ ದೇವರಿಗೆ ದೀಪ ಹಚ್ಚಬೇಕು ಮತ್ತು ಇದರ ಬಳಿಕವಲ್ಲ. ಹಳದಿ ಬಟ್ಟೆ ಧರಿಸಬೇಕು. ಈ ದಿನ ಮನೆಯ ಪುರುಷರು ಕೂದಲು ಅಥವಾ ಗಡ್ಡ ತೆಗೆಯಲೇಬಾರದು. ಗುರುವಾರದಂದು ಮಹಿಳೆಯರು ಕೂದಲು ತೊಳೆಯಬಾರದು. ಸನ್ಯಾಸಿಯು ಹೇಳಿದ ಪರಿಹಾರದಂತೆ ನಡೆದುಕೊಂಡ ಮಹಿಳೆಗೆ ಕೆಲವೇ ದಿನಗಳಲ್ಲಿ ತನ್ನ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಮರಳಿ ಬಂತು.
ಎರಡನೇ ಕಥೆ
ದೇವಲೋಕದಲ್ಲಿ ಇಂದ್ರನು ಒಂದು ದಿನ ಸಭೆಯೊಂದನ್ನು ಕರೆದಿದ್ದ. ಇದರಲ್ಲಿ ಎಲ್ಲಾ ದೇವದೇವತೆಗಳು ಮತ್ತು ಸನ್ಯಾಸಿಗಳು ಭಾಗವಹಿಸಿದ್ದರು. ಬೃಹಸ್ಪತಿ ದೇವರು ಬಂದಾಗ ಎಲ್ಲರು ಎದ್ದು ನಿಂತು ನಮಸ್ಕರಿಸುವರು. ಆದರೆ ಇಂದ್ರ ಮಾತ್ರ ಹಾಗೆ ಮಾಡುವುದಿಲ್ಲ. ಆತ ಅವರನ್ನು ತುಂಬಾ ಗೌರವಿಸುತ್ತಿದ್ದರೂ ಈ ಘಟನೆಯಿಂದ ಬೃಹಸ್ಪತಿ ಅವರಿಗೆ ತುಂಬಾ ಅವಮಾನವಾದಂತೆ ಆಗುತ್ತದೆ ಮತ್ತು ಸಭೆಗೆ ಹಾಜರಾಗದೆ ಹಿಂತಿರುಗುವರು. ಇಂದ್ರ ದೇವನು ಅವರಲ್ಲಿಗೆ ತೆರಳಿ ಕ್ಷಮೆ ಕೋರುವನು. ಆದರೆ ಯಾವುದೇ ಪ್ರಯೋಜವಾನವಾಗಲಿಲ್ಲ. ಇಂದ್ರ ಬರುತ್ತಾನೆಂದು ತಿಳಿದಿದ್ದ ಬೃಹಸ್ಪತಿ ಮೊದಲೇ ಅಲ್ಲಿಂದ ತೆರಳಿದ್ದರು.
Most Read:ಪ್ರತಿ ಗುರುವಾರದಂದು ಹೀಗೆ ಮಾಡಿ, ಜೀವನದಲ್ಲಿ ಸುಖ,ಶಾಂತಿ-ನೆಮ್ಮದಿ ಎಲ್ಲವೂ ದೊರೆಯುವುದು
ಅಸುರರ ನಾಯಕನಾಗಿದ್ದ ವೃಷ್ವರ್ಮ ಎಂಬಾತ ಈ ಪರಿಸ್ಥಿತಿಯ ಲಾಭ ಪಡೆಯಲು ಬಯಸುವನು. ಆತ ತುಂಬಾ ಬಲಿಷ್ಠನಾಗಿ ಇಂದ್ರನನ್ನು ಸೋಲಿಸುವನು. ಇಂದ್ರ ದೇವರು ಸೋಲಿನಿಂದ ಕಂಗೆಟ್ಟು ಬ್ರಹ್ಮದೇವರಲ್ಲಿ ಸಹಾಯ ಕೇಳುವರು. ಬ್ರಾಹ್ಮಣರ ಮಗನನ್ನು ತನ್ನ ಗುರುವೆಂದು ಸ್ವೀಕರಿಸಬೇಕು. ಯಾಕೆಂದರೆ ಬೃಹಸ್ಪತಿ ದೇವರು ನೆರವು ನೀಡುವುದಿಲ್ಲ. ಬ್ರಾಹ್ಮಣರ ಮಗ ವಿಶ್ವರೂಪನನ್ನು ಬ್ರಹ್ಮದೇವರು ತನ್ನ ಗುರುವಾಗಿ ಸ್ವೀಕರಿಸಿದರು.
ರಾಕ್ಷಸರಿಗೆ ಈ ಬಗ್ಗೆಯೂ ತಿಳಿಯುತ್ತದೆ ಮತ್ತು ವಿಶ್ವರೂಪ ಬ್ರಾಹ್ಮಣ ಮಾಡುವಂತಹ ಯಜ್ಞಕ್ಕೆ ಅಡ್ಡಿ ಉಂಟು ಮಾಡುವರು. ಇದರಿಂದಾಗಿ ಪವಿತ್ರ ಯಜ್ಞದಿಂದ ದೇವರಿಗೆ ಯಾವುದೇ ಲಾಭವಾಗುವುದಿಲ್ಲ. ಅಂತಿಮವಾಗಿ ಬ್ರಹ್ಮ ದೇವರು ಯಾವುದೇ ಉಪಾಯವಿಲ್ಲದೆ ಬೃಹಸ್ಪತಿ ದೇವರ ಬಳಿಗೆ ಬರುವರು. ಇದರ ಬಳಿಕ ಬೃಹಸ್ಪತಿ ದೇವರು ಇಂದ್ರ ದೇವರನ್ನು ಕ್ಷಮಿಸುವರು ಮತ್ತು ಎಲ್ಲಾ ಸಂಕಷ್ಟದಿಂದ ಪಾರು ಮಾಡುವರು. ಇದರ ಬಳಿಕ ದೇವಲೋಕದಲ್ಲಿ ಮತ್ತೆ ಶಾಂತಿ ನೆಲೆನಿಲ್ಲುವುದು.