For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021 ಪೂಜಾ ವಿಧಿ: ದುರ್ಗೆಗೆ ನಿತ್ಯ ಸರಳ ಪೂಜಾ ವಿಧಿವಿಧಾನ ಹೀಗಿರಲಿ

|

ಹಿಂದೂ ಸಂಪ್ರದಾಯದಲ್ಲಿ ಬಹಳ ಬಹಳ ಧಾರ್ಮಿಕ ಮತ್ತು ಶ್ರದ್ಧಾಭಕ್ತಿಯಿಂದ ಮಾಡುವ ಅತ್ಯಂತ ಶುಭ ಪೂಜೆ ನವರಾತ್ರಿ. 2021ನೇ ಸಾಲಿನಲ್ಲಿ ಅಕ್ಟೋಬರ್‌ 7ರಿಂದ ಅಕ್ಟೋಬರ್‌ 14ರವರೆಗೆ ಆಚರಿಸಲಾಗುತ್ತಿದೆ, 15ರಂದು ವಿಜಯ ದಶಮಿಯನ್ನು ಆಚರಿಸಲಾಗುತ್ತಿದೆ.

Navratri Pooja Vidhi: How to Do Navratri Pooja at Home in Kannada

ವಿಜಯ ದೇವತೆಗೆ ನವರಾತ್ರಿಯ ಪ್ರತಿ ದಿನವೂ ವಿವಿಧ ಪ್ರಕಾರ, ಸಂಪ್ರದಾಯಗಳಲ್ಲಿ ಪೂಜೆಗಳನ್ನು ನೆರವೇರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಪೂಜಾ ವಿಧಾನಗಳು ಹೇಗೆಲ್ಲಾ ಇರುತ್ತದೆ, ಸರಳವಾಗಿ ಹೇಗೆ ಪೂಜೆ ಮಾಡಬೇಕು ಎಂಬುದನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ನವರಾತ್ರಿಯ ವೇಳೆ ಪೂಜಿಸುವ ದುರ್ಗೆಯ ಒಂಬತ್ತು ಅವತಾರಗಳು ಹಾಗೂ ದಿನಗಳು

ನವರಾತ್ರಿ ದಿನಗಳು

2021 ದಿನಾಂಕ ಪೂಜಿಸುವ ದೇವತೆ
ದಿನ - 1 ಅಕ್ಟೋಬರ್‌ 07 ಶೈಲಪುತ್ರಿ
ದಿನ - 2 ಅಕ್ಟೋಬರ್‌ 08 ಬ್ರಹ್ಮಚಾರಿಣಿ
ದಿನ- 3 ಅಕ್ಟೋಬರ್‌ 09 ಚಂದ್ರಘಟ
ದಿನ - 4 ಅಕ್ಟೋಬರ್‌ 10 ಕುಶ್ಮಾಂಡ
ದಿನ - 5 ಅಕ್ಟೋಬರ್‌ 11 ಸ್ಕಂದಮಾತ
ದಿನ - 6 ಅಕ್ಟೋಬರ್‌ 12 ಕಾತ್ಯಾಯನಿ
ದಿನ - 7 ಅಕ್ಟೋಬರ್‌ 13 ಕಾಳರಾತ್ರಿ ಮಹಾಮಾಯ
ದಿನ - 8 ಅಕ್ಟೋಬರ್‌ 14 ಮಹಾಗೌರಿ
ದಿನ - 9 ಅಕ್ಟೋಬರ್‌ 15 ಸಿದ್ಧಿಧಾತ್ರಿ
ಪೂಜಾ ಸಿದ್ಧತೆಗಳು

ಪೂಜಾ ಸಿದ್ಧತೆಗಳು

ದುರ್ಗೆ ಸಹಾನುಭೂತಿ, ಬುದ್ಧಿವಂತಿಕೆ, ವೈಭವ ಮತ್ತು ಶಕ್ತಿಯ ಸಾಕಾರವಾಗಿದ್ದಾಳೆ. ಅವಳು ಭಕ್ತರಿಗೆ ಸಮೃದ್ಧಿ ಮತ್ತು ಧೈರ್ಯದಿಂದ ಆಶೀರ್ವದಿಸುತ್ತಾಳೆ. ಅವಳನ್ನು ಪೂಜಿಸುವ ಮೊದಲ ದಿನ ಮನೆಯಲ್ಲಿ ಪವಿತ್ರವಾದ ಪೂಜಾ ಕಲಶ ಸ್ಥಾಪನೆ ಮಾಡಬೇಕು.

ಕೆಂಪು ಬಟ್ಟೆಯ ತುಂಡಿನ ಮೇಲೆ ದುರ್ಗೆಯ ಚಿತ್ರ ಅಥವಾ ಮೂರ್ತಿಯನ್ನು ಇರಿಸಿ. ದೇವಿಯ ಮುಂದೆ ಕೆಂಪು ಮಣ್ಣನ್ನು ಹರಡಿ ಮತ್ತು ಸ್ವಲ್ಪ ನೀರು ಸಿಂಪಡಿಸಿ. ಅದರ ಮೇಲೆ ಬಾರ್ಲಿ ಬೀಜಗಳನ್ನು ಹಾಕಿ ಅದರ ಮಧ್ಯದಲ್ಲಿ ಒಂದು ಮಣ್ಣಿನ ಕಳಸ ಇಡಿ. ಕಳಸದಲ್ಲಿ ಗಂಗಾ ಜಲಹಾಕುವುದನ್ನು ಮರೆಯಬೇಡಿ. ನಂತರ ಕಳಸಕ್ಕೆ ಮಾವಿನ ಎಲೆ ಅಥವಾ ವೀಳ್ಯದೆಲೆ ಹಾಕಿ ಸಿಂಗರಿಸಿ ಅದರ ಮೇಲೆ ತೆಂಗಿನಕಾಯಿ ಇಡಿ.

ನವರಾತ್ರಿ ದೈನಂದಿನ ಪೂಜಾ ವಿಧಾನ

ನವರಾತ್ರಿ ದೈನಂದಿನ ಪೂಜಾ ವಿಧಾನ

ದೀಪ ಮತ್ತು ಧೂಪದ್ರವ್ಯಗಳನ್ನು ಬೆಳಗಿಸಿ. ದುರ್ಗೆಗೆ ಪ್ರಿಯವಾದ ಕೆಲವು ಹೂವುಗಳನ್ನು ಅರ್ಪಿಸಿ ಮತ್ತು ವಿಗ್ರಹವನ್ನು ಸಿಂಧೂರ, ಚಂದನ ಮತ್ತು ಅರಿಶಿನದಿಂದ ಅಲಂಕರಿಸಿ. ಪೂಜೆಯ ಸಮಯದಲ್ಲಿ ಪ್ರತಿದಿನ, ನೀವು ಬಿತ್ತಿದ ಬಾರ್ಲಿ ಬೀಜಗಳಿಗೆ ಸ್ವಲ್ಪ ನೀರು ಸಿಂಪಡಿಸಿ. ಪೂಜೆಗೆ ನೀವು ವಿಶೇಷವಾಗಿ ಸಿದ್ಧಪಡಿಸಿದ ಪ್ರಸಾದ, ನೈವೇದ್ಯವನ್ನು ಮಡಿಯಿಂದ ಇಟ್ಟು ಪೂಜಿಸಿ, ಆರತಿ ಮಾಡಿ. ಆಹ್ವಾನಿತರಿಗೆ ಮತ್ತು ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ. ನವರಾತ್ರಿಯ ಒಂಬತ್ತು ದಿನ ಪ್ರತಿದಿನ ಈ ಪೂಜೆಯನ್ನು ಮಾಡಿ.

ಎಂಟನೇ ದಿನದ ಪೂಜೆ

ಎಂಟನೇ ದಿನದ ಪೂಜೆ

ನವರಾತ್ರಿಯ ಎಲ್ಲಾ ಒಂಬತ್ತು ದಿನಗಳು ಪ್ರತಿ ದಿನ ಮೇಲೆ ಹೇಳಿದಂತೆ ಪೂಜಿಸಿ ಮತ್ತು ಆರಾಧಿಸಿ. ನವರಾತ್ರಿ ಪೂಜೆಯ ಎಂಟನೇ ದಿನದಂದು ಮದುವೆ ಆಗದ ಒಂಬತ್ತು ಯುವತಿಯರನ್ನು ಮನೆಗೆ ಆಹ್ವಾನಿಸಿ, ಅವರಿಗೆ ವಿಶೇಷವಾದ ಭಕ್ಷ್ಯಗಳನ್ನು ಇಟ್ಟು, ಉಡುಗೊರೆ ಹಾಗೂ ತಾಂಬೂಲ ನೀಡಿ ಸತ್ಕರಿಸಬೇಕು. ಅವರನ್ನು ದುರ್ಗಾದ ಒಂಬತ್ತು ರೂಪಗಳು ಎಂದು ಪರಿಗಣಿಸಲಾಗುತ್ತದೆ.

ಹತ್ತನೇ ದಿನ ವಿಸರ್ಜನೆ

ಹತ್ತನೇ ದಿನ ವಿಸರ್ಜನೆ

ನವರಾತ್ರಿ ಪೂಜೆಯ ಒಂಬತ್ತು ದಿನಗಳ ನಂತರ ವಿಸರ್ಜನಾ ದಿನ ಎಂದು ಹೇಳಲಾಗುತ್ತದೆ. ದುರ್ಗೆಯನ್ನು ಹತ್ತನೇ ದಿನ ವಿಸರ್ಜನೆ ಮೂಲಕ ಕಳುಹಿಸಿಕೊಡಲಾಗುತ್ತದೆ. ನವರಾತ್ರಿಯ ಒಂಬತ್ತು ಮಾಡಿದಂತೆ ನಿಯಮಿತ ಪೂಜೆಯನ್ನು ಮಾಡಿ, ಪೂಜೆಯ ನಂತರ ಮನೆಯ ಎಲ್ಲಾ ಕೋಣೆಗಳಲ್ಲೂ ಕಳಸದ ನೀರನ್ನು ಸಿಂಪಡಿಸಿ. ಮಣ್ಣಿನಲ್ಲಿ ಹಾಕಿದ್ದ ಬಾರ್ಲಿ ಬೀಜಗಳು ಹತ್ತು ದಿನಗಳಲ್ಲಿ ಚೆನ್ನಾಗಿ ಬೆಳೆದಿದ್ದು, ಅದನ್ನು ತೋಟದಲ್ಲಿ ಮರದ ಕೆಳಗೆ ಇರಿಸಿ.

ನವರಾತ್ರಿ ಪೂಜೆಯ ಪ್ರಯೋಜನಗಳು

ನವರಾತ್ರಿ ಪೂಜೆಯ ಪ್ರಯೋಜನಗಳು

ನವರಾತ್ರಿ ಪೂಜೆಯು ಮನೆಯವರಿಗೆ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ದುರ್ಗಾ ಮಾತೆ ಸಂಕಷ್ಟಗಳನ್ನು ನಿವಾರಿಸಿ, ಕಷ್ಟಗಳನ್ನು ದೂರಮಾಡಿ, ಕುಟುಂಬಕ್ಕೆ ಆರೋಗ್ಯ, ಸಂಪತ್ತು, ಬುದ್ಧಿವಂತಿಕೆ ಮತ್ತು ಯಶಸ್ಸನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.

English summary

Navratri 2021 Pooja Vidhi: How to Do Navratri Pooja at Home in Kannada

Here we are discussing about Navratri Pooja Vidhi: How to Do Navratri Pooja at Home in Kannada. Durga, the goddess of victory is worshipped in nine forms. Each day of Navratri is dedicated to worshipping one of these forms. Read more.
X
Desktop Bottom Promotion