For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಸೃಷ್ಟಿಕರ್ತ ಬ್ರಹ್ಮನಿಗೆ ಏಕೆ ಪೂಜೆ ಸಲ್ಲಿಸುತ್ತಿಲ್ಲ?

By Deepu
|

ನಮಗೆಲ್ಲಾ ತಿಳಿದಿರುವಂತೆ ಬ್ರಹ್ಮನು ಸೃಷ್ಟಿಕರ್ತ ಎಂಬ ಬಿರುದಿಗೆ ಭಾಜನರಾಗಿದ್ದಾರೆ. ಸುಂದರವಾದ ಹುಡುಗಿಯನ್ನು ನೀವು ನೋಡಿದಾಗ ನಿಮ್ಮ ಮನದಲ್ಲಿ ಸುಳಿಯುವ ಮಾತು ಬಹುಶಃ ಬ್ರಹ್ಮ ದೇವರು ಹೆಚ್ಚಿನ ಸಮಯವನ್ನು ತೆಗೆದುಕೊಂಡು ಈ ಹುಡುಗಿಯನ್ನು ಸೃಷ್ಟಿಸಿದ್ದಾರೆ ಎಂದಾಗಿರುತ್ತದೆ. ಹೀಗೆ ನಮ್ಮ ಬಾಹ್ಯ ಸೌಂದರ್ಯಕ್ಕೆ ಕಾರಣೀಕರ್ತರಾದವರು ಬ್ರಹ್ಮ ಎಂಬ ಮಾತು ಹಿಂದಿನಿಂದಲೂ ಕೇಳಿಬರುತ್ತಿದೆ. ಅಷ್ಟಲ್ಲದೆ ಪುರಾಣಗಳಲ್ಲಿ ಬರುವ ಹೆಚ್ಚಿನ ಸೃಷ್ಟಿಕಾರ್ಯ ಅಂಶಗಳನ್ನು ಬ್ರಹ್ಮನಿಗೆ ಹೋಲಿಸಿ ವ್ಯಾಖ್ಯಾನಿಸಲಾಗಿದೆ.

brahma

ಆದರೆ ನಮ್ಮಲ್ಲಿ ಎಲ್ಲಾ ದೇವತೆಗಳಿಗೂ ಪೂಜೆಯನ್ನು ನಡೆಸಿದರೂ ಸೃಷ್ಟಿಕರ್ತ ಬ್ರಹ್ಮನಿಗೆ ಮಾತ್ರ ಯಾವ ಪೂಜೆಯನ್ನು ಮಾಡುತ್ತಿಲ್ಲ. ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ಬ್ರಹ್ಮನಿಗೆ ವಿಷ್ಣು ಮತ್ತು ಶಿವನಿಗಿರುವಂತಹ ಗೌರವವಿಲ್ಲ ಪೂಜೆ ಪುನಸ್ಕಾರಗಳಿಲ್ಲ. ಬ್ರಹ್ಮನಿಗೆ ಮೀಸಲಾಗಿರುವ ಯಾವುದೇ ದೇವಸ್ಥಾನವಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮ್ಮ ಮನದಲ್ಲಿ ಮೂಡಿರುವ ಪ್ರಶ್ನೆಯಾಗಿದ್ದರೆ ಇಂದಿನ ಲೇಖನದಲ್ಲಿ ಇದಕ್ಕೆ ಸೂಕ್ತ ಕಾರಣವನ್ನು ನಾವು ನೀಡುತ್ತಿದ್ದೇವೆ. ಬ್ರಹ್ಮನಿಗೆ ಪೂಜೆಯನ್ನು ಏಕೆ ನೀಡುತ್ತಿಲ್ಲ ಎಂಬುದಕ್ಕೆ ಪುರಾಣಗಳಲ್ಲಿ ಕಥೆ ಇದ್ದು ಆ ಕಥೆ ಏನು ಎಂಬುದನ್ನು ನೋಡೋಣ...

ದಂತ ಕಥೆ 1
ವಿಶ್ವವನ್ನು ಸೃಷ್ಟಿಸುವುದರ ಜೊತೆಗೆ ಬ್ರಹ್ಮನು ತನ್ನದೇ ಪುತ್ರಿ ಶತ್ರುಪನನ್ನು ಸೃಷ್ಟಿಸುತ್ತಾರೆ. ಸರಸ್ವತಿ ಎಂಬ ಹೆಸರೂ ಇವರಿಗೆ ಇದೆ. ಆಕೆ ತುಂಬಾ ಸುಂದರಿಯಾಗಿದ್ದರು ಮತ್ತು ಇದರಿಂದ ಆಕೆಯ ಮೇಲೆ ನೋಟವಿಡಲು ಬ್ರಹ್ಮನು ಆರಂಭಿಸುತ್ತಾರೆ. ಬ್ರಹ್ಮನ ಈ ಉದ್ಧೇಶವು ಶತ್ರುಪನಿಗೆ ಅಷ್ಟೊಂದು ಸೂಕ್ತವೆನಿಸುವುದಿಲ್ಲ. ಆತನಿಂದ ತಪ್ಪಿಸಿಕೊಳ್ಳಲು ಆಕೆ ಭೂಮಿಗೆ ಬೀಳುತ್ತಾಳೆ. ಅಲ್ಲಿಂದ ಕೂಡ ಆಕೆಗೆ ರಕ್ಷಣೆ ದೊರೆಯುವುದಿಲ್ಲ ಬ್ರಹ್ಮ ತನ್ನ ಐದು ತಲೆಯನ್ನು ಬಳಸಿಕೊಂಡು ಆಕೆಯ ಮೇಲೆ ಕಣ್ಣಿಡುತ್ತಾರೆ. ಆದರೆ ಕೆಲವೊಂದು ಅಂಶಗಳ ಪ್ರಕಾರ ಬ್ರಹ್ಮನ ಈ ಐದನೆಯ ತಲೆಯನ್ನು ಶಿವನು ಕತ್ತರಿಸಿದ್ದಾರೆ ಎಂಬ ಮಾತೂ ಇದೆ. ಶತ್ರುಪನು ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಸಂಚರಿಸುತ್ತಲೇ ಇರುತ್ತಾರೆ. ತನ್ನನ್ನು ಸೃಷ್ಟಿಸಿದವನ್ನು ತಂದೆಯ ಸ್ಥಾನದಲ್ಲಿ ಆಕೆ ನೋಡುತ್ತಾರೆ. ಆದರೆ ಬ್ರಹ್ಮನ ವಿಕಾರ ಕಾಮನೆ ಬೇರೆಯಾಗಿರುತ್ತದೆ. ಬ್ರಹ್ಮನ ವರ್ತನೆಯಿಂದ ಬೇಸತ್ತ ಸರಸ್ವತಿಯು ಬ್ರಹ್ಮನಿಗೆ ಪೂಜೆ ಸಲ್ಲಲೇಬಾರದು ಎಂದು ಶಪಿಸುತ್ತಾರೆ.

ದಂತ ಕಥೆ 2
ಒಮ್ಮೆ ವಿಷ್ಣು ಮತ್ತು ಬ್ರಹ್ಮನಿಗೆ ತಮ್ಮ ನಡುವೆ ಯಾರು ಶ್ರೇಷ್ಠ ಎಂಬ ಬಗ್ಗೆ ಚರ್ಚೆಯಾಗುತ್ತಿರುತ್ತದೆ. ಚರ್ಚೆ ಮುಂದುವರಿದು ತಮ್ಮ ನಡುವೆ ತರ್ಕ ಬೇಡ ಶಿವನನ್ನೇ ಈ ಬಗ್ಗೆ ಕೇಳೋಣವೆಂದು ಅವರಿಬ್ಬರು ಶಿವನನ್ನು ತಲುಪುತ್ತಾರೆ. ಶಿವನ ತಲೆಯನ್ನು ಯಾರು ಮೊದಲು ನೋಡುತ್ತಾರೋ ಅವರೇ ಶ್ರೇಷ್ಠ ಎಂಬುದಾಗಿ ಶಿವನು ತಿಳಿಸುತ್ತಾರೆ. ಇದಕ್ಕಾಗಿ ಶಿವನು ಲಿಂಗ ರೂಪವನ್ನು ಧರಿಸುತ್ತಾರೆ. ಮತ್ತು ವಿಶ್ವವನ್ನೂ ಮೀರಿ ಬೆಳೆಯುತ್ತಾರೆ.

ಇದರ ಆರಂಭವನ್ನು ಅರಿಯುವುದು ಅಷ್ಟು ಸುಲಭವಲ್ಲ ಎಂಬುದು ಬ್ರಹ್ಮ ಮತ್ತು ವಿಷ್ಣುವಿಗೆ ತಿಳಿಯುತ್ತದೆ. ವಿಷ್ಣುವು ಬುದ್ಧಿವಂತನಾಗಿದ್ದು ಶಿವನನ್ನು ಪ್ರಾರ್ಥಿಸಿ ಅವರ ಪಾದಕ್ಕೆ ಎರಗಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಅವರನ್ನು ಮೇಲಕ್ಕೆತ್ತಲು ಶಿವನು ತಲೆಬಾಗುತ್ತಾರೆ. ಹೀಗೆ ವಿ‍ಷ್ಣುವು ಪಂದ್ಯದಲ್ಲಿ ಗೆಲ್ಲುತ್ತಾರೆ. ಆದರೆ ಬ್ರಹ್ಮನು ಕುಟಿಲ ಮಾರ್ಗದಿಂದ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಳ್ಳಲು ಬಯಸುತ್ತಾರೆ. ಕೇತಕಿ ಹೂವಿಗೆ ತನಗೆ ಸಹಾಯ ಮಾಡುವಂತೆ ಬ್ರಹ್ಮನು ಕೇಳಿಕೊಳ್ಳುತ್ತಾರೆ.

ತಾನು ಶಿವನ ತಲೆಯನ್ನು ಕಂಡಿದ್ದೇನೆಂದು ಹೂವಿಗೆ ಸುಳ್ಳು ಹೇಳುವಂತೆ ಬ್ರಹ್ಮನು ಕೇಳಿಕೊಳ್ಳುತ್ತಾರೆ. ಹೀಗೆಯೇ ಹೂವು ಶಿವನಲ್ಲಿ ಸುಳ್ಳು ಹೇಳುತ್ತದೆ. ಸುಳ್ಳಿನಿಂದ ಕ್ರೋಧಗೊಂಡ ಶಿವನು ಹೂವು ಮತ್ತು ಬ್ರಹ್ಮನನ್ನು ಶಪಿಸುತ್ತಾರೆ. ಬ್ರಹ್ಮನನ್ನು ಯಾರೂ ಪೂಜಿಸಬಾರದು, ಅವರಿಗೆ ಯಾರೂ ಮನ್ನಣೆ ನೀಡಬಾರದು ಎಂದಾಗಿರುತ್ತದೆ. ಅಂತೆಯೇ ಕೇತಕಿ ಹೂವನ್ನು ಯಾರೂ ಪೂಜೆಗೆ ಬಳಸಬಾರದು ಎಂದಾಗಿ ಶಾಪವನ್ನು ನೀಡುತ್ತಾರೆ.

ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

ಈ ಕಥೆಗಳು ಬ್ರಹ್ಮನಿಗೆ ಏಕೆ ಪೂಜೆಯನ್ನು ಸಲ್ಲಿಸುಲಾಗುತ್ತಿಲ್ಲ ಎಂಬುದನ್ನು ತಿಳಿಸುತ್ತಿದೆ. ಸೃಷ್ಟಿಕರ್ತನಾಗಿದ್ದರೂ ಬ್ರಹ್ಮನಿಗೆ ಮನ್ನಣೆಯನ್ನು ನೀಡುವುದಿಲ್ಲ. ವಿಷ್ಣುವು ಕಾಪಾಡುವವರು ಮತ್ತು ಶಿವನು ನಾಶ ಮಾಡುವವರು ಹೀಗೆ ಇವರಿಬ್ಬರೂ ಪ್ರಸ್ತುತತೆ ಮತ್ತು ಭವಿಷ್ಯವನ್ನು ಸಂಕೇತಿಸುತ್ತಿದ್ದಾರೆ. ಜನರು ಹಿಂದಿನ ಅಂಶಕ್ಕಿಂತಲೂ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ ಮನ್ನಣೆಯನ್ನು ನೀಡುತ್ತಾರೆ. ಇದರಿಂದಾಗಿ ಬ್ರಹ್ಮ ಕೂಡ ತಿರಸ್ಕಾರಕ್ಕೆ ಒಳಗಾಗಿದ್ದಾರೆ.

English summary

mythological reasons why brahma is not worshipped

Brahma is also the originator of the four Vedas, which are dear to Hinduism. All of His creations are remembered but not Him. There is definitely a reason behind such an approach to Brahma and the mythological side of it is discussed here. These legends will tell you why.
X
Desktop Bottom Promotion