For Quick Alerts
ALLOW NOTIFICATIONS  
For Daily Alerts

ಶಿವರಾತ್ರಿಯಂದು ಈ ಮಂತ್ರಗಳನ್ನು ಪಠಿಸಿದರೆ ತುಂಬಾ ಒಳ್ಳೆಯದು

|

ಪ್ರತಿ ವರ್ಷದಂತೆ ಈ ವರ್ಷವೂ ಮತ್ತೆ ಶಿವರಾತ್ರಿ ಹಬ್ಬ ಸನಿಹಿಸುತ್ತಿದೆ. ಶಿವನನ್ನು ಆರಾಧಿಸುವವರಿಗೆ ಇದೊಂದು ಪುಣ್ಯದಿನ. ಹಿಂದೂಗಳಿಗೆ ಶಿವರಾತ್ರಿ ಪವಿತ್ರ ಹಬ್ಬಗಳಲ್ಲೊಂದು. ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಶಿವ ಬೇಡಿದ ವರವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಅಚಲವಾಗಿದೆ.

ಹೀಗೆ ರಾತ್ರಿ ಪೂರ್ತಿ ಜಾಗರಣೆ ಮಾಡುವಾಗ ಶಿವನ ಸ್ತೋತ್ರಗಳು, ಮಂತ್ರಗಳು ಮತ್ತು ಭಜನೆಗಳಿಂದ ಆತನನ್ನು ಹಾಡಿ ಹೊಗಳಲಾಗುತ್ತದೆ.ಹಾಗಾದ್ರೆ ಯಾವೆಲ್ಲಾ ಮಂತ್ರಗಳು ಶಿವರಾತ್ರಿಯ ದಿನ ಹೇಳಿದರೆ ಶ್ರೇಷ್ಟ ಎಂಬ ಬಗ್ಗೆ ಸಣ್ಣದೊಂದು ಮಾಹಿತಿಯನ್ನು ನಾವಿಲ್ಲಿ ನಿಮಗೆ ಒದಗಿಸುತ್ತಿದ್ದೇವೆ.

ಶಿವ ಅಷ್ಟೋತ್ತರ

ಶಿವ ಅಷ್ಟೋತ್ತರ

108 ಬಾರಿ ಶಿವನ ವಿಭಿನ್ನ ಹೆಸರುಗಳ ಗುಚ್ಛವಿದು. ಅಷ್ಟೋತ್ತರಗಳ ಪುಸ್ತಕದಲ್ಲಿ ಶಿವ ಅಷ್ಟೋತ್ತರವೂ ಇರುತ್ತದೆ. ನೀವು ಅಷ್ಟೋತ್ತರದ ಪುಸ್ತಕವನ್ನು ಕೊಂಡುಕೊಂಡಲ್ಲಿ ಶಿವರಾತ್ರಿಯಂದು ಶಿವನ ಅಷ್ಟೋತ್ತರ ಫಠಿಸಬಹುದು. ಓಂ ನಮಃಗಳ ಈ ಅಷ್ಟೋತ್ತರವನ್ನು ಪಠಿಸುವುದು ಶಿವರಾತ್ರಿಯ ದಿನ ಬಹಳ ಶ್ರೇಷ್ಠ.

ಶಿವ ಸಹಸ್ರನಾಮಾವಳಿ

ಶಿವ ಸಹಸ್ರನಾಮಾವಳಿ

ಸಾವಿರ ಬಾರಿ ಶಿವನನ್ನು ಆರಾಧಿಸುವುದಕ್ಕೆ ಶಿವ ಸಹಸ್ರನಾಮಾವಳಿ ಪಠಣ ಬಹಳ ಒಳ್ಳೆಯದು. ಶಿವ ಸಹಸ್ರನಾಮಾವಳಿ ಪುಸ್ತಕ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಶಿವನ ಸಹಸ್ರ ಹೆಸರುಗಳು ಇದರಲ್ಲಿದೆ.

ನಮಕ ಚಮಕ

ನಮಕ ಚಮಕ

ಹೆಚ್ಚಿನವರು ನಮಕ ಚಮಕವನ್ನು ಯುಟ್ಯೂಬ್ ನಿಂದ ಡೌನ್ ಲೋಡ್ ಮಾಡಿಕೊಂಡಿರುತ್ತಾರೆ. ಆಗಾಗ ಕೇಳಿಸಿಕೊಳ್ಳುವ ಹವ್ಯಾಸವನ್ನು ಹೊಂದಿರುತ್ತಾರೆ. ನಮಕ ಮತ್ತು ಚಮಕವೂ ಕೂಡ ಶಿವನಿಗೆ ಸಂಬಂಧಿಸಿದ ಸ್ತೋತ್ರಮಂಜರಿಯಾಗಿದ್ದು ಶಿವರಾತ್ರಿಯ ದಿನ ಪಠಿಸುವುದು ಬಹಳ ಶ್ರೇಷ್ಟ.

ರುದ್ರ

ರುದ್ರ

ಶಿವರಾತ್ರಿಯ ದಿನ ಜಾಗರಣೆಯ ಸಂದರ್ಬದಲ್ಲಿ ಓದಬಹುದಾದ ಮತ್ತೊಂದು ಪ್ರಮುಖ ಮಂತ್ರಗಳಲ್ಲಿ ರುದ್ರವೂ ಕೂಡ ಸೇರಿದೆ. ರುದ್ರವನ್ನು ಪಠಿಸುವುದರಿಂದಾಗಿ ಶಿವನ ಕೃಪೆಗೆ ಪಾತ್ರರಾಗಲು ಸಾಧ್ಯ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ

ಸಾರ್ವಕಾಲಿಕವಾಗಿ ಪ್ರಚಲಿತದಲ್ಲಿರುವ ಮತ್ತು ಎಲ್ಲರಿಗೂ ಅಚ್ಚುನೆಚ್ಚಿನ ಶಿವನ ಮಂತ್ರಗಳಲ್ಲಿ ಇದಕ್ಕೆ ವಿಶೇಷ ಸ್ಥಾನಮಾನ. ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ ನಿರ್ಮಲ ಭಾಷಿತ ಶೋಭಿತ ಲಿಂಗಂ ಅನ್ನುವ ಹಾಡು ಶಿವರಾತ್ರಿಯ ದಿನ ಭಜಿಸಿದರೆ ಖಂಡಿತ ಪುಣ್ಯ ಪ್ರಾಪ್ತಿಯಾಗುವುದರಲ್ಲಿ ಎರಡು ಮಾತಿಲ್ಲ.

ಭಜನೆ

ಭಜನೆ

ಶಿವನ ಹಾಡುಗಳು ಹತ್ತುಹಲವು ಇದೆ. ಒಂದು ದಳದ ಕಮಲದಲ್ಲಿ ಅರಳಿ ನಿಂತ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನುತ್ತಾ 108 ಸಂಖ್ಯೆಯವರೆಗೆ ಶಿವನನ್ನು ಭಜಿಸುವುದು ರಾತ್ರಿಯ ಜಾಗರಣೆಯ ಸಂದರ್ಬದಲ್ಲಿ ಪ್ರಚಲಿತದಲ್ಲಿರುವ ಪ್ರಮುಖ ಭಜನೆಗಳಲ್ಲಿ ಒಂದೆನಿಸಿದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇದ್ಯಾವುದೇ ಮಂತ್ರ ಪಠಣೆ ಅಸಾಧ್ಯವಾಗಿದ್ದಲ್ಲಿ ಅಥವಾ ಉಚ್ಛರಿಸುವುದು ಕಷ್ಟವೆನಿಸಿದ್ದಲ್ಲಿ ಓಂ ನಮಃ ಶಿವಾಯ ಅನ್ನುವ ಬೀಜಮಂತ್ರವೇ ಶಿವನಿಗೆ ಶ್ರೇಷ್ಟವೆನಿಸುತ್ತದೆ. ನಿಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಓಂ ನಮಃ ಶಿವಾಯವನ್ನು ಪಠಿಸುವುದು ಸೂಕ್ತ. ಶಿವನ ಆರಾಧನೆಯಲ್ಲಿ ಓಂ ನಮಃ ಶಿವಾಯ ಎನ್ನುವ ಬೀಜಮಂತ್ರಕ್ಕೆ ವಿಶೇಷ ಶಕ್ತಿ ಇದೆ. ರಾವಣ ಕೂಡ ಶಿವನ ಆತ್ಮಲಿಂಗ ಪಡೆಯುವುದಕ್ಕಾಗಿ ಇದೇ ಬೀಜಮಂತ್ರವನ್ನು ಪಠಿಸಿದ್ದು. ಓಂ ನಮಃ ಶಿವಾಯವನ್ನು ಭಕ್ತಿಯಿಂದ ಪಠಿಸಿದರೆ ಶಿವ ಒಲಿಯುತ್ತಾನೆ ಎಂಬ ನಂಬಿಕೆ ಅಚಲವಾಗಿದೆ.

English summary

Most Powerful Mantras To Chant On Maha Shivaratri

On shivaratri if you chant shiva mantra you will get more benefits. here we have given what are the powerful mantra to chant on shivaratri.
Story first published: Thursday, February 20, 2020, 17:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X