For Quick Alerts
ALLOW NOTIFICATIONS  
For Daily Alerts

  ಇವರೇ ನೋಡಿ, 'ಮಹಾಭಾರತ'ದಲ್ಲಿ ವರ್ಣಿಸಲಾದ ಸುರಸುಂದರಿಯರು!

  By Jaya Subramanya
  |

  ಹೆಣ್ಣು ಸಂಸಾರದ ಕಣ್ಣು ಅಂತೆಯೇ ನಾರಿ ಮುನಿದರೆ ಮಾರಿಯೂ ಆಗುತ್ತಾಳೆ ಎಂಬುದಕ್ಕೆ ಪುರಾಣ ಕಾಲದಿಂದಲೂ ಅನೇಕ ಸಾಕ್ಷಿಗಳು ಇದನ್ನು ಸಾಬೀತುಪಡಿಸುತ್ತಿವೆ. ಪ್ರೀತಿ, ಅಕ್ಕರೆ, ಕಾಳಜಿ, ಮಮತೆಗೆ ಖ್ಯಾತಿಯಾಗಿರುವ ಸ್ತ್ರೀ ತಾಳ್ಮೆಗೆ ಹೆಸರುವಾಸಿ. ಆದರೆ ಈ ತಾಳ್ಮೆಯಿಂದ ಆಕೆ ಸಿಡಿದೆದ್ದುಬಿಟ್ಟಳೆಂದರೆ ಕಾಳಿಯಾಗಿಬಿಡುತ್ತಾಳೆ ಎಂಬುದೇ ಈ ಮಾತಿನ ಒಳಾರ್ಥವಾಗಿದೆ.

  ಹೆಣ್ಣು ತಾಳ್ಮೆ, ಮಮತೆ, ಪ್ರೀತಿಯಿಂದ ಇರುವ ನೆಲೆ ನಂದನವನ ಎಂದೆನಿಸುತ್ತದೆ. ಅದುವೇ ಆಕೆ ತನ್ನ ಕುಯುಕ್ತಿ, ಕುಟಿಲತೆ ಮೋಸಗಾರರಾಗಿದ್ದರೆ ಸುತ್ತಲಿನ ಪರಿಸರವನ್ನು ಹಾಳುಮಾಡುತ್ತಾರೆ ಮತ್ತು ಸ್ವಯಂ ನಶಿಸಿ ಹೋಗುತ್ತಾರೆ. ಸ್ತ್ರೀಯರಲ್ಲಿ ಕೆಟ್ಟವರೂ ಇರುತ್ತಾರೆ ಮತ್ತು ಒಳ್ಳೆಯವರೂ ಇರುತ್ತಾರೆ ಅಂತೆಯೇ ಉತ್ತಮ ಮನಸ್ಸಿನವರೂ ಸಹೃದಯರೂ ಇರುತ್ತಾರೆ ಅದೇ ರೀತಿ ಕುಟಿಲತೆಯಿಂದ ತಮ್ಮ ಕಾರ್ಯ ಸಾಧಿಸುವ ಚತುರೆಯರೂ ಇರುತ್ತಾರೆ.   ಸ್ವಾರಸ್ಯಕರ-ರೋಚಕ ಕಥಾನಕಗಳ ಭಂಡಾರ 'ಮಹಾಭಾರತ'

  ಆದ್ದರಿಂದಲೇ ಆಕೆಯನ್ನು ಅರಿತುಕೊಳ್ಳುವುದು ಕಷ್ಟವೆಂಬುದು ಪುರುಷ ಜನಾಂಗದ ದೂರಾಗಿದೆ. ಅನಾದಿ ಕಾಲದಿಂದಲೂ ಸ್ತ್ರೀಯ ಹೆಸರು ಇತಿಹಾಸಗಳಲ್ಲಿ ಕೇಳಿಬರುತ್ತಲೇ ಇದೆ. ಹಿಂದಿನ ಮಹಾಭಾರತದಿಂದ ಹಿಡಿದು ಇಂದಿನ ರಾಜಕೀಯ ಗದ್ದುಗೆಯವರೆಗೂ ಮಹಿಳೆ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಲೇ ಬರುತ್ತಿದ್ದಾರೆ. ಒಂದಿಲ್ಲೊಂದು ಕಾರಣಗಳಿಂದ ವೈಶಿಷ್ಟ್ಯತೆಗಳಿಂದ ಆಕೆ ತಮ್ಮ ಇರುವಿಕೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ಮಹಾಭಾರತದ 9 ಸುಂದರ ಚತುರ ಸ್ತ್ರೀಯ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ. ಇವರು ಯಾವ ರೀತಿಯಲ್ಲಿ ಪ್ರಸಿದ್ಧರು ಎಂಬುದನ್ನು ನಿಮಗಿಲ್ಲಿ ಅರಿತುಕೊಳ್ಳಬಹುದಾಗಿದೆ....  

  ದ್ರೌಪದಿ

  ದ್ರೌಪದಿ

  ಮಹಾಭಾರತದ ಒಂಬತ್ತು ಅದ್ಭುತ ಸುಂದರ ಸ್ತ್ರೀಯಲ್ಲಿ ದ್ರೌಪದಿ ಕೂಡ ಒಬ್ಬರು. ಪಂಚಾಲಾ ದೇಶದ ರಾಜ ದ್ರುಪದನ ಪುತ್ರಿಯಾದ ದ್ರೌಪದಿಗೆ ಪಂಚ ಪಾಂಡವರು ಪತಿಯಂದಿರು. ಮಹಾಭಾರತದ ಎರಡನೇ ಭಾಗದಲ್ಲಿ ದ್ರೌಪದಿಯ ಪಾತ್ರ ಹಿರಿದಾದುದಾಗಿದೆ."ಸ್ವಯಂವರದಲ್ಲಿ" ಅರ್ಜುನನು ದ್ರೌಪದಿಯನ್ನು ಗೆಲ್ಲುತ್ತಾನೆ ಮತ್ತು ತಾಯಿ ಕುಂತಿಯ ಆದೇಶದಂತೆ ಐವರೂ ಪಾಂಡವರು ಆಕೆಯನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತಾರೆ. ಶ್ರೀಕೃಷ್ಣನ ಭಕ್ತೆಯಾದ ದ್ರೌಪದಿಗೆ ಕೌರವ ಸಭೆಯಲ್ಲಿ ನಡೆದ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಂತೆ ಅಭಯವನ್ನು ನೀಡುತ್ತಾರೆ. ಯಜ್ಞಕುಂಡದಿಂದ ಆವಿರ್ಭವಿಸಿದ ದ್ರೌಪದಿಯ ಜನ್ಮ ರಹಸ್ಯ

  ಊರ್ವಶಿ

  ಊರ್ವಶಿ

  ಇಂದ್ರನ ಆಸ್ಥಾನದಲ್ಲಿ ಅತಿ ಹೆಚ್ಚು ಸುಂದರ ಅಪ್ಸರೆಯಲ್ಲಿ ಊರ್ವಶಿ ಕೂಡ ಒಬ್ಬಳು ಅಂತೆಯೇ ಮಹಾಭಾರತದಲ್ಲಿ ಕೂಡ ಊರ್ವಶಿ ಅತಿ ಸುಂದರ ಪಾತ್ರವಾಗಿದ್ದಾರೆ. ಅರ್ಜುನನನ್ನು ಮೋಹಿಸಿದ ಊರ್ವಶಿಯು ಆತನನ್ನ ತನ್ನ ಬಲೆಯಲ್ಲಿ ಕೆಡವಲು ಪ್ರಯತ್ನಿಸುತ್ತಾಳೆ. ಅರ್ಜುನನು ಊರ್ವಶಿಯನ್ನು ತಿರಸ್ಕರಿಸುತ್ತಾನೆ ಇದರಿಂದ ಕೋಪಗೊಂಡ ಆಕೆ ಅರ್ಜುನನನ್ನು ಶಪಿಸುತ್ತಾಳೆ. ಅರ್ಜುನನು ಪುರುಷತ್ವರಹಿತನನ್ನಾಗಿ ಇರುವಂತೆ ಆಕೆ ಶಾಪವನ್ನು ನೀಡುತ್ತಾಳೆ. ಮಾನವರಿಗೆ ತನ್ನ ಮನದ ಬಯಕೆಯನ್ನು ನೇರವಾಗಿ ನುಡಿಯುವಲ್ಲಿ ಊರ್ವಶಿ ಧೈರ್ಯವಂತೆ ಯಾಗಿರುತ್ತಾಳೆ. ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ ಅಂತ್ಯವಾಗಿದ್ದು ಹೇಗೆ?

  ಕುಂತಿ

  ಕುಂತಿ

  ಮಹಾಭಾರತದ ಒಂಬತ್ತು ಸುಂದರ ಸ್ತ್ರೀಯರಲ್ಲಿ ಕುಂತಿ ಕೂಡ ಒಬ್ಬರು. ಮದುವೆಗೂ ಮುನ್ನವೇ ಮಗುವನ್ನು ಪಡೆದ ಕುಂತಿ ಭಯಗೊಂಡು ಆ ಮಗುವನ್ನು ಬುಟ್ಟಿಯ ಸಹಾಯದಿಂದ ನದಿಗೆ ಬಿಡುತ್ತಾಳೆ. ಆ ಮಗುವೇ ಕರ್ಣ. ಸೂರ್ಯ ದೇವನ ಪುತ್ರನಾಗಿ ಕರ್ಣನು ಜನಿಸುತ್ತಾನೆ. ತನಗೆ ನೀಡಿದ ವರವನ್ನು ಪರೀಕ್ಷಿಸುವುದಕ್ಕಾಗಿ ಕುಂತಿಯು ಸೂರ್ಯನನ್ನು ಕರೆಯುತ್ತಾಳೆ ಮತ್ತು ವರದ ರೀತಿಯಂತೆ ಸೂರ್ಯನು ಆಕೆಗೆ ಪುತ್ರನನ್ನು ಕರುಣಿಸುತ್ತಾರೆ. ವಿವಾಹಕ್ಕೂ ಮುನ್ನವೇ ಮಗುವನ್ನು ಪಡೆದು ತಾನು ಸಮಾಜದಲ್ಲಿ ಬಾಳುವುದು ಹೇಗೆ ಮನೆಯವರನ್ನು ಎದುರಿಸುವುದು ಹೇಗೆಂದು ಆಕೆ ಮಗುವನ್ನು ನದಿಯಲ್ಲಿ ಬಿಡುತ್ತಾಳೆ.

  ಗಂಗೆ

  ಗಂಗೆ

  ಮಹಾಭಾರತದಲ್ಲಿ ಬರುವ ಸುಂದರ ಸ್ತ್ರೀಯರಲ್ಲಿ ಗಂಗೆ ಕೂಡ ಒಬ್ಬಳು. ಶಂತನುವಿನ ಪ್ರಥಮ ಪತ್ನಿಯಾಗಿರುತ್ತಾಳೆ. ಆಕೆಯ ಚೆಂದಕ್ಕೆ ಸೋತ ರಾಜನು ತನ್ನನ್ನು ವಿವಾಹವಾಗುವಂತೆ ಆಕೆಯನ್ನು ವಿನಂತಿಸುತ್ತಾನೆ. ಆತನ ಬೇಡಿಕೆಯನ್ನು ಮನ್ನಿಸಿದ ಗಂಗೆ ಮೂರು ಷರತ್ತುಗಳನ್ನು ಪ್ರಸ್ತಾಪಿಸಿ ಶಂತನುವನ್ನು ವಿವಾಹವಾಗುತ್ತಾಳೆ. ಮೊದಲನೆಯ ಷರತ್ತು ಆಕೆ ಎಲ್ಲಿಂದ ಬಂದವಳು ಎಂಬುದನ್ನು ಕೇಳಬಾರದು, ಎರಡನೆಯದು ಆಕೆ ಏನು ಮಾಡಿದರೂ ರಾಜ ಸುಮ್ಮನಿರಬೇಕು ಮತ್ತು ಆಕೆಯನ್ನು ತಡೆಯಬಾರದು ಅಂತೆಯೇ ಮೂರನೆಯ ಷರತ್ತು ಈ ಎರಡೂ ನಿಬಂಧನೆಗಳನ್ನು ರಾಜ ಮುರಿದಲ್ಲಿ ಗಂಗೆ ಹಿಂತಿರುಗುತ್ತಾಳೆ ಎಂದಾಗಿರುತ್ತದೆ.

  ಉಲೂಪಿ

  ಉಲೂಪಿ

  ನಾಗ ಕನ್ಯೆ ಉಲೂಪಿ ಅತಿ ಸುಂದರಿಯಾಗಿರುತ್ತಾಳೆ ಮತ್ತು ಅರ್ಜುನನನ್ನು ವರಿಸುವ ಮಹದಾಸೆಯನ್ನು ಇರಿಸಿಕೊಂಡಿರುತ್ತಾಳೆ. ಅರ್ಜುನನ್ನು ಅಪಹರಿಸಿ ತನ್ನ ಪ್ರೇಮ ನಿವೇದನೆಯನ್ನು ಉಲೂಪಿ ಮಾಡುತ್ತಾಳೆ.ಅರ್ಜುನ ಉಲೂಪಿಯರ ಕುತೂಹಲ ಕೆರಳಿಸುವ ಪ್ರೇಮ ಕಥೆ

  ಸುಭದ್ರ

  ಸುಭದ್ರ

  ಬಲರಾಮ ಮತ್ತು ಶ್ರೀಕೃಷ್ಣನ ಸಹೋದರಿಯಾಗಿರುತ್ತಾಳೆ ಸುಭದ್ರ. ಮಹಾಭಾರತದಲ್ಲಿ ಹೆಚ್ಚು ಸುಂದರಿ ಎಂದೆನಿಸಿರುವ ಸ್ತ್ರೀ ಸುಭದ್ರೆಯಾಗಿರುತ್ತಾಳೆ. ಅರ್ಜುನನು ಸುಭದ್ರೆಯ ಸೌಂದರ್ಯಕ್ಕೆ ಮನಸೋತು ಆಕೆಯನ್ನು ವಿವಾಹವಾಗಲು ಬಯಸುತ್ತಾನೆ. ಆದರೆ ಬಲರಾಮನಿಗೆ ಸಹೋದರಿಯನ್ನು ದುರ್ಯೋಧನನಿಗೆ ವಿವಾಹ ಮಾಡುವ ಮನಸ್ಸಿರುತ್ತದೆ. ಆದರೆ ಕೃಷ್ಣ ಇದಕ್ಕೆ ವಿರುದ್ಧವಾಗಿರುತ್ತಾರೆ.

  ಸತ್ಯವತಿ

  ಸತ್ಯವತಿ

  ರಾಜ ಶಂತನುವಿನ ಎರಡನೇ ಹೆಂಡತಿ ಸತ್ಯವತಿಯಾಗಿರುತ್ತಾಳೆ. ಈಕೆ ಮೀನುಗಾರ್ತಿಯಾಗಿರುತ್ತಾಳೆ. ಆಕೆಯ ಸೌಂದರ್ಯಕ್ಕೆ ಮನಸೋತ ರಾಜ ಆಕೆಯಲ್ಲಿ ವಿವಾಹದ ಬೇಡಿಕೆಯನ್ನು ಇಡುತ್ತಾನೆ. ತನ್ನ ಪುತ್ರ ಮಾತ್ರವೇ ರಾಜ್ಯದ ಅರಸನಾಗಬೇಕು ಎಂಬ ಬೇಡಿಕೆಯ ಮೇರೆಗೆ ಸತ್ಯವತಿ ರಾಜನನ್ನು ವಿವಾಹವಾಗುತ್ತಾಳೆ.

  ಗಾಂಧಾರಿ

  ಗಾಂಧಾರಿ

  ರಾಜ ಸುಬಲನ ಪುತ್ರಿ ಗಾಂಧಾರಿ. ತನ್ನ ಯುವ ಹರೆಯದಲ್ಲೇ ಈಕೆ ಶಿವನನ್ನು ಕುರಿತು ತಪಸ್ಸು ಮಾಡಿರುತ್ತಾಳೆ ಮತ್ತು 101 ಮಕ್ಕಳನ್ನು ಹೊಂದುವ ಆಶಿರ್ವಾದವನ್ನು ಆಕೆ ಶಿವನಿಂದ ಪಡೆದುಕೊಂಡಿರುತ್ತಾಳೆ. ತನ್ನ ಪತಿ ಅಂಧ ಎಂಬುದನ್ನು ಅರಿತು ಗಾಂಧಾರಿ ತನ್ನ ಕಣ್ಣಿಗೂ ಪಟ್ಟಿಯನ್ನು ಕಟ್ಟಿಕೊಂಡು ಪತಿಯಂತೆಯೇ ಜೀವನ ನಡೆಸುತ್ತಾಳೆ. ತನ್ನ ಪತಿಗಾಗಿ ತನ್ನ ಕಣ್ಣಿಗೆ ಬಟ್ಟೆಕಟ್ಟಿಕೊಂಡು ತನ್ನ ದೃಶ್ಯ ಶಕ್ತಿಯನ್ನು ತ್ಯಾಗ ಮಾಡಿದವಳು ಗಾಂಧಾರಿ. ಅಂತೆಯೇ ಮಹಾಭಾರತದ ಒಂಭತ್ತು ಸುಂದರಿಯರಲ್ಲಿ ಈಕೆ ಕೂಡ ಒಬ್ಬರು.ಗಾಂಧಾರಿ ಶಾಪ; ಶ್ರೀಕೃಷ್ಣಾವತಾರದ ಪರಿಸಮಾಪ್ತಿ ಹೇಗೆ?

  ಚಿತ್ರಾಂಗದಾ

  ಚಿತ್ರಾಂಗದಾ

  ಮಣಿಪುರದ ಅರಸ ಚಿತ್ರವಾಹನನ ಪುತ್ರಿಯಾಗಿರುತ್ತಾಳೆ ಚಿತ್ರಾಂಗದಾ. ಆಕೆಯ ಸೌಂದರ್ಯಕ್ಕೆ ಮನಸೋತ ಅರ್ಜುನ ಆಕೆಯನ್ನು ವಿವಾಹವಾಗುತ್ತಾನೆ ಅಂತೆಯೇ ಚಿತ್ರವಾಹನ ಪುತ್ರ ಸಂತಾನವನ್ನು ಹೊಂದಿರುವುದಿಲ್ಲ ಅದಕ್ಕಾಗಿ ತನ್ನ ಮಗಳಿಗೆ ಜನಿಸುವ ಪುತ್ರನನ್ನೇ ರಾಜ್ಯದ ಅರಸನ್ನಾಗಿ ಮಾಡುವುದಾಗಿ ಅರ್ಜುನನಿಂದ ವಚನವನ್ನು ಪಡೆದುಕೊಳ್ಳುತ್ತಾನೆ.

   

  English summary

  Most Gorgeous Women in Mahabharata

  There are some exemplary women characters in Mahabharata who are the epitome of courage, elegance, beauty and intelligence. Even in today's world, these women characters can be taken as ideal examples as to how a woman must lead her life with courage.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more