For Quick Alerts
ALLOW NOTIFICATIONS  
For Daily Alerts

ಮೋಕ್ಷದ ಏಕಾದಶಿ 2021: ಈ ಒಂದು ವ್ರತಾಚರಣೆಯು 23 ಏಕಾದಶಿ ಆಚರಣೆಗೆ ಸಮ!

|

ಹಿಂದೂ ಪಂಚಾಂಗದಲ್ಲಿ, ಏಕಾದಶಿ ಮತ್ತು ಏಕಾದಶಿ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಪ್ರತಿಯೊಂದು ತಿಂಗಳಲ್ಲೂ ವಿವಿಧ ಹೆಸರಿನ ಏಕಾದಶಿ ಆರಣೆಯಿದ್ದು, ಮಾರ್ಗಶಿರ ಅಥವಾ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಸ್ವರ್ಗದ ಅಥವಾ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ ಇದೆ. ಇದು ಹೆಚ್ಚಾಗಿ ವರ್ಷಕೊಮ್ಮೆ ಅಥವಾ ಎರಡು ಬಾರಿ ಬರುತ್ತದೆ.

ಇದು ವರ್ಷದ ಕೊನೆಯ ಏಕಾದಶಿಯಾಗಿದ್ದು ಈ ಬಾರಿ ಡಿಸೆಂಬರ್ 14 ರಂದು ಆಚರಿಸಲಾಗುತ್ತದೆ. ಈ ಕುರಿತ ಮತ್ತಷ್ಟು ಮಾಹಿತಿ ನಿಮಗಾಗಿ.

ಮೋಕ್ಷದ/ವೈಕುಂಠ ಏಕಾದಶಿ 2021 ತಿಥಿ ಸಮಯ:

ಮೋಕ್ಷದ/ವೈಕುಂಠ ಏಕಾದಶಿ 2021 ತಿಥಿ ಸಮಯ:

ಏಕಾದಶಿ ತಿಥಿಯು ಡಿಸೆಂಬರ್ 13 ರಂದು ರಾತ್ರಿ 9:32 ರಿಂದ ಆರಂಭವಾಗಿ, ಡಿಸೆಂಬರ್ 14 ರಂದು ರಾತ್ರಿ 11:35 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ 14 ರಂದು ಉದಯತಿಥಿ ಇರುವುದರಿಂದ ಮೋಕ್ಷದ ಏಕಾದಶಿಯ ಉಪವಾಸ ವ್ರತವನ್ನು ಮಂಗಳವಾರದಂದು ಆಚರಿಸಲಾಗುತ್ತದೆ.

ತಿಥಿ ಆರಂಭ: ಡಿಸೆಂಬರ್ 13 ರಂದು ರಾತ್ರಿ 9:32

ತಿಥಿ ಅಂತ್ಯ: ಡಿಸೆಂಬರ್ 14 ರಂದು ರಾತ್ರಿ 11:35

ಮೋಕ್ಷದ ಏಕಾದಶಿಯ ಪೂಜೆ ವಿಧಾನ:

ಮೋಕ್ಷದ ಏಕಾದಶಿಯ ಪೂಜೆ ವಿಧಾನ:

-ಮೋಕ್ಷದ ಏಕಾದಶಿ ಉಪವಾಸದ ದಶಮಿ ತಿಥಿಯಂದು ಮಧ್ಯಾಹ್ನದ ಸಮಯದಲ್ಲಿ ಒಮ್ಮೆ ಮಾತ್ರ ಸೇವಿಸಬೇಕು. ದಶಮಿಯ ದಿನ ರಾತ್ರಿ ಆಹಾರ ಸೇವಿಸಬಾರದು.

- ಏಕಾದಶಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ದೇವರ ಮುಂದೆ ಉಪವಾಸ ವ್ರತ ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.

- ಇದಾದ ನಂತರ ಶ್ರೀಕೃಷ್ಣನಿಗೆ ದೀಪ, ಧೂಪ, ನೈವೇದ್ಯ ಇತ್ಯಾದಿಗಳನ್ನು ಕ್ರಮಬದ್ಧವಾಗಿ ಅರ್ಪಿಸಬೇಕು.

- ನಂತರ ವಿಷ್ಣುವಿನ ಕಥೆಯನ್ನು ಓದಬಹುದು ಅಥವಾ ಕೇಳಬಹುದು.

- ಈ ದಿನ ರಾತ್ರಿ ಸಮಯದಲ್ಲಿ ಪೂಜೆ ಮತ್ತು ಜಾಗರಣೆ ಮಾಡಬೇಕು. ದಿನವಿಡೀ ದೇವರನ್ನು ಆರಾಧಿಸಬೇಕು.

- ಏಕಾದಶಿ ವ್ರತದ ಮರುದಿನ ದ್ವಾದಶಿ ಪೂಜೆಯ ನಂತರ ಉಪವಾಸವನ್ನು ಮುರಿಯಬೇಕು. ಇದರ ನಂತರ, ಅಗತ್ಯವಿರುವ ವ್ಯಕ್ತಿಗೆ ಆಹಾರ ಮತ್ತು ದಾನ ಇತ್ಯಾದಿಗಳನ್ನು ನೀಡಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

- ವ್ರತಧಾರಿಗಳು ಮೋಕ್ಷದ ಏಕಾದಶಿ ವ್ರತದ ದಿನದಂದು ಆದಷ್ಟು ಬಾರಿ ಶ್ರೀಹರಿ ಮಂತ್ರವನ್ನು ಪಠಿಸುತ್ತಿರಬೇಕು.

2021 ಮೋಕ್ಷದ ಏಕಾದಶಿ ಪಾರಣ ಸಮಯ:

2021 ಮೋಕ್ಷದ ಏಕಾದಶಿ ಪಾರಣ ಸಮಯ:

2021 ರ ಮೋಕ್ಷದ ಏಕಾದಶಿ ವ್ರತ ಪಾರಣವನ್ನು ದ್ವಾದಶಿಯ ದಿನದಂದು ಮಾಡಲಾಗುತ್ತದೆ. ಉಪವಾಸವನ್ನು ಡಿಸೆಂಬರ್ 15 ರಂದು ಬೆಳಿಗ್ಗೆ 07:5 ರಿಂದ 09.09 ರವರೆಗೆ ಮಾಡಲಾಗುತ್ತದೆ.

ಮೋಕ್ಷದ ಏಕಾದಶಿಯ ಮಹತ್ವ:

ಮೋಕ್ಷದ ಏಕಾದಶಿಯ ಮಹತ್ವ:

ವೈಕುಂಠ ಅಥವಾ ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, (ಸಂತರು ಮತ್ತು ವಿದ್ವಾಂಸರು) ಮೋಕ್ಷ ಅಥವಾ ಜನ್ಮ, ಜೀವನ ಮತ್ತು ಮರಣದ ವಿಷವರ್ತುಲದಿಂದ ವಿಮೋಚನೆಯನ್ನು ಬಯಸುವವರು, ವೈಕುಂಠ ಏಕಾದಶಿ ತಿಥಿಯಂದು ವ್ರತವನ್ನು ಆಚರಿಸುವ ಮೂಲಕ ತಮ್ಮ ಅತ್ಯುನ್ನತ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ.

ವೈಕುಂಠ ಏಕಾದಶಿಯನ್ನು ಅಥವಾ ಮೋಕ್ಷದ ಏಕಾದಶಿಯನ್ನು ಆಚರಿಸುವುದರಿಂದ ಪಿತೃಗಳು ವೈಕುಂಠವನ್ನು ಅಥವಾ ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಜೊತೆಗೆ ಅವರು ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿದೆ.

ಸಾಮಾನ್ಯವಾಗಿ ವಿಷ್ಣುವಿನ ಭಕ್ತರು ಎಲ್ಲಾ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಆದರೆ, ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ.

ಮೋಕ್ಷದ ಏಕಾದಶಿ ವ್ರತ ಕಥೆ:

ಮೋಕ್ಷದ ಏಕಾದಶಿ ವ್ರತ ಕಥೆ:

ಒಂದು ಕಾಲದಲ್ಲಿ ವೈಖಾನಸ ಎಂಬ ರಾಜನು ಗೋಕುಲದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಒಂದು ರಾತ್ರಿ, ಅವನು ತನ್ನ ತಂದೆ ನರಕದಲ್ಲಿ ನರಳುತ್ತಿರುವ ಕನಸು ಕಂಡನು ಮತ್ತು ತನ್ನ ಮಗನಿಂದ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಿದ್ದನು. ತಂದೆಯ ಸ್ಥಿತಿಯನ್ನು ಕಂಡು ರಾಜ ಚಿಂತಿತನಾಗುತ್ತಾನೆ. ಮರುದಿನ, ಅವನು ಬ್ರಾಹ್ಮಣರನ್ನು ಕರೆದು ತನ್ನ ಕನಸಿನ ಹಿಂದಿನ ಕಾರಣವನ್ನು ಕೇಳಿದನು. ಅವರು ಹೇಳಿದರು, "ಹೇ ರಾಜ, ಪರ್ವತ ಎಂಬ ಸನ್ಯಾಸಿಯ ಆಶ್ರಮಕ್ಕೆ ಹೋಗಿ ನಿಮ್ಮ ತಂದೆಯ ಮೋಕ್ಷಕ್ಕೆ ಪರಿಹಾರವನ್ನು ಕೇಳು ಎಂದರು. ನಂತರ ರಾಜನು ಅಲ್ಲಿಗೆ ಹೋಗಿ ಋಷಿಗೆ ತನ್ನ ಕನಸಿನ ಬಗ್ಗೆ ಹೇಳಿದ. ಋಷಿ ಅವನಿಗೆ, "ಹೇ ರಾಜ, ನಿಮ್ಮ ತಂದೆಯು ತನ್ನ ಹಿಂದಿನ ಜನ್ಮದ ಕರ್ಮಗಳಿಂದ ನರಕದಲ್ಲಿದ್ದಾರೆ. ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸಿ ಅದರ ಫಲವನ್ನು ಅವನಿಗೆ ಅರ್ಪಿಸುವ ಮೂಲಕ ನೀವು ಅವನಿಗೆ ಮುಕ್ತಿ ಪಡೆಯಲು ಸಹಾಯ ಮಾಡಬಹುದು. ಅವರ ಮಾರ್ಗದರ್ಶನದಂತೆ, ರಾಜನು ಮೋಕ್ಷದ ಏಕಾದಶಿಯ ಉಪವಾಸವನ್ನು ಆಚರಿಸಿದನು ಮತ್ತು ಬ್ರಾಹ್ಮಣರಿಗೆ ಅನ್ನ, ದಾನ, ಬಟ್ಟೆ ಇತ್ಯಾದಿಗಳನ್ನು ಅರ್ಪಿಸಿ ಅವರ ಆಶೀರ್ವಾದವನ್ನು ಗಳಿಸಿದನು. ಈ ವ್ರತದ ಪ್ರಭಾವದಿಂದ ತಂದೆಗೆ ಮುಕ್ತಿ ಪ್ರಾಪ್ತವಾಯಿತು.

English summary

Mokshada Ekadashi December 2021 Date, Time, Puja Vidhi, Vrta Katha, Hitsory and Significance in Kannada

Here we talking about Mokshada Ekadashi December 2021 Date, Time, Puja Vidhi, Vrta Katha, Hitsory and Significance in Kannada, read on
Story first published: Monday, December 13, 2021, 16:26 [IST]
X
Desktop Bottom Promotion