For Quick Alerts
ALLOW NOTIFICATIONS  
For Daily Alerts

ಉಪವಾಸದ ಬಗ್ಗೆ ಯಾವ ಧರ್ಮ ಏನು ಹೇಳುತ್ತದೆ? ಆಯಾ ಧರ್ಮದಲ್ಲಿ ಇದಕ್ಕಿರುವ ಮಹತ್ವವೇನು?

|

ದೇವರಿಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಳ್ಳಲು, ದೇವರನ್ನು ಒಲಿಸಿಕೊಳ್ಳಲು, ದೇವರ ಅನುಗ್ರಹ ಪಡೆಯಲು ಅಥವ ಅವನ ಕೃಪೆಗೆ ಪಾತ್ರರಾಗಲು ಪ್ರತಿಯೊಂದು ಧರ್ಮದಲ್ಲೂ ತನ್ನದೇ ಆದ ಮಾರ್ಗಗಳಿವೆ. ಆಯಾ ಧರ್ಮದ ಅಣತಿಯಂತೆ ಎಲ್ಲರೂ ತಮ್ಮ ದೇವರನ್ನು ಮೆಚ್ಚಿಸಲು ವಿಭಿನ್ನ ನಿಯಮ, ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಪ್ರತಿಯೊಂದು ಧರ್ಮದ ದೇವರಿಗೂ ಭಕ್ತಿಯನ್ನು ತೋರಿಸುವ ಒಂದೇ ಒಂದು ಏಕೈಕ ವಿಧಾನ "ಉಪವಾಸ". ತನ್ನ ದೇವರ ಆಶೀರ್ವಾದ ಪಡೆಯಲು ಆತನ ಹೆಸರಿನಲ್ಲಿ ಭಕ್ತರು ಅಥಾವ ಆರಾಧಕರು ಒಪ್ಪೊತ್ತು, ಅರ್ಧ ದಿನ ಅಥವಾ ಇಡೀ ದಿನ ಉಪವಾಸ ಮಾಡುತ್ತಾರೆ.

ಆದರೆ ಉಪವಾಸದ ಬಗ್ಗೆ ಯಾವ ಧರ್ಮ ಏನು ಹೇಳುತ್ತದೆ, ಆ ಧರ್ಮದಲ್ಲಿ ಉಪವಾಸದ ಅರ್ಥ ಹಾಗೂ ಮಹತ್ವವೇನು ಎಂಬುದನ್ನು ಮುಂದೆ ತಿಳಿಯೋಣ:

ಹಿಂದೂ ಧರ್ಮ

ಹಿಂದೂ ಧರ್ಮ

ಉಪವಾಸವು ಹಿಂದೂ ಧರ್ಮದ ಹಾಗೂ ಹಿಂದೂ ಸಂಪ್ರದಾಯ, ಆಚಾರದ ಒಂದು ಪ್ರಮುಖ ಭಾಗವಾಗಿದೆ. ನಿರ್ದಿಷ್ಟ ವಿಶೇಷ ದಿನಗಳಲ್ಲಿ ಉಪವಾಸ ಮಾಡುವುದು ದೇವರನ್ನು ಮೆಚ್ಚಿಸಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಉಪವಾಸದ ಸಮಯದಲ್ಲಿ, ನೀರನ್ನು ಕುಡಿಯಲು ಅಥವಾ ಫಲಹಾರ ಸೇವಿಸಲು ಮಾತ್ರ ಅನುಮತಿಸಲಾಗಿದೆ. ಸಂಜೆಯ ವೇಳೆ ಉಪವಾಸವನ್ನು ಮುರಿಯಬೇಕು. ಉಪವಾಸದ ಸಮಯ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಥವಾ 12 ರಿಂದ 12 ಗಂಟೆಯವರೆಗೆ ಅಂದರೆ 24 ಗಂಟೆಗಳು. ಉಪವಾಸದ ಸಮಯದಲ್ಲಿ ಮಾಂಸಾಹಾರ ಆಹಾರವನ್ನು ಸೇವಿಸುವುದನ್ನು ಅನುಮತಿಸಲಾಗುವುದಿಲ್ಲ. ಪ್ರತಿ ತಿಂಗಳ ಸಂಕಷ್ಠಿಯ ದಿನ, ದೇವಿಯರ ವ್ರತ, ಹಬ್ಬ ಹರಿದಿನಗಳಲ್ಲಿ ಉಪವಾಸ ಮಾಡುವ ವಾಡಿಕೆ ಇದೆ.

ಕ್ರಿಶ್ಚಿಯನ್

ಕ್ರಿಶ್ಚಿಯನ್

ಉಪವಾಸ ಎಂಬುದು ಎಂದು ಆಧ್ಯಾತ್ಮಿಕ ಶಿಸ್ತು ಎನ್ನುತ್ತದೆ ಬೈಬಲ್. ತನ್ನ ಅನುಯಾಯಿಗಳು ಉಪವಾಸ ಮಾಡಿದರೆ ದೇವರು ಅದಕ್ಕೆ ತಕ್ಕಂತೆ ಕೊಡುಗೆ, ಪ್ರತಿಫಲ ನೀಡುತ್ತಾನೆ ಎನ್ನುತ್ತಾರೆ ಜೀಸಸ್‌. ಬೈಬಲ್‌ ಪ್ರಕಾರ ಉಪವಾಸ ಎಂದರೆ ಒಂದು ಕೋರಿಗೆ, ಪ್ರಾರ್ಥನೆ ಫಲಿಸಲು ಅಥವಾ ಯಾವುದೇ ನಿಗದಿತ ಕಾರಣಕ್ಕೆ ನಿಗದಿತ ಸಮಯದಲ್ಲಿ ಯಾವುದೇ ಆಹಾರ, ಪಾನೀಯ ಸೇವಿಸದೇ, ನಿದ್ರೆ ಅಥವಾ ಲೈಂಗಿಕತೆಯಿಂದ ದೂರವಿರುವುದು.

ಇಸ್ಲಾಂ ಧರ್ಮ

ಇಸ್ಲಾಂ ಧರ್ಮ

ಇಸ್ಲಾಂನಲ್ಲಿ ಉಪವಾಸವನ್ನು ಸಾವ್ಮ್‌ ಅಥವಾ ಸಿಯಮ್ ಎಂದು ಕರೆಯಲಾಗುತ್ತದೆ. ಸಾವ್ಮ್‌ ಎಂದರೆ ಹಗಲು ಹೊತ್ತಿನಲ್ಲಿ ತಿನ್ನುವುದು ಮತ್ತು ಕುಡಿಯುವುದನ್ನು ತಪ್ಪಿಸುವುದು. ಈ ಉಪವಾಸದ ಸಮಯದಲ್ಲಿ ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಮುಸ್ಲಿಮರು ತಿನ್ನುವುದು, ಕುಡಿಯುವುದು ಮತ್ತು ವೈವಾಹಿಕ ಲೈಂಗಿಕ ಸಂಬಂಧಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಉಪವಾಸವು ಸಹ ಜೀವಿಗಳಿಗೆ ಹೆಚ್ಚು ದಯೆ ತೋರುವ ಉದ್ದೇಶವಾಗಿರಬೇಕು. ಈ ತಿಂಗಳಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವುದು ಅತ್ಯಂತ ಪ್ರತಿಫಲದಾಯಕ ಪೂಜೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಇಸ್ಕಾಂ ಧರ್ಮಗ್ರಂಥದಲ್ಲಿ ಹೇಳಲಾಗಿದೆ. ಇದಾವುದನ್ನು ಪಾಲಿಸದೇ ಹೇಳಿಕೆಗಾಗಿ ಉಪವಾಸ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುತ್ತದೆ ಇಸ್ಲಾಂ ಧರ್ಮ. ರಂಜಾನ್‌ ಸಮಯದಲ್ಲಿ ಮುಸ್ಲಿಮರು ಮಾಡುವ ಬಹಳ ಪವಿತ್ರ ಎಂದು ಹೇಳಲಾಗುತ್ತದೆ.

ಸಿಖ್ ಧರ್ಮ

ಸಿಖ್ ಧರ್ಮ

ಸಿಖ್ ಧರ್ಮವು ತೀರ್ಥಯಾತ್ರೆಗಳು ಮತ್ತು ಉಪವಾಸಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಈ ದೇಹ ದೇವರು ನೀಡಿರುವ ವರ, ಇದನ್ನು ದೇವರು ನಿರ್ಮಿಸಿರುವಂತೆ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ನಮ್ಮ ಧರ್ಮ. ನಮ್ಮ ಆರೊಗ್ಯಕ್ಕೆ ಅಗತ್ಯವಿದ್ದರೆ ಮಾತ್ರ ಉಪವಾಸ ಆಚರಿಸಬಹುದು, ಇಲ್ಲವಾದಲ್ಲಿ ಧರ್ಮದ ಅನುಸಾರ ಉಪವಾಸ ಎಂಬ ಯಾವುದೇ ನಿಯಮಗಳಿಲ್ಲ.

ಬೌದ್ಧ ಧರ್ಮ

ಬೌದ್ಧ ಧರ್ಮ

ಸನ್ಯಾಸಿ ಸಮುದಾಯದಲ್ಲಿ ಉಪವಾಸವನ್ನು ತಪಸ್ವಿ ಪದ್ಧತಿ, "ಧುತಂಗ" ಅಭ್ಯಾಸವೆಂದು ಪರಿಗಣಿಸಲಾಗಿದೆ. ಧುತಂಗಗಳು ಹದಿಮೂರು ಅಭ್ಯಾಸಗಳ ಒಂದು ನಿರ್ದಿಷ್ಟ ಪಟ್ಟಿಯಾಗಿದ್ದು, ಅವುಗಳಲ್ಲಿ ನಾಲ್ಕು ಆಹಾರಕ್ಕೆ ಸಂಬಂಧಿಸಿವೆ: ದಿನಕ್ಕೆ ಒಮ್ಮೆ ತಿನ್ನುವುದು, ಒಂದೇ ಕುಳಿತುಕೊಳ್ಳುವುದು, ನೀವು ತಿನ್ನುವ ಪ್ರಮಾಣವನ್ನು ಕಡಿಮೆ ಮಾಡುವುದು, ಭಿಕ್ಷೆ ಬೇಡಿ ಮೊದಲ ಏಳು ಮನೆಗಳಲ್ಲಿ ನೀವು ಪಡೆಯುವ ಆಹಾರವನ್ನು ಮಾತ್ರ ತಿನ್ನುವುದು. ಈ ಅಭ್ಯಾಸಗಳನ್ನು ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಅಳವಡಿಸಿಕೊಂಡಿದ್ದಾರೆ, ಬೌದ್ಧ ಸನ್ಯಾಸಿಗಳ ಸಾಮಾನ್ಯ ಜೀವನದ ಅಭ್ಯಾಸದಲ್ಲಿ ಅವು ಅಗತ್ಯವಿಲ್ಲ.

English summary

Meaning Of Fasting In Every Religion in Kannada

Here we are discussing about Meaning Of Fasting In Every Religion in Kannada. Every religion has their own ways to do offerings to God. An they all have different ways to impress their God. One of the ways to show your devotion towards your God is through fasting. Read more.
Story first published: Wednesday, October 20, 2021, 10:16 [IST]
X
Desktop Bottom Promotion