For Quick Alerts
ALLOW NOTIFICATIONS  
For Daily Alerts

ಆಯುಧ ಪೂಜೆ 2019: ಪೂಜಿಸುವ ವಿಧಾನ ಮತ್ತು ಹೇಳಬೇಕಾದ ಮಂತ್ರಗಳು

|

ನವರಾತ್ರಿ ಹಬ್ಬ ಎಂದರೆ ತನು-ಮನಗಳನ್ನು ಧಾರ್ಮಿಕ ಭಾವನೆಯಲ್ಲಿ ತಲ್ಲೀನಗೊಳಿಸುವ ಸಮಯ ಎನ್ನಬಹುದು. ದುರ್ಗಾ ದೇವಿಗೆ ಮೀಸಲಾದ ಈ ಹಬ್ಬವನ್ನು ಒಂಬತ್ತು ದಿನ ರಾತ್ರಿಯ ವೇಳೆಯಲ್ಲಿ ವಿಶೇಷ ವ್ರತ ಕೈಗೊಳ್ಳುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತದೆ. ಪೂಜೆಯ ಸಮಯದಲ್ಲಿ ಭಕ್ತರು ಭಕ್ತಿ ಭಾವದಿಂದ ಇದ್ದರೆ ಅವರು ಬಯಸುವ ಜೀವನದ ಸಕಲ ಸೌಕರ್ಯಗಳು ಹಾಗೂ ಸಂತೋಷಗಳು ಪ್ರಾಪ್ತಿಯಾಗುತ್ತವೆ ಎಂದು ಹೇಳಲಾಗುವುದು. ಹಾಗಾಗಿ ದೇವಿಯ ಆರಾಧನೆ ಮಾಡುವಾಗ ಜಪ-ತಪ, ದೇವಿಯ ಮಂತ್ರ-ಸ್ತೋತ್ರ ಮತ್ತು ಹಾಡನ್ನು ಹೇಳುವ ಮೂಲಕ ತಾಯಿಯನ್ನು ಸಂತುಷ್ಟಗೊಳಿಸಬೇಕು.

ನಮ್ಮ ದೇಹದಲ್ಲಿ ಆಧ್ಯಾತ್ಮಿಕ ರೂಪದ ಚಕ್ರಗಳು ಇರುತ್ತವೆ. ಅವು ನಮ್ಮ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಯನ್ನು ಸಹ ವೃದ್ಧಿಮಾಡಲು ಸಹಾಯ ಮಾಡುತ್ತವೆ. ದೇವರ ಮಂತ್ರ ಹಾಗೂ ಸ್ತೋತ್ರಗಳನ್ನು ನೋಡುವ ಮೂಲಕ ಭಕ್ತರು ತಮ್ಮ ದೇಹದಲ್ಲಿನ ಚಕ್ರಗಳಿಗೆ ಧನಾತ್ಮಕ ಶಕ್ತಿಯನ್ನು ಕೇಂದ್ರೀಕರಿಸಲು ಉತ್ತೇಜನ ನೀಡುತ್ತವೆ. ಅಂತೆಯೇ ಅದು ವ್ಯಕ್ತಿಯ ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ದೇವಿಯ ಆರಾಧನೆಯ ಸಂದರ್ಭದಲ್ಲಿ ಧ್ಯಾನ, ಪೂಜೆ, ಮಂತ್ರಗಳ ಪಠಣ ಮಾಡುವುದರ ಮೂಲಕ ಮಾನಸಿಕ ನೆಮ್ಮದಿ ಹಾಗೂ ಸಕಾರಾತ್ಮಕ ಶಕ್ತಿಯ ಆಹ್ವಾನಕ್ಕೆ ಸಹಾಯ ಮಾಡುತ್ತದೆ.

ತಾಯಿಯ ಆರಾಧನೆಯನ್ನು ಒಂಬತ್ತು ದಿನಗಳ ಕಾಲ ವಿಶೇಷ ಅವತಾರಗಳಿಗೆ ಪೂಜೆ ಮಾಡಲಾಗುವುದು. ಅವುಗಳಲ್ಲಿ ಒಂದು ದಿನ ಆಯುಧ ಪೂಜೆಯ ದಿನವಾಗಿ ಆಚರಿಸಲಾಗುತ್ತದೆ. ಅಂದು ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತಾವು ಬಳಸುವ ಪ್ರತಿಯೊಂದು ವಸ್ತುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಮ್ಮ ಜೀವನಕ್ಕೆ ಅನುವು ಮಾಡಿಕೊಡುವ ವಸ್ತುಗಳಲ್ಲಿ ದೇವಿಯ ರೂಪವನ್ನು ಕಾಣುವುದು. ತನ್ನ ಬಾಳಿಗೆ ಬೆಳಕಾಗಿ ಯಶಸ್ಸನ್ನು ತಂದು ಕೊಡು ಎಂದು ದೇವಿಯಲ್ಲಿ ಮೊರೆಯಿಡುವ ವಿಧಾನವೂ ಹೌದು.

ಮಕ್ಕಳ ವಿದ್ಯಾಭ್ಯಾಸದ ಪುಸ್ತಕಗಳನ್ನು, ಕಚೇರಿಯಲ್ಲಿ ಇರುವ ಕಂಪ್ಯೂಟರ್, ಆಯುಧ ವಸ್ತುಗಳು, ವಾಹನಗಳು, ಯಂತ್ರೋಪಕರಣಗಳು ಹೀಗೆ ಎಲ್ಲಾ ಜೀವನದ ಅವಶ್ಯಕ ವಸ್ತುಗಳಿಗೆ ಪೂಜೆ ಸಲ್ಲಿಸಲಾಗುವುದು. ಜೊತೆಗೆ ಅದಕ್ಕೆ ತಕ್ಕಂತೆ ಸೂಕ್ತ ಮಂತ್ರಗಳನ್ನು ಪಠಿಸಲಾಗುವುದು. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂಜಾ ವಿಧಾನದಲ್ಲೂ ಮಂತ್ರಗಳು, ಸ್ತೋತ್ರಗಳು ಹಾಗೂ ಹಾಡನ್ನು ಹೇಳುವುದರ ಮೂಲಕ ಪೂಜೆಯನ್ನು ಸಂಪನ್ನಗೊಳಿಸಲಾಗುವುದು. ನೀವು ಸಹ ಆಯುಧ ಪೂಜೆಯ ಸಮಯದಲ್ಲಿ ದೇವಿಗೆ ಸಂಬಂಧಿಸಿದ ಈ ಮಂತ್ರಗಳನ್ನು ಜಪಿಸಿ, ಅವಳ ಕೃಪೆಗೆ ಪಾತ್ರರಾಗಿ.

ಪೂಜೆಗೆ ಕುಳಿತು ಕೊಳ್ಳುವ ಪರಿ

ಪೂಜೆಗೆ ಕುಳಿತು ಕೊಳ್ಳುವ ಪರಿ

ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು . ದಕ್ಷಿಣಕ್ಕೆ ಮುಖ ಮಾಡಿ ಕುಳಿತು ಪೂಜೆ ಮಾಡುವ ಕ್ರಮ ಇಲ್ಲ - ಕಾರಣ - ಅದು ಯಮಧರ್ಮನ ಲೋಕದ ದಿಕ್ಕು.

ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುವ ವಿಧಿ

ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುವ ವಿಧಿ

* ಹೇ ಶ್ರೀ ದುರ್ಗಾದೇವಿ, ನನಗೆ ಸದ್ಬುದ್ಧಿ ಕೊಡು. ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು.

* ಹೇ ದುರ್ಗಾಮಾತೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ಸೇವೆಯನ್ನು ನಾನು ಸಾಧನೆಯೆಂದು ಮಾಡುವಂತಾಗಲಿ.

* ಶ್ರೀ ದುರ್ಗಾಪೂಜೆ ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ

* ಹೇ ಶ್ರೀ ದುರ್ಗಾದೇವಿ, ಈ ಪೂಜಾವಿಧಿಯ ಮೂಲಕ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ನಿರ್ಮಾಣವಾಗಲಿ.

* ಈ ಪೂಜಾವಿಧಿಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ನಾನು ಹೆಚ್ಚೆಚ್ಚು ಗ್ರಹಿಸುವಂತೆ ಕೃಪೆ ಮಾಡು.

* ಹೇ ಶ್ರೀ ದುರ್ಗಾದೇವಿ, ನವರಾತ್ರ್ಯೋತ್ಸವದ ಕಾಲದಲ್ಲಿ ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ವದಿಂದ ನನಗೆ ಹೆಚ್ಚೆಚ್ಚು ಲಾಭವಾಗಲಿ ಎಂದು ಕೇಳಿಕೊಳ್ಳಬೇಕು.

ದುರ್ಗಾದೇವಿ ನಾಮ ಜಪ:

ದುರ್ಗಾದೇವಿ ನಾಮ ಜಪ:

ನವರಾತ್ರಿಯಲ್ಲಿ ದೇವಿತತ್ವವು ಎಂದಿಗಿಂತ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ || ಶ್ರೀ ದುರ್ಗಾದೇವ್ಯೈ ನಮಃ || ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ಸಪ್ತಶ್ಲೋಕೀ ದುರ್ಗಾ ಸ್ತೋತ್ರ

ಸಪ್ತಶ್ಲೋಕೀ ದುರ್ಗಾ ಸ್ತೋತ್ರ

ದೇವ್ಯುವಾಚ -

ಶ್ರೃಣು ದೇವ ಪ್ರವಕ್ಷ್ಯಾಮಿ ಕಲೌ ಸರ್ವೇಷ್ಟಸಾಧನಮ್ |

ಮಯಾ ತವೈವ ಸ್ನೇಹೇನಾಪ್ಯಮ್ಬಾಸ್ತುತಿಃ ಪ್ರಕಾಶ್ಯತೇ ||

ಓಂ ಅಸ್ಯ ಶ್ರೀ ದುರ್ಗಾ ಸಪ್ತಶ್ಲೋಕೀ ಸ್ತೋತ್ರ ಮಂತ್ರಸ್ಯ

ನಾರಾಯಣ ಋಷಿ: ಅನುಷ್ಟುಪ್ ಛಂದ:

ಶ್ರೀ ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತ್ಯೋ ದೇವತಾ:

ಶ್ರೀ ದುರ್ಗಾ ಪ್ರೀತ್ಯರ್ಥೇ ಸಪ್ತಶ್ಲೋಕೀ ದುರ್ಗಾ ಪಾಠೇ ವಿನಿಯೋಗ: |

ಓಂ ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ

ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ ||೧||

ದುರ್ಗೇ ಸ್ಮೃತಾ ಹರಸಿಭೀತಿಮಶೇಷ ಜನ್ತೋ:

ಸ್ವಸ್ಥೈ: ಸ್ಮೃತಾ ಮತಿ ಮತೀವ ಶುಭಾಂ ದದಾಸಿ

ದಾರಿದ್ರ್ಯ ದು:ಖ ಭಯ ಹಾರಿಣಿ ಕಾ ತ್ವದನ್ಯಾ

ಸರ್ವೋಪಕಾರ ಕರಣಾಯ ಸದಾರ್ದ್ರ ಚಿತ್ತಾ ||೨||

ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ

ಶರಣ್ಯೇ ತ್ರ್ಯಮ್ಬಕೇ ಗೌರೀ ನಾರಾಯಣಿ ನಮೋಽಸ್ತುತೇ ||೩||

ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ

ಸರ್ವಸ್ಯಾರ್ತಿ ಹರೇ ದೇವಿ ನಾರಾಯಣಿ ನಮೋಽಸ್ತುತೇ ||೪||

ಸರ್ವಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತುತೇ ||೫||

ರೋಗಾನ ಶೇಷಾ ನಪಹಂಸಿ ತುಷ್ಟಾ

ರುಷ್ಟಾ ತು ಕಾಮಾನ್ ಸಕಲಾನ ಭೀಷ್ಟಾನ್ |

ತ್ವಾಮಾಶ್ರಿತಾನಾಂ ನ ವಿಪನ್ ನರಾಣಾಂ

ತ್ವಾಮಾಶ್ರಿತಾ ಹ್ಯಾ ಶ್ರಯತಾಂ ಪ್ರಯಾಂತಿ ||೬||

ಸರ್ವಾ ಬಾಧಾ ಪ್ರಶಮನಂ ತ್ರೈಲೋಕ್ಯಸ್ಯಾಖಿಲೇಶ್ವರಿ

ಏಕಮೇವ ತ್ವಯಾ ಕಾರ್ಯಮಸ್ಮದ್ ವೈರಿ ವಿನಾಶನಂ ||೭||

ಇತಿ ಸಪ್ತಶ್ಲೋಕೀ ದುರ್ಗಾಸ್ತೋತ್ರ ಸಂಪೂರ್ಣ ||

English summary

Mantas To Chant On Ayuda Puja

Ayudha Puja is a part of the Navratri festival (festival of triumph), a Hindu festival which is traditionally celebrated in India. It is also called "Astra Puja", the synonym for Ayudha Puja. In simple terms, it means “Worship of Instruments”. in Karnataka (in erstwhile Mysore State) as “Ayudha Puje”. The festival falls on the ninth day or Navami of the bright half of Moon's cycle of 15 days in the month of September/October, and is popularly a part of the Dasara or Navaratri or Durga Puja or Golu festival.
Story first published: Monday, October 7, 2019, 6:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X