For Quick Alerts
ALLOW NOTIFICATIONS  
For Daily Alerts

ಸುಗ್ಗಿ ಸಂಕ್ರಾಂತಿ 2020: ಪೂಜೆಗೆ ಶುಭ ಮುಹೂರ್ತ ಹಾಗೂ ದಿನದ ವಿಶೇಷತೆ

|

ಸಂಕ್ರಾಂತಿ ಸೂರ್ಯ ದೇವನಿಗೆ ಅರ್ಪಿತವಾದ ಹಬ್ಬ. ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸುವ ಸಂಕೇತವಾಗಿ ಉತ್ತರಾಯಣ ಮಕರ ಸಂಕ್ರಾಂತಿ ಹಾಗೂ ದಕ್ಷಿಣಾಯನ ಮಕರ ಸಂಕ್ರಾಂತಿ ಎಂದು ಆಚರಣೆ ಮಾಡುವುದು ರೂಢಿಯಲ್ಲಿದೆ. 2020 ಸಾಲಿನಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಬುಧವಾರ ದೇಶಾದ್ಯಣತ ಆಚರಿಸುತ್ತಾರೆ.

makara sankranthi

ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಹಬ್ಬದ ಮರುದಿನ ಕೃಷ್ಣನನ್ನು ಪೂಜಿಸುವ ಸಂಪ್ರದಾಯ ಸಹ ಇದೆ. ಕಾರಣ ಮಕರ ಸಂಕ್ರಾಂತಿಯ ನಂತರದ ದಿನವೇ ಶ್ರೀ ಕೃಷ್ಣ ಪರಮಾತ್ಮ ಗೋವರ್ಧನ ಗಿರಿಯನ್ನು ಎತ್ತಿದ್ದ, ಆದ ಕಾರಣ ಮರುದಿನ ಕೃಷ್ಣನ ಪೂಜೆಯನ್ನು ಮಾಡಲಾಗುತ್ತದೆ.

ಫಸಲು ಪಡೆದ ಹರ್ಷದಲ್ಲಿ ರೈತರು

ಫಸಲು ಪಡೆದ ಹರ್ಷದಲ್ಲಿ ರೈತರು

ಇದೇ ಸಮಯದಲ್ಲಿ ರೈತರು ತಮ್ಮ ಬೆಳೆಗಳನ್ನು ಬೆಳೆದು ಫಸಲವನ್ನು ಪಡೆಯುತ್ತಾರೆ. ಆದ್ದರಿಂದ ಈ ಹಬ್ಬದಲ್ಲಿ ಗೆಣಸು, ಕಡಲೆಕಾಯಿ, ಅವರೇಕಾಯಿ, ಎಳ್ಳು, ಬೆಲ್ಲ, ಇವುಗಳನ್ನು ದೇವರಿಗೆ ಇಟ್ಟು ಪೂಜೆ ಮಾಡುವುದು. ಹಸುಗಳಿಗೆ ಕಿಚ್ಚು ಹಾಯಿಸುವುದನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದಂತೆ ಆಚರಿಸುತ್ತಾರೆ. ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.

2020 ಜನವರಿ 15ರಂದು ಪೂಜೆ ಮಾಡಲು ಶುಭ ಮುಹೂರ್ತ

2020 ಜನವರಿ 15ರಂದು ಪೂಜೆ ಮಾಡಲು ಶುಭ ಮುಹೂರ್ತ

ಮಕರ ಸಂಕ್ರಾಂತಿ ಪುಣ್ಯ ಕಾಲ: ಬೆಳಿಗ್ಗೆ 7:15 ರಿಂದ ಸಂಜೆ 5:46 ರವರೆಗೆ

ಮಕರ ಸಂಕ್ರಾಂತಿ ಪುಣ್ಯ ಕಾಲ: ಬೆಳಿಗ್ಗೆ 7:15 ರಿಂದ ಬೆಳಿಗ್ಗೆ 9ರವರೆಗೆ

ಸಂಕ್ರಾಂತಿ ದಿನ ಮಾಡುವ ವಿಧಿ-ವಿಧಾನಗಳು

ಸಂಕ್ರಾಂತಿ ದಿನ ಮಾಡುವ ವಿಧಿ-ವಿಧಾನಗಳು

* ಸೂರ್ಯ ಹುಟ್ಟುವ ಮುನ್ನವೇ ಎದ್ದು ಪುಣ್ಯ ಜಲದಲ್ಲಿ ಸ್ನಾನ ಮಾಡುವುದು

* ಮನೆ ಮುಂದೆ ಆಕರ್ಷಕವಾದ ಬಣ್ಣಗಳಿಂದ ತುಂಬಿದ ರಂಗೋಲಿ ಹಾಕುವುದು

* ಮಡಿಯಿಂದ ಪೂಜಾ ವಿಧಿ-ವಿಧಾನಗಳನ್ನು ಮಾಇ, ಸೂರ್ಯ ದೇವನಿಗೆ ವಂದಿಸುವುದು

* ಪ್ರಸಾದವಾಗಿ ಸಿಹಿ ಹಾಗೂ ಖಾರ ಪೊಂಗಲ್ ತಯಾರಿಸಿ ಹಂಚುವುದು

* ಎಳ್ಳು-ಬೆಲ್ಲ ತಯಾರಿಸಿ ಎಲ್ಲರ ಮನೆಗೆ ಕೊಟ್ಟು ಸಿಹಿ ಮಾತುಗಳನ್ನು ಆಡುವುದು

* ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವುದು

ಯಾವ ರಾಜ್ಯದಲ್ಲಿ ಹೇಗೆ ಆಚರಣೆ?

ಯಾವ ರಾಜ್ಯದಲ್ಲಿ ಹೇಗೆ ಆಚರಣೆ?

ಸಂಪ್ರದಾಯ ಅಚರಣೆಯ ಪದ್ಧತಿ ವಿಭಿನ್ನವಾದರೂ ಮಕರ ಸಂಕ್ರಾಂತಿಯನ್ನು ಇಡೀ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಆಯಾ ಆಚರಣೆಗೆ ತಕ್ಕಂತೆ, ಅಲ್ಲಿನ ದೇಶಿಯ ಭಾಷೆಗಳಲ್ಲಿ ಭಿನ್ನವಾಗಿ ಕರೆದರೂ ಈ ಹಬ್ಬ ಎಲ್ಲ ರಾಜ್ಯದಲ್ಲೂ ಸೂರ್ಯದ ಪತ ಬದಲಾವಣೆಯ ಸಂಕೇತವಾಗಿಯೇ ಆಚರಿಸಲಾಗುತ್ತದೆ.

* ಕರ್ನಾಟಕದಲ್ಲಿ ಸಂಕ್ರಾಂತಿ ಅಥವಾ ಮಕರ ಸಂಕ್ರಾಂತಿ ಎಂಬ ಹೆಸರಿನಿಂದ ಆಚರಿಸುವುದು ವಾಡಿಕೆ.

* ತಮಿಳುನಾಡಿನಲ್ಲಿ ಇದು ಅತ್ಯಂತ ಪ್ರಮುಖವಾದ ಹಬ್ಬವಾಗಿದೆ. ಇಲ್ಲಿ ಪೊಂಗಲ್ ಎಂದು ಈ ಹಬ್ಬ ಆಚರಿಸುತ್ತಾರೆ. ಅಲ್ಲದೇ ನಾಲ್ಕು ದಿನಗಳ ಕಾಲ ಸಾಕಷ್ಟು ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

* ಆಂಧ್ರಪ್ರದೇಶದಲ್ಲಿ ಪೆದ್ದ ಪಂಡುಗ ಎಂದು ಸಂಕ್ರಾಂತಿಯನ್ನು ಆಚರಿಸುತ್ತಾರೆ. ಇಲ್ಲಿ ಸಹ ತಮಿಳುನಾಡಿನಂತೆ 4 ದಿನಗಳ ಕಾಲ ಆಚರಿಸಲಾಗುತ್ತದೆ.

* ಗುಜರಾತ್‌ನಲ್ಲಿ ಉತ್ತರಾಯಣ ಎಂದು ಆಚರಿಸುತ್ತಾರೆ.

* ಅಸ್ಸಾಂನಲ್ಲಿ ಮಾಘ ಬಿಹು ಅಥವಾ ಭೋಗಾಲಿ ಎಂಬ ಹೆಸರಿನಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

* ಪಂಜಾಬ್‌ನಲ್ಲಿ ಈ ಹಬ್ಬವನ್ನು ಲೋಹ್ರಿ ಎಂದು ಆಚರಿಸುತ್ತಾರೆ.

English summary

Makara Sankranthi 2020: Date, Shubha Muhurtha And Specialiity

This is a popular Hindu festival that occurs on or around January 15th across India. The day is known by various names and there is a variety of different customs observed in the different Indian states.
Story first published: Tuesday, January 14, 2020, 17:15 [IST]
X
Desktop Bottom Promotion