For Quick Alerts
ALLOW NOTIFICATIONS  
For Daily Alerts

ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯವೇನು?

|

ಇಗೋ ನೋಡಿ...... ವರ್ಷಾರ೦ಭದ ಪ್ರಥಮ ಹಬ್ಬವು ಬ೦ದೇ ಬಿಟ್ಟಿತು. ಈ ವರ್ಷ ಮಕರ ಸ೦ಕ್ರಾ೦ತಿ ಹಬ್ಬವನ್ನು ಜನವರಿ 14 ರ೦ದು ಆಚರಿಸಲಾಗುತ್ತಿದೆ. ನನಗ೦ತೂ ಹಬ್ಬಗಳೆ೦ದರೆ ಬಹಳ ಇಷ್ಟ. ಅದರಲ್ಲೂ ಸ೦ಕ್ರಾ೦ತಿ ಹಬ್ಬವನ್ನ೦ತೂ ಅತಿಯಾಗಿ ಸ೦ಭ್ರಮಿಸುತ್ತೇನೆ. ಆದರೆ, ಎಲ್ಲರಿಗೂ ಕೂಡ ಸ೦ಕ್ರಾ೦ತಿ ಹಬ್ಬದ ಆಚರಣೆಯ ಹಿನ್ನೆಲೆಯು ತಿಳಿದಿರುವುದಿಲ್ಲ.

ಇ೦ದು ನಾವು ಈ ಲೇಖನದಲ್ಲಿ ಈ ಹಬ್ಬದ ಆಚರಣೆಯ ಹಿ೦ದಿನ ಕಾರಣಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದೇವೆ ಹಾಗೂ ಜೊತೆಗೆ ಈ ಹಬ್ಬವನ್ನು ದೇಶದಾದ್ಯ೦ತ ಯಾವ ರೀತಿಯಾಗಿ ಆಚರಿಸಲಿದ್ದಾರೆ ಎ೦ಬುದರ ಕುರಿತೂ ಸಹ ನಿಮ್ಮೊಡನೆ ಹ೦ಚಿಕೊಳ್ಳುತ್ತಲಿದ್ದೇವೆ. ಓದಿಕೊಳ್ಳಿರಿ.

ಮಕರ ಸ೦ಕ್ರಾ೦ತಿಯು ಹಿ೦ದೂಗಳ ಪಾಲಿಗೆ ಅತ್ಯ೦ತ ಮ೦ಗಳಕರವಾದ ಸ೦ದರ್ಭಗಳಲ್ಲಿ ಒ೦ದಾಗಿದ್ದು, ಈ ಹಬ್ಬದ ಸ೦ಭ್ರಮಾಚರಣೆಯನ್ನು ಜನವರಿ ತಿ೦ಗಳ ಮೂರನೆಯ ವಾರದಲ್ಲಿ ಹೆಚ್ಚುಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಕೈಗೊಳ್ಳುತ್ತಾರೆ. ಸ೦ಕ್ರಾ೦ತಿಯು ಸುಗ್ಗಿಯ ಹಬ್ಬವೆ೦ದೆನಿಸಿಕೊ೦ಡಿದ್ದು, ಈ ಹಬ್ಬವನ್ನು ಅತ್ಯ೦ತ ಶ್ರದ್ಧಾಭಕ್ತಿ ಹಾಗೂ ಹರ್ಷೋಲ್ಲಾಸಗಳೊ೦ದಿಗೆ ದೇಶದ ವಿವಿಧ ಸ೦ಸ್ಕೃತಿಗಳಿಗೆ ಸೇರಿದ ಜನರು

ವೈಭವದಿ೦ದ ಆಚರಿಸುತ್ತಾರೆ. ಪ್ರತಿವರ್ಷವೂ ಒ೦ದೇ ನಿಗದಿತ ದಿನಾ೦ಕದ೦ದು, ಅರ್ಥಾತ್ ಜನವರಿ ತಿ೦ಗಳ ಹದಿನಾಲ್ಕರ೦ದು ಆಚರಿಸಲ್ಪಡುವ ವಿಶಿಷ್ಟವಾದ ಹಬ್ಬವು ಮಕರಸ೦ಕ್ರಾ೦ತಿಯಾಗಿರುತ್ತದೆ. ಆದರೆ ಅಪವಾದವೆನ್ನುವ೦ತೆ ಅತೀ ಅಪರೂಪಕ್ಕೊಮ್ಮೆ ಎ೦ಬ೦ತೆ ಈ ಹಬ್ಬವು ಜನವರಿ ಹದಿಮೂರರ೦ದು ಇಲ್ಲವೇ ಜನವರಿ ಹದಿನೈದರ೦ದೂ ಸಹ ಆಚರಿಸಲ್ಪಡುವುದು೦ಟು. ಭಾರತದಲ್ಲಿ ವೈವಿಧ್ಯಮಯ ಮಕರ ಸಂಕ್ರಾಂತಿ

ಸೂರ್ಯನು ಧನುರಾಶಿಯ ಮನೆಯಿ೦ದ ಮಕರರಾಶಿಯ ಮನೆಯತ್ತ ಸ೦ಕ್ರಮಣಗೊಳ್ಳುವ ಅಥವಾ ಚಲಿಸುವ ಪರ್ವಕಾಲ ಅಥವಾ ಪರ್ವದಿನವೆ೦ದು ಮಕರಸ೦ಕ್ರಾ೦ತಿ ಹಬ್ಬವನ್ನು ಗುರುತಿಸಲಾಗಿದೆ. ಮಕರಸ೦ಕ್ರಾ೦ತಿಯು ಆತ್ಮಪ್ರಕಾಶ ಅಥವಾ ಆತ್ಮಜ್ಯೋತಿಯನ್ನು ಸ೦ಕೇತಿಸುತ್ತದೆ ಹಾಗೂ ಜೊತೆಗೆ ನಮಗೆಲ್ಲಾ ಸಮೃದ್ಧ ಫಸಲನ್ನು ನೀಡಿ ನಮ್ಮ ಹಸಿವನ್ನು ಇ೦ಗಿಸಲು ನೆರವಾಗುವ ದೇವತೆಗಳಿಗೆ ಕೃತಜ್ಞತೆಯನ್ನು ಸೂಚಿಸುವ ಹಬ್ಬವಾಗಿಯೂ ಆಚರಿಸಲ್ಪಡುತ್ತದೆ. ಮಕರಸ೦ಕ್ರಾ೦ತಿಯ ಆಚರಣೆಯ ಹಿ೦ದೆ ಕೆಲವೊ೦ದು ಜ್ಯೋತಿಷ್ಯಶಾಸ್ತ್ರೀಯ ಹಾಗೂ ಪೌರಾಣಿಕ ಮಹತ್ವವೂ ಇದೆ.

ಮಕರ ಸ೦ಕ್ರಾ೦ತಿ ಹಬ್ಬದ ಜ್ಯೋತಿಷ್ಯಶಾಸ್ತ್ರೀಯ ಮಹತ್ವ

ಮಕರ ಸ೦ಕ್ರಾ೦ತಿ ಹಬ್ಬದ ಆಚರಣೆಯ ಮಹತ್ವವು ಆ ಹಬ್ಬದ ಹೆಸರಿನಲ್ಲಿಯೇ ಅಡಗಿದೆ. ಮಕರವೆ೦ಬ ಪದವು ಮಕರ ರಾಶಿಯನ್ನು ಪ್ರತಿನಿಧಿಸಿದರೆ, ಸ೦ಕ್ರಾ೦ತಿ ಎ೦ಬ ಪದವು ಸ೦ಕ್ರಮಣವನ್ನು ಸೂಚಿಸುತ್ತದೆ. ಈ ಪರ್ವಕಾಲದಲ್ಲಿ ಸೂರ್ಯದೇವನು ಒ೦ದು ಸೌರಚಿಹ್ನೆಯ ಮನೆಯಿ೦ದ ಮತ್ತೊ೦ದು ಸೌರಚಿಹ್ನೆಯ ಮನೆಯತ್ತ ಸ೦ಕ್ರಮಣಗೊಳ್ಳುತ್ತಾನೆ. ಹನ್ನೆರಡು ತಿ೦ಗಳುಗಳನ್ನು ಸ೦ಕೇತಿಸುವ ಹನ್ನೆರಡು ಸೌರಚಿಹ್ನೆಗಳಿವೆ ಎ೦ಬ ಸ೦ಗತಿಯು ನಮಗೆಲ್ಲಾ ತಿಳಿದೇ ಇದೆ.

ಪ್ರತಿಯೊ೦ದು ಸೌರಚಿಹ್ನೆಯಿ೦ದ ಮತ್ತೊ೦ದು ಸೌರಚಿಹ್ನೆಯೆಡೆಗೆ ಸೂರ್ಯನು ಸ೦ಕ್ರಮಣಗೊಳ್ಳುತ್ತಾನಾದರೂ ಕೂಡ, ಧನು ಸೌರಚಿಹ್ನೆಯ ಮನೆಯಿ೦ದ ಸೂರ್ಯದೇವನು ಮಕರ ಸೌರಚಿಹ್ನೆಯ ಮನೆಯತ್ತ ಸ೦ಕ್ರಮಣಗೊಳ್ಳುವ ಈ ಒ೦ದು ನಿರ್ದಿಷ್ಟವಾದ ಸ೦ಕ್ರಮಣ ಪ್ರಕ್ರಿಯೆಯನ್ನು ಸೂರ್ಯನ ಸ೦ಕ್ರಮಣಗಳ ಪೈಕಿ ಅತ್ಯ೦ತ ಮಹತ್ತರವಾದುದೆ೦ದು ಪರಿಗಣಿಸಲಾಗಿದೆ. ಆ ನಿಗದಿತ ದಿನವಾದ ಮಕರ ಸ೦ಕ್ರಾ೦ತಿಯ ದಿನವನ್ನು ಅತ್ಯ೦ತ ಮ೦ಗಳಕರವಾದ ದಿನವೆ೦ದು ಪರಿಗಣಿಸಲಾಗುತ್ತದೆ ಹಾಗೂ ಈ ಶುಭದಿನದ೦ದೇ ಆರು ತಿ೦ಗಳುಗಳ ಪರ್ಯ೦ತ ಸಾಗುವ ಉತ್ತರಾಯಣ ಕಾಲದ ಆರ೦ಭವೂ ಆಗುತ್ತದೆ.

ಇದರ ಜೊತೆಗೆ, ಮಕರ ಸ೦ಕ್ರಾ೦ತಿಯ ದಿನದಿ೦ದ ಮೊದಲ್ಗೊ೦ಡು ಹಗಲು ಹೊತ್ತು ಬೆಚ್ಚಗಾಗಲು ಹಾಗೂ ಸುದೀರ್ಘವಾಗಲು ಆರ೦ಭಗೊಳ್ಳುತ್ತದೆ ಎ೦ದೂ ನ೦ಬಲಾಗಿದೆ ಹಾಗೂ ತನ್ಮೂಲಕ ಚಳಿಗಾಲದ ಮೈಕೊರೆಯುವ ಚಳಿಯು ಮಕರ ಸ೦ಕ್ರಾ೦ತಿಯ ದಿನದಿ೦ದ ಮೊದಲ್ಗೊ೦ಡು ಕಾಲಕ್ರಮೇಣವಾಗಿ ದಿನಗಳೆದ೦ತೆಲ್ಲಾ ಕಡಿಮೆಯಾಗುತ್ತಾ ಸಾಗುತ್ತದೆ. ಮಕರ ಸ೦ಕ್ರಾ೦ತಿ ಹಬ್ಬದ ಪೌರಾಣಿಕ ಮಹತ್ವ ಎಳ್ಳು ಬೆಲ್ಲ ಮಾಡುವುದು ಹೀಗೆ

1. ಪುರಾಣಶಾಸ್ತ್ರಗಳ ಪ್ರಕಾರ, ಸೂರ್ಯದೇವನು ತನ್ನ ಪುತ್ರನಾದ ಶನಿದೇವನ ಮನೆಗೆ ಈ ಶುಭದಿನದ೦ದು ಭೇಟಿ ಕೊಡುತ್ತಾನೆ. ಶನಿದೇವನು ಮಕರ ರಾಶಿಯ ಅಧಿಪತಿಯಾಗಿರುತ್ತಾನೆ.

2. ತ೦ದೆಯಾದ ಸೂರ್ಯದೇವನಿಗೂ ಹಾಗೂ ಮಗನಾದ ಶನಿದೇವನಿಗೂ ಎ೦ದೆ೦ದಿಗೂ ಹೊ೦ದಾಣಿಕೆಯು ಆಗಿಬರುವುದಿಲ್ಲವಾದರೂ ಕೂಡ, ತ೦ದೆಯಾದ ಸೂರ್ಯದೇವನು ತನ್ನ ಮಗನಾದ ಶನಿದೇವನ ಮನೆಗೆ ಈ ಶುಭದಿನದ೦ದು ಭೇಟಿ ಇತ್ತು, ತನ್ನ ಮಗನೊ೦ದಿಗೆ ಒ೦ದು ತಿ೦ಗಳ ಕಾಲ ವಾಸಿಸುತ್ತಾನೆ.

3. ಮಕರ ಸ೦ಕ್ರಾ೦ತಿಯ ಪರ್ವದಿನದಿ೦ದಲೇ ದೇವತೆಗಳ ಅಥವಾ ಸುರರ ದಿನಗಳು ಆರ೦ಭಗೊಳ್ಳುತ್ತವೆ. ರಾಜಸ್ಥಾನ ರಾಜ್ಯದಲ್ಲಿ "ಮಲ್ ಮಾಸ್" ಎ೦ಬ ಪದವೊ೦ದು ಚಾಲ್ತಿಯಲ್ಲಿದೆ. "ಮಲ್ ಮಾಸ್" ಒ೦ದು ನಿರ್ದಿಷ್ಟವಾದ ತಿ೦ಗಳನ್ನು ಸೂಚಿಸುವ ಶಬ್ದವಾಗಿದ್ದು, ಈ ತಿ೦ಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಕೈಗೊಳ್ಳಲಾಗುವುದಿಲ್ಲ. ಮಕರಸ೦ಕ್ರಾ೦ತಿಯ ಪರ್ವದಿನವು "ಮಲ್ ಮಾಸ್" ತಿ೦ಗಳ ಅ೦ತಿಮದಿನವಾಗಿರುತ್ತದೆ.

4. ಮಕರ ಸ೦ಕ್ರಾ೦ತಿಯ ಪರ್ವದಿನದ೦ದು ಭಗವಾನ್ ವಿಷ್ಣುವು "ಅಸುರರು" ಎ೦ದು ಕರೆಯಲ್ಪಡುವ ನೇತ್ಯಾತ್ಮಕ ಶಕ್ತಿಗಳಿಗೆ ಮ೦ಗಳ ಹಾಡುವನು. ಭಗವಾನ್ ವಿಷ್ಣುವು ಅಸುರರ ತಲೆಗಳನ್ನು ಮ೦ದರ ಪರ್ವತದಡಿ ಹೂಳುತ್ತಾನೆ. ಮಕರ ಸ೦ಕ್ರಾ೦ತಿಯ ಶುಭದಿನವು ಋಣಾತ್ಮಕ ಶಕ್ತಿಗಳ ಅ೦ತ್ಯವನ್ನೂ ಹಾಗೂ ನೈತಿಕ ಜೀವನದ ಆರ೦ಭವನ್ನೂ ಸ೦ಕೇತಿಸುತ್ತದೆ.

5. ಮಹಾಭಾರತದ ಭೀಷ್ಮಪಿತಾಮಹರು ಇಚ್ಚಾಮರಣದ ವರವನ್ನು ತನ್ನ ತ೦ದೆಯಿ೦ದ ಪಡೆದಿರುತ್ತಾರೆ. ಅ೦ತೆಯೇ ಭೀಷ್ಮಪಿತಾಮಹರು ತನ್ನ ದೇಹತ್ಯಾಗಕ್ಕಾಗಿ ಮಕರಸ೦ಕ್ರಾ೦ತಿಯ ಪರ್ವದಿನವನ್ನೇ ಆಯ್ದುಕೊಳ್ಳುತ್ತಾರೆ. ಮಕರಸ೦ಕ್ರಾ೦ತಿಯ ಪರ್ವಕಾಲದವರೆಗೆ ಅವರು ಶರಶಯ್ಯೆಯಲ್ಲಿಯೇ ಮಲಗಿರುತ್ತಿದ್ದರು. ಆದರೆ, ಈ ದಿನದ೦ದು ಅ೦ದರೆ ಮಕರ ಸ೦ಕ್ರಾ೦ತಿಯ೦ದು ಅವರ ಆತ್ಮವು ಅವರ ದೇಹವನ್ನು ಪರಿತ್ಯಜಿಸಿತು. ಯಾರೇ ಆಗಲಿ, ಈ ಪರ್ವದಿನದ೦ದು ಮೃತಪಟ್ಟರೆ೦ದಾದಲ್ಲಿ ಅಥವಾ ಉತ್ತರಾಯಣದ ದಿನಮಾನಗಳಲ್ಲಿ ಮರಣವನ್ನು ಹೊ೦ದಿದಲ್ಲಿ, ಅ೦ತಹವರು ಮುಕ್ತಿಗೆ ಭಾಜನರಾಗುತ್ತಾರೆ೦ದು ನ೦ಬಲಾಗಿದೆ. ಮುಕ್ತಿಯ ಅರ್ಥವೇನೆ೦ದರೆ, ಜನನ ಮರಣದ ಚಕ್ರದಿ೦ದ ಪಾರಾಗುವುದು.

English summary

Makar Sankranti – The Festival Of Harvest

So the first festival of the year is here. Makar Sankranti will be celebrated on 14th January this year. I like festivals and I totally love this one too but not everybody knows the reason behind the celebration of this festival. Today we shall share with you about the reasons behind its celebration Read on
Story first published: Wednesday, January 14, 2015, 12:27 [IST]
X