For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿ 2021: ಈ ಶುಭ ದಿನ ಏನು ಮಾಡಬಾರದು, ಏನು ಮಾಡಬೇಕು?

|

ಹಿಂದೂಗಳಿವೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಶಾಸ್ತ್ರ-ಸಂಪ್ರದಾಯದ ಪ್ರಕಾರ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು.

ಮಕರ ಸಂಕ್ರಾಂತಿಯು ಸೂರ್ಯನು ತನ್ನ ಪಥವನ್ನು ಬದಲಾಯಿಸುವುದರ ಜೊತೆಗೆ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವುದು. ಈ ದಿನ ಶುಭ ಕಾರ್ಯಕ್ಕೆ ತುಂಬಾ ಶ್ರೇಷ್ಠ ಎಂದು ಹೇಳಲಾಗುವುದು.

ಅದಲ್ಲದೆ ರೈತರಿಗೆ ಇದು ಸುಗ್ಗಿಯ ಹಬ್ಬವಾಗಿದೆ. ಮಕರ ಸಂಕ್ರಾಂತಿಯು ಭಾರತದೆಲ್ಲೆಡೆಗಳಲ್ಲಿ ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತದೆ. ಪಂಜಾಬ್‌ನಲ್ಲಿ ಈ ಹಬ್ಬವನ್ನು ಲೋಹರಿ ಎಂದು ಕರೆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಉತ್ತರಾಯಣ್ (ಗಾಳಿಪಟ ಹಾರಿಸುವ ಹಬ್ಬ), ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ ಮಕರ ಸಂಕ್ರಾಂತಿಯೆಂದು ಕರೆಯಲಾಗುವುದು.

ಇನ್ನು ತಮಿಳುನಾಡಿನಲ್ಲಿ ತುಂಬಾ ಅದ್ಧೂರಿಯ ಹಬ್ಬ ಇದಾಗಿದ್ದು ಇದನ್ನು "ಪೊಂಗಲ್" ಎಂದು ಸಂಭ್ರಮಿಸಲಾಗುವುದು. ಇನ್ನು ಕೇರಳದ ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿ ಭಕ್ತಿರಿಗೆ ತುಂಬಾ ವಿಶೇಷವಾದ ದಿನ, ಈ ದಿನವನ್ನು 'ಮಗರವಳಕ್' ಎಂದು ಆಚರಿಸುತ್ತಾರೆ. ಉಳಿದ ರಾಜ್ಯಗಳಲ್ಲಿ ಸಂಕ್ರಾಂತಿ ಎಂದೂ ಆಚರಿಸಲ್ಪಡುತ್ತದೆ.

ಈ ಶುಭ ದಿನದಲ್ಲಿ ಕೆಲವೊಂದು ಕಾರ್ಯ ಮಾಡಿದರೆ ಒಳಿತಾಗುತ್ತದೆ, ಕೆಲವೊಂದು ಕಾರ್ಯವನ್ನು ಮಾಡಬಾರದು ಎಂದು ಹೇಳಲಾಗುತ್ತಿದೆ, ಬನ್ನಿ ಅವುಗಳು ಏನು ಎಂದು ತಿಳಿಯೋಣ:

ಮೊದಲಿಗೆ ಏನು ಮಾಡಬಾರದು ಎಂದು ನೋಡೋಣ

ಕೆಟ್ಟ ಆಲೋಚನೆ ಮಾಡುವುದು, ದ್ವೇಷ ಇರಬಾರದು

ಕೆಟ್ಟ ಆಲೋಚನೆ ಮಾಡುವುದು, ದ್ವೇಷ ಇರಬಾರದು

ಈ ದಿನ ಕೆಟ್ಟ ಆಲೋಚನೆ ಮಾಡಬಾರದು, ಯಾರ ಬಗ್ಗೆ ದ್ವೇಷ, ಅಸೂಯೆ ಪಡಬಾರದು, ಅಲ್ಲದೆ ಮದ್ಯ, ತಂಬಾಕು ಅಂತಹ ವಸ್ತುಗಳನ್ನು ಮುಟ್ಟಬಾರದು, ಅಲ್ಲದೆ ಈ ದಿನ ತುಂಬಾ ಖಾರವಾದ ಪದಾರ್ಥಗಳನ್ನು ಕೂಡ ಸೇವಿಸಬಾರದು.

ಈ ದಿನ ಎಳ್ಳು-ಬೆಲ್ಲ ಸವಿಯಿರಿ,ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಮರ ಕತ್ತರಿಸಬಾರದು, ಮಾಂಸಾಹಾರ ಸೇವಿಸಬಾರದು

ಮರ ಕತ್ತರಿಸಬಾರದು, ಮಾಂಸಾಹಾರ ಸೇವಿಸಬಾರದು

ಮಕರ ಸಂಕ್ರಾಂತಿ ದಿನ ಮರ ಕತ್ತರಿಸಬಾರದು. ಎಮ್ಮೆಯ ಹಾಲು ಕೊಡಿಯಬಾರದು. ಈ ದಿನ ಮಾಂಸಾಹಾರ ಸೇವಿಸಬಾರದು. ಎಲ್ಲರಿಗೂ ಎಳ್ಳು-ಬೆಲ್ಲ ನೀಡಿ ಬಾಯಿ ಸಿಹಿ ಮಾಡಿ.

ಸ್ನಾನ ಮಾಡದೆ ಆಹಾರ ಸೇವಿಸಬೇಡಿ

ಸ್ನಾನ ಮಾಡದೆ ಆಹಾರ ಸೇವಿಸಬೇಡಿ

ನಿಮಗೆ ಬೆಳಗ್ಗೆ ಎದ್ದು ಹಲ್ಲು ಮಾತ್ರ ಉಜ್ಜಿ ಆಹಾರ ಸೇವಿಸುವ ಅಭ್ಯಾಸ ಇದ್ದರೆ ಈ ದಿನ ಬದಲಾಯಿಸಿ. ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ದೇವರ ಆರಾಧನೆ ಮಾಡಿದ ಬಳಿಕವಷ್ಟೇ ತಿನ್ನಬೇಕು.

ನಿರ್ಗತಿಕರನ್ನು ಬರಿಗೈಯಲ್ಲಿ ಕಳುಹಿಸಬಾರದು

ನಿರ್ಗತಿಕರನ್ನು ಬರಿಗೈಯಲ್ಲಿ ಕಳುಹಿಸಬಾರದು

ಈ ದಿನ ನಿರ್ಗತರಿಗೆ ದಾನ ಮಾಡುವುದರಿಂದ ಪುಣ್ಯ ಸಿಗುವುದು. ಯಾವುದೇ ಕಾರಣಕ್ಕೆ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು.

ಏನು ಮಾಡಬೇಕು?

ಏನು ಮಾಡಬೇಕು?

ಈ ದಿನ ಎಳ್ಳು-ಬೆಲ್ಲ ದಾನ ಮಾಡಿ. ಈ ದಿನ ಎಳ್ಳುದಾನ ಮಾಡಿದರೆ ನೂರು ಪಟ್ಟು ಪ್ರತಿಫಲ ಸಿಗುತ್ತದೆ, ಇದರಿಂದ ಗ್ರಹದೋಷ ನಿವಾರಣೆಯಾಗುತ್ತದೆ.

ವೈಜ್ಞಾನಿಕ ದೃಷ್ಟಿಕೋನದಿಂದಲೂ ಈ ಸಮಯದಲ್ಲಿ ಎಳ್ಳು ಸೇವನೆ ಒಳ್ಳೆಯದು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಕಾರಿ.

English summary

Makar Sankranti: Dos And Don'ts On This Auspicious Day

Makar Sankranti 2021: Dos And Don'ts On This Auspicious Day, Have a look,
Story first published: Thursday, January 7, 2021, 18:31 [IST]
X