Just In
Don't Miss
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಫೇಸ್ಲಿಫ್ಟ್ ವರ್ಷನ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರಲ್ಲಿ ಮನೆ ಖರೀದಿಸುವ ಅದೃಷ್ಟ ಈ ರಾಶಿಚಕ್ರ ಚಿಹ್ನೆಗಳಿಗಿದೆ
ಹಳೆಯ ವರ್ಷವು ಮುಗಿಯುತ್ತಿದ್ದಂತೆ ನಮ್ಮಲ್ಲಿ ಹೊಸ ವರ್ಷದ ಬಾಗಿಲು ಬಡಿಯಲಾರಂಭಿಸುತ್ತದೆ. ಹೊಸ ವರ್ಷದಲ್ಲಾದರೂ ನಮ್ಮ ಕನಸುಗಳು ಈಡೇರ್ಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುತ್ತಿರುತ್ತಾರೆ. ಅಂತಹ ಒಂದು ಕನಸು ಅಂದರೆ 2021 ರಲ್ಲಿ ತಮ್ಮ ಸ್ವಂತ ಮನೆಗೆ ಹೋಗುವುದು.ಆದರೆ ಇದೆಲ್ಲವೂ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ.
ಹಲವಾರು ವರ್ಷಗಳಿಂದ ಸ್ವಂತ ಮನೆಗಾಗಿ ಕಷ್ಟಪಟ್ಟು ದುಡಿದು, ಪೈಸೆ ಪೈಸೆ ಹಣವನ್ನೂ ಕೂಡಿಟ್ಟಿರುತ್ತಾರೆ. ಇನ್ನೂ ಕೆಲವರ ಬಳಿ ಎಲ್ಲವೂ ಇದ್ದರೂ ಗ್ರಹಗತಿಗಳ ಪರಿಣಾಮದಿಂದ ಮನೆ ಕೊಳ್ಳುವುದು ಅಸಾಧ್ಯವಾಗುತ್ತಿರುತ್ತದೆ.ಈ ಗ್ರಹಗತಿಗಳ ಪ್ರಭಾವವೂ ಪ್ರತಿಯೊಬ್ಬರ ಜೀವನದಲ್ಲೂ ಎಂತಹ ಬದಲಾವಣೆಗಳನ್ನಾದರೂ ಉಂಟು ಮಾಡಬಹುದು. ಅಂತಹ ಬದಲಾವಣೆ ಈ ಮನೆ ಖರೀದಿಸುವ ವಿಚಾರದಲ್ಲೂ ಹೊರತಾಗಿಲ್ಲ. ಆದರೆ ಮುಂಬರುವ ೨೦೨೧ನೇ ಇಸವಿಯು ಕೆಲವೊಂದು ರಾಶಿ ಚಕ್ರ ಚಿಹ್ನೆಗಳಿಗೆ ಒಳಿತನ್ನು ಹೊತ್ತು ತಂದಿದೆ. ಅಂದ್ರೆ ಹಲವಾರು ವರ್ಷಗಳಿಂದ ಮನೆ ಖರೀದಿಸಬೇಕೆಂದುಕೊಂಡವರಿಗೆ, ಮನೆ ಕೊಳ್ಳುವ ಯೋಚನೆ ಹೊಂದಿರುವವರಿಗೆ ೨೦೨೧ರಲ್ಲಿ ಸ್ವಂತ ಮನೆಯಾಗುವ ಎಲ್ಲಾ ಸಾಧ್ಯತೆ ಇದೆ. ಹಾಗಾದ್ರೆ ಬನ್ನಿ 2021 ರಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಮನೆ ಖರೀದಿಸಲು ಉತ್ತಮ ನಿರೀಕ್ಷೆಯನ್ನು ಹೊಂದಿವೆ ಎಂದು ತಿಳಿಯೋಣ.

ವೃಷಭ ರಾಶಿ:
೨೦೨೧ ಇಸವಿಯು ವೃಷಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ, ಏಕೆಂದರೆ, ಈ ವರ್ಷ ಮನೆ ನಿರ್ಮಿಸಲು ಎದುರಾಗುತ್ತಿದ್ದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ, ಮನೆ ನಿರ್ಮಾಣದ ವಿಚಾರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದೀರಿ. ವಿಶೇಷವಾಗಿ ಈ ವರ್ಷದ ಫೆಬ್ರವರಿ ತಿಂಗಳಿನ ಆರಂಭದಿಂದಲೂ, ಶುಕ್ರವು ಈ ರಾಶಿಯವ್ರಿಗೆ ಪ್ರಯೋಜನಕಾರಿಯಾಗಲಿದೆ. ಈ ಹಿಂದೆ ಕೆಲವು ಕಾರಣಗಳಿಂದ ಅಥವಾ ಇನ್ನೊಂದರಿಂದ ಮಾತನಾಡಲು ಸಾಧ್ಯವಾಗದೇ ಇದ್ದವರೂ ಈ ವರ್ಷ ಉತ್ತರ ನೀಡುತ್ತದೆ. ಈ ಗ್ರಹಗತಿಗಳ ಬದಲಾವಣೆಯು ನಿಮ್ಮ ಜೀವನದಲ್ಲಿ ಕೆಲವು ಯೋಗಗಳನ್ನು ಹೊತ್ತು ತರುತ್ತದೆ. ಅದರಲ್ಲಿ ಪ್ರಮುಖವಾದುದು ಭೂಮಿ ಅಥವಾ ಮನೆ ನಿರ್ಮಾಣ ಅಥವಾ ಖರೀದಿ ಅನ್ವೇಷಣೆಗಳಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಸಿಂಹ:
೨೦೨೧ ರ ಭವಿಷ್ಯದ ಮುನ್ಸೂಚನೆಗಳ ಪ್ರಕಾರ, ಸಿಂಹ ರಾಶಿಯವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ನೀವು ವರ್ಷಪೂರ್ತಿ ಪ್ರಯೋಜನ ಪಡೆಯುತ್ತೀರಿ ಏಕೆಂದರೆ ಮನೆ ನಿರ್ಮಾಣದ ನಿಮ್ಮ ಭವಿಷ್ಯವನ್ನು ಮಂಗಳ ಮತ್ತು ಶುಕ್ರ, ಶನಿ ಗ್ರಹಗಳೊಂದಿಗೆ ಸಂಯೋಜಿಸಲಾಗುತ್ತಿದೆ, ಇದು ನಿಮಗೆ ಪೂರ್ಣ ಪ್ರಮಾಣದ ಯಶಸ್ಸನ್ನು ನೀಡುತ್ತದೆ. ಈ ಅವಧಿಯು ನಿಮ್ಮ ಜೀವನದಲ್ಲಿ ಬಹಳ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಮನೆ ನಿರ್ಮಾಣದಲ್ಲಿ ನೀವು ಹಣವನ್ನು ಹೂಡಿಕೆ ಮಾಡಬಹುದು, ಇದರಿಂದ ಉತ್ತಮ ಫಲಿತಾಂಶಗಳನ್ನು ಖಂಡಿತವಾಗಿ ಸ್ವೀಕರಿಸುತ್ತೀರಿ.

ತುಲಾ:
೨೦೨೧ ರ ಪ್ರಕಾರ, ಮುಂಬರುವ ವರ್ಷವು ರಾಶಿಚಕ್ರ ಚಿಹ್ನೆಯವರಿಗೆ ಬಹಳ ಶುಭವಾಗಲಿದೆ, ಏಕೆಂದರೆ ಈ ಮಕರ ಸಂಕ್ರಾಂತಿಯಂದು ಗುರು ಮತ್ತು ಶನಿಯ ಪ್ರವೇಶದಿಂದಾಗಿ, ಮನೆ ಖರೀದಿಸಲು ಸಂಬಂಧಿಸಿದ ಎಲ್ಲಾ ರೀತಿಯ ತೊಂದರೆಗಳು ಅಥವಾ ಸಮಸ್ಯೆಗಳು ಕೊನೆಗೊಳ್ಳುತ್ತದೆ. ಕುಟುಂಬದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಚರ್ಚೆಗಳು ನಡೆಯಲಿವೆ. ಮನೆಯ ಸದಸ್ಯರಲ್ಲಿ ಹೊಸ ಉತ್ಸಾಹವೂ ಕಂಡುಬರುತ್ತದೆ.

ಮೀನ:
೨೦೨೧ ರ ಪ್ರಕಾರ, ಈ ರಾಶಿಯವರು ಆರ್ಥಿಕವಾಗಿ ಮತ್ತು ಮನೆ ನಿರ್ಮಾಣದ ಅಂಶಗಳಿಗೆ ಸಂಬಂಧಿಸಿದಂತೆ ಕೆಲವು ಲಾಭಗಳನ್ನು ಗಳಿಸುತ್ತಾರೆ. ಇದರೊಂದಿಗೆ, ಈ ರಾಶಿಚಕ್ರ ಚಿಹ್ನೆಗೆ ಸೇರಿದವರು ಈ ವರ್ಷ ಭೂ-ಕಟ್ಟಡ ಸಂಬಂಧಿತ ಕೆಲಸಗಳಲ್ಲಿ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಮತ್ತು ನಿಮ್ಮ ಸ್ವಂತ ಹೊಸ ಮನೆಗೆ ನೀವು ಹೋಗುವ ಮೂಲಕ ಇಷ್ಟು ವರ್ಷಗಳ ಕಾಯುವಿಕೆ ಮುಗಿಯಲಿದೆ. ತಮ್ಮ ಹೆಸರಿನ ಮನೆಯನ್ನು ಹೊಂದಿರುವ ಜನರಿಗೆ ಈ ಸಮಯವು ಶುಭವಾಗಲಿದೆ. ಕೆಲವು ಅಗತ್ಯ ಪ್ರಯತ್ನಗಳ ನಂತರ ಮನೆ ನಿಮ್ಮ ಹೆಸರಿಗೆ ವರ್ಗಾಯಿಸಬಹುದು.