For Quick Alerts
ALLOW NOTIFICATIONS  
For Daily Alerts

ಭಗವದ್ಗೀತೆಯಿಂದ ಕಲಿಯಬಹುದಾದ ಪ್ರೀತಿಯ ಪಾಠಗಳಿವು

|

ಮಹಾಭಾರತದಂತಹ ಮಹಾಕಾವ್ಯವು ಜನರನ್ನು ಜೀವನದ ನಾನಾ ತೊಂದರೆಗಳಿಂದ ಪಾರು ಮಾಡುವಲ್ಲಿ ಸಹಕಾರಿಯಾಗಿದೆ. ಕೃಷ್ಣನು ತನ್ನ ಉಪದೇಶದ ಮೂಲಕ ಅರ್ಜುನನಿಗೆ ನೀಡಿದ ಜ್ಞಾನವು ಇಂದಿಗೂ ಜನರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

These Are The Love Lessons We Should Learn From Bhagavad Gita

ಭಗವದ್ಗೀತೆಯು ಸತ್ಯ, ಪ್ರೀತಿ, ಮದುವೆ, ಕರ್ಮ, ಜೀವನ, ಮರಣ ಮತ್ತು ಇನ್ನೂ ಮುಂತಾದ ವಿಷಯಗಳ ಕುರಿತಾಗಿ ಜ್ಞಾನವನ್ನು ಸಾರುತ್ತದೆ. ಸಾವಿರಾರು ಗೋಪಿಕೆಯರು ಮತ್ತು ಅನುಯಾಯಿಗಳ ಅನಂತ ಪ್ರೀತಿಯನ್ನು ಗಳಿಸಿರುವ ಕೃಷ್ಣನು ಭಗವದ್ಗೀತೆಯಲ್ಲಿ ಪ್ರೀತಿಯ ಬಗ್ಗೆ ವಿಶೇಷವಾದ ಮತ್ತು ಮಹತ್ವದ ಜ್ಞಾನವನ್ನು ಸಾರಿದ್ದಾನೆ.

ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು

ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು

ಒಳ್ಳೆಯ ಹಾಗೂ ಪರಿಶುದ್ದ ಮನಸ್ಸುಗಳು ಯುಗ ಯುಗಗಳಿಂದಲೂ ಪ್ರೀತಿಯ ಬಗ್ಗೆ ಸಾರುವ ಮಂತ್ರವೆಂದರೆ " ಪ್ರೀತಿಯು ಎಲ್ಲಾ ವಿಷಯಗಳ ಬಾಗಿಲಿಗೂ ಬೀಗದ ಕೈ" ಇದ್ದ ಹಾಗೆ ಎನ್ನುವ ಸುಂದರವಾದ ಹೇಳಿಕೆ.

ಭಗವದ್ಗೀತೆಯ ಈ ಮಂತ್ರವನ್ನು ಕೃಷ್ಣ ಸ್ವತ: ತಾನೇ ಪಾಲಿಸಿರುವನು.

ಇದರ ಪ್ರಕಾರ ಭಗವಂತನು ಸಾರಿದ ಭೋದನೆ ಏನೆಂದರೆ "ನೀನು ನನ್ನನ್ನು ಜಯಿಸುವ ಏಕೈಕ ಮಾರ್ಗವೆಂದರೆ ಅದು ಪ್ರೀತಿ. ಪ್ರೀತಿ ಎಲ್ಲಿದೆಯೋ ಅಲ್ಲಿ ನಾನಿರುವೆ ಇದರಿಂದ ನನ್ನನ್ನು ಸುಲಭವಾಗಿ ಜಯಿಸಬಹುದು" ಎಂಬುದಾಗಿ ಹೇಳಲಾಗಿದೆ.

ದ್ವೇಷ, ಕೋಪ, ಪ್ರತಿಕಾರ ಮತ್ತು ಅಂತಹ ಭಾವನೆಗಳಿಂದ ನಾವು ಶತ್ರುತ್ವವನ್ನು ಬೆಳೆಸಿಕೊಳ್ಳುತ್ತೇವೆ. ಆದರೆ ಪ್ರೀತಿಯನ್ನು ಹರಡುವುದರ ಮೂಲಕ ಅಂತಹ ಕೆಟ್ಟ ಭಾವನೆಗಳನ್ನು ಮೀರಿ ಜನರನ್ನು ಗೆಲ್ಲಬಹುದಾಗಿದೆ. ಪ್ರೀತಿಯನ್ನು ಗಳಿಸಿಕೊಳ್ಳುವ ಅಗತ್ಯವು ಪ್ರತಿಯೊಂದೂ ಭಾವನೆಗಳಲ್ಲೂ ಸರ್ವವ್ಯಾಪಿಯಾಗಿರುತ್ತದೆ. ಆದುದರಿಂದ, ಒಬ್ಬರ ವಿಶ್ವಾಸವನ್ನು ನಾವು ಗಳಿಸಬೇಕೆಂದರೆ ನಾವು ಅವರನ್ನು ಪ್ರೀತಿಸಬೇಕಾಗುತ್ತದೆ.

ನಿನ್ನನ್ನು ನೀನು ಪ್ರೀತಿಸು ಮತ್ತು ನಂತರ ಎಲ್ಲರನ್ನೂ ಪ್ರೀತಿಸು

ನಿನ್ನನ್ನು ನೀನು ಪ್ರೀತಿಸು ಮತ್ತು ನಂತರ ಎಲ್ಲರನ್ನೂ ಪ್ರೀತಿಸು

ಮನಸ್ಸಿನ ಶಾಂತಿಗೆ ಸ್ವಯಂ ಜಾಗೃತರಾಗಿರುವುದು ಮುಖ್ಯವಾದ ಕೀಲಿಯಾಗಿದೆ. ಇದು ಪ್ರಾರಂಭವಾಗುವುದು ಹೇಗೆಂದರೆ ಒಬ್ಬ ವ್ಯಕ್ತಿಯು ತನ್ನನ್ನು ತಾನು ಪ್ರೀತಿಸಿಕೊಂಡು ನಂತರ ತನ್ನ ಸುತ್ತಲಿರುವ ಇತರರನ್ನು ಪ್ರೀತಿಯಿಂದ ಕಂಡಾಗ. ಪರಿಶುದ್ದವಾದ ಪ್ರೀತಿಯು ವಿಮೋಚನೆಯ ಗುಣಗಳನ್ನು ಹೊಂದಿರುವುದರಿಂದ ಇದು ಭೌತಿಕ ಮತ್ತು ಭಾವನಾತ್ಮಕ ಅಗತ್ಯಗಳಿಂದ ವಿಮೋಚನೆಗೊಳ್ಳಲು ಸಹಾಯ ಮಾಡುತ್ತದೆ.

ಕೃಷ್ಣನು ತನ್ನ ಸುತ್ತಲಿನ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಲು ಬಯಸಿದನು, ಹಾಗೂ ಜನರನ್ನು ಸ್ವಯಂ-ಅರಿವುಳ್ಳವನ್ನಾಗಿ ಮಾಡುವ ಉದ್ದೇಶದಿಂದ ಹಾಗೂ ತಮ್ಮನ್ನು ಭಾವನಾತ್ಮಕ ಮತ್ತು ಭೌತಿಕ ಅಗತ್ಯಗಳಿಂದ ಅನೂರ್ಜಿತಗೊಳಿಸುವ ಉದ್ದೇಶದಿಂದ ತನ್ನನ್ನು ಪ್ರೀತಿಸುವಂತೆ ಜನರನ್ನು ಪ್ರೇರೇಪಿಸಿದನು.

ವಿವಿಧ ಮಹಾಕಾವ್ಯಗಳು ಮತ್ತು ಬೋಧನೆಗಳು ಲೌಕಿಕ ಭಾವನಾತ್ಮಕ ಮತ್ತು ಭೌತಿಕವಾದದಿಂದ ಉಂಟಾಗುವ ಅತೃಪ್ತಿಗೆ ಮೂಲವನ್ನು ಹೇಳುತ್ತವೆ. ಮಹಾಭಾರತ ಮಹಾಕಾವ್ಯದಲ್ಲಿ, ಕೃಷ್ಣನು ತನ್ನ ದೈವಿಕ ಪ್ರೀತಿಯೊಂದಿಗೆ ಹೇಳಿರುವುದೇನೆಂದರೆ " ಪರಿಶುದ್ದವಾದ ಆತ್ಮದಿಂದ ಮತ್ತು ಪ್ರೀತಿಯಿಂದ ತನ್ನನ್ನು ಯಾರು ಕಾಣುತ್ತಾರೋ ಅವರು ತನ್ನ ಪ್ರೀತಿಗೆ ಪಾತ್ರರಾಗುತ್ತಾರೆ" ಈ ಸತ್ಯವನ್ನು ಸಂತೋಷದಿಂದ ಯಾರು ಸ್ವೀಕರಿಸುತ್ತಾರೋ ಅವರಿಗೆ ಇದರ ಮುಂದೆ ಎಲ್ಲಾ ಐಹಿಕ ಸಂತೋಷಗಳು ಏನೂ ಇಲ್ಲವೆನ್ನುವಂತೆ ಭಾಸವಾಗುತ್ತದೆ.

ಪ್ರೀತಿ, ಸಹಾನುಭೂತಿ ಮತ್ತು ಭಕ್ತಿಯ ಮೇಲೆ ಕೇಂದ್ರೀಕರಿಸಿ

ಪ್ರೀತಿ, ಸಹಾನುಭೂತಿ ಮತ್ತು ಭಕ್ತಿಯ ಮೇಲೆ ಕೇಂದ್ರೀಕರಿಸಿ

"ನಿಮಗೆ ಏನು ಮಾಡಬೇಕೆಂಬುದು ತೋಚುತ್ತದೆ ಎಲ್ಲವನ್ನೂ ಮಾಡಿ, ಆದರೆ ಅದನ್ನು ರಾಗ, ದ್ವೇಷ, ಅಸೂಯೆ, ದುರಾಸೆ, ಅಹಂ ಅಥವಾ ವೈರತ್ವದ ಇತ್ಯಾದಿಗಳಿಂದ ಅಲ್ಲ ಅದರ ಬದಲಿಗೆ ಸಹಾನುಭೂತಿ, ನಮ್ರತೆ ಮತ್ತು ಭಕ್ತಿಯಿಂದ ಮಾಡಿ ಎಂದು ಕೃಷ್ಣ ಪರಮಾತ್ಮನು ಮಹಾಭಾರತದಲ್ಲಿ ಹೇಳುತ್ತಾನೆ.

ದುರಾಶೆ, ಅಹಂ, ಕಾಮ ಮತ್ತು ಅಸೂಯೆ ನಕಾರಾತ್ಮಕ ಭಾವನೆಯಾಗಿದ್ದು, ಇದು ನಿರಾಶೆಯನ್ನು ಉಂಟುಮಾಡುತ್ತದೆ. ನಾವು ಮಾಡುವ ಕೆಲಸವನ್ನು ದುರಾಶೆಯ ಮೇಲೆ ಕೇಂದ್ರೀಕರಿಸಿದಲ್ಲಿ, ನಾವು ನಮ್ಮ ಕೆಲಸದ ಮೂಲ ಉದ್ದೇಶದಿಂದ ದೂರವಿರುತ್ತೇವೆ ಇದು ಇಡೀ ಕೆಲಸಕ್ಕೆ ಮಾರಕವಾಗುತ್ತದೆ.

ಅಹಂ ಒಬ್ಬನನ್ನು ಶ್ರೇಷ್ಠನೆಂದು ಭಾವಿಸುವಂತೆ ಮಾಡುತ್ತದೆ. ಇದರಿಂದಾಗಿ ತಮ್ಮ ಜೊತೆಗೆ ಇರುವವರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ ಅಲ್ಲದೆ ಅದ್ಭುತ ತಂತ್ರಗಳು ಅಥವಾ ಆಲೋಚನೆಗಳಿಗೆ ಮನಸ್ಸನ್ನು ಮುಚ್ಚುತ್ತದೆ ಮತ್ತು ಸಾಮಾಜಿಕ ಬಂಧವನ್ನು ನಿರ್ಬಂಧಿಸುತ್ತದೆ.

ಸಹಾನುಭೂತಿ ನಿಮ್ಮನ್ನು ಜನರ ಹತ್ತಿರಕ್ಕೆ ತಂದರೆ, ಇತರರ ಮನಸ್ಸಿನ ಮಾತನ್ನು ಕೇಳಲು ನಿಮಗೆ ಸಹಾಯ ಮಾಡುತ್ತದೆ. ಕಾಮ ಮತ್ತು ಅಸೂಯೆ ಇಂದ್ರಿಯಗಳ ನಷ್ಟಕ್ಕೆ ಕಾರಣವಾಗುವ ಬಲವಾದ ದಾರಿಗಳನ್ನು ಹುಟ್ಟುಹಾಕುತ್ತದೆ.

ಇದೆಲ್ಲ ನಕಾರಾತ್ಮಕ ಭಾವನೆಗಳ ಬದಲಾಗಿ ಒಬ್ಬ ವ್ಯಕ್ತಿಯು ತನ್ನಲ್ಲಿ ನಮ್ರತೆ ಯನ್ನು ಹೊಂದಿರುವುದು ಮತ್ತು ತನ್ನ ಆಂತರಿಕ ಶಾಂತಿ ಮತ್ತು ಒಳಿತಿಗಾಗಿ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬಕ್ಕೆ ವಿನಮ್ರನಾಗಿರುವುದು ಉತ್ತಮವಾದ ಮಾರ್ಗವಾಗಿದೆ.

ನಮ್ಮ ಯಾವುದೇ ಚಟುವಟಿಕೆಗಳಿಗೂ ಭಕ್ತಿಯ ಅವಶ್ಯಕತೆ ಇರುತ್ತದೆ. ಏಕೆಂದರೆ ಒಬ್ಬ ವ್ಯಕ್ತಿಯು ಯಶಸ್ವಿಯಾಗಲು ಪೂರ್ಣ ಹೃದಯದಿಂದ ಶ್ರದ್ದೆಯನ್ನು ಹೊಂದಿರುವ ಅವಶ್ಯಕತೆಯಿರುತ್ತದೆ. ಈ ಮೇಲೆ ಹೇಳಿದ ಸಕಾರಾತ್ಮಕ ಗುಣಗಳು ಪ್ರೀತಿಯಿಂದ ಕಲಿತರೆ ಮಾತ್ರ ಅರಳಲು ಸಾಧ್ಯವಾಗುತ್ತದೆ.

ಉದಾರವಾಗಿರುವುದು

ಉದಾರವಾಗಿರುವುದು

ಕೊಡುವುದು ಒಂದು ಶ್ರೇಷ್ಠವಾದ ಗುಣ, ಇದನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿರುವಂತದ್ದು. ನೀಡುವ ಈ ಕ್ರಿಯೆಯಿಂದಾಗಿ ವಿಶಾಲವಾದ ಜೀವನದ ನಿರೀಕ್ಷೆಯನ್ನು ಹೊಂದಲು ಇದು ಅನುವು ಮಾಡಿಕೊಡುತ್ತದೆ. ಇದು ನಮ್ಮ ಜೀವನ, ಆಶಯಗಳು, ತೊಂದರೆಗಳನ್ನು ಮೀರಿ ನೋಡಲು ಅವಕಾಶ ಮಾಡಿಕೊಡುತ್ತದೆ. ಮತ್ತು, ಇತರರಿಗೆ ಸಹಾಯ ಮಾಡುವ ಗುಣವನ್ನು ಹೆಚ್ಚಿಸುತ್ತದೆ. ಈ ಮೂಲಕ ನೀಡುವ ಗುಣದಿಂದಾಗಿ ನಾವು ಪ್ರೀತಿಯನ್ನು ಕೊಡುವುದರಿಂದ ಬೇರೆಯವರಿಂದ ಪ್ರೀತಿಯನ್ನು ಪಡೆಯುತ್ತೇವೆ.

ಒಬ್ಬರಿಂದ ಹಿಂದೆ ಪಡೆಯುವ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಪ್ರೀತಿಸಿ ಶ್ರೇಷ್ಠತೆಯನ್ನು ಮೆರೆಯಬೇಕು, "ನನ್ನ ಭಕ್ತರು ಶುದ್ಧ ಪ್ರೀತಿಯಲ್ಲಿ ನೀಡುವ ಸಣ್ಣ ಉಡುಗೊರೆಯನ್ನು ಸಹ ನಾನು ಶ್ರೇಷ್ಠವೆಂದು ಪರಿಗಣಿಸುತ್ತೇನೆ, ಆದರೆ ಭಕ್ತಿಯಿಲ್ಲದೆ ಅರ್ಪಿಸುವ ಯಾವುದೇ ದೊಡ್ಡ ಉಡುಗೊರೆಯಿಂದಲೂ ಕೂಡಾ ನನ್ನ ಪ್ರೀತಿಗೆ ಪಾತ್ರರಾಗಲು ಸಾಧ್ಯವಿಲ್ಲ". ಎಂದು . ಕೃಷ್ಣನು ಭಗವದ್ಗೀತೆಯಲ್ಲಿ ಈ ಸಾಲಿನ ಮೂಲಕ ತಿಳಿಸುತ್ತಾನೆ.

ನಿರೀಕ್ಷೆಗಳಿಲ್ಲದೆ ಪ್ರೀತಿಸಿ

ನಿರೀಕ್ಷೆಗಳಿಲ್ಲದೆ ಪ್ರೀತಿಸಿ

"ಪ್ರೀತಿಯು ನಮ್ಮನ್ನು ಪ್ರೀತಿಸುವ ಇನ್ನೊಬ್ಬ ವ್ಯಕ್ತಿಯನ್ನು ಮುಕ್ತಗೊಳಿಸಬೇಕು". ಎಂದು ಒಂದು ಸುಂದರವಾದ ಉಲ್ಲೇಖವಿದೆ. ಪ್ರೀತಿಯು ಒಂದು ಒಪ್ಪಂದದ ಸಂಬಂಧವಲ್ಲ . ಇದರಲ್ಲಿ ಕೊಡುವುದು ಮತ್ತು ತೆಗೆದುಕೊಳ್ಳುವ ಕ್ರಿಯೆಯು ಒಳಗೊಂಡಿರಬಾರದು ಏಕೆಂದರೆ ಅದು ವಿಫಲಗೊಳ್ಳುವ ಸಂಭವವಿರುತ್ತದೆ.

ಪರಿಶುದ್ದವಾದ ಪ್ರೀತಿಯು ನಿರೀಕ್ಷೆ , ಕೋಪ ಅಥವಾ ಇನ್ನಿತರ ಭಾವನೆಗಳಿಂದ ಮುಕ್ತವಾಗಿರುತ್ತದೆ. ಇದು ನೀಡುವ ಏಕೈಕ ಕ್ರಿಯೆಯಾಗಿದ್ದು ಇದು ನಿರೀಕ್ಷೆ ಅಥವಾ ಶೂನ್ಯ ಭಾವನೆಯನ್ನು ಅನೂರ್ಜಿತಗೊಳಿಸುತ್ತದೆ. " ಯಾವುದೇ ಲಗಾವು ಇಲ್ಲದೆ ಇರುವವನು ನಿಜವಾಗಿಯೂ ಇತರರನ್ನು ಪ್ರೀತಿಸಬಹುದು ಏಕೆಂದರೆ ಅವನ ಪ್ರೀತಿಯು ಪರಿಶುದ್ದ ಮತ್ತು ದೈವಿಕವಾದುದಾಗಿರುತ್ತದೆ" ಎಂದು ಕೃಷ್ಣ ಪರಮಾತ್ಮನು ಮಹಾಭಾರತದಲ್ಲಿ ಉಲ್ಲೇಖಿಸಿದ್ದಾನೆ.

English summary

Love Lessons to Learn From Bhagavad Gita

Here we are discussing about These Are The Love Lessons We Should Learn From Bhagavad Gita. Bhagavad Gita communicates knowledge on a wide range of subjects like truth, love, marriage, karma, life, death, and so forth. Read more.
X
Desktop Bottom Promotion