ಭಗವಾನ್ ಪರಶಿವನ ಕುರಿತಾದ ರೋಚಕ ಜನ್ಮ ವೃತ್ತಾಂತ

By Deepu
Subscribe to Boldsky

ಹಿಂದೂ ಧರ್ಮದ ಪ್ರಕಾರ ಶಿವನನ್ನು ಪ್ರಳಯಾಂತಕ, ವಿಧ್ವಂಸಕ ಎಂದು ಕರೆಯಲಾಗಿದೆ. ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು.

ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ.

ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ....

ಶಿವನ ಜನನ

ಶಿವನ ಜನನ

ಶಿವನ ಜನನದ ಬಗೆ ಒಂದು ಕುತೂಹಲಕಾರವಾದ ಕಥೆಯಿದೆ. ಒಂದು ದಿನ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ತಮ್ಮಿಬ್ಬರಲ್ಲಿ ಬಲಶಾಲಿ ಯಾರು ಎಂಬ ವಿಷಯವಾಗಿ ವಾಗ್ಯುದ್ಧ ನಡೆಸಿದ್ದರು. ಆ ಸಮಯದಲ್ಲಿ ಅವರೆದುರಿಗೆ ಅತ್ಯಂತ ಎತ್ತರವಾದ ಮತ್ತು ಪ್ರಖರವಾದ ಬೆಳಕಿನ ಕಂಭವೊಂದು ಪ್ರತ್ಯಕ್ಷವಾಯಿತು. ಇದರ ಬೇರುಗಳು ಪಾತಾಳಕ್ಕೂ, ಮರದ ತುದಿ ಆಕಾಶಕ್ಕಿಂತಲೂ ಮೇಲೆ ವ್ಯಾಪಿಸಿದ್ದವು. ಈ ಕಂಭದ ಬಗ್ಗೆ ಕುತೂಹಲಗೊಂಡ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಇದರ ಬುಡ ಮತ್ತು ತುದಿಗಳೆಲ್ಲಿವೆ ಎಂದು ತಿಳಿದುಕೊಳ್ಳಲು ಉತ್ಸುಕರಾದರು. ಬ್ರಹ್ಮ ಒಂದು ಹಂಸದ ರೂಪ ತಾಳಿ ಕಂಭದ ತುತ್ತ ತುದಿಗೆ ಹಾರಿ ಹೋದರೆ ವಿಷ್ಣು ಒಂದು ಕಾಡುಹಂದಿಯ ರೂಪವನ್ನು ತಳೆದು (ವರಾಹರೂಪ) ಭೂಮಿಯಲ್ಲಿ ಸುರಂಗ ಕೊರೆಯುತ್ತಾ ಪಾತಾಳದತ್ತ ಸಾಗಿದ. ಆದರೆ ಇಬ್ಬರ ಸಾಮರ್ಥಕ್ಕೂ ಮೀರಿ ಆ ಕಂಭ ಬೆಳೆದಿರುವುದರಿಂದ ಇದರ ತುದಿ ಅಥವಾ ಬುಡಗಳನ್ನು ತಲುಪಲಾರದೇ ಸೋತು ಇಬ್ಬರೂ ಭೂಮಿಯ ಮೇಲೆ ಹಿಂದಿರುಗುತ್ತಾರೆ.

ಶಿವನ ಜನನ

ಶಿವನ ಜನನ

ಆ ಬಳಿಕ ಆ ಕಂಭದಲ್ಲಿ ಒಂದು ಬಿರುಕು ಮೂಡಿ ಆ ಬಿರುಕಿನಿಂದ ಶಿವ ಹೊರಬರುತ್ತಾನೆ. ಶಿವನ ಈ ಪರಾಕ್ರಮ ಮತ್ತು ಅಪರಿಮಿತ ಶಕ್ತಿಯನ್ನು ಕಂಡ ಇಬ್ಬರೂ ತಮಗಿಂತಲೂ ಶಕ್ತಿಶಾಲಿಯಾದ ದೇವರು ಎಂದು ಶಿವನನ್ನು ಮೂರನೆಯವನಾಗಿ ಸೇರಿಸಿಕೊಳ್ಳುತ್ತಾರೆ. ಆದ್ದರಿಂದಲೇ ತ್ರಿಮೂರ್ತಿಗಳ ಹೆಸರು ಹೇಳುವಾಗ ಮೊದಲು ಬಂದ ಕಾರಣ ಬ್ರಹ್ಮ ವಿಷ್ಣುರವರ ಹೆಸರನ್ನೂ ನಂತರ ಬಂದ ಕಾರಣ ಮಹೇಶ್ವರ ಎಂಬ ಹೆಸರನ್ನೂ ಕರೆಯಲಾಗುತ್ತದೆ.

ಶಿವ ಮತ್ತು ಅವರ ಜೀವನ ಶೈಲಿಗಳು

ಶಿವ ಮತ್ತು ಅವರ ಜೀವನ ಶೈಲಿಗಳು

ಸಾಮಾನ್ಯವಾಗಿ ಹಿಮಾಲಯದ ಹಿಮಾಚ್ಛಾದಿತ ಬೆಟ್ಟಗಳ ಮೇಲೆ ಸದಾ ಧ್ಯಾನಾಸಕ್ತನಾಗಿರುವ ಶಿವ ತನ್ನ ಭಕ್ತರ ಮೊರೆಯನ್ನು ಕೇಳಿ ಅವರ ಸಹಾಯಕ್ಕೆ ಧಾವಿಸುತ್ತಾನೆ. ದುಷ್ಟರ ಉಪಟಳ ತಾಳಲಾರದೇ ಶಿವನಲ್ಲಿ ಮೊರೆಯಿಡುವ ಭಕ್ತರ ರಕ್ಷಣೆಗೆ ಧಾವಿಸುವ ಶಿವ ದುಷ್ಟರ ರುಂಡವನ್ನು ಚೆಂಡಾಡುತ್ತಾನೆ. ಪ್ರಸನ್ನನಾಗಿದ್ದಾಗ ತಾಂಡವನೃತ್ಯ ಮಾಡುವ ಶಿವ ತನ್ನ ಭಕ್ತರ ಮನದಲ್ಲಿದ್ದ ದುಗುಡವನ್ನು ನಿವಾರಿಸುತ್ತಾನೆ. ತಾಂಡವನೃತ್ಯ ಸತ್ಯದ ಸಂಕೇತವೂ ಆಗಿದೆ.

ಶಿವ ಮತ್ತು ಅವರ ಜೀವನ ಶೈಲಿಗಳು

ಶಿವ ಮತ್ತು ಅವರ ಜೀವನ ಶೈಲಿಗಳು

ಪುರಾಣಗಳ ಪ್ರಕಾರ ಒಮ್ಮೆ ಸರ್ಪಗಳ ದೇವತೆಯಾದ ವಾಸುಕಿ ತನ್ನ ವಿಷದಿಂದ ಲೋಕವನ್ನು ವಿನಾಶಗೊಳಿಸಲು ಹೊರಟಿದ್ದಾಗ ದೇವತೆಗಳು ಈ ವಿಷದಿಂದ ರಕ್ಷಿಸಲು ಶಿವನ ಮೊರೆ ಹೊಕ್ಕರು. ಆಗ ಸಹಾಯಕ್ಕೆ ಧಾವಿಸಿದ ಶಿವ ಈ ವಿಷವನ್ನು ಕುಡಿದು ತನ್ನ ಗಂಟಲಿನಲ್ಲಿಟ್ಟುಕೊಂಡು ಲೋಕವನ್ನು ರಕ್ಷಿಸಿದ. ಈ ವಿಷದ ಕಾರಣ ಶಿವನ ಗಂಟಲು ನೀಲಿಬಣ್ಣದ್ದಾಗಿದೆ.

ದುಷ್ಟರನ್ನು ಸಹಿಸದ, ಭಕ್ತರ ಭಕ್ತಿಗೆ ಮನಸೋಲುವ ಶಿವ

ದುಷ್ಟರನ್ನು ಸಹಿಸದ, ಭಕ್ತರ ಭಕ್ತಿಗೆ ಮನಸೋಲುವ ಶಿವ

ಶಿವ ಅತ್ಯಂತ ನ್ಯಾಯವಂತನಾಗಿದ್ದು ದುಷ್ಟರನ್ನು ಸಂಹರಿಸುವಲ್ಲಿ ಎಷ್ಟು ಕಠೋರ ರೂಪ ತಾಳುತ್ತಾನೋ ಅದೇ ರೀತಿ ತನ್ನನ್ನು ಆರಾಧಿಸುವ ಭಕ್ತರಿಗೆ ಮನಸೋಲುತ್ತಾನೆ. ತನ್ನ ಹೆಚ್ಚಿನ ಹೊತ್ತನ್ನು ಹಿಮಾಲಯದಲ್ಲಿ ಪದ್ಮಾಸನದಲ್ಲಿ ಕುಳಿತು ಘೋರ ತಪಸ್ಸನ್ನು ಆಚರಿಸುತ್ತಾ ಕಳೆಯುತ್ತಾನೆ. ಆತ ತನ್ನ ತಾಂಡವನೃತ್ಯದ ಮೂಲಕ ಸತ್ಯವನ್ನು ಪ್ರತಿಪಾದಿಸುತ್ತಾ, ಅಜ್ಞಾನವನ್ನು ಅಳಿಸುತ್ತಾ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ.

ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವ

ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವ

ಒಂದು ಕಾಲದಲ್ಲಿ ಗಂಗಾ ನದಿ ಕೇವಲ ದೇವಲೋಕದಲ್ಲಿ ಮಾತ್ರ ಹರಿಯುತ್ತಿತ್ತು. ಬಾಗೀರಥನ ತಪಸ್ಸಿನ ಕಾರಣ ಗಂಗಾನದಿ ಸ್ವರ್ಗದಿಂದ ನೇರವಾಗಿ ಭೂಮಿಗೆ ಧುಮುಕಿತು. ಈ ರಭಸ ಎಷ್ಟಿತ್ತು ಎಂದರೆ ಭೂಲೋಕವನ್ನೇ ಕೊಚ್ಚಿಕೊಂಡು ಹೋಗುವಷ್ಟು. ಆಗ ಆ ಧಾರೆಗೆ ತಡೆಹಿಡಿದ ಶಿವ ತನ್ನ ಜಟೆಯ ಮೂಲಕ ಗಂಗೆಯನ್ನು ಸೆರೆಹಿಡಿದುಬಿಟ್ಟ. ಬಳಿಕ ತನ್ನ ಜಟೆಯ ಮೂಲಕ ನಿರಾಳವಾಗಿ ಹರಿಯುವಂತೆ ಮಾಡಿ ಹಿಮಾಲಯದಿಂದ ಇಳಿಯುತ್ತಾ ಜೀವನದಿಯಾಗಿ ಭೂಲೋಕದಲ್ಲಿ ಸಮೃದ್ಧಿ ಪಡೆಯಲು ನೆರವಾದ.

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಒಂದು ಕಥೆಯ ಪ್ರಕಾರ ದೇವತೆಗಳ ಮೇಲೆ ರಾಕ್ಷಸರು ಯುದ್ಧಕ್ಕೆ ಬಂದಾಗ ದೇವತೆಗಳೆಲ್ಲಾ ಶಿವನ ಬಳಿ ಸಹಾಯಕ್ಕೆ ಆಗಮಿಸಿದರು. ಆಗ ಶಿವ ಎಲ್ಲಾ ದೇವತೆಗಳ ಶಕ್ತಿಯನ್ನು ಕೊಂಚವಾಗಿ ದಯಪಾಲಿಸಿದರೆ ರಾಕ್ಷಸರನ್ನು ಸಂಹರಿಸುವುದಾಗಿ ಕೇಳಿಕೊಂಡ.

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಆ ಪ್ರಕಾರ ಶಿವನಿಗೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯಲ್ಲಿ ಒಂದಂಶವನ್ನು ಧಾರೆಯೆರೆದರು. ಮಾತಿಗೆ ತಪ್ಪದೆ ಶಿವ ರಾಕ್ಷಸರನ್ನು ಸಂಹರಿಸಿ ಶಾಂತಿ ಮರುಕಳಿಸಲು ನೆರವಾದ. ಆದರೆ ಎರವಲು ಪಡೆದುಕೊಂಡ ಶಕ್ತಿಯನ್ನು ಮರಳಿಸದೇ ತನ್ನಲ್ಲೇ ಇಟ್ಟುಕೊಂಡ. ಎಲ್ಲಾ ಶಕ್ತಿಗಳನ್ನು ಹೊಂದಿರುವ ಶಿವ ಜಗತ್ತಿಯಲ್ಲಿಯೇ ಅತ್ಯಂತ ಶಕ್ತಿವಂತನಾದ.

ನಿಸರ್ಗದ ಶಕ್ತಿಗಳೇ ಈತನ ಭೂಷಣ

ನಿಸರ್ಗದ ಶಕ್ತಿಗಳೇ ಈತನ ಭೂಷಣ

ಶಿವನ ರೂಪವನ್ನು ವರ್ಣಿಸುವುದಾದರೆ ಆತ ಹಿಡಿದಿಟ್ಟಿರುವ ಶಕ್ತಿಗಳೇ ಭೂಷಣವಾಗಿರುವುದನ್ನು ನೋಡಬಹುದು. ಒಂದು ತುದಿಯಲ್ಲಿ ತಲೆಬುರುಡೆ ಇರುವ ದೊಣ್ಣೆ, ಮಿಂಚನ್ನು ಸೆರೆಹಿಡಿದು ತಯಾರಿಸಿದ ಬಾಣ, ಕಾಮನಬಿಲ್ಲನ್ನೇ ಬಗ್ಗಿಸಿ ಮಾಡಿದ ಬಿಲ್ಲು, ಗಂಗಾನದಿಯನ್ನು ಬಂಧಿಸಿದ ಜಟೆ, ಶಿಖೆಯಲ್ಲಿ ಅರ್ಧಚಂದ್ರ, ವಿಷಕುಡಿದು ನೀಲಿಯಾದ ಕುತ್ತಿಗೆ ಮೊದಲಾದವು ಈತನ ರೂಪದಲ್ಲಿ ನಿಸರ್ಗವನ್ನೇ ಬಂಧಿಸಿಟ್ಟಿವೆ.

For Quick Alerts
ALLOW NOTIFICATIONS
For Daily Alerts

    English summary

    Lord Shiva - The Story of Lord Shiva and his Birth

    In the Hindu mythology, Lord Shiva is the Destroyer and the most important one in the Holy Trinity, the other two being Brahma the Creator and Vishnu the Protector. Lord Shiva has always fascinated his followers by his unique appearance: he has not two but three eyes, has ash smeared all over his body, has snakes coiled up around his head and arms, wears tiger and elephant skin, leads a wild life in the cremation grounds far removed from social pretenses, and is known for his proverbial anger..
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more