For Quick Alerts
ALLOW NOTIFICATIONS  
For Daily Alerts

ಸಂಪತ್ತಿನ ಒಡೆಯ ಕುಬೇರನ ರೋಚಕ ಜನ್ಮ ವೃತ್ತಾಂತ

|

ಹಿಂದೂ ಧರ್ಮವು ಪ್ರಸಿದ್ಧವಾದ ಐತಿಹಾಸಿಕ ಅಂಶಗಳಿಂದ ಜನಮಾನಸದಲ್ಲಿ ಹೆಸರನ್ನು ಸ್ಥಾನವನ್ನು ಗಳಿಸಿಕೊಂಡಿದ್ದು, ಶಾಸ್ತ್ರಗಳು ಹೇಳುವ ಪ್ರತಿಯೊಂದು ಅಂಶವೂ ಪೂರಕವಾದ ಮಾಹಿತಿಯನ್ನು ಒಳಗೊಂಡಿದೆ. ಯಾವುದೇ ಒಂದು ಘಟನೆಯನ್ನು ಹಿಂದೂ ಧರ್ಮಗ್ರಂಥಗಳು ವಿವರಿಸುವ ವ್ಯಾಖ್ಯಾನಿಸುವ ಶೈಲಿ ನಮ್ಮನ್ನು ಓದಿಸಿಕೊಂಡು ಹೋಗಿ ಬಿಡುತ್ತದೆ. ಎಂದೋ ಇತಿಹಾಸಲ್ಲಿ ನಡೆದ ಅಂಶವು ಇಂದು ನಿನ್ನೆ ನಡೆದಂತೆ ನಮ್ಮ ಕಣ್ಣೆದುರಿಗೆ ಕಟ್ಟಿಕೊಡುತ್ತದೆ.

ಇಂದಿನ ಲೇಖನದಲ್ಲಿ ಹಣದ ದೇವತೆಯಾಗಿರುವ ಕುಬೇರನ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ದೇವತೆಗಳ ತಿಜೋರಿ ಭಂಡಾರವೇ ಕುಬೇರನ ಬಳಿಯಲ್ಲಿರುತ್ತದೆ ಎಂಬುದಾಗಿ ಹಿಂದೂ ಗ್ರಂಥಗಳಲ್ಲಿ ನಾವು ಕಾಣಬಹುದಾಗಿದ್ದು ಲಕ್ಷ್ಮೀ ಅದೃಷ್ಟ ದೇವತೆ ಎಂದೆನಿಸಿದ್ದು ಧನ ಕನಕಕ್ಕೆ ಪ್ರಮುಖ ಅಧಿಪತಿ ಕುಬೇರ ಎಂಬ ಮಾತಿದೆ. ದಪ್ಪ ದೇಹವನ್ನು ಹೊಂದಿರುವ ಕುಬೇರನು ಚಿನ್ನಗಳಿಂದ ಅಲಂಕರಿಸಲ್ಪಟ್ಟಿದ್ದಾರೆ. ತಮ್ಮ ಕೈಯಲ್ಲಿ ಚಿನ್ನದ ನಾಣ್ಯವಿರುವ ಮಡಕೆಯನ್ನು ಹಿಡಿದುಕೊಂಡಿದ್ದಾರೆ. ಧನದ ಮತ್ತು ಭಂಡಾರದ ಅಧಿಪತಿ ಎಂದು ಕುಬೇರನನ್ನು ಕರೆಯುತ್ತಾರೆ. ಧನವನ್ನು ಕಾಪಾಡುವ ಅಧಿಪತಿಯಾಗಿ ಕುಬೇರನನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬುದ್ಧ ಮತ್ತು ಜೈನ ಧರ್ಮದಲ್ಲಿ ಕೂಡ ಕುಬೇರನಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಇಂದಿನ ಲೇಖನದಲ್ಲಿ ಕುಬೇರನ ಕುರಿತಾಗಿರುವ ಕೆಲವೊಂದು ಅಂಶಗಳನ್ನು ನಾವು ತಿಳಿಸುತ್ತಿದ್ದು ಅವರು ದೇವರಾಗಿದ್ದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ ಕುಬೇರನು ಸ೦ಪತ್ತಿನ ಅಧಿಪತಿಯು. ಜಗತ್ತಿನ ಸಕಲೈಶ್ವರ್ಯವೂ ಇರುವುದು ಕುಬೇರನ ನಿಯ೦ತ್ರಣದಲ್ಲಿ. ಲೋಕಪಾಲಕರ ಪೈಕಿ ಕುಬೇರನೂ ಓರ್ವನು. ಶಿವಪಾರ್ವತಿಯರೊಡನೆ ನೆರೆಮನೆಯವನಾಗಿ ಕುಬೇರನು ಕೈಲಾಸಪರ್ವತವಾಸಿಯಾಗಿರುತ್ತಾನೆ.

ಸ೦ಪತ್ತಿನ ಅಧಿಪತಿಯಾದ ಕುಬೇರನಿಗೆ ಒ೦ದು ಗೀಳಿರುತ್ತದೆ, ಅದೇನೆ೦ದರೆ, ತನ್ನ ಸಿರಿವ೦ತಿಕೆ ಆಡ೦ಬರಗಳನ್ನು ಜಗತ್ತಿಗೆ ತೋರಿಸಿಕೊಡುವುದಕ್ಕೋಸ್ಕರವಾಗಿ ಆಗಾಗ್ಗೆ ವೈಭವೋಪೇತವಾದ ಔತಣಕೂಟಗಳನ್ನೇರ್ಪಡಿಸಿ, ಪ್ರತಿಷ್ಟಿತರನ್ನು ಆಹ್ವಾನಿಸಿ ತಾನೆಷ್ಟು ದೊಡ್ಡವನೆ೦ಬುದನ್ನು ಎಲ್ಲರಿಗೂ ಸಾರುವ ಒಣಜ೦ಭ ಈ ಕುಬೇರನದ್ದು.

ಗುಣನಿಧಿ ಜೂಜುಗಾರ

ಗುಣನಿಧಿ ಜೂಜುಗಾರ

ಯಗ್ಯದತ್ತ ಎಂಬ ಹೆಸರಿನ ಬ್ರಾಹ್ಮಣರು ಒಂದೂರಿನಲ್ಲಿ ವಾಸಿಸುತ್ತಿದ್ದರು. ಇವರಿಗೆ ಗುಣನಿಧಿ ಎಂಬ ಪುತ್ರನಿದ್ದನು. ಈತನಿಗೆ ಬಹಳಷ್ಟು ದುರಾಭ್ಯಾಸಗಳಿತ್ತು. ತಂದೆ ಮಾನವೀಯತೆಯ ಪ್ರತೀಕವಾಗಿದ್ದರೆ ಪುತ್ರನು ಅಸಭ್ಯ ಮತ್ತು ದುರ್ಬಲನಾಗಿದ್ದನು. ತಂದೆಯು ನಿರಂತರವಾಗಿ ಬೈಯುತ್ತಿದ್ದರೂ ಗುಣನಿಧಿ ತನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳಲಿಲ್ಲ. ಇದರಿಂದ ಬೇಸತ್ತ ತಂದೆ ಮನೆಬಿಟ್ಟು ಹೋಗುವಂತೆ ಪುತ್ರನಿಗೆ ಹೇಳುತ್ತಾರೆ.

ಗುಣನಿಧಿ ಕಳ್ಳತನ ಮಾಡುತ್ತಾನೆ

ಗುಣನಿಧಿ ಕಳ್ಳತನ ಮಾಡುತ್ತಾನೆ

ಬೇರೆ ಯಾವುದೇ ಆಯ್ಕೆ ಇಲ್ಲದೆ ಗುಣನಿಧಿ ಆ ಸ್ಥಳವನ್ನು ಬಿಟ್ಟು ಕಳ್ಳತನವನ್ನು ವೃತ್ತಿಯನ್ನಾಗಿಸಿಕೊಳ್ಳುತ್ತಾನೆ. ಮೊದಲಿಗೆ ಜೂಜು ಆಡಿ ಸಂಪಾದನೆ ಮಾಡಿಕೊಳ್ಳುತ್ತಿದ್ದ ಗುಣನಿಧಿ ಈಗ ಕಳ್ಳತನವನ್ನು ಮಾಡಲು ತೊಡಗುತ್ತಾನೆ. ಹೀಗೆ ಕಳ್ಳತನ ಮಾಡುತ್ತಿದ್ದ ಸಮಯದಲ್ಲಿ ಒಂದು ಸುಂದರ ದೇವಸ್ಥಾನ ಆತನನ್ನು ಆಕರ್ಷಿಸುತ್ತದೆ. ಅದು ಶಿವನ ದೇವಾಲಯವಾಗಿತ್ತು. ಒಳಭಾಗದಲ್ಲಿ ಯಾವುದೇ ದೀಪವಿರಲಿಲ್ಲ. ಆತ ಬಟ್ಟೆಯ ಚೂರೊಂದನ್ನು ಗಂಟುಕಟ್ಟಿ ಅದನ್ನೇ ಉರಿಸಿ ದೀಪವನ್ನಾಗಿ ಮಾಡಿಕೊಂಡು ದೇವಸ್ಥಾನದೊಳಗೆ ಅಡಿ ಇಡುತ್ತಾನೆ. ಆತ ಕಳ್ಳತನ ಮಾಡುವ ಮುಂಚೆಯೇ ದೇವಸ್ಥಾನ ಅಧಿಕಾರಿಗಳಿಗೆ ಈ ಬಗ್ಗೆ ಅರಿವಾಗುತ್ತದೆ ಮತ್ತು ಆತನನ್ನು ಬಂಧಿಸಿ ರಾಜನ ಮುಂದೆ ಹಾಜರುಪಡಿಸಲಾಗುತ್ತದೆ. ಆತನಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿನಂತೆ ಗುಣನಿಧಿಗೆ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ಕೆಟ್ಟ ಕೆಲಸದಿಂದ ತಾನು ಮಾಡುತ್ತಿದ್ದು ಅನ್ಯಾಯದ ಹಾದಿಯ ಬಗ್ಗೆ ಆತನಿಗೆ ಜಿಗುಪ್ಸೆ ಬರುತ್ತದೆ. ಜ್ಞಾನವನ್ನು ವೃದ್ಧಿಸಿಕೊಳ್ಳದೆ ತಾನು ಸಮಯವನ್ನು ವೃಥಾ ಹಾಳುಮಾಡಿದೆನಲ್ಲಾ ಎಂದು ಗುಣನಿಧಿಗೆ ಪಶ್ಚತ್ತಾಪವುಂಟಾಗುತ್ತದೆ.

ಗುಣನಿಧಿ ನರಕವನ್ನು ತಲುಪುತ್ತಾನೆ

ಗುಣನಿಧಿ ನರಕವನ್ನು ತಲುಪುತ್ತಾನೆ

ಗುಣನಿಧಿ ಮರಣ ಹೊಂದಿದ ನಂತರ ಆತ ನರಕಕ್ಕೆ ಬರುತ್ತಾನೆ. ಆದರೆ ಶಿವನ ಮುಂದೆ ಆತ ದೀಪವನ್ನು ಬೆಳಗಿಸಿದ ಕಾರಣ ಆತನಿಗೆ ಪುನರ್ಜನ್ಮವನ್ನು ನೀಡಲಾಗುತ್ತದೆ. ಶಿವನ ಕಾರುಣ್ಯದಿಂದ ಅರಿಂಧಮ್ ಎಂಬ ರಾಜನ ಪುತ್ರನಾಗಿ ದಾಮ್ ಎಂಬ ಹೆಸರಿನಿಂದ ಜನಿಸುತ್ತಾನೆ.

ದಾಮನು ಧಾರ್ಮಿಕ ವ್ಯಕ್ತಿಯಾಗಿರುತ್ತಾನೆ ಮತ್ತು ಹಿಂದಿನ ಜನ್ಮದಲ್ಲಿ ಗುಣನಿಧಿಯಾಗಿ ತಾನು ಮಾಡಿದ ತಪ್ಪುಗಳ ಬಗ್ಗೆ ಆತನಿಗೆ ಅರಿವು ಇರುತ್ತದೆ. ಅರಿಂಧಮ್‌ನ ಮರಣದ ನಂತರ ದಾಮನನ್ನು ನೂತನ ಅರಸನನ್ನಾಗಿ ನಿಯೋಜಿಸಲಾಗುತ್ತದೆ. ರಾಜ್ಯದ ಎಲ್ಲಾ ಜವಬ್ದಾರಿಗಳನ್ನು ದಾಮನು ನಿರ್ವಿಘ್ನವಾಗಿ ಕೈಗೊಳ್ಳುತ್ತಾನೆ ಮತ್ತು ನಿಸರ್ಗವು ತನ್ನ ಹಿಂದಿನ ಜನ್ಮದ ತಪ್ಪುಗಳನ್ನು ಏಕೆ ನೆನಪು ಮಾಡಿಸಿದೆ ಎಂಬುದನ್ನು ಮನಗಾಣುತ್ತಾನೆ. ಆತನ ಮನಸ್ಸು ಶಿವನ ಚರಣಗಳಿಗೆ ಭಕ್ತಿಯನ್ನು ಅರ್ಪಿಸುತ್ತದೆ. ಮಾನವನಿಗೆ ಪುನಃ ಹುಟ್ಟುವ ಕಾರುಣ್ಯವನ್ನು ತಾನು ಶಿವನಿಂದ ಪಡೆದಿರುವುದನ್ನು ಆತ ನೆನೆಸಿಕೊಂಡು ಧನ್ಯನಾಗುತ್ತಾನೆ. ತನ್ನ ಜೀವನವನ್ನು ಸಾಧ್ಯವಾದಷ್ಟು ಬಳಸಿಕೊಳ್ಳಬೇಕೆಂಬ ನಿರ್ಧಾರವನ್ನು ಆತ ಮಾಡುತ್ತಾನೆ.

ತನ್ನ ರಾಜ್ಯದಲ್ಲಿ ಶಿವಾಲಯ ನಿರ್ಮಾಣಕ್ಕೆ ಆತ ಆಜ್ಞೆಯನ್ನು ನೀಡುತ್ತಾನೆ ಮತ್ತು ಊರಿನ ಎಲ್ಲಾ ಸ್ತ್ರೀ ಪುರುಷರು ಶಿವನಿಗೆ ದೀಪವನ್ನು ಬೆಳಗಬೇಕೆಂಬ ಆದೇಶವನ್ನು ನೀಡುತ್ತಾನೆ. ಅದರಂತೆ ಬರಿಯ ದೇವಸ್ಥಾನದಲ್ಲಿ ಮಾತ್ರವಲ್ಲದೆ ಮನೆಗಳಲ್ಲಿ ಕೂಡ ಶಿವನಿಗೆ ದೀಪವನ್ನು ಹಚ್ಚುತ್ತಾರೆ. ಶಿವನೇ ಬಂದು ಅಲ್ಲಿ ವಾಸ ಮಾಡುತ್ತಿದ್ದಾರೆ ಎಂಬಂತಹ ವಾತಾವರಣ ಅಲ್ಲಿ ನಿರ್ಮಾಣವಾಗುತ್ತದೆ. ಆ ಸ್ಥಳದಿಂದ ದುಃಖ, ಅವಮಾನ, ಕಡಿಮೆಯಾಗಿ ಜನರು ಸಂತಸದಿಂದ ಜೀವನ ನಡೆಸುತ್ತಾರೆ. ರಾಜ ದಾಮನು ಮರಣ ಹೊಂದುತ್ತಾನೆ ಆದರೆ ಜನರು ಆತನ ಸ್ಮರಣೆಯನ್ನು ಈಗಲೂ ಮಾಡುತ್ತಿದ್ದಾರೆ.

ರಾಜ ದಾಮನು ವಿಶ್ರಾವಣನಾಗಿ ಜನಿಸುತ್ತಾನೆ

ರಾಜ ದಾಮನು ವಿಶ್ರಾವಣನಾಗಿ ಜನಿಸುತ್ತಾನೆ

ಅದೇ ರಾಜನು ವಿಶ್ವಾವನ ಮಗನಾಗಿ ಮತ್ತು ಪುಲಸ್ಟ್ರೆಯ ಮೊಮ್ಮಗ ವಿಶ್ರಾವಣನಾಗಿ ಜನಿಸುತ್ತಾನೆ. ಪುಲಸ್ಟ್ರೆಯನು ಬ್ರಹ್ಮ ದೇವರ ಪುತ್ರನಾಗಿದ್ದಾನೆ. ವಿಶ್ರಾವಣನು ಶಿವನನ್ನು ಅಚಲ ನಂಬಿಕೆ ಮತ್ತು ಭಕ್ತಿಯಿಂದ ಪೂಜಿಸಿ ಕುಬೇರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಸ್ವತಃ ಶಿವನೇ ಆತನ ಸ್ನೇಹಿತರಾಗುತ್ತಾರೆ.

ಐಶ್ವರ್ಯದ ಅಧಿಪತಿ ಕುಬೇರನನ್ನು ಒಲಿಸಿಕೊಳ್ಳುವ ಪರಿ ಹೇಗೆ?

ಶಿವ ಮತ್ತು ಕುಬೇರ

ಶಿವ ಮತ್ತು ಕುಬೇರ

ಶಿವಗಣಗಳೊಂದಿಗೆ ಯಕ್ಷರು ಉತ್ತಮ ಬಾಂಧವ್ಯವವನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಯಕ್ಷ ಅಧಿಪತಿ ಕುಬೇರನು ಶಿವನಿಗೆ ಹೆಚ್ಚು ಆಪ್ತನಾಗಿದ್ದಾನೆ. ಶಿವಗಣಗಳು ಯಕ್ಷ ದೇವತೆಗಳ ಬಾಹ್ಯ ಸೌಂದರ್ಯಕ್ಕೆ ಗಮನ ಕೊಡದೇ ಅವರನ್ನು ಗೌರವಿಸುವುದು ಇದಕ್ಕೆ ಕಾರಣವಾಗಿದೆ. ಶಿವನನ್ನು ಆರಾಧಿಸಿದರೆ ಕುಬೇರನು ಸುಲಭವಾಗಿ ಒಲಿದು ಬಿಡುತ್ತಾನೆ ಎಂಬ ಮಾತಿದೆ.

ಕುಬೇರ ಮತ್ತು ಲಕ್ಷ್ಮೀ ದೇವತೆ

ಕುಬೇರ ಮತ್ತು ಲಕ್ಷ್ಮೀ ದೇವತೆ

ಅದೃಷ್ಟ ದೇವತೆ ಮತ್ತು ಧನ ದೇವತೆ ಎಂದಿಗೂ ಪರಸ್ಪರ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ವರುಣನನ್ನು ನಿರ್ಮಿಸಿರುವುದು ಕುಬೇರನು ಎಂಬ ಕಥೆ ಇದ್ದು, ಸಮುದ್ರದಿಂದ ಲಕ್ಷ್ಮೀ ಜನ್ಮತಾಳಿರುತ್ತಾರೆ. ಆದ್ದರಿಂದ ಲಕ್ಷ್ಮೀ ದೇವತೆಯ ಪಿತ ಕುಬೇರನಾಗಿದ್ದಾನೆ. ಅಂತೆಯೇ ನಿಧಿ ಮತ್ತು ರಿಧಿ ಕುಬೇರನ ಪತ್ನಿಯರು ಎಂದೂ ಆಗಿದೆ. ಲಕ್ಷ್ಮೀಯ ಅಂಶವೆಂದಾಗಿ ಇವರನ್ನು ಕರೆಯಲಾಗಿದೆ. ಈ ಎರಡೂ ದೇವತೆಗಳನ್ನು ನೀವು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ ಉಂಟಾಗುವುದು ಸಹಜವಾಗಿದೆ.

ಕುಬೇರ ಮತ್ತು ವೆಂಕಟೇಶ

ಕುಬೇರ ಮತ್ತು ವೆಂಕಟೇಶ

ಕುಬೇರನು ಹೆಚ್ಚು ಶ್ರೀಮಂತನಾಗಿದ್ದರಿಂದ ತಿರುಪತಿಯ ಅಧಿಪತಿ ವೆಂಕಟರಮಣನು ಆತನಿಂದ ಹಣವನ್ನು ಪಡೆದುಕೊಂಡಿದ್ದರು ಎಂದಾಗಿ ಕಥೆಯಿದೆ. ಕುಬೇರನಿಂದ ಪಡೆದ ಸಾಲವನ್ನು ತನ್ನ ಭಕ್ತರ ಕಾಣಿಕೆಗಳಿಂದ ತೀರಿಸುವುದಾಗಿ ವೆಂಕಟರಮಣನು ಕುಬೇರನಿಗೆ ಆಶ್ವಾಸನೆಯನ್ನಿತ್ತಿದ್ದರು. ಆದ್ದರಿಂದ ನೀವು ವೆಂಕಟೇಶ್ವರನಿಗೆ ಅರ್ಪಿಸುವುದು ನೇರ ಕುಬೇರನಿಗೆ ತಲುಪುತ್ತದೆ. ಅಂತೆಯೇ ವೆಂಕಟೇಶನನ್ನು ಪೂಜಿಸುವುದು ನಿಮಗೆ ಧನಕನಕವನ್ನು ನೀಡಲಿದೆ.

ಕುಬೇರನಿಗೆ ನಡೆಸುವ ಪೂಜೆ ಮತ್ತು ಜಾತ್ರೆಗಳು

ಕುಬೇರನಿಗೆ ನಡೆಸುವ ಪೂಜೆ ಮತ್ತು ಜಾತ್ರೆಗಳು

ಧನ್‌ತೇರಾಸ್ - ಧನ್‌ತ್ರಯೋದಶಿ ಅಥವಾ ಧನ್‌ತೇರಾಸ್ ಹಬ್ಬವನ್ನು ಕುಬೇರನಿಗೆ ಅರ್ಪಿಸಲಾಗಿದೆ. ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸುವ ವಿಶೇಷ ದಿನ ಇದಾಗಿದೆ. ಚಿನ್ನವನ್ನು ಖರೀದಿಸಲು ಇದು ಉತ್ತಮ ದಿನವಾಗಿದೆ. ಶರದ್ ಪೂರ್ಣಿಮ - ಕುಬೇರನ ಜನ್ಮದಿನವನ್ನು ಈ ದಿನ ಸಂಕೇತಿಸುತ್ತದೆ. ಈ ದಿನ ಕುಬೇರನನ್ನು ಪೂಜಿಸುವುದರಿಂದ ಸಂಪತ್ತನ್ನು ಪಡೆದುಕೊಳ್ಳಬಹುದಾಗಿದೆ. ತ್ರಯೋದಶಿ ಮತ್ತು ಪೂರ್ಣಿಮ ದಿನಗಳಂದು ಕೂಡ ಕುಬೇರನನ್ನು ಪೂಜಿಸಿ ಅವರ ಕೃಪಾಕಟಾಕ್ಷಕ್ಕೆ ಒಳಗಾಗಬಹುದಾಗಿದೆ.

ಕುಬೇರನ ದೇವಸ್ಥಾನಗಳು

ಕುಬೇರನ ದೇವಸ್ಥಾನಗಳು

ಕುಬೇರನಿಗೆ ಅರ್ಪಿಸಿರುವ ದೇವಸ್ಥಾನಗಳು ಅತಿ ಕಡಿಮೆ. ಅದರಲ್ಲಿ ಎರಡು ದೇವಸ್ಥಾನಗಳು ಅತಿ ವಿಶೇಷವಾದವುಗಳಾಗಿವೆ.

ಕುಬೇರನಿಗಾಗಿ ಮಂತ್ರಗಳು

ಕುಬೇರನಿಗಾಗಿ ಮಂತ್ರಗಳು

ಕುಬೇರನ ಆಶೀರ್ವಾದವನ್ನು ಪಡೆಯಲು ಕೆಲವೊಂದು ಮಂತ್ರಗಳಿವೆ. ರಾತ್ರಿ ಮತ್ತು ಸಂಜೆ ಈ ಮಂತ್ರಗಳನ್ನು ಪಠಿಸುವುದರಿಂದ ಶುಭವನ್ನು ಪಡೆದುಕೊಳ್ಳಬಹುದಾಗಿದೆ. ಅಕ್ಷಯ ತೃತೀಯ, ಗ್ರಹಣಗಳು, ದೀಪಾವಳಿ, ಧನ್‌ತೇರಾಸ್ ದಿನಗಳಂದು ಈ ಮಂತ್ರಗಳನ್ನು ಪಠಿಸುವುದರಿಂದ ಶುಭವನ್ನು ಕಂಡುಕೊಳ್ಳಬಹುದಾಗಿದೆ.

ಕುಬೇರ ಧನ ಪ್ರಾಪ್ತಿ ಮಂತ್ರ

ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ

ಕುಬೇರ ಅಷ್ಟ-ಲಕ್ಷ್ಮೀ ಮಂತ್ರ

ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮೀ ಮಮ ಗೃಹೆ ಧನಂ ಪುರಾಯ ಪುರಾಯ ನಮಃ

ಕುಬೇರ ಮಂತ್ರ ಓಂ

ಯಕ್ಷಾಯ ಕುಬೇರಾಯ ವೈಶಾರಾವಣ್ಯ

ಧನಧಾನ್ಯಧಿಪತಯೇ ಧನಧಾನ್ಯಸಮ್ರಿದ್ಧಿಹಿಂ ಮೆ ದೇಹಿ ದಪಾಯ ಸ್ವಾಹ

Read more about: inspiration
English summary

ಸಂಪತ್ತಿನ ಒಡೆಯ ಕುಬೇರನ ರೋಚಕ ಜನ್ಮ ವೃತ್ತಾಂತ

Depicted with a plump body, adorned with jewels, and carrying a money pot and a club, Lord Kubera is considered as the God of Wealth and the Treasurer of the gods. He is regarded as the regent of the North and the protector of the wealth. Lord Kubera is a known and revered figure not only in Hinduism, but also Buddhism and Jainism as well. Today, we are going to share the information about Lord Kubera's life and how he acquired Godhood. Read on.
X
Desktop Bottom Promotion