For Quick Alerts
ALLOW NOTIFICATIONS  
For Daily Alerts

ಬಡತನ ನಿವಾರಣೆ ಮಾಡಲು ಕೃಷ್ಣನ ಈ ಐದು ಸಂದೇಶಗಳನ್ನು ಪಾಲಿಸಿ

|

ಭೂಮಿ ಮೇಲೆ ಧರ್ಮವನ್ನು ಸ್ಥಾಪಿಸುವ ಸಲುವಾಗಿ ವಿಷ್ಣು ಹಲವಾರು ಅವತಾರವೆತ್ತುತ್ತಾನೆ. ಇದರಲ್ಲಿ ನಮಗೆ ಪ್ರಮುಖವಾಗಿ ಹಾಗೂ ಹೆಚ್ಚು ಪ್ರಭಾವ ಬೀರಿರುವುದು ಅದು ಕೃಷ್ಣನ ಅವತಾರ. ಕೃಷ್ಣನನ್ನು ನಾವು ಭಗವದ್ಗೀತೆ ಮೂಲಕವು ಪೂಜಿಸುತ್ತೇವೆ. ಕೃಷ್ಣ ಭಗವದ್ಗೀತೆ ಮೂಲಕವಾಗಿ ಕೆಲವೊಂದು ಧರ್ಮ ಸಂದೇಶಗಳನ್ನು ನೀಡಿದ್ದಾನೆ. ತ್ರೇತಾಯುಗದಲ್ಲಿ ಕೃಷ್ಣನು ತನ್ನ ಜೀವನ ಸಾಗಿಸಿದ್ದಾನೆ ಮತ್ತು ಆತ ತನ್ನ ಭಕ್ತರೊಂದಿಗೆ ಕೂಡ ಹಲವಾರು ಸಲ ಜೀವನ ನಡೆಸಿರುವರು.

ಇದರಿಂದಾಗಿ ಕೃಷ್ಣ ನಮಗೆಲ್ಲರಿಗೂ ದೇವರು ಮಾತ್ರವಲ್ಲದೆ, ಒಬ್ಬ ಸ್ನೇಹಿತ, ಮಾರ್ಗದರ್ಶಿ ಹಾಗೂ ಪ್ರೇರಕ ಶಕ್ತಿ. ಕೃಷ್ಣನು ಭೂಮಿ ಮೇಲೆ ಧರ್ಮ ಸ್ಥಾಪನೆ ಬಗ್ಗೆ ಭಗವದ್ಗೀತೆಯಲ್ಲಿ ಹೇಳಿದ್ದೇನೆ. ನಾವು ಇಂದಿಗೂ ಅದನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ. ಅದೇ ರೀತಿಯಾಗಿ ಮನೆಯಲ್ಲಿ ಇರುವಂತಹ ಬಡತನ ನಿವಾರಣೆ ಮಾಡಲು ಯಾವ ರೀತಿ ನಾವು ಕೆಲವೊಂದು ಕ್ರಮಗಳನ್ನು ಪಾಲಿಸಬೇಕೆಂದು ಕೂಡ ಕೃಷ್ಣ ದೇವರು ನಮಗೆ ಹೇಳಿದ್ದಾರೆ. ಇದನ್ನು ಪಾಲಿಸಿಕೊಂಡು ಹೋದರೆ ಆಗ ಮನೆಯಲ್ಲಿ ಇರುವಂತಹ ಬಡತನವು ನಿವಾರಣೆಯಾಗುವುದು. ಇದನ್ನು ನಾವು ಮುಂದೆ ಓದುತ್ತಾ ಸಾಗೋಣ.

ತುಪ್ಪದಲ್ಲಿ ದೀಪ ಹಚ್ಚುವುದು

ತುಪ್ಪದಲ್ಲಿ ದೀಪ ಹಚ್ಚುವುದು

ದೇವರ ಮೂತ್ರಿ ಅಥವಾ ದೇವರ ಫೋಟೊದ ಮುಂದೆ ದೀಪ ಹಚ್ಚುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹ ಸಂಪ್ರದಾಯವಾಗಿದೆ. ಕೆಲವು ಜನರು ಸಂಜೆ ವೇಳೆ ದೇವರಿಗೆ ದೀಪ ಹಚ್ಚಿಡುವರು. ಇನ್ನು ಕೆಲವರು ದೇವರಿಗೆ ದೀಪ ಹಚ್ಚಲು ಬೆಳಗಿನ ಹೊತ್ತು ತುಂಬಾ ಪ್ರಸಕ್ತವಾಗಿರುವುದು ಎಂದು ತಿಳಿದಿರುವರು. ಅದಾಗ್ಯೂ, ಹಿಂದೂ ಪುರಾಣಗಳ ಪ್ರಕಾರ ಪ್ರತಿನಿತ್ಯ ನಾವು ತುಪ್ಪದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ದೇವರಿಗೆ ದೀಪ ಹಚ್ಚಿಟ್ಟರೆ ಆಗ ಬಡತನವು ನಿವಾರಣೆಯಾಗುವುದು ಎಂದು ಹೇಳಲಾಗಿದೆ.

Most Read: ರಾಧೆಯ ಹುಟ್ಟು ಹೇಗೆ ಆಯಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ

ನೀರು ನೀಡುವುದು

ನೀರು ನೀಡುವುದು

ಅತಿಥಿಯು ದೇವರಿಗೆ ಸಮಾನವೆಂದು ನಾವು ಭಾವಿಸಿದ್ದೇವೆ. ಇದರಿಂದ ನಾವು ಅತಿಥಿಗೆ ನಮ್ಮಿಂದಾಗುವ ಉನ್ನತ ಸೇವೆ ನೀಡಬೇಕಾಗಿದೆ. ನಮ್ಮ ಮನೆಗೆ ಬರುವಂತಹ ಯಾವುದೇ ವ್ಯಕ್ತಿಗೆ ನಾವು ಮೊದಲಿಗೆ ನೀರನ್ನು ನೀಡಬೇಕು. ಬಾಯಾರಿದ ವ್ಯಕ್ತಿಯಿಂದ ಸಿಗುವಂತಹ ಆಶೀರ್ವಾದವು ತುಂಬಾ ಪ್ರಬಲವಾಗಿರುವುದು ಎಂದು ಹೇಳಲಾಗುತ್ತದೆ. ಇದರಿಂದಾಗಿ ನಾವು ಅವರಿಂದ ಆಶೀರ್ವಾದ ಪಡೆಯಬೇಕಾದರೆ ಮನೆಗೆ ಬರುವಂತಹ ಅತಿಥಿಗಳಿಗೆ ನಾವು ಮೊದಲಿಗೆ ನೀರು ನೀಡಬೇಕು. ಮನೆಗೆ ಬರುವಂತಹ ಅತಿಥಿಗಳಿಗೆ ನೀರು ನೀಡುವ ವ್ಯಕ್ತಿಗೆ ಗೃಹಗತಿಗಳ ಕೆಟ್ಟ ಸಮಯವು ಪರಿಣಾಮ ಬೀರದು ಎಂದು ಹೇಳಲಾಗಿದೆ.

ಜೇನು

ಜೇನು

ನಾವು ಯಾವಾಗಲೂ ಮನೆಯಲ್ಲಿ ಜೇನತುಪ್ಪವನ್ನು ಇಟ್ಟುಕೊಳ್ಳಬೇಕು. ಯಾಕೆಂದರೆ ಜೇನುತುಪ್ಪವು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಇದನ್ನು ತುಂಬಾ ಸ್ವಚ್ಛ ಹಾಗೂ ಶುದ್ಧವಾಗಿರುವ ಸ್ಥಳದಲ್ಲಿ ಇಡಬೇಕು. ಜೇನುತುಪ್ಪವು ಮನೆಯಲ್ಲಿ ತುಂಬಾ ಧನಾತ್ಮಕ ಶಕ್ತಿಯು ಹರಿದಾಡಲು ನೆರವಾಗುವುದು. ಇದು ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿ ದೂರ ಮಾಡುವುದು.

ಪವಿತ್ರ ತಿಲಕ

ಪವಿತ್ರ ತಿಲಕ

ತಿಲಕವು ಮನಸ್ಸನ್ನು ಶಾಂತ ಹಾಗೂ ಸಮತೋಲನದಲ್ಲಿ ಇಡುವುದು ಎಂದು ನಂಬಲಾಗಿದೆ. ವಿವಿಧ ರೀತಿಯ ತಿಲಕವಾಗಿರುವಂತಹ ಕುಂಕುಮದ ತಿಲಕ ಮತ್ತು ಶ್ರೀಗಂಧದ ತಿಲಕವು ತುಂಬಾ ಪರಿಣಮಕಾರಿ. ನಿಮ್ಮ ರಾಶಿಚಕ್ರ ಅಥವಾ ಜನ್ಮ ಕುಂಡಲಿಗೆ ಅನುಗುಣವಾಗಿ ನೀವು ಶ್ರೀಗಂಧ ಅಥವಾ ಕುಂಕುಮದ ತಿಲಕವನ್ನು ಇಡಬೇಕು. ಇದಕ್ಕಾಗಿ ನೀವು ಜ್ಯೋತಿಷ್ಯರ ನೆರವು ಪಡೆದುಕೊಂಡು ತಿಲಕವನ್ನು ಇಡಬಹುದು. ಅದೇ ರೀತಿಯಾಗಿ ಇದು ಮನೆಯಲ್ಲಿ ಬಡತನ ದೂರ ಮಾಡಲು ನೆರವಾಗುವುದು.

Most Read: ಭಗವಾನ್ ಕೃಷ್ಣನ ಬಗ್ಗೆ ನಿಮಗೆ ತಿಳಿದಿರದ 8 ವಿಶೇಷ ಸಂಗತಿಗಳು

ಸರಸ್ವತಿ ದೇವಿಯ ವೀಣೆ

ಸರಸ್ವತಿ ದೇವಿಯ ವೀಣೆ

ಕೆಲವೊಂದು ಮನೆಯಲ್ಲಿ ಶೋಕೇಶ್ ಗಳಲ್ಲಿ ವೀಣೆಯನ್ನು ಇಡುವರು. ಆದರೆ ಮನೆಯಲ್ಲಿ ವೀಣೆ ಇಡುವ ಕಾರಣದಿಂದ ನಿಮ್ಮ ಪ್ರಾಜೆಕ್ಟ್ ಗಳು ಬೇಗನೆ ಪೂರ್ತಿಯಾಗುವುದು. ವೀಣೆಯು ಮನೆಯಲ್ಲಿ ಇದ್ದರೆ ಆಗ ನಿಮ್ಮ ಆರ್ಥಿಕ ಹಾಗೂ ಆರ್ಥಿಕವಲ್ಲದೆ ಇರುವಂತಹ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುವುದು. ವೀಣೆಯನ್ನು ಸರಸ್ವತಿ ದೇವಿಯು ನುಡಿಸುವರು.

English summary

Lord Krishna: Easy five Ways To End Poverty

Lord Krishna's life is an inspiration for all of us. His words, available as written texts today, are even more inspiring. From right conduct in the society to introspection of the inner self, Lord Krishna speaks about everything through these scriptures. According to some texts, Lord Krishna had even suggested ways to end poverty.
Story first published: Monday, January 7, 2019, 12:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more