Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ವಾಸ್ತು ಪ್ರಕಾರ: ಮನೆಗೆ ಯಾವ ರೀತಿಯ ಬೀಗ ಹಾಕಬೇಕು?
ವಾಸ್ತುಶಾಸ್ತ್ರದ ಪ್ರಕಾರ ಮನೆಯೊಂದರ ಪ್ರತಿಯೊಂದು ಮೂಲೆ, ಕೋಣೆಗಳು ಹಾಗೂ ಪ್ರಮುಖವಾಗಿ ಬಾಗಿಲುಗಳು ಅತೀ ಪ್ರಾಮುಖ್ಯತೆ ಪಡೆದಿರುವುದು. ಅದರಲ್ಲೂ ಮನೆಗೆ ಪ್ರವೇಶಿಸುವ ದ್ವಾರವು ಇದೇ ದಿಕ್ಕಿನಲ್ಲಿರಬೇಕೆಂಬ ನಿಯಮವಿದೆ. ಭಾರತೀಯರು ಹಿಂದಿನಿಂದಲೂ ವಾಸ್ತುಶಾಸ್ತ್ರವನ್ನು ನೆಚ್ಚಿಕೊಂಡು ಬಂದಿರುವುದಾಗಿ ಪ್ರತಿಯೊಬ್ಬರಿಗೂ ತಿಳಿದಿದೆ.
ಇಂದಿನ ದಿನಗಳಲ್ಲಿ ಇದನ್ನು ವಿದೇಶಗಳಲ್ಲೂ ಬಳಸುತ್ತಿದ್ದಾರೆ. ಮನೆಯ ಯಾವ ವಸ್ತುವು ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದನ್ನು ವಾಸ್ತು ಹೇಳುವುದು. ಮನೆಯನ್ನು ಕಟ್ಟುವುದರಿಂದ ಹಿಡಿದು ಮನೆಯೊಳಗೆ ವಸ್ತುಗಳನ್ನು ಇಡುವ ತನಕ ಪ್ರತಿಯೊಂದಕ್ಕೂ ವಾಸ್ತು ಅನ್ವಯವಾಗುವುದು. ಇಂದು ನಾವು ಈ ಲೇಖನದಲ್ಲಿ ವಾಸ್ತು ಪ್ರಕಾರವಾಗಿ ನೀವು ಉಪಯೋಗಿಸಬಹುದಾದ ಬೀಗಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದುತ್ತಾ ತಿಳಿಯಿರಿ....

ಪೂರ್ವ
ಪೂರ್ವ ದಿಕ್ಕು ಸೂರ್ಯ ದೇವರಿಗೆ ಮೀಸಲಿಟ್ಟಿರುವುದು. ಈ ಭಾಗದಲ್ಲಿ ನೀವು ಕೆಂಪು ಅಥವಾ ಇದೇ ರೀತಿಯ ಬಣ್ಣದ ಬೀಗ ಬಳಸಬಹುದು. ಈ ಬೀಗವು ತಾಮ್ರದಿಂದದ ಮಾಡಲ್ಪಟ್ಟಿರಬೇಕು. ಇದು ನಿಮ್ಮ ಮನೆಯನ್ನು ರಕ್ಷಿಸುವುದು. ಇದು ಮನೆಯನ್ನು ಕಳ್ಳತನ ಮತ್ತು ನಿಮ್ಮನ್ನು ರಕ್ಷಿಸುವುದು.

ಪಶ್ಚಿಮ
ಪಶ್ಚಿಮ ದಿಕ್ಕು ಶನಿ ದೇವರಿಗೆ ಮೀಸಲು ಎಂದು ತಿಳಿಯಲಾಗಿದೆ. ಈ ಭಾಗದಲ್ಲಿ ನೀವು ಕಪ್ಪು ಬಣ್ಣದ ಬೀಗವು ಕಬ್ಬಿಣದಿಂದ ಮಾಡಲ್ಪಟ್ಟಿರುವುದನ್ನು ಬಳಸಬೇಕು. ಬೀಗವು ತುಂಬಾ ಭಾರವಾಗಿರಲಿ. ಈ ಭಾಗದಲ್ಲಿ ತಾಮ್ರದಿಂದ ಮಾಡಿರುವಂತಹ ಬೀಗ ಬಳಸಬೇಡಿ.

ಉತ್ತರ
ಈ ಭಾಗದಲ್ಲಿ ನೀವು ಹಿತ್ತಾಳೆ ಬಣ್ಣದ ಬೀಗ ಬಳಸಿಕೊಳ್ಳಬೇಕು. ಇತರ ಯಾವುದೇ ಬಣ್ಣದ ಬೀಗ ಬಳಸಬೇಡಿ. ಈ ಬೀಗಗಳು ಕೆಂಪು ಅಥವಾ ಅದೇ ರೀತಿಯ ಬಣ್ಣದ್ದಾಗಿರಲಿ. ನೀವು ಈ ದಿಕ್ಕಿನಲ್ಲಿ ದೊಡ್ಡ ಕೋಣೆ ಅಥವಾ ಫ್ಯಾಕ್ಟರಿ ಬಾಗಿಲು ಇದ್ದರೆ ಆಗ ನೀವು ಐದು ಬೀಗ ಬಳಸುವುದು ಸುರಕ್ಷಿತ.

ದಕ್ಷಿಣ
ದಕ್ಷಿಣ ಭಾಗಕ್ಕೆ ನೀವು ಐದು ಖನಿಜಗಳಿಂದ ಮಾಡಿರುವಂತಹ ಬೀಗ ಬಳಸಿಕೊಳ್ಳಿ. ಈ ಬೀಗವು ಕೆಂಪು ಬಣ್ಣದ್ದಾಗಿರಬೇಕು ಮತ್ತು ಭಾರವಾಗಿರಲಿ. ಇದು ನಿಮ್ಮ ಸಂಪತ್ತನ್ನು ಸುರಕ್ಷಿತವಾಗಿ ಕಳ್ಳರಿಗೆ ಸಿಗದಂತೆ ನೋಡಿಕೊಳ್ಳುವುದು.

ವಾಯುವ್ಯ ಮತ್ತು ನೈಋತ್ಯ
ಈ ಭಾಗದಲ್ಲಿ ಇರುವ ಬಾಗಿಲುಗಳು ಅಥವಾ ಲಾಕರ್ ಗಳಿಗೆ ನೀವು ಭಾರವಾಗಿರುವ ಮತ್ತು ಬೆಳ್ಳಿ ಬಣ್ಣದನ್ನು ಬಳಸಿ. ನೈಋತ್ಯ ಭಾಗಕ್ಕೆ ಬಳಸುವಾಗ ನೀವು ಕಂದು ಬಣ್ಣದ ಬೀಗಗಳನ್ನು ಬಳಸಿ. ಯಾಕೆಂದರೆ ಈ ಭಾಗವು ರಾಹುವಿಗೆ ಮೀಸಲಾಗಿದೆ.

ನೀವು ಗಮದಲ್ಲಿರಡಬೇಕಾದ ಅಂಶಗಳು.
*ಬೀಗದ ಕೀಗಳು ಕಳೆದುಹೋಗಿದ್ದರೆ ಆಗ ನೀವು ಅಂತಹ ಬೀಗಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದು ತುಂಬಾ ಅಪವಿತ್ರ ಮತ್ತು ಕಳ್ಳತನವು ಹೆಚ್ಚಾಗಬಹುದು ಎಂದು ವಾಸ್ತು ಹೇಳುತ್ತದೆ. ಈಗ ಇರುವಂತಹ ಸಮಸ್ಯೆಗಳಿಗೆ ಯಾವುದೇ ಪರಿಹಾರಗಳು ಸಿಗದೇ ಇರಬಹುದು.
*ಶಬ್ಧ ಮಾಡುವಂತಹ ಬೀಗಗಳನ್ನು ಮನೆಯಲ್ಲಿ ಇಡಬೇಕು. ಇದರ ಬದಲಿಗೆ ಹೊಸತನ್ನು ಖರೀದಿಸಿ ಅಥವಾ ಇವುಗಳಿಗೆ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ಶಬ್ಧ ಬರುವುದು ತಪ್ಪುತ್ತದೆ.
*ನೀವು ಬೀಗವನ್ನು ಎಸೆಯುತ್ತಲಿದ್ದರೆ ಆಗ ಅದನ್ನು ಅನ್ ಲಾಕ್ ಮಾಡಿಕೊಂಡು ಬಿಸಾಕಿ.
*ಮನೆಯ ದೇವರ ಕೋಣೆಗೆ ಯಾವುದೇ ಬೀಗ ಬಳಸಬೇಡಿ.
*ಬೀಗವನ್ನು ಉಡುಗೊರೆಯಾಗಿ ನೀಡುವುದು ಕೂಡ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಸುರಕ್ಷತೆ ಮತ್ತು ಭದ್ರತೆಯು ಆ ವ್ಯಕ್ತಿಗೆ ಸಿಗುವುದು.

ಮನೆ ಸುರಕ್ಷತೆಗೆ ಈ ಕೆಳಗಿನ ಕೆಲ ಸಲಹೆಗಳನ್ನು ಪಾಲಿಸಬಹುದು
*ಮನೆಯಿಂದ ಹೊರಗೆ ಹೋಗುವಾಗ ಲ್ಯಾಂಡ್ ಲೈನ್ ಫೋನ್ ಶಬ್ದವನ್ನು ಕಡಿಮೆಯಲ್ಲಿ ಇಡಿ. ಫೋನ್ ಜೋರಾಗಿ ಬಡಿದುಕೊಳ್ಳುತ್ತಿದ್ದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾಗುತ್ತದೆ.
*ಮನೆ ಗೋಡೆಗೆ ಒರಗಿಸಿ ಏಣಿಯನ್ನು ಇಡಬಾರದು. ಮನೆಗೆ ಒಳ್ಳೆಯ ಸೆನ್ಸಾರ್ ಲೈಟ್ ಅಳವಡಿಸಬೇಕು. ಅದನ್ನು ಮನೆಯವರು ಹೇಗೆ ಬಳಸಬೇಕೆಂದು
ಮಾಹಿತಿ ನೀಡಿರಬೇಕು.
*ಮನೆಗೆ ಮತ್ತು ಗೇಟಿಗೆ ಗಟ್ಟಿಯಾದ ಬೀಗವನ್ನು ಹಾಕಬೇಕು. ಮನೆಯಲ್ಲಿ ನಿದ್ರೆ ಮಾಡುವ ಮುಂಚೆ ಕಿಟಕಿಗಳನ್ನು ಸರಿಯಾಗಿ ಹಾಕಿ ಮಲಗಬೇಕು. 4. ಕೀಯನ್ನು
ಮನೆಯ ಮುಂದೆ ಬಚ್ಚಿಟ್ಟು ಹೋಗಬಾರದು, ಹಾಗೆ ಮಾಡಿದರೆ ಕಳ್ಳರು ಸುಲಭವಾಗಿ ಕೀಯನ್ನು ಹುಡುಕಿ ತೆಗೆಯುತ್ತಾರೆ.
*ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪಕ್ಕದ ಮನೆಯವರ ಹತ್ತಿರ ಮನೆ ಕಡೆ ಸ್ವಲ್ಪ ನೋಡಿಕೊಳ್ಳಲು ಹೇಳಿ ಹೋಗಬೇಕು.
*ಮನೆಗೆ ಬೆಲೆಬಾಳುವ ವಸ್ತುಗಳನ್ನು ತಂದರೆ ಅದರ ಬಾಕ್ಸ್ ಹೊರಗೆ ಕಾಣುವಂತೆ ಇಡಬಾರದು, ಅಲ್ಲದೆ ಅಧಿಕ ಹಣ, ಚಿನ್ನ, ಇನ್ಸೂರೆನ್ಸ್ ಪಾಲಿಸಿಗಳನ್ನು ಬ್ಯಾಂಕ್ ನಲ್ಲಿ ಸೇಫ್ ಲಾಕರ್ ನಲ್ಲಿ ಇಡಬೇಕು.
*ಅಪರಿಚಿತರು ಮನೆ ಅಕ್ಕ-ಪಕ್ಕ ಸುಳಿದಾಡುತ್ತಿದ್ದರೆ ಗಮನ ಹರಿಸಬೇಕು.