For Quick Alerts
ALLOW NOTIFICATIONS  
For Daily Alerts

ಅವತಾರ ಪುರುಷ ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ

By Jaya subramanya
|

ಭಗವಾನ್ ವಿಷ್ಣುವಿನ ಎಂಟನೆಯ ಅವತಾರವಾಗಿರುವ ಶ್ರೀಕೃಷ್ಣನು, ದುಷ್ಟರನ್ನು ಶಿಕ್ಷಿಸುವುದಕ್ಕೆ ಮತ್ತು ಧರ್ಮದ ಸ್ಥಾಪನೆಗಾಗಿ ಅವತಾರವೆತ್ತಿದ್ದಾರೆ. ತನ್ನ ಅವತಾರದ ಮಹತ್ವ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶವನ್ನು ಕೃಷ್ಣನು ಅರ್ಜುನನಿಗೆ ಮಹಾಭಾರತ ಯುದ್ಧ ಸಮಯದಲ್ಲಿ ಬೋಧಿಸಿದ್ದಾರೆ.

ಭಗವದ್ಗೀತೆಯನ್ನು ಅರಿತುಕೊಂಡವರು ಜೀವನ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳತ್ತಾರೆ. ಬರಿಯ ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಇಂದು ಕೃಷ್ಣ ಜನ್ಮಾಷ್ಟಮಿಯಾಗಿದ್ದು ಆ ಅಂಶಗಳೇನು ಎಂಬುದನ್ನು ಅರಿತುಕೊಳ್ಳುವ ಸುವರ್ಣವಕಾಶವಾಗಿದೆ. ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಕಳಚುವಿಕೆ
ಇಂದಿನದ್ದು ನಾಳೆ ಇರುವುದಿಲ್ಲ. ಹಿಂದೆ ಏನು ನಡೆದಿದೆಯೋ ಅದು ಮುಗಿಯಿತು, ಅದು ಎಂದಿಗೂ ಮರಳಿ ಬಾರದು. ಈ ಕ್ಷಣದಲ್ಲಿ ಬದುಕುವುದು ಹೆಚ್ಚು ಮುಖ್ಯವಾದುದು ಮತ್ತು ಪ್ರತಿಯೊಂದು ಕ್ಷಣವನ್ನು ಅರ್ಥಪೂರ್ಣಗೊಳಿಸಿ ಎಂಬುದು ಕೃಷ್ಣನು ತಿಳಿಸಿದ ಸಾರವಾಗಿದೆ. ಜೀವನದ ಬಂಧಗಳನ್ನು ಕಳಚಿಕೊಂಡು ಸಮಯದೊಂದಿಗೆ ಸಾಗಬೇಕು.

Life Lessons To Learn From Lord Krishna

ಹಿಂದೆ ನಡೆದಿರುವುದನ್ನು ನೆನಪು ಮಾಡುವುದರಿಂದ ದುಃಖ ನಮಗೆ ಹೆಚ್ಚು. ಗೋಕುಲದಲ್ಲಿ ಹುಟ್ಟಿದ ಕೃಷ್ಣನು ತನ್ನ ಗೆಳೆಯರೊಂದಿಗೆ ಸಂತಸಕರವಾಗಿ ಸಮಯ ಕಳೆದಿದ್ದರು. ಕರ್ತವ್ಯ ಅವರನ್ನು ಕರೆದಾಗ ಎಲ್ಲಾ ಬಂಧಗಳನ್ನು ಸಂತಸಗಳನ್ನು ಬದಿಗೆ ಸರಿಸಿ ತನ್ನ ಜವಬ್ದಾರಿಗಳನ್ನು ನಿರ್ವಹಿಸಲು ಕೃಷ್ಣನು ಹೊರಡುತ್ತಾರೆ.

ಕರ್ಮ
ಕೃಷ್ಣನಿಂದ ಪ್ರಮುಖವಾಗಿ ಕಲಿಯಬೇಕಾದ ಜೀವನ ಪಾಠ ಇದಾಗಿದೆ. ಕರ್ಮವು ಒಂದು ಕರ್ತವ್ಯವಾಗಿದ್ದು ಇದನ್ನು ಪ್ರತಿಯೊಬ್ಬ ಮಾನವರೂ ನಿರ್ವಹಿಸಬೇಕಾಗಿದೆ. ಪ್ರತಿಯೊಬ್ಬರೂ ಕೆಲಸಗಳನ್ನು ನಿರ್ವಹಿಸುವ ಜವಬ್ದಾರಿಯನ್ನು ಪಡೆದುಕೊಂಡಿರುತ್ತಾರೆ. ಆದರೆ ಧನಾತ್ಮಕ ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಾರೆ. ಭಗವಾನ್ ಕೃಷ್ಣನು ಹೇಳಿರುವುದು ಏನೆಂದರೆ ನಿನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸು ಎಂದಾಗಿದೆ. ಫಲಿತಾಂಶ ಯಾರ ಕೈಯಲ್ಲೂ ಇಲ್ಲ. ನಿರ್ದಿಷ್ಟ ಸಮಯದಲ್ಲಿ ಈ ಫಲಿತಾಂಶವು ಮಾನವರ ಕೈಯಲ್ಲೇ ಇರುವುದಿಲ್ಲ.

ಧರ್ಮ
ಧರ್ಮದ ಹಾದಿಯು ಹೆಚ್ಚು ಸರಿಯಾದ ಮಾರ್ಗವಾಗಿದೆ. ಕುರುಕ್ಷೇತ್ರ ಯುದ್ಧ ಸಮಯದಲ್ಲಿ ತನ್ನ ಕುಟುಂಬದವರೊಂದಿಗೆ ಹೋರಾಡಲು ಅರ್ಜುನ ಹಿಂದೇಟು ಹಾಕಿದಾಗ ಧರ್ಮದ ಹಾದಿಯನ್ನು ಹಿಡಿಯಲು ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾರೆ. ಅವತಾರ ಪುರುಷ ಭಗವಾನ್ ಕೃಷ್ಣನ ಆದರ್ಶ ತತ್ವಗಳು

ಮಾನವತ್ವದೆಡೆಗೆ ಅರ್ಜುನನ ಕೆಲಸಗಳನ್ನು ಕೃಷ್ಣನು ನೆನಪಿಸುತ್ತಾನೆ. ಬರಿಯ ಮಾನವನಂತೆ ಸಂಬಂಧಗಳೆಂಬ ಬಂಧನವನ್ನುಕಳಚಿಟ್ಟು ಧರ್ಮಕ್ಕಾಗಿ ಯುದ್ಧ ನಡೆಸಲು ಅರ್ಜುನನಿಗೆ ಕೃಷ್ಣನು ಹೇಳುತ್ತಾರೆ. ಧರ್ಮಕ್ಕಾಗಿ ಸಂಬಂಧಗಳನ್ನು ಬದಿಗಿಟ್ಟು ಅದನ್ನು ಸಂರಕ್ಷಿಸುವುದಕ್ಕಾಗಿ ಹೋರಾಡಬೇಕು ಎಂಬುದಾಗಿ ನುಡಿಯುತ್ತಾರೆ.

ಶಾಂತಿಯುತ ಮನಸ್ಸು
ಯಾವುದೇ ಕೆಲಸಗಳನ್ನು ಮಾಡುವಾಗ ನಾವು ಉದ್ರೇಕಕ್ಕೆ ಒಳಗಾಗಿ ತಪ್ಪುಗಳನ್ನು ಮಾಡುತ್ತೇವೆ. ಕೃಷ್ಣನು ಬೋಧಿಸುವ ಜೀವನ ಪಾಠವೆಂದರೆ ಯಾವಾಗಲೂ ಶಾಂತಿಯುತ ಮನಸ್ಸನ್ನು ಕಾಪಾಡಿಕೊಳ್ಳಬೇಕು ಎಂದಾಗಿದೆ. ಮಂದಸ್ಮಿತ ವದನ ಕೃಷ್ಣನು ಇದನ್ನೇ ಮಾನವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಬೋಧಿಸುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕೂಡ ಅದರಲ್ಲಿ ತಾಳ್ಮೆ ಮತ್ತು ಸಮಾಧಾನ ಇರಲಿ ಎಂಬುದಾಗಿ ಭಗವಾನ್ ನುಡಿಯುತ್ತಾರೆ.

ಆಪ್ತ, ನಿಜ ಗೆಳೆಯರನ್ನು ಗೌರವಿಸಿ
ಮನುಷ್ಯನ ಆರ್ಥಿಕ ಸ್ಥಿತಿಗತಿಯನ್ನು ಅನುಸರಿಸಿ ಗೆಳೆತನವನ್ನು ಮಾಡಲಾಗುವುದಿಲ್ಲ. ನೀವು ಯಾರನ್ನಾದರೂ ಸ್ನೇಹಿತ ಎಂಬುದಾಗಿ ಪರಿಗಣಿಸಿದ ನಂತರ ಅವರಿಗೆ ವಿಶ್ವಾಸಾರ್ಹರು ಮತ್ತು ನಂಬಿಗಸ್ಥರೂ ಆಗಿರಿ. ಸುಧಾಮನು ಕೃಷ್ಣನನ್ನು ಕಾಣಲು ಹೋಗಿದ್ದಾಗ ತನ್ನ ಗೆಳೆಯನನ್ನು ಆಮಂತ್ರಿಸಲು ಸ್ವತಃ ಕೃಷ್ಣನೇ ಬರುತ್ತಾರೆ.

ತಾನು ರಾಜ, ಸಿರಿವಂತ ಎಂಬುದನ್ನೆಲ್ಲಾ ಮರೆತು ಬಾಲ್ಯ ಕಾಲದ ಸಖನೊಂದಿಗೆ ಸಮಯವನ್ನು ಕಳೆಯುತ್ತಾರೆ. ಅವರಿಬ್ಬರೂ ಸಾಧಾರಣರಾಗಿಯೇ ತಮ್ಮ ಗೆಳೆತನದ ನಿಮಿಷಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಕೃಷ್ಣನು ಹೇಳಿರುವ ಎಲ್ಲಾ ವಿಚಾರಗಳನ್ನು ಜೀವನದಲ್ಲಿ ಅಳವಡಿಸಲು ಸಾಧ್ಯವಾಗದೇ ಇದ್ದರೂ ಕೆಲವೊಂದನ್ನು ನಮ್ಮ ಬಾಳ್ವೆಯಲ್ಲಿ ನಾವು ಅನುಸರಿಸಲೇಬೇಕು. ಈ ವಿಚಾರಗಳು ನಿಮ್ಮ ಬದುಕನ್ನು ಧನಾತ್ಮಕವಾಗಿ ಮುನ್ನಡೆಸಲು ಸಹಾಯ ಮಾಡುವುದಂತೂ ಸತ್ಯ.

English summary

Life Lessons To Learn From Lord Krishna

Lord Krishna is the eighth incarnation of Lord Vishnu, the god of preservation. He descended upon this earth to fight the increasing injustice and evil deeds of people. The sermons that he delivered to Arjuna before the battle of Mahabharata are compiled in the Bhagwat Gita. One who understands the Gita in its entirety will understand the true value of his life and the meanings of what life was, is and will be.
X
Desktop Bottom Promotion