For Quick Alerts
ALLOW NOTIFICATIONS  
For Daily Alerts

ಅವತಾರ ಪುರುಷ ಭಗವಾನ್ ಕೃಷ್ಣನ ಆದರ್ಶ ತತ್ವಗಳು

By Jaya subramanya
|

ಭಾರತೀಯರಿಗೆ ಶಾಸ್ತ್ರ ಸಂಪ್ರದಾಯಗಳಲ್ಲಿ ಹೆಚ್ಚು ನಂಬಿಕೆ ಇದ್ದು ವಿಶ್ವದಲ್ಲೇ ನಮ್ಮ ದೇಶ ಮಾನ್ಯತೆ ಪಡೆದುಕೊಂಡಿರುವುದು ತಾನು ಅನುಸರಿಸುತ್ತಿರುವ ಅನನ್ಯ ಧರ್ಮಾಚರಣೆಗಳು ಮತ್ತು ನೀತಿನಿಯಮಗಳಿಗೆ. ಹೊರದೇಶದವರೂ ನಮ್ಮ ಸಂಸ್ಕೃತಿಯಿಂದ ಆಕರ್ಷಿತರಾಗಿ ಭಾರತದಲ್ಲೇ ನೆಲೆಗೊಂಡು ತಮ್ಮನ್ನು ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ಅರ್ಪಿಸಿಕೊಂಡಿದ್ದಾರೆ. ನಮ್ಮ ಧರ್ಮದಲ್ಲಿ ಕಾಣುವ ಅತ್ಯಮೂಲ್ಯ ವಿಚಾರಗಳೆಂದರೆ, ಪ್ರೀತಿ, ಗೌರವ, ಭಾವೈಕ್ಯತೆ, ನಂಬಿಕೆ ಮತ್ತು ಆಚರಣೆಗಳಾಗಿವೆ. ಮಹಾಭಾರತದಲ್ಲಿ ಕೃಷ್ಣಾರ್ಜುನರ ಸ್ನೇಹ, ಪ್ರೀತಿಗೆ ಬಹುಪರಾಕ್

ನಿನ್ನ ವೈರಿಯನ್ನು ಪ್ರೀತಿಸು ಎಂಬ ಮಹಾನ್ ತತ್ವವನ್ನು ಬೋಧಿಸುವ ಹಿಂದೂ ಧರ್ಮವು ಸಾರ್ವಭೌಮತ್ವದ ಪಾಠವನ್ನು ತಿಳಿಸುತ್ತದೆ. ನಮ್ಮ ಪುರಾಣ ಪವಿತ್ರ ಗ್ರಂಥಗಳೂ ಕೂಡ ಆದರ್ಶ ತತ್ವಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಆ ದಿಸೆಯಲ್ಲಿ ನಮ್ಮನ್ನು ಕೊಂಡೊಯ್ಯುತ್ತಿದೆ. ಹೀಗೆ ನಾವು ಹೆಚ್ಚು ನಂಬಿರುವ ದೇವರುಗಳೂ ಕೂಡ ಮಹಾನ್ ತತ್ವಗಳನ್ನು ಮಾನವ ಲೋಕದಲ್ಲಿ ಪಸರಿಸಲೆಂದೇ ಒಂದೊಂದು ರೂಪವನ್ನೆತ್ತಿದ್ದಾರೆ.

ಇಂತಹ ಅದ್ಭುತ ಗುಣಗಳನ್ನು ಲೋಕಕ್ಕೆ ಪಸರಿಸುವ ನಿಟ್ಟಿನಲ್ಲಿ ನಮಗೆ ಹೆಚ್ಚು ಪ್ರಿಯರಾದವರೇ ಭಗವಾನ್ ಶೀಕೃಷ್ಣ. ಪ್ರೇಮ, ಗೌರವ, ಮಾನವತ್ವ, ಧೈರ್ಯ, ನಿಪುಣತೆಯ ಒಂದೊಂದು ಅಧ್ಯಯನವನ್ನು ಮನುಕುಲಕ್ಕೆ ಬೋಧಿಸಿದ ಶ್ರೀ ಕೃಷ್ಣನು ಅವತಾರ ಪುರುಷ ಎಂದೆನಿಸಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಶ್ರೀ ಕೃಷ್ಣನ ಜೀವನಾಂಶಗಳನ್ನು ಕುರಿತು ಅರಿತುಕೊಳ್ಳೋಣ....

ನ್ಯಾಯದ ಮೇಲಿನ ಪ್ರೇಮ

ನ್ಯಾಯದ ಮೇಲಿನ ಪ್ರೇಮ

ನ್ಯಾಯ ಮತ್ತು ಪ್ರೇಮದ ಇನ್ನೊಂದು ಮುಖವೇ ಶ್ರೀ ಕೃಷ್ಣ. ಇದಕ್ಕಾಗಿ ತನ್ನವರೊಂದಿಗೆ ಹೋರಾಟಕ್ಕಿಳಿದ ಮಹಾನ್ ವ್ಯಕ್ತಿ ಎಂದೆನಿಸಿದ್ದಾರೆ. ಮಹಾಭಾರತವನ್ನು ನೀವು ಓದಿದಲ್ಲಿ, ಯುದ್ಧದಲ್ಲಿ ಶ್ರೀ ಕೃಷ್ಣನು ಪಾಂಡವರ ಪರ ವಹಿಸಿದ್ದೇಕೆ ಎಂಬುದು ನಿಮಗೆ ತಿಳಿಯುತ್ತದೆ. ನ್ಯಾಯದ ಪರವಾಗಿ ಪಾಂಡವರು ಇದ್ದುದರಿಂದ ಶ್ರೀ ಕೃಷ್ಣನು ಪಾಂಡವರ ಪರವಾಗಿ ನಿಂತಿದ್ದರು.

ಮಾತೃಭೂಮಿಯ ಮೇಲಿನ ಪ್ರೇಮ

ಮಾತೃಭೂಮಿಯ ಮೇಲಿನ ಪ್ರೇಮ

ಶ್ರೀ ಕೃಷ್ಣನಿಂದ ಕಲಿಯಬೇಕಾದ ಮಹಾನ್ ಪಾಠಗಳಲ್ಲಿ ಇದೂ ಕೂಡ ಒಂದು. ಯದುಕುಲ ಯುವರಾಜ, ಪಾಂಡವರ ಹಿತಚಿಂತಕ ಶ್ರೀ ಕೃಷ್ಣನು ತನ್ನ ಮಾತೃಭೂಮಿಯ ಮೇಲೆ ನಿರ್ವಾಜ್ಯ ಪ್ರೇಮವನ್ನಿಟ್ಟುಕೊಂಡಿದ್ದರು. ತಮ್ಮ ಮಾತೃಭೂಮಿಗಾಗಿ ಪಾಂಡವರು ಐದು ಹಳ್ಳಿಗಳನ್ನು ಕೇಳಿದಾಗ ಶ್ರೀ ಕೃಷ್ಣನು ಅವರ ಪರವಾಗಿ ನಿಂತಿದ್ದರು. ಪಾಂಡವರಿಗಾಗಿ ದುರ್ಯೋಧನನ ಮನವೊಲಿಸುವ ಕಾರ್ಯವನ್ನು ಅವರು ಮಾಡಿದ್ದರು.

ಗುರುಗಳ ಮೇಲಿನ ಪ್ರೇಮ

ಗುರುಗಳ ಮೇಲಿನ ಪ್ರೇಮ

ಶ್ರೀ ಕೃಷ್ಣನಿಂದ ಕಲಿಯಬೇಕಾಗಿರುವ ಅನನ್ಯ ಅಂಶಗಳಲ್ಲಿ ಇದೂ ಕೂಡ ಒಂದು. ವಿಷ್ಣುವಿನ ಅಪರಾವತಾರ ಎಂದೆನಿಸಿದ್ದ ಶ್ರೀ ಕೃಷ್ಣ ಪರಮಾತ್ಮನು ತನ್ನ ಗುರುಗಳ ಮೇಲೆ ಅಪರಿಮಿತ ಪ್ರೇಮ ಮತ್ತು ಗೌರವವನ್ನು ಇಟ್ಟುಕೊಂಡಿದ್ದರು.

ತನ್ನ ಒಲವಿನ ಮೇಲಿನ ಪ್ರೇಮ

ತನ್ನ ಒಲವಿನ ಮೇಲಿನ ಪ್ರೇಮ

ಕೃಷ್ಣನು ಅಭಿಮಾನಿಗಳನ್ನು ಅಂತೆಯೇ ಹೆಚ್ಚಿನ ಸಖಿಯರನ್ನು ಹೊಂದಿದ್ದನು. ನಂದ ಮತ್ತು ಯಶೋಧೆಯ ಮಗನಾಗಿ ವೃಂದಾವನಲ್ಲಿ ಶ್ರೀ ಕೃಷ್ಣನು ರಾಧೆಗಾಗಿ ಇಟ್ಟುಕೊಂಡಿದ್ದ ನಿರ್ವಾಜ್ಯ ಪ್ರೇಮ ಅಮೂಲ್ಯವಾದುದು ಮತ್ತು ಬೆಲೆ ಕಟ್ಟಲು ಸಾಧ್ಯವಾಗದೇ ಇರುವಂತಹದ್ದಾಗಿತ್ತು. ರಾಧೆಯ ಮೇಲೆ ಪ್ರೇಮ ಮತ್ತು ಆರಾಧನೆಯನ್ನಿಟ್ಟುಕೊಂಡಿದ್ದ ಕೃಷ್ಣನು ತನ್ನ ಇತರ ಸಖಿಯರನ್ನೂ ಪ್ರೇಮಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು.

ಗೆಳೆಯರ ಮೇಲಿನ ಪ್ರೇಮ

ಗೆಳೆಯರ ಮೇಲಿನ ಪ್ರೇಮ

ಹಿಂದೂ ದೇವತೆಗಳಲ್ಲಿ ಹೆಚ್ಚು ಜನಪ್ರಿಯರೆನಿಸಿದ್ದ ಶ್ರೀ ಕೃಷ್ಣನು ಭಾರತೀಯ ಮೇಲೆ ಅಚ್ಚಳಿಯದ ಪ್ರೇಮದ ಮೋಡಿಯನ್ನು ಮಾಡಿದ್ದಾರೆ. ತನ್ನ ಗೆಳೆಯ ಸುಧಾಮನ ಮೇಲಿದ್ದ ಅಮೂಲ್ಯ ಗೆಳೆತನದ ಪ್ರೇಮವನ್ನು ಹಿಂದೂ ಭಾಂಧವರಿಗೆ ತೋರಿಸಿ ಗೆಳೆತನಕ್ಕೆ ಸಿರಿತನ ಮತ್ತು ಬಡತನದ ಬೇಧವಿಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ.

ಸಹೋದರನ ಮೇಲಿನ ಪ್ರೇಮ

ಸಹೋದರನ ಮೇಲಿನ ಪ್ರೇಮ

ಬಲರಾಮ ಮತ್ತು ಕೃಷ್ಣನ ಸಹೋದರ ಬಾಂಧವ್ಯ ಬೆಲೆಕಟ್ಟಲಾಗದೇ ಇರುವಂತಹದ್ದು. ತನ್ನ ಸಹೋದರನನ್ನು ಅಪರಿಮಿತವಾಗಿ ಪ್ರೇಮಿಸುತ್ತಿದ್ದ ಶ್ರೀ ಕೃಷ್ಣನು ಸಹೋದರನಿಗಾಗಿ ಏನೂ ಬೇಕಾದರೂ ಮಾಡುವ ತ್ಯಾಗ ಮನೋಭಾವದವರಾಗಿದ್ದರು. ಹೀಗೆ ಶ್ರೀ ಕೃಷ್ಣನು ಕಲಿಸುವ ಪ್ರೇಮ ಮತ್ತು ಗೌರವಾದರದ ಗುಣಗಳು ನಮ್ಮಂತಹ ಸಾಮಾನ್ಯ ಮಾನವರಿಗೆ ದಾರಿ ದೀಪ ಎಂದೆನಿಸಿದ್ದು ಮೋಕ್ಷದ ಹಾದಿ ಎಂದೆನಿಸಿದೆ.

English summary

Love Lessons To Learn From Lord Krishna

Indians are very sensitive towards their religion. India is a unique country where people are free to follow any religion that they love to. The life of the Indian is heavily impressed by the Indian gods that their religions follow.As far as the Gods and Goddesses are concerned, different religions have different gods and their ideologies. As mentioned earlier, Krishna had a great respect for everyone. So, following are some of the best love lessons to learn from Lord Krishna:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more