ಇಂದಿಗೂ ಹನುಮಂತನ ಆದರ್ಶ ಗುಣಗಳು ಇಡೀ ಜಗತ್ತಿಗೇ ಮಾದರಿ...

By: Deepu
Subscribe to Boldsky

ಅಂಜನೀಪುತ್ರ ವೀರ ಹನುಮಾನ್ ಇಂದು ಹೆಚ್ಚಿನವರಿಗೆ ಮಾರ್ಗದರ್ಶಕರು, ಗುರುಗಳು ಎಂದೆನಿಸಿದ್ದಾರೆ. ದೇವರಾಗಿ ಅವರನ್ನು ಪೂಜಿಸುವುದು ಮಾತ್ರವಲ್ಲದೆ ಸಾಹಸ ಪರಾಕ್ರಮಗಳ ಹೆಸರು ಬಂತೆಂದರೆ ಅಲ್ಲಿ ಬರುವ ಮೊದಲ ಹೆಸರೇ ಆಂಜನೇಯ. ಯಾವುದೇ ಕುಸ್ತಿ ಅಖಾಡಾದಲ್ಲಿ ಹನುಮನನ್ನು ಪೂಜಿಸಿ ನಂತರಷ್ಟೇ ತಾಲೀಮನ್ನು ನಡೆಸುತ್ತಾರೆ. ಹೀಗೆ ಆಂಜನೇಯನು ಪ್ರತಿಯೊಬ್ಬ ಕುಸ್ತಿ ಪಟು, ಜಿಮ್ ಪಟು, ಸಾಧಕರನ್ನು ಮುನ್ನಡೆಸುವವರಾಗಿದ್ದಾರೆ. ರಾಮಾಯಣದಲ್ಲಿ ಬರುವ ಕಥೆಯಲ್ಲಿ ಹನುಮನಿಗೆ ತಮ್ಮ ಸಾಧನೆ ಪರಾಕ್ರಮಗಳ ಬಗ್ಗೆ ಅರಿವೇ ಇರುವುದಿಲ್ಲ.

ಶ್ರೀರಾಮನ ಸಂದೇಶವನ್ನು ರಾವಣನ ಬಂಧನದಲ್ಲಿರುವ ಸೀತಾ ಮಾತೆಗೆ ತಲುಪಿಸುವ ಬಗೆ ಮತ್ತು ಆಕೆಯ ಯೋಗಕ್ಷೇಮವನ್ನು ಅರಿತುಕೊಳ್ಳಲು ಯಾರನ್ನು ಕಳುಹಿಸುವುದು ಎಂಬುದಾಗಿ ಚರ್ಚೆ ನಡೆಸುವಾಗ ಎಲ್ಲರೂ ಹನುಮನ ಹೆಸರನ್ನು ಸೂಚಿಸುತ್ತಾರೆ. ಆದರೆ ಹನಮಂತನಿಗೆ ತಮ್ಮ ಶಕ್ತಿ ಸಾಮರ್ಥ್ಯದ ಮೇಲೆಯೇ ನಂಬಿಕೆ ಇರುವುದಿಲ್ಲ. ಇದರಿಂದ ಅವರು ಮೊದಲು ಹಿಂಜರಿಯುತ್ತಾರೆ. ಆದರೆ ಸುಗ್ರೀವನು ಅಂಜನೀ ಪುತ್ರನ ಗುಣಗಾನ ಅವರ ಶಕ್ತಿ ಪರಾಕ್ರಮಗಳನ್ನು ಹೊಗಳುತ್ತಾ ಹೋದಂತೆ ಬೃಹದಾಕಾರವಾಗಿ ಆಂಜನೇಯ ನಿಂತುಬಿಡುತ್ತಾರೆ.

ಕೇವಲ ಹೊಗಳಿಕೆಯಿಂದ ಉಬ್ಬಿ ಹನುಮಂತ ದೈತ್ಯ ಗಾತ್ರವನ್ನು ಪಡೆಯುವುದಿಲ್ಲ ಬದಲಿಗೆ ತನ್ನನ್ನು ತಾನು ಅಹಂಕಾರದಿಂದ ಕಂಡುಕೊಳ್ಳದೇ ಸಹೋದರ ಸುಗ್ರೀವನ ಅಕ್ಕರೆಯ ವಾತ್ಸಲ್ಯಮಯ ಹೊಗಳುವಿಕೆಯಿಂದ ಹನುಮ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾರೆ.

ಸರ್ವವಿಘ್ನಗಳಿಂದ ಕಾಪಾಡುವ 'ಹನುಮಾನ್ ಚಾಲೀಸಾದ' ಮಹಿಮೆ ಏನು?

ಹನುಮನನ್ನು ಕುರಿತ ಇಂತಹುದೇ ಮತ್ತಷ್ಟು ಕಥಾನಕಗಳನ್ನು ನಾವು ಸಂಪೂರ್ಣ ರಾಮಾಯಣದಲ್ಲಿ ಕಂಡುಕೊಳ್ಳಬಹುದಾಗಿದೆ. ತಾನು ಪರಾಕ್ರಮಶಾಲಿ ಎಂಬುದು ಅವರಿಗೆ ಗೊತ್ತಿದ್ದರೂ ಜಂಭದಿಂದ ನಡೆದುಕೊಳ್ಳದೇ ಕೊನೆಯವರೆಗೂ ಶ್ರೀರಾಮನ ಬಂಟನಾಗಿಯೇ ಅವರು ಉಳಿದುಕೊಂಡು ತಮ್ಮ ಸ್ವಾಮಿ ಪ್ರೇಮವನ್ನು ಮೆರೆಯುತ್ತಾರೆ. ಶ್ರೀರಾಮ ಮತ್ತು ಸೀತಾಮಾತೆಯನ್ನು ತನ್ನ ಹೃದಯದಲ್ಲಿ ಪೂಜಿಸುತ್ತಿದ್ದ ಹನುಮನು ಒಮ್ಮೆ ತಮ್ಮ ಎದೆಯನ್ನು ಬಗೆದು ಆ ಭಕ್ತಿಯ ಆಳವನ್ನು ಪ್ರದರ್ಶಿಸುತ್ತಾರೆ. ಇಷ್ಟೆಲ್ಲಾ ಮಹಾನ್ ಅದ್ಭುತಗಳನ್ನು ಹೊಂದಿರುವ ಸ್ವಾಮಿಯ ಜೀವನದಿಂದ ನಾವು ಸಾಮಾನ್ಯ ಮನುಷ್ಯರು ಅರಿತುಕೊಳ್ಳಬೇಕಾದ ಬೇಕಾದಷ್ಟು ಅಂಶಗಳಿವೆ. ಇಂದಿನ ಲೇಖನದಲ್ಲಿ ಅವುಗಳೇನು ಎಂಬುದನ್ನು ಅರಿತುಕೊಳ್ಳೋಣ..... 

ಶಕ್ತಿ ಮತ್ತು ಮಾನವೀಯತೆ

ಶಕ್ತಿ ಮತ್ತು ಮಾನವೀಯತೆ

ಬಲಶಾಲಿಯೆಂದರೆ ಅದು ಹನುಮ ಎಂಬ ಮಾತೊಂದಿದೆ. ಅದಾಗ್ಯೂ ಅವರು ಶ್ರೀರಾಮನನ್ನು ಅನುಸರಿಸುವ ಸ್ವಾಮಿ ಭಕ್ತರಾಗಿದ್ದಾರೆ. ಇದು ನಾವು ಕಲಿತುಕೊಳ್ಳಬೇಕಾದ ಪಾಠವಾಗಿದೆ. ನಮ್ಮ ಕೈಗಳಲ್ಲಿ ನಾವು ಶಕ್ತಿಯನ್ನು ಪಡೆದುಕೊಂಡಾಗ ಅಹಂಕಾರದಿಂದ ಮೆರೆಯುತ್ತೇವೆ. ಮಾನವೀಯತೆಯನ್ನು ಮರೆತುಬಿಡುತ್ತೇವೆ. ನೀವು ಶಕ್ತಿವಂತರೂ ಮತ್ತು ಬಲಾಢ್ಯರು ಎಂದೆನಿಸಿದ್ದರೂ ಮಾನವೀಯತೆಯನ್ನು ಕಳೆದುಕೊಳ್ಳದೇ ಇರುವುದು ಮುಖ್ಯವಾಗಿದೆ

ಧೈರ್ಯ

ಧೈರ್ಯ

ನಮ್ಮ ಎದುರಾಳಿ ನಮ್ಮಿಂದ ಸಾವಿರ ಪಟ್ಟು ಬಲಶಾಲಿಯಾಗಿದ್ದರೂ ಅವರನ್ನು ಮಣಿಸುವುದು ಹೇಗೆ ಎಂಬುದನ್ನು ನಾವು ಹನುಮನಿಂದ ಕಲಿತುಕೊಳ್ಳಬಹುದಾಗಿದೆ. ಸೋತು ಹಿಮ್ಮೆಟ್ಟಿದರೆ ಮಾತ್ರವೇ ನಾವು ಸೋಲುತ್ತೇವೆ. ಅಂಜಿಕೆಯಿಂದ ಬಳಲಿದರೆ ಮಾತ್ರವೇ ಸೋಲು ನಮ್ಮನ್ನು ಸ್ವಾಗತಿಸುತ್ತದೆ. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ ಹೋರಾಡಬೇಕು ಎಂಬುದನ್ನು ನಾವು ಹನುಮನಿಂದ ಕಲಿತುಕೊಳ್ಳಬಹುದಾದ ಪಾಠವಾಗಿದೆ.

ಶಕ್ತಿ ದೇವತೆ ಹನುಮಂತನನ್ನು ಪೂಜಿಸುವ ವಿಧಿ-ವಿಧಾನ

ಶರಣಾಗತಿ

ಶರಣಾಗತಿ

ನಿಜವಾದ ಶರಣಾಗತಿ ಎಂದರೆ ಅದು ಜ್ಞಾನದ ಪ್ರವೇಶವಾಗಿದೆ. ನಮ್ಮ ಸಾಧನೆಗಳಿಗಿಂತಲೂ ಮಿಗಿಲಾಗಿ ನಾವು ನಿಸರ್ಗದ ಪರಮಾತ್ಮನ ಕೈಗೊಂಬೆಯಾಗಿದ್ದೇವೆ. ಆದ್ದರಿಂದಲೇ ಪರಾಕ್ರಮಿ ಹನುಮನು ಶ್ರೀರಾಮನಿಗೆ ಶರಣಾಗತರಾಗಿದ್ದರು. ಅಹಂಕಾರದಲ್ಲಿ ಮೆರೆಯುವುದಕ್ಕಿಂತ ಶರಣಾಗತರಾಗಿ ಪ್ರೀತಿಯನ್ನು ಕಂಡುಕೊಳ್ಳೋಣ.

ಸಹಾಯ ಗುಣ

ಸಹಾಯ ಗುಣ

ತಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡುವ ಅನನ್ಯ ಗುಣವನ್ನು ಹನುಮಂತ ಹೊಂದಿದ್ದರು. ರಾವಣನ ಲಂಕೆಗೆ ಹೋಗಿ ಸೀತಾಮಾತೆಯನ್ನು ಕಾಣುವ ದೊಡ್ಡ ಸಾಹಸವನ್ನು ಕೂಡ ಅವರು ಶ್ರೀರಾಮನ ಮೇಲಿದ್ದ ನಿಷ್ಠೆ, ಭಕ್ತಿ ಮತ್ತು ಸಹಾಯ ಗುಣದಿಂದ ಮಾಡಿದ್ದಾರೆ.

ಬಾಂಧವ್ಯ

ಬಾಂಧವ್ಯ

ಶ್ರೀರಾಮ ಮತ್ತು ಸುಗ್ರೀವನನ್ನು ಒಂದುಗೂಡಿಸುವಲ್ಲಿ ಹನುಮನ ಪಾತ್ರ ಹಿರಿದಾದುದಾಗಿದೆ. ಬಾಂಧವ್ಯವನ್ನು ಬೆಸೆಯುವುದು ಹನುಮನಿಂದ ಕಲಿತುಕೊಳ್ಳಬಹುದಾದ ಪಾಠವಾಗಿದೆ.

ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ

ನಿರಂತರತೆ

ನಿರಂತರತೆ

ಲಂಕೆಯನ್ನು ತಲುಪಲು ಸಮುದ್ರವನ್ನು ದಾಟಿದ ಹನುಮನು ಗುರಿ ಮುಟ್ಟುವ ತಮ್ಮ ನಿರಂತರತೆ ಮತ್ತು ಸಾಮರ್ಥ್ಯಗಳಿಂದ ನಮಗೊಂದು ನೀತಿ ಪಾಠವಾಗಿದ್ದಾರೆ. ಕಷ್ಟಗಳಿಗೆ ಹೆದರದೇ ಸೋಲದೇ ಅದನ್ನು ಎದುರಿಸುವ ಕೆಚ್ಚೆದೆಯನ್ನು ಸ್ಥೈರ್ಯವನ್ನು ಹನುಮಾನ್ ನಮಗೆ ತೋರಿಸಿಕೊಡುತ್ತಾರೆ.

English summary

Life Lessons To Learn From Lord Hanuman

The first thing that comes to your mind when you think of Lord Hanuman is strength; immense strength! And when we think of Hanuman, we tend to feel courageous. In fact, courage is the only hope when your life is surrounded by problems and obstacles.
Subscribe Newsletter