For Quick Alerts
ALLOW NOTIFICATIONS  
For Daily Alerts

ಮೀರಾಬಾಯಿ ಬಗ್ಗೆ ಈವರೆಗೂ ತಿಳಿಯದೇ ಇರುವ ಸತ್ಯ ಸಂಗತಿಗಳು!

|

ತನ್ನ ಪ್ರಪಂಚವೇ ಕೃಷ್ಣ ಎಂದು ಕೃಷ್ಣನ ನಾಮ ಜಪವನ್ನು ಮಾಡುತ್ತಾ ದಿನವನ್ನು ಕಳೆದ ಪರಮ ಪವಿತ್ರಳು ಮೀರಾಬಾಯಿ. ದಿನ ಪೂರ್ತಿ ಕೃಷ್ಣನನ್ನು ನೆನೆಯುತ್ತಾ ತನ್ನ ಕಷ್ಟಗಳನ್ನು ಸಹಿಸಿ ನಡೆದ ಮಹಿಳೆ ಮೀರಾಬಾಯಿ. ಇವರು ರಾಜಕುಮಾರಿಯಾಗಿ ಜನಿಸಿದ್ದರೂ ಅನುಸರಿಸಿದ್ದು ಸರಳ ಜೀವನವನ್ನು. ಜಗದೋದ್ಧಾರನ ನೆನೆಯುತ್ತಾ ತನ್ನದೇ ಆದ ಧಾರ್ಮಿಕ ಭಾವನೆಯಲ್ಲಿ ಶ್ರೀ ಕೃಷ್ಣನನ್ನು ನೆನೆಯುತ್ತಿದ್ದಳು. ಈ ಹಿನ್ನೆಲೆಯಲ್ಲಿಯೇ ಭಾರತ ಕಂಡ ಆಧ್ಯಾತ್ಮಿಕ ಸಾಧಕಿಯರಲ್ಲಿ ಮೀರಾಬಾಯಿಯು ಸಹ ಒಬ್ಬರು.

Mirabai

ಸಂಸಾರದಲ್ಲಿ ವಿರಕ್ತಳಾಗಿ ಸಾಧು ಸಂತರ ಸಂಘದಲ್ಲಿ ಶ್ರೀ ಕೃಷ್ಣನ ಕೀರ್ತನೆಯನ್ನು ಮಾಡುತ್ತಾ ಜೀವವನ್ನು ಸವೆದರು. ಮೀರಾಬಾಯಿ ಚಿಕ್ಕವಳಿರುವಾಗ ರಾಜ ವಂಶದಲ್ಲಿ ಜನಿಸಿದ್ದರೂ ತಾಯಿ ಮತ್ತು ತಂದೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡು ದುಃಖವನ್ನು ಅನುಭವಿಸುತ್ತಿದ್ದಳು. ಅಜ್ಜನ ಆಶ್ರಯದಲ್ಲಿ ಬೆಳೆದ ಮೀರಾ ಕೃಷ್ಣನ ಭಕ್ತೆಯಾಗಿ ಬೆಳೆದಳು. ಇವರು ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೀರ್ತನೆ ಮತ್ತು ಭಜನೆಯನ್ನು ಹೇಳುತ್ತಿದ್ದಳು. ಮೀರಾ ಬಾಯಿಯ ಬಗ್ಗೆ ಸಾಕಷ್ಟು ಸಂಗತಿಗಳು ನಮಗೆ ತಿಳಿದಿಲ್ಲ. ಹಾಗಾಗಿ ನಿಮ್ಮೊಂದಿಗೆ ಮೀರಾ ಬಾಯಿಯ ಕೆಲವು ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ.

1. ಮೀರಾಬಾಯಿ ಕುಟುಂಬದ ಹಿನ್ನೆಲೆ

1. ಮೀರಾಬಾಯಿ ಕುಟುಂಬದ ಹಿನ್ನೆಲೆ

ಮೀರಾಬಾಯಿ ರಾವ್ ದುಡಾಜಿಯ ಮೊಮ್ಮಗಳು. ಅವರು ರಾವ್ ಜೋಧಾಜಿಯ ಮೂರನೆಯ ಮಗನಾಗಿದ್ದನು. ಇವರು ರಾಜಸ್ಥಾನದಲ್ಲಿ ರಾಥೋಡ್ ರಾಜವಂಶದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಜೋಧಾಜಿ ತನ್ನ ಮಗ ರಾವ್ ದುಡಾಜಿಗೆ ಜೋಧಪುರ ಸಾಮ್ರಾಜ್ಯದ ಒಂದು ಸಣ್ಣ ಭಾಗವನ್ನು ನೀಡಿದ್ದನು. ಅದು ಮೆಡ್ವಾವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಮೆಡ್ವಾದಲ್ಲಿ ಸಾಕಷ್ಟು ಗ್ರಾಮಗಳು ಇದ್ದವು. ಅದು ಇಂದು ರಾಜಸ್ಥಾನದಲ್ಲಿ ಅಜ್ಮೀರ್ ನಿಂದ ಪಶ್ಚಿಮಕ್ಕೆ 60 ಕಿಲೋಮೀಟರ್ ದೂರದಲ್ಲಿದೆ.

2. ಮೀರಾಬಾಯಿಗೆ ಹೆತ್ತವರ ಪ್ರೀತಿಯೇ ಸಿಗಲಿಲ್ಲ

2. ಮೀರಾಬಾಯಿಗೆ ಹೆತ್ತವರ ಪ್ರೀತಿಯೇ ಸಿಗಲಿಲ್ಲ

ಮೀರಾಬಾಯಿಗೆ ಹೆತ್ತವರ ಪ್ರೀತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಆಕೆಯ ತಾಯಿ ಸುಮಾರು 5 ರಿಂದ 7 ವರ್ಷಗಳಿದ್ದಾಗ ತೀರಿಕೊಂಡರು. ಅಕ್ಬರ್‍ನ ಮೊಗಲ್ ಬಾದ್ ಶಾ ವಿರುದ್ಧ ರಾಜ್ಯವನ್ನು ರಕ್ಷಿಸುವ ಯುದ್ಧದಲ್ಲಿ ತಂದೆ ರತ್ನಸಿಂಗ್ ಸಹ ನಿಧನರಾದರು. ಹೀಗಾಗಿ ಮೀರಾಬಾಯಿ ತನ್ನ ಹೆತ್ತವರ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯವಾಗಲಿಲ್ಲ. ಆದರೆ ಅವಳ ಅಜ್ಜ್ ರಾವ್ ದುಡಾಜಿ ಅತ್ಯಂತ ಪ್ರೀತಿಯಿಂದ ಸಾಕಿದರು. ಮೀರಾ ಅತ್ಯಂತ ಚಿಕ್ಕವಳಾಗಿದ್ದರಿಂದ ರಾಜ್ಯವನ್ನು ಮಂತ್ರಿ ಹಾಗೂ ಸಲಹೆಗಾರರಿಂದ ನಡೆಸಲಾಗುತ್ತಿತ್ತು.

3. ಮೀರಾಬಾಯಿ ಅತ್ಯಂತ ಸುಂದರವಾಗಿದ್ದಳು

3. ಮೀರಾಬಾಯಿ ಅತ್ಯಂತ ಸುಂದರವಾಗಿದ್ದಳು

ಮೀರಾ ಸುಂದರವಾದ ರಾಜಕುಮಾರಿಯಾಗಿದ್ದಳು. ಅವಳು ಎಲ್ಲರೊಂದಿಗೂ ಬಹಳ ಪ್ರೀತಿ ವಿಶ್ವಾಸದಿಂದ ವರ್ತಿಸುತ್ತಿದ್ದಳು. ಮೀರಾಬಾಯಿ ತನ್ನ ಐದನೇ ವರ್ಷದಲ್ಲಿ ಇರುವಾಗ ಒಂದು ದಿನ ಅವಳ ತಾಯಿ ಬಾಲ್ಕನಿಯಲ್ಲಿ ಕೇಶವನ್ನು ಬಾಚಿಕೊಳ್ಳುತ್ತಿದ್ದಳು. ಆಗ ಮದುವೆಯ ದಿಬ್ಬಣವೊಂದು ಹೋಗುತ್ತಿತ್ತು. ಆಗ ಮೀರಾ ಬಾಯಿ ಇದು ಏನು ಎಂದು ಕೇಳಿದಳು. ಆಗ ತಾಯಿ ಇದು ವರನ ದಿಬ್ಬಣ ಎಂದಳು. ಮೀರಾ ಪುನಃ ತಾಯಿಯಲ್ಲಿ ತನ್ನ ವರ ಯಾರು ಎಂದು ಕೇಳಿದಳು.

4. ಅಂದಿನಿಂದಲೇ ಕೃಷ್ಣನು ಅವಳ ಪತಿಯಾದನು

4. ಅಂದಿನಿಂದಲೇ ಕೃಷ್ಣನು ಅವಳ ಪತಿಯಾದನು

ಮಗಳ ಮಾತನ್ನು ಕೇಳಿದ ತಾಯಿಗೆ ಒಮ್ಮೆ ಆಶ್ಚರ್ಯ ಹಾಗೂ ಗೊಂದಲವನ್ನು ಸೃಷ್ಟಿಸಿತು. ಆದರೂ ಮಗಳ ಪ್ರಶ್ನೆಗೆ ಉತ್ತರಿಸಬೇಕು ಎಂದು ತಾಯಿಯು ಅಲ್ಲೇ ಇರುವ ಕೃಷ್ಣನ ಮೂರ್ತಿಯನ್ನು ತೋರಿಸಿ ಇವನೇ ನಿನ್ನ ವರ ಎಂದು ಹೇಳಿದಳು. ತಮಾಷೆಯಾಗಿ ಹೇಳಿದ ತಾಯಿಯ ಮಾತನ್ನು ಮೀರಾ ಗಂಭೀರವಾಗಿ ಪರಿಗಣಿಸಿದಳು. ಜೊತೆಗೆ ಅಂದಿನಿಂದಲೇ ಕೃಷ್ಣನು ತನ್ನ ಪತಿಯೆಂದು ಭಾವಿಸಿದಳು.

5. ಸಾಧುವಿನಿಂದ ಕೃಷ್ಣನನ್ನು ಪಡೆದಳು

5. ಸಾಧುವಿನಿಂದ ಕೃಷ್ಣನನ್ನು ಪಡೆದಳು

ಒಂದು ದಿನ ಸಾಧುವೊಬ್ಬ ಕೃಷ್ಣನ ಮೂರ್ತಿಯನ್ನು ತನ್ನ ಎದೆಗೆ ಒತ್ತಿಕೊಂಡು ಕೃಷ್ಣನ ಭಜನೆ, ನೃತ್ಯ ಹಾಗೂ ಕೀರ್ತನೆಯನ್ನು ಹೇಳುತ್ತಿದ್ದನು. ಅದನ್ನು ಗಮನಿಸಿದ ಮೀರಾ ಅಜ್ಜನಲ್ಲಿ ಆ ಮೂರ್ತಿಯನ್ನು ಕೊಡಿಸುವಂತೆ ಒತ್ತಾಯಿಸಿದಳು. ಆಗ ತಾತನಾದ ರಾವ್ ದುಡಾಜಿ ಸಾಧುವಿನ ಬಳಿ ಆ ಮೂರ್ತಿ ಕೊಡುವಂತೆ ಕೇಳಿಕೊಂಡನು. ಮೂರ್ತಿನ್ನು ಪಡೆದ ಮೀರಾಭಾಯಿ ಸಾಧುವಿನಂತೆ ಎದೆಗೆ ಒತ್ತಿಕೊಳ್ಳುವುದು, ಹಾಡುವುದು ಹಾಗೂ ಭಜನೆ ಮಾಡಲು ಪ್ರಾರಂಭಿಸಿದಳು.

6. ಮೀರಾ ಬಾಯಿ ಎಲ್ಲರಿಗೂ ಪ್ರಿಯವಾದವಳು

6. ಮೀರಾ ಬಾಯಿ ಎಲ್ಲರಿಗೂ ಪ್ರಿಯವಾದವಳು

ಮೀರಾಬಾಯಿ ಎಲ್ಲರಿಗೂ ಅತ್ಯಂತ ಪ್ರಿಯವಾದ ಮಗುವಾಗಿದ್ದಳು. ಇವಳು ಪ್ರಾಯಕ್ಕೆ ಬಂದ ನಂತರವೂ ಚಿಕ್ಕಪ್ಪ, ತಾತ, ಮಂತ್ರಿಗಳು, ಅರಮನೆಯ ಸದಸ್ಯರು ಸೇರಿದಂತೆ ಎಲ್ಲಾ ಸದಸ್ಯರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಳು. ಅಂತೆಯೇ ಎಲ್ಲರಿಗೂ ಮೀರಾಬಾಯಿ ಎಂದರೆ ಅತ್ಯಂತ ಪ್ರಿಯವಾದ ಹುಡುಗಿಯಾಗಿದ್ದಳು. ಅವಳು ಜನಿಸಿದ ಕುಡ್ಕಿ ಪ್ರದೇಶದ ಜನರು ಸಹ ಇವಳ ಬಗ್ಗೆ ಹೆಚ್ಚಿನ ಪ್ರೀತಿಯನ್ನು ತೋರುತ್ತಿದ್ದರು. ಮೀರಾಬಾಯಿ ಯಾರ ಬಗ್ಗೆಯೂ ಸೊಕ್ಕಿನ ಮಾತು ಹಾಗೂ ವರ್ತನೆಯನ್ನು ತೋರಲಿಲ್ಲ ಎಂದು ಹೇಳಲಾಗುತ್ತದೆ.

7. ಅವಳ ಜಗತ್ತು ಕೃಷ್ಣನಿಂದಲೇ ಕೂಡಿತ್ತು

7. ಅವಳ ಜಗತ್ತು ಕೃಷ್ಣನಿಂದಲೇ ಕೂಡಿತ್ತು

ಮೀರಾ ತನ್ನ ಆಟಿಕೆಯ ವಸ್ತುಗಳಲ್ಲೂ ಕೃಷ್ಣನ ಮೂರ್ತಿಯನ್ನು ಹೊಂದುತ್ತಿದ್ದಳು. ಸಾಮಾನ್ಯವಾಗಿ ನಮಗೆ ಇಷ್ಟವಾದ ವಸ್ತುವನ್ನು ನಿದ್ರೆ ಬಂದಾಗ ಅಥವಾ ಬೇರೆ ಕೆಲಸದಲ್ಲಿ ತೊಡಗಿಕೊಂಡಾಗ ಮರೆತು ಬಿಡುತ್ತೇವೆ. ಆದರೆ ಮೀರಾ ಬಾಯಿ ಮಾತ್ರ ಮಲಗುವಾಗ, ನಗುವಾಗ, ಆಡುವಾಗ ಹೀಗೆ ಎಲ್ಲಾ ಸಂದರ್ಭದಲ್ಲೂ ಕೃಷ್ಣನನ್ನು ಸ್ಮರಿಸುತ್ತಿದ್ದಳು.

8. ರಾಜ ಸಂಗ್ರಮ ಸಿಂಗ್‍ನೊಂದಿಗೆ ಸ್ನೇಹ ಬೆಳೆಸಿದರು

8. ರಾಜ ಸಂಗ್ರಮ ಸಿಂಗ್‍ನೊಂದಿಗೆ ಸ್ನೇಹ ಬೆಳೆಸಿದರು

ಅಕ್ಬರ್ ನ ವಿರುದ್ಧ ಹೋರಾಡಲು ಹಾಗೂ ಜೋಧಪುರ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ರಜಪೂತ ರಾಜ ಸಂಗ್ರಮ ಸಿಂಗ್‍ನೊಂದಿಗೆ ಸ್ನೇಹವನ್ನು ಬೆಳೆಸಿದರು. ಜೊತೆಗೆ ತಮ್ಮ ರಾಜ್ಯದ ರಕ್ಷಣೆಗೆ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡರು.

9. ಮೀರಾ ಇಷ್ಟಕ್ಕೆ ವಿರುದ್ಧವಾಗಿ ವಿವಾಹ

9. ಮೀರಾ ಇಷ್ಟಕ್ಕೆ ವಿರುದ್ಧವಾಗಿ ವಿವಾಹ

ಆ ದಿನಗಳಲ್ಲಿ ಮದುವೆಯ ಮೂಲಕ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರು. ರಾಜ ಸಂಗ್ರಮ ಸಿಂಗ್ ನಾಲ್ಕು ಗಂಡು ಮಕ್ಕಳನ್ನು ಹೊಂದಿದ್ದನು. ಅದರಲ್ಲಿ ಅವರ ಪುತ್ರ ಭೋಜ್ ರಾಜನೊಂದಿಗೆ ಮೀರಾ ವಿವಾಹವನ್ನು ಪ್ರಸ್ತಾಪಿಸಿದರು. ಇದರ ಮೂಲಕ ರಜಪೂತರ ಎರಡು ಶಕ್ತಿಶಾಲಿ ಸಾಮ್ರಾಜ್ಯಗಳು ಒಂದಾದರು. ಆಗಿನ ಕಾಲದಲ್ಲಿ ಹುಡುಗಿಯರು ತಮ್ಮ ವಿವಾಹದ ಬಗ್ಗೆ ಹೆಚ್ಚು ಮಾತನಾಡಲು ಹಾಗೂ ಅಭಿಪ್ರಾಯ ತಿಳಿಸಲು ಮುಂದಾಗುತ್ತಿರಲಿಲ್ಲ. ಹಾಗಾಗಿ ಮೀರಾಳ ಅಭಿಪ್ರಾಯವನ್ನು ತಿಳಿಸಲು ಕಷ್ಟವಾಯಿತು. ಆದರೆ ಮೀರಾ ಕೃಷ್ಣನನ್ನು ಮಾನಸಿಕವಾಗಿ ಪ್ರೀತಿಸುತ್ತಿದ್ದಾಳೆ, ಅವನನ್ನೇ ಪತಿಯನ್ನಾಗಿ ಸ್ವೀಕರಿಸಿದ್ದಾಳೆ ಎಂದು ಎಲ್ಲರಿಗೂ ತಿಳಿದಿತ್ತು.

10. ಪತಿಯಿಂದ ದೂರವೇ ಇದ್ದ ಮೀರಾ

10. ಪತಿಯಿಂದ ದೂರವೇ ಇದ್ದ ಮೀರಾ

ಮೀರಾ ತಾಯಿಯಲ್ಲಿ ಒಂದಿಷ್ಟು ವಿಷಯವನ್ನು ಹೇಳಿದಳು, ಮೀರಾಳ ತಾಯಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೀರಾ ತನ್ನ ಆಧ್ಯಾತ್ಮಿಕ ಗುರಿ ಮತ್ತು ಜೀವನದ ಉದ್ದೇಶವನ್ನು ಸಮರ್ಪಿಸಿದ್ದಳು. ಅವಳು ಯಾವುದೇ ಸಂದರ್ಭದಲ್ಲೂ ಸತ್ಯವನ್ನು ರಾಜಿ ಮಾಡಿಕೊಳ್ಳಲಿಲ್ಲ. ಆದರೆ ಭೋಜರಾಜ್ ಅವಳ ಇಷ್ಟಕ್ಕೆ ವಿರುದ್ಧವಾಗಿ ಮೀರಾಳನ್ನು ವಿವಾಹವಾದರು. ಆದರೆ ಮೀರಾ ಆಗಲೇ ಕೃಷ್ಣನನ್ನು ವಿವಾಹವಾಗಿದ್ದೇನೆ ಎಂದು ನಂಬಿದ್ದರಿಂದ ಭೋಜರಾಜನಿಗೆ ತನ್ನನ್ನು ಮುಟ್ಟಲು ಬಿಡಲಿಲ್ಲ.

11. ಲೌಕಿಕ ಮತ್ತು ಆಧ್ಯಾತ್ಮಿಕ ವಿಷಯಗಳ ನಡುವೆ ಜಗಳ

11. ಲೌಕಿಕ ಮತ್ತು ಆಧ್ಯಾತ್ಮಿಕ ವಿಷಯಗಳ ನಡುವೆ ಜಗಳ

ಮೀರಾ ಕೃಷ್ಣನ ನಿಷ್ಠಾವಂತ ವಧುವಾಗಿ ಪರಿಗಣಿಸಿದ್ದಳು. ಆದರೆ ಕುಟುಂಬದಲ್ಲಿ ಮೀರಾಳ ವಿಚಿತ್ರವಾದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಲೌಕಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳ ನಡುವೆ ಸೌಮ್ಯವಾದ ಜಗಳ ಪ್ರಾರಂಭವಾಯಿತು. ಆಗ ಮೀರಾ ವೈಯಕ್ತಿಕವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ತನ್ನ ನಿಜವಾದ ಕೃಷ್ಣನ ಪ್ರೀತಿಯನ್ನು ಕಾಪಾಡಿಕೊಳ್ಳಲು ಸಿದ್ಧಳಾದಳು.

12. ಮೀರಾಳನ್ನು ಕೊಲ್ಲುವ ಪ್ರಯತ್ನವೂ ನಡೆಯಿತು

12. ಮೀರಾಳನ್ನು ಕೊಲ್ಲುವ ಪ್ರಯತ್ನವೂ ನಡೆಯಿತು

ಮೀರಾಬಾಯಿಯ ವಿರೋಧಾತ್ಮಕ ವರ್ತನೆಯನ್ನು ಸಿಸೋಡಿಯಾ ಕುಟುಂಬದಲ್ಲಿ ಯಾರೂ ಇಷ್ಟಪಡಲಿಲ್ಲ. ಮೀರಾಬಾಯಿಯನ್ನು ಮನವೊಲಿಸುವ, ಬೆದರಿಸುವ ಪ್ರಯತ್ನಗಳು ನಡೆದವು. ಅವಳ ಮನಸ್ಸಿಗೆ ನೋವಾಗುವಂತೆ ಕೆಲವು ಕೃತ್ಯವನ್ನು ಎಸಗಲಾಯಿತು. ಆದರೆ ಅವು ಯಾವುದೂ ಅವರಿಗೆ ಅನುಕೂಲವನ್ನು ಸೃಷ್ಟಿಸಲಿಲ್ಲ. ಹಾಗಾಗಿ ಕೊನೆಯದಾಗಿ ಮೀರಾಬಾಯಿಯನ್ನು ಸಾಯಿಸುವ ಪ್ರಯತ್ನಗಳು ಸಹ ನಡೆದವು.

13. ಅನುಕಂಪ ವಿತ್ತು

13. ಅನುಕಂಪ ವಿತ್ತು

ಮೀರಾಬಾಯಿಯ ಮಾವ ಹಾಗೂ ಗಂಡನಿಗೆ ಮೀರಾಳ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಮೃದುವಾದ ಧೋರಣೆಯಿತ್ತು. ಆದರೆ ಅವಳ ಧರ್ಮದ ಆಚರಣೆ ಮತ್ತು ಧಾರ್ಮಿಕ ವಿಚಾರದಲ್ಲಿ ಅವಳು ನಡೆದುಕೊಳ್ಳುವ ವರ್ತನೆಗಳು ಇಷ್ಟವಾಗುತ್ತಿರಲಿಲ್ಲ.

14. ಮೀರಾ ನಿರ್ಲಕ್ಷಿಸಿದರು

14. ಮೀರಾ ನಿರ್ಲಕ್ಷಿಸಿದರು

ಸಿಸೋಡಿಯಾ ಕುಟುಂಬ ತನ್ನ ಧರ್ಮ ಮತ್ತು ಆಚರಣೆಯನ್ನು ಸಹಿಸದೆ ಇರುವುದಕ್ಕೆ ಬೇಸರಪಡುತ್ತಿದ್ದಳು. ಮೀರಾ ಸಹ ಅವರ ವರ್ತನೆ ಹಾಗೂ ಕೈಗೊಳ್ಳುವ ಕ್ರಮಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿದಳು. ಆಧ್ಯಾತ್ಮಿಕ ಜೀವನದಲ್ಲಿ ನಡೆದ ಯಾವುದೇ ಅನಪೇಕ್ಷಿತ ವಿಷಯಗಳ ಬಗ್ಗೆ ಬೇಸರಕ್ಕೆ ಒಳಗಾಗಿದ್ದಳು. ಮೀರಾ ತನ್ನ ಸತ್ಯ ಹಾಗೂ ದೇವರ ಮೇಲಿರುವ ಪ್ರೀತಿಗೆ ಪರೀಕ್ಷೆ ನಡೆಯುತ್ತಿದೆ ಎಂದುಕೊಂಡರು.

15. ಜೀವನದ ಪ್ರತಿಯೊಂದು ಹಂತದಲ್ಲೂ ತೊಂದರೆಯನ್ನು ಅನುಭವಿಸಿದಳು

15. ಜೀವನದ ಪ್ರತಿಯೊಂದು ಹಂತದಲ್ಲೂ ತೊಂದರೆಯನ್ನು ಅನುಭವಿಸಿದಳು

ಅವಳ ನಂಬಿಕೆಯು ನಿರ್ವಿವಾದವಾಗಿ ದೃಢವಾಗಿತ್ತು. ಅವಳ ಪ್ರೀತಿ ಎಷ್ಟು ಶುದ್ಧವಾಗಿತ್ತು ಎಂದರೆ ಎಲ್ಲಾ ಐಹಿಕ ಶಕ್ತಿಯು ಅವಳ ಆಧ್ಯಾತ್ಮಿಕ ಶಕ್ತಿಗೆ ವಿರುದ್ಧವಾಗಿ ನಿಲ್ಲಲಿಲ್ಲ. ದೈನಂದಿನ ಜೀವನದಲ್ಲಿ ಪ್ರತಿಯೊಂದು ಹಂತವೂ ಕಷ್ಟಗಳಿಂದ ಕೂಡಿತ್ತು. ಅವಳು ಅವಳ ಪ್ರೀತಿಯ ವಿಷಯದಲ್ಲಿ ಸೋಲಲಿಲ್ಲ. ಅವಳು ಬಹಳ ಪರಿಶುದ್ಧಳಾಗಿದ್ದಳು. ತನ್ನ ಗಂಡನ ಮರಣದ ನಂತರ ವಿಕ್ರಮಾದಿತ್ಯನ ಆಡಳಿತದಲ್ಲಿ, ಸಿಸೋಡಿಯ ಕುಟುಂಬದಿಂದ ಸಾಕಷ್ಟು ತೀವ್ರ ವಿರೋಧವನ್ನು ಮೀರಾಬಾಯಿ ಅನುಭವಿಸಿದರು.

16. ಆಕೆಗೆ ವಿಷ ನೀಡುವ ಪ್ರಯತ್ನ ನಡೆಯಿತು

16. ಆಕೆಗೆ ವಿಷ ನೀಡುವ ಪ್ರಯತ್ನ ನಡೆಯಿತು

ಅವಳನ್ನು ವಿಪರೀತ ಗೊಳಿಸುವ ಪ್ರಯತ್ನ ನಡೆಯಿತು. ಆದರೆ ಅದ್ಯಾವುದೂ ಅವಳ ಮೇಲೆ ಪ್ರಭಾವ ಬೀರಲಿಲ್ಲ. ಹೂವಿನ ಹಾರದಲ್ಲಿ ವಿಷ ಭರಿತ ಹಾವನ್ನು ಇಟ್ಟು ಕಳುಹಿಸಲಾಯಿತು. ಅವಳು ಶ್ರೀಕೃಷ್ಣನನ್ನು ನೆನೆಯುತ್ತಾ ಹಾವನ್ನು ಹೂವಾಗಿ ಬಳಸಿಕೊಂಡು ಹಾರವನ್ನಾಗಿ ಧರಿಸಿದಳು.

17. ಮೀರಾಳ ವಿರುದ್ಧ ನಡೆದ ಎಲ್ಲಾ ಪ್ರಯತ್ನಗಳು ವಿಫಲವಾದವು

17. ಮೀರಾಳ ವಿರುದ್ಧ ನಡೆದ ಎಲ್ಲಾ ಪ್ರಯತ್ನಗಳು ವಿಫಲವಾದವು

ಸಿಸೋಡಿಯಾ ಕುಟುಂಬದವರು ಕೊನೆಯದಾಗಿ ಅವಳನ್ನು ತನ್ನ ಪೋಷಕರ ಮನೆಗೆ ಕಳುಹಿಸಲು ನಿರ್ಧರಿಸಿದರು. ಮೀರಾ ಯಾವಾಗಲೂ ಪ್ರಾರ್ಥನೆ ಮಾಡುತ್ತಾ ವಿನಮ್ರದಿಂದ ಸೌಮ್ಯ ಮತ್ತು ದೃಢ ನಿಶ್ಚಯದಿಂದ ಇದ್ದಳು. ಅವಳು ಚಿತ್ತೂರದಿಂದ ಹೊರಟು ಪವಿತ್ರ ಸ್ನಾನ ಮಾಡಲು ಪುಷ್ಕರದಲ್ಲಿ ಇಳಿದಳು. ಆಗ ಮೆಡ್ವಾನ್ ಅಲ್ಲಿ ಪರಿಸ್ಥಿತಿಗಳು ಉತ್ತಮವಾಗಿರಲಿಲ್ಲ. ನಿರಂತರ ಯುದ್ಧಗಳು ಅಹಿತಕರ ಪರಿಸ್ಥಿತಿಯನ್ನು ಸೃಷ್ಟಿಸಿತು. ಆಗ ಅವಳು ಅಲ್ಲಿ ಇರಲು ಇಷ್ಟಪಡಲಿಲ್ಲ.

18. ವೃಂದಾವನಕ್ಕೆ ಹೋಗಲು ನಿರ್ಧರಿಸಿದಳು

18. ವೃಂದಾವನಕ್ಕೆ ಹೋಗಲು ನಿರ್ಧರಿಸಿದಳು

ಕೊನೆಯದಾಗಿ ಕೃಷ್ಣನು ರಾಧಿಕಾ ಮತ್ತು ಗೋಪಿಯರೊಂದಿಗೆ ಆಡಿದ ವೃಂದಾವನಕ್ಕೆ ಹೋಗಲು ನಿರ್ಧರಿಸಿದಳು. ಹಿಂದಿನ ಜನ್ಮದಲ್ಲಿ ತಾನು ಸ್ವತಃ ಕೃಷ್ಣನ ಪತ್ನಿ ರಾಧಿಕಾ ಆಗಿಯೇ ಇದ್ದೆ ಎಂದು ಭಾವಿಸಿದ್ದಳು. ಅಂತೆಯೇ ತನ್ನ ಪತಿಯೊಂದಿಗೆ ಕಳೆದ ಕ್ಷಣಗಳನ್ನು ನೆನೆಸಿಕೊಂಡಳು.

19. ಸಾಧುವನ್ನು ಭೇಟಿಯಾದಳು

19. ಸಾಧುವನ್ನು ಭೇಟಿಯಾದಳು

ವೃಂದಾವನದಲ್ಲಿ ಇದ್ದ ಸಾಧು ಸ್ವಾಮಿಯನ್ನು ಭೇಟಿಯಾದಳು. ಅವರು ಧಾರ್ಮಿಕ ಚಿಂತನೆಗಳಲ್ಲಿ ಅತ್ಯುತ್ತಮ ಜ್ಞಾನವನ್ನು ಪಡೆದುಕೊಂಡಿದ್ದರು. ಅವರು ಯಾವುದೇ ಮಹಿಳೆಯರನ್ನು ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಹಾಗಾಗಿ ಮೀರಾಳನ್ನು ಭೇಟಿಯಾಗಲು ಅವರು ನಿರಾಕರಿಸಿದರು. ಆ ಸ್ಥಳದಿಂದ ಹೊರಟು ಬರುವಾಗ ವೃಂದಾವನದಲ್ಲಿ ಕೃಷ್ಣನನ್ನು ಹೊರತು ಪಡಿಸಿ ಬೇರಾರಿಗು ನನ್ನ ಬಗ್ಗೆ ತಿಳಿದಿಲ್ಲ ಎಂದು ಭಾವಿಸಿಕೊಂಡು ನಡೆದರು. ಸಾಧು ತನ್ನ ಅಜ್ಞಾನವನ್ನು ಅರಿತುಕೊಂಡು ತಮ್ಮ ಗುಡಿಸಿಲಿನಿಂದ ಹೊರಬಂದರು. ಅಂತೆಯೇ ಮೀರಾಳಿಗೆ ನಮಸ್ಕರಿಸಿ ಕ್ಷಮೆಯಾಚಿಸಿದರು. ಮೀರಾ ತುಂಬು ಹೃದಯದಿಂದಲೇ ಅವರನ್ನು ಕ್ಷಮಿಸಿ ಮುಂದೆ ಸಾಗಿದಳು. ನಂತರ ದ್ವಾರಕಾಗೆ ತೆರಳಿದಳು. ಒಂದು ಕಾಲದಲ್ಲಿ ರಾಜನಾಗಿದ್ದ ಶ್ರೀಕೃಷ್ಣನು ದ್ವಾರಕಾವನ್ನು ಆಳಿದ್ದನು. ದ್ವಾರಕಾಗೆ ಹೋಗುವಾಗ ಕೃಷ್ಣ ದೇವಸ್ಥಾನಕ್ಕೆ ಹೆಸರುವಾಸಿಯಾದ ಡಕೋರ್ ನಲ್ಲಿ ಅವಳು ಇಳಿದಳು.

20. ರಾಜ್ಯ ಕಳೆದುಕೊಂಡ ರಜಪೂತರು

20. ರಾಜ್ಯ ಕಳೆದುಕೊಂಡ ರಜಪೂತರು

ಮೀರಾಬಾಯಿ ದ್ವಾರಕಾಗೆ ಆಗಮಿಸಿದಳು. ಮೀರಾ ತನ್ನ ಜೀವವು ತನ್ನ ಭಗವಂತನೊಂದಿಗೆ ಒಂದಾಗಬೇಕು ಎಂದು ನಿರ್ಧರಿಸಿದಳು. ಈ ಮಧ್ಯೆ ರಜಪೂತರು ತಮ್ಮ ರಾಜ್ಯವನ್ನು ಕಳೆದುಕೊಂಡಿದ್ದರು. ಮೀರಾ ಅವರನ್ನು ಮೆಡ್ವಾ ಅಥವಾ ಚಿತ್ತೂರಕ್ಕೆ ಮರಳಬೇಕೆಂದು ಆಹ್ವಾನಿಸಲು ಕೆಲವು ಪುರೋಹಿತರನ್ನು ಕಳುಹಿಸಿದ್ದರು.

21. ದ್ವಾರಕಾ ದೇವಸ್ಥಾನದಲ್ಲಿ ಕೃಷ್ಣ ಮೀರಾಳನ್ನು ಸೇರಿಸಿಕೊಂಡನು

21. ದ್ವಾರಕಾ ದೇವಸ್ಥಾನದಲ್ಲಿ ಕೃಷ್ಣ ಮೀರಾಳನ್ನು ಸೇರಿಸಿಕೊಂಡನು

ಮೀರಾ ತನ್ನ ಕೃಷ್ಣನ ಪ್ರೀತಿಯಲ್ಲಿ ಲೀನಳಾಗಿದ್ದಳು. ಅವಳು ಲೌಕಿಕ ಜೀವನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಭರವಸೆಯನ್ನು ತ್ಯಜಿಸಿದ್ದಳು. ಕ್ರಿ.ಶ. 1624ರಲ್ಲಿ ಭಾರತದ ಗುಜರಾತ್ ರಾಜ್ಯದ ಪಶ್ಚಿಮ ಭಾಗದ ದ್ವಾರಕದಲ್ಲಿ ಆಕೆ ತನ್ನ ದೇಹವನ್ನು ತ್ಯಜಿಸಿದಳು. ಅವಳು ಸುಮಾರು 67 ವರ್ಷಗಳ ಕಾಲ ಬದುಕಿದ್ದಳು. ಅವಳು ತನ್ನ ಜೀವಿತದ ಅವಧಿಯಲ್ಲಿ ಶ್ರೀಕೃಷ್ಣನನ್ನು ಬಿಟ್ಟರೆ ಬೇರೆಯಾವುದನ್ನೂ ಪ್ರೀತಿಸಿರಲಿಲ್ಲ. ಕೊನೆಯದಾಗಿ ಭಗವಂತನು ದ್ವಾರಕಾ ದೇವಸ್ಥಾನದಲ್ಲಿ ಅವಳನ್ನು ತನ್ನಲ್ಲಿ ಲೀನಿಸಿಕೊಂಡನು ಎನ್ನಲಾಗುತ್ತದೆ.

English summary

Lesser Known Facts About Mirabai

Mirabai was born a princess, a granddaughter of Rao Dudaji -- the third son of Rao Jodhaji, who established the kingdom of Rathod Dynasty in Rajasthan, with Jodhpur as its capital in the kingdom known as Jodhpur. Jodhaji gave his son Rao Dudaji a small portion of the Jodhpur kingdom. It consisted of several villages with Medta as its capital. Medta is about 60 kilometers west of Ajmer in the present state of Rajasthan, India.
X
Desktop Bottom Promotion