Just In
Don't Miss
- News
ಧಾರವಾಡ-ಅಂಬೇವಾಡಿ ರೈಲು ವೇಳಾಪಟ್ಟಿ ಬದಲಾವಣೆ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ರಾಶಿಗೆ ಅನುಗುಣವಾಗಿ ಲಕ್ಷ್ಮಿ ಮಂತ್ರ ಜಪಿಸಿದರೆ ಸಂಪತ್ತು ಒಲಿದು ಬರುವುದು
ಮನುಷ್ಯ ಯಾವುದೇ ಕೊರತೆಯನ್ನು ಹೊಂದಿರಬಾರದು ಎಂದಾದರೆ ಅವನಲ್ಲಿ ಸಾಕಷ್ಟು ಸಂಪತ್ತು ಅಥವಾ ಆಸ್ತಿ ಇರಬೇಕು. ಅಗತ್ಯಕ್ಕೆ ಬೇಕಾದಂತೆ ಖರ್ಚುಮಾಡಲು ಸಾಕಷ್ಟು ಹಣ ಕೈಯಲ್ಲಿ ಇರಬೇಕು. ಆಗ ಸುಖಮಯವಾದ ಜೀವನವನ್ನು ನಡೆಸಬಹುದು ಎನ್ನುವುದು ಎಲ್ಲರ ಮನಸ್ಸಿನಲ್ಲಿ ಇರುತ್ತದೆ. ಆದರೆ ಯಾರೂ ತಮ್ಮ ನಸ್ಸಿನಲ್ಲಿ ಇದ್ದಂತಹ ಬಯಕೆಯನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ.
ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಹಾಗಾಗಿ ಸದಾ ದೇವರಲ್ಲಿ ಪ್ರಾರ್ಥಿಸುತ್ತಾ ಸಂಪತ್ತನ್ನು ಕರುಣಿಸು ಎಂದು ದೇವರಲ್ಲಿ ಮೊರೆ ಇಡುವುದು ಸಹಜ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ವಿಶೇಷವಾದ ಲಕ್ಷ್ಮಿ ಮಂತ್ರಗಳನ್ನು ಹೇಳಬೇಕು. ಲಕ್ಷ್ಮಿ ದೇವಿಗೆ ಮಂತ್ರಗಳಿಂದ ಸಂತೋಷ ಗೊಳಿಸಿದಾಗ ಸುಲಭವಾಗಿ ಒಲಿಯುತ್ತಾಳೆ.
ಕಷ್ಟಗಳನ್ನು ನಿವಾರಿಸುತ್ತಾಳೆ ಎಂದು ಹೇಳಲಾಗುವುದು. ಲಕ್ಷ್ಮಿ ಮಂತ್ರವನ್ನು ಜಪಿಸುವುದರಿಂದ ಸಂಕಷ್ಟಗಳು ದೂರವಾಗಿ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು ಎಂದು ಹೇಳಲಾಗುತ್ತದೆ. ನಿಮಗೂ ನಿಮ್ಮ ಸಂಪತ್ತನ್ನು ವೃದ್ಧಿಯಾಗಬೇಕು ಎನ್ನುವ ಆಸೆ ಇದ್ದರೆ ಈ ಮುಂದೆ ವಿವರಿಸಲಾದ ಮಂತ್ರಗಳನ್ನು ಜಪಿಸಿ...

ಮೇಷ
ಈ ರಾಶಿಯವರು ಸಾಮಾನ್ಯವಾಗಿ ಮಂಗಲ ಗುಣವನ್ನು ಹೊಂದಿರುತ್ತಾರೆ. ಇವರು ಶಕ್ತಿವಂತರ, ಮಹತ್ವಾಕಾಂಕ್ಷಿಗಳು ಹಾಗೂಮೊಂಡು ಸ್ವಭಾವದವರಾಗಿರುತ್ತಾರೆ. ಇವರು ಬಹು ಸುಲಭವಾಗಿ ತೃಪ್ತಿಯನ್ನು ಪಡೆದುಕೊಳ್ಳುವುದಿಲ್ಲ. ಇವರು ತಮ್ಮ ಆಸೆಯಂತೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ನಿತ್ಯವೂ "ಶ್ರೀಮ್" ಎನ್ನುವ ಮಂತ್ರವನ್ನು 10008 ಬಾರಿ ಜಪಿಸಬೇಕು.

ವೃಷಭ
ಈ ರಾಶಿಯವರು ಸದಾ ಕುಟುಂಬ ಮತ್ತು ಸಾಮಾಜಿಕ ಚಿಂತನೆಗಳ ಬಗ್ಗೆ ಹೆಚ್ಚು ಜವಾಬ್ದಾರಿಯನ್ನು ತೋರುವರು. ಇವರು ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳಲು"ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನ ಧಾನ್ಯಹ ಸುತಾನ್ವಿತಃ, ಮನುಷ್ಯೋ ಮತ್‍ಪ್ರಸಾದೇನ ಭವಿಷ್ಯತಿ ನಾ ಸನ್ಯಾಹ ಓಂ." ಎಂದು ಜಪಿಸಬೇಕು.

ಮಿಥುನ
ಇವರು ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಪರಿಸ್ಥಿತಿಯನ್ನು ಬದಲಿಸಿಕೊಳ್ಳುವರು. ಸ್ವಭಾವತಃ ಮೊಂಡುತನದವರಾದ ಇವರು ಕಷ್ಟಪಟ್ಟು ದುಡಿಯುತ್ತಾರೆ. ಸುಲಭವಾಗಿ ತೊಂದರೆಗಳನ್ನು ಜಯಿಸಬಲ್ಲರು. ಇವರು ಲಕ್ಷ್ಮಿ ದೇವಿಗೆ "ಓಂ ಶ್ರಿಂಗ್ ಶ್ರೀಯೇ ನಮಃ" ಎಂದು ಮಂತ್ರವನ್ನು ಪಠಿಸಬೇಕು.

ಕರ್ಕ
ಈ ರಾಶಿಯವರು ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮಾನಸಿಕವಾಗಿ ಹೆಚ್ಚು ಶಕ್ತರಾದ ಇವರು ಲಕ್ಷ್ಮಿ ದೇವಿಗಾಗಿ " ಓಂ ಶ್ರೀ ಮಹಾಲಕ್ಷ್ಮೀ ಚಾ ವಿದ್ಮಹೇ ವಿಷ್ಣು ಪತ್ನಯೇ ಚಾ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ"

ಸಿಂಹ
ಈ ರಾಶಿಯವರು ಧೈರ್ಯಶಾಲಿಗಳು ಹಾಗೂ ಅಹಂಕಾರಿ ಸ್ವಭಾವದವರು ಎಂದು ಹೇಳಲಾಗುವುದು. ಇವರು ಅನ್ಯಾಯದ ವಿರುದ್ಧ ನಿಲ್ಲುವರು. ಇವರ ಈ ಗುಣ ಸಂಬಂಧಿಕರಲ್ಲಿ ಬಹಳಷ್ಟು ಖ್ಯಾತಿಯನ್ನು ತಂದುಕೊಡುವುದು. ಲಕ್ಷ್ಮಿ ದೇವಿಗಾಗಿ ಇವರು "ಓಂ ಶ್ರೀಮ್ ಮಹಾ ಲಕ್ಷ್ಮಿಯೇ ನಮಃ" ಎಂದು ಜಪಿಸಬೇಕು.

ಕನ್ಯಾ
ಇವರು ಸಂಬಂಧಗಳನ್ನು ಅದ್ಭುತವಾಗಿ ನಿರ್ವಹಿಸುವರು. ಸ್ವಭಾವತಃ ಪ್ರಾಮಾಣಿಕರು ಮತ್ತು ಕಷ್ಟಪಟ್ಟು ದುಡಿಯುವರು. ಇವರು ಲಕ್ಷ್ಮಿ ದೇವಿಗಾಗಿ" ಓಂ ಹ್ರೀಮ್ ಶ್ರೀಮ್ ಕ್ಲೇಮ್ ಮಹಾಲಕ್ಷ್ಮೀ ನಮಃ" ಎಂದು ಜಪಿಸುವರು.

ತುಲಾ
ಆಕರ್ಷಕ ಮತ್ತು ಭಾವನಾತ್ಮಕ ಗುಣವನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಪ್ರಾಮಾಣಿಕತೆ ಮತ್ತು ನ್ಯಾಯಾವು ಅವರ ಪ್ರಮುಖ ಲಕ್ಷಣ. ಇವರು ಲಕ್ಷ್ಮಿ ದೇವಿಗಾಗಿ "ಓಂ ಶ್ರೀಮ್ ಶ್ರೀ-ಆಮಿ ನಮಹಃ" ಎಂದು ಹೇಳಲಾಗುವುದು.

ವೃಶ್ಚಿಕ
ಈ ರಾಶಿಯವರು ಜೀವನದಲ್ಲಿ ಬಹಳಷ್ಟು ಸಮಸ್ಯೆಯನ್ನು ಎದುರಿಸಿ ಮುಂದೆ ಬಂದವರಾಗಿರುತ್ತಾರೆ. ಜೀವನದಲ್ಲಿ ಸಾಧನೆಯನ್ನು ಮಾಡಬಲ್ಲ ಇವರು ಲಕ್ಷ್ಮಿಯನ್ನು ಒಲಿಸಿಕೊಳ್ಳಲು " ಓಂ ಹ್ರೆಮ್ ಶ್ರೀಯಂ ಲಕ್ಷ್ಮಿ ಭಯೋ ನಮಃ" ಎಂದು ಜಪಿಸಬೇಕು.

ಧನು
ಈ ರಾಶೀಯವರು ದೇವಗುರು ಬ್ರಹಸ್ಪತಿಯ ಎಲ್ಲಾ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಸ್ನೇಹಪರ ಗುಣವನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಇವರು ಲಕ್ಷ್ಮಿ ದೇವಿಗೆ " ಓಂ ಶ್ರೀಮ್ ಹ್ರೀಮ್ ಶ್ರೀಮ್ ಕಮಲೇ ಕಮಲಾಯೈ ಪ್ರಸೀದ್ ಪ್ರಸೀದ್ ಓಂ ಶ್ರೀಮ್ ಹ್ರೀಮ್ ಶ್ರೀಮ್ ಮಹಾಲಕ್ಷ್ಮಾಯೈ ನಮಃ" ಎಂದು ಜಪಿಸಬೇಕು.

ಮಕರ
ಈ ರಾಶಿಯವರು ತಾಳ್ಮೆ ಮತ್ತು ಕಠಿಣ ಕೆಲಸಕ್ಕೆ ಹೆಸರುವಾಸಿಯಾಗಿರುತ್ತಾರೆ. ಸಾಕಷ್ಟು ನೋವುಗಳನ್ನು ಸಹಿಸಿ ಮುಂದೆ ಬಂದವರಾಗಿರುತ್ತಾರೆ. ಇವರು ಲಕ್ಷ್ಮಿ ದೇವಿಗಾಗಿ " ಓಂ ಶ್ರಿಂಗ್ ಹೆರಿಂಗ್ ಕ್ಲಿಂಗ್ ಏಂಗ್ ಸೌಂಗ್ ಓಂ ಹಿರಿಂಗ್ ಕಾ ಎ ಇ ಲಾ ಹೆರಿಂಗ್ ಮಾ ಸ ಕಾ ಹಾ ಲಾ ಹೆರಿಂಗ್ ಸಾಕಲ್ ಹರಿಂಗ್ ಸೌಂಗ್ ಏಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ" ಎಂದು ಜಪಿಸಬೇಕು.

ಕುಂಭ
ಸ್ವತಂತ್ರವನ್ನು ಬಯಸುವವರು ಹಾಗೂ ಹಠಮಾರಿ ಗುಣವನ್ನು ಹೊಂದಿದವರಾಗಿರುತ್ತಾರೆ. ಇವರು ಲಕ್ಷ್ಮಿ ದೇವಿಗಾಗಿ ಏಯಿಂಗ್ ಹರ್ಮ್ ಶ್ರೀಮ್ ಅಷ್ಟ ಲಕ್ಷ್ಮಿಯೈ ಹ್ರಿಂಗ್ ರಿಮ್ ಸಿದ್ಧಯೇ ಮಮ್ ಗ್ರಿಮ್ ಆಗಹಚ್ ನಮಃ ಸ್ವಾಹ" ಎಂದು ಹೇಳಬೇಕು.

ಮೀನ
ಈ ರಾಶಿಯವರು ಸಂವೇದನಾ ಶೀಲತೆ ಹಾಗೂ ತಾಳ್ಮೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಕಾಳಜಿ ಮತ್ತು ಪ್ರೀತಿಯಿಂದ ಇತರರನ್ನು ಗೆಲ್ಲುತ್ತಾರೆ. ಇವರು ಲಕ್ಷ್ಮಿ ದೇವಿಗಾಗಿ "ಓಂ ಶ್ರೀಮ್ ಹ್ರೀಮ್ ಶ್ರೀಮ್ ಕಮಾಲೆ ಕಮಲಲೈ ಪ್ರಶಿದ್ ಪ್ರಸೀದ್, ಓಂ ರ್ಶರೀಮ್ ಹ್ರೆಮ್ ಶ್ರಿಮ್ ಮಹಾಲಕ್ಷ್ಮೈ ನಮಃ" ಎಂದು ಹೇಳಬೇಕು.