ಸಂಪತ್ತಿನ ದೇವತೆ 'ಲಕ್ಷ್ಮಿ'ಯನ್ನು ಒಲಿಸಿಕೊಳ್ಳುವ ಮಂತ್ರಗಳು

Posted By: jayasubramanya
Subscribe to Boldsky

ಇಂದು ಬರಿಯ ದುಡ್ಡಿದ್ದರೆ ಮಾತ್ರವೇ ಜೀವನ ಎಂಬ ಮಾತು ಸುಳ್ಳಾಗುತ್ತಿದೆ. ಏಕೆಂದರೆ ಮಾನವ ದುಡ್ಡಿನ ಹಿಂದೆ ಅಲೆದು ಮಾನವೀಯತೆ, ಅಂತಃಕರಣ, ಸಂಬಂಧ, ಪ್ರೀತಿ, ಪ್ರೇಮವನ್ನು ಮರೆಯುತ್ತಿದ್ದೇವೆ. ಸಂಕಟ ಬಂದಾಗ ವೆಂಕಟರಮಣ ಎಂಬ ಉಕ್ತಿಯಂತೆ ಕಷ್ಟಗಳ ಸರಮಾಲೆ ನಮ್ಮನ್ನು ಮುತ್ತಿಕ್ಕಿದಾಗ ನಾವು ದೇವರನ್ನು ನೆನೆಯುತ್ತೇವೆ. ಅದಾಗ್ಯೂ ಆ ಪರಮಾತ್ಮ ನಮ್ಮ ಕೈಬಿಡದೇ ನಮ್ಮ ಕಷ್ಟವನ್ನು ತೀರಿಸುತ್ತಾರೆ. ಸಂಪತ್ತಿನ ಅಧಿದೇವತೆ 'ಲಕ್ಷ್ಮಿ' ಗೆ ಇವುಗಳೆಂದರೆ ಅಚ್ಚುಮೆಚ್ಚು....

ಇಂದು ಬಡತನವೆಂಬುದು ಪ್ರತಿಯೊಬ್ಬರ ಮನೆಮನೆಯಲ್ಲೂ ತಾಂಡವವಾಡುತ್ತಿದೆ. ಶ್ರೀಮಂತ ಜೀವನವನ್ನು ಯಾರೂ ಬಯಸದೇ ಇದ್ದರೂ ನೆಮ್ಮದಿಯ ಜೀವನ ಇಂದು ಪ್ರತಿಯೊಬ್ಬರ ಪಾಲಿಗೆ ಅಗೋಚರ ಎಂದೆನಿಸುತ್ತಿದೆ. ಕಷ್ಟಗಳೂ ನಮ್ಮ ಜೀವನಕ್ಕೆ ಶಾಶ್ವತವಲ್ಲ. ನಾವು ಸುಖವನ್ನು ಕಾಣುತ್ತೇವೆ. ಅದಕ್ಕೆಂದೇ ಇಂದು ಲಕ್ಷ್ಮಿ ದೇವರ ಸ್ತೋತ್ರಗಳನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಮಂತ್ರಗಳು ನಿಮ್ಮ ರಾಶಿಗೆ ಅನುಗುಣವಾಗಿದ್ದು ನಿಮ್ಮ ಇಷ್ಟಗಳನ್ನು ಪೂರೈಸಿಕೊಳ್ಳಲು ಇವುಗಳನ್ನು ನಿತ್ಯವೂ ಪಠಿಸಿ....  

 ಲಕ್ಷ್ಮಿ ದೇವಿಯ ಶಕ್ತಿಯುತ ಮಂತ್ರಗಳು

ಲಕ್ಷ್ಮಿ ದೇವಿಯ ಶಕ್ತಿಯುತ ಮಂತ್ರಗಳು

ನಿಮ್ಮ ಆಸೆಗಳನ್ನು ಮನದ ಇಚ್ಛೆಗಳನ್ನು ಪೂರೈಸಿಕೊಳ್ಳಲು ನೆರವಾಗಲಿರುವ ಈ ಮಂತ್ರಗಳು ಸಕಲ ಕಷ್ಟಗಳನ್ನು ನಿವಾರಿಸಲಿದೆ.ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಶಕ್ತಿಶಾಲಿ ಮಹಾಮಂತ್ರಗಳು

ಲಕ್ಷ್ಮಿ ಕುಬೇರ

ಲಕ್ಷ್ಮಿ ಕುಬೇರ

ಹಿಂದೂ ಧರ್ಮದಲ್ಲಿ ಲಕ್ಷ್ಮಿ ಮಾತೆಯು ಸಂಪತ್ತಿನ ಅದಿಧೇವೆತಯಾಗಿದ್ದು ಕುಬೇರ ಕೂಡ ಐಶ್ವರ್ಯಕ್ಕೆ ದೇವತೆಯಾಗಿದ್ದಾರೆ.ಐಶ್ವರ್ಯದ ಅಧಿಪತಿ ಕುಬೇರನನ್ನು ಒಲಿಸಿಕೊಳ್ಳುವ ಪರಿ ಹೇಗೆ?

ಲಕ್ಷ್ಮಿ ದೇವರು

ಲಕ್ಷ್ಮಿ ದೇವರು

ಪುರಾತನ ವೇದಗಳು ಹೇಳಿರುವಂತೆ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಅಂತೆಯೇ ಅವರ ಕುರಿತಾದ ಶಕ್ತಿಯುತ ಮಂತ್ರಗಳನ್ನು ಉಚ್ಛರಿಸುವುದರಿಂದ ನಮಗೆ ಅತ್ಯುನ್ನತ ಫಲಗಳು ದೊರೆಯಲಿವೆ.

ಶಾಸ್ತ್ರ ಪುರಾಣಗಳು

ಶಾಸ್ತ್ರ ಪುರಾಣಗಳು

ಶಾಸ್ತ್ರ ಪುರಾಣಗಳು ಹೇಳಿರುವಂತೆ ಕೆಲವೊಂದು ಮಂತ್ರಗಳು ಧನಾತ್ಮಕ ಅಂಶವನ್ನು ಬೀರಿದ್ದು ಜೀವನದಲ್ಲಿರುವ ಒತ್ತಡವನ್ನು ದೂರಮಾಡಿ ನಿರಾಳತೆಯನ್ನು ನಿಮಗೆ ತರಲಿದೆ. ನಿಮ್ಮ ಬಡತನವನ್ನು ನಿವಾರಿಸಿ ನಿಮಗೆ ಶಕ್ತಿ ಸಾಮರ್ಥ್ಯವನ್ನು ನೀಡಲಿವೆ.

ಮೇಷ ರಾಶಿಗೆ ಲಕ್ಷ್ಮಿ ಮಂತ್ರ

ಮೇಷ ರಾಶಿಗೆ ಲಕ್ಷ್ಮಿ ಮಂತ್ರ

ಈ ರಾಶಿಯುಳ್ಳವರು ಹೆಚ್ಚು ಸಮರ್ಥರಾಗಿರುತ್ತಾರೆ ಅಂತೆಯೇ ದೇವಿಯನ್ನು ಒಲಿಸಿಕೊಳ್ಳಲು ನಿರ್ದಿಷ್ಟ ಮಂತ್ರವನ್ನು ಪಠಿಸಬೇಕಾಗುತ್ತದೆ. 'ಶ್ರೀಂ' ಎಂದು 1008 ಬಾರಿ ಪಠಿಸುವುದರಿಂದ ನಿಮಗೆ ಅದೃಷ್ಟ ಉಂಟಾಗಲಿದೆ.

ವೃಷಭ ರಾಶಿ

ವೃಷಭ ರಾಶಿ

ಈ ರಾಶಿಯುಳ್ಳವರು ಜವಬ್ದಾರಿ ವ್ಯಕ್ತಿಗಳಾಗಿದ್ದು ಕುಟುಂಬ, ಸಮಾಜ ಮತ್ತು ಸಾಮಾಜಿಕ ಜವಬ್ದಾರಿಯನ್ನು ಹೊತ್ತುಕೊಂಡಿರುವವರಾಗಿದ್ದಾರೆ. "ಓಂ ಸರ್ವಬಾಧಾ ವಿನಿರ್‌ಮುಕ್ತೊ ಧನ ಧಾನ್ಯಃ ಸುತಾನ್ವಿತಃ, ಮನುಷ್ಯೊ ಮತ್‌ಪ್ರಸಾದಿನ್ ಭವಿಷ್ಯತಿ ನ ಸನ್‌ಶಯಾ ಓಂ:" ಎಂಬುದು ಈ ರಾಶಿಯವರು ಉಚ್ಛರಿಸಬೇಕಾದ ಮಂತ್ರವಾಗಿದೆ.

ಮಿಥುನ ರಾಶಿ

ಮಿಥುನ ರಾಶಿ

ತಮ್ಮ ಸಾಮಾನ್ಯ ಪ್ರಜ್ಞೆಯನ್ನು ಬಳಸಿಕೊಂಡು ಪ್ರತಿಕೂಲವಾದ ನಿಯಮಗಳನ್ನು ಅನುಕೂಲಕರವಾಗಿ ಬಳಸಿಕೊಳ್ಳುತ್ತಾರೆ. ಅವರು ಜನ್ಮತಃ ಕಠಿಣ ಪರಿಶ್ರಮಿಗಳಾಗಿದ್ದು, ಸುಲಭವಾಗಿ ಅಡೆತಡೆಗಳನ್ನು ನಿವಾರಿಸಿಕೊಳ್ಳುವಂತಹ ಛಾತಿ ಉಳ್ಳವರಾಗಿದ್ದಾರೆ. ಇವರು ಪಠಿಸಬೇಕಾದ ಮಂತ್ರ: "ಓಂ ಶ್ರಿಂಗ್ ಶ್ರಿಯೆ ನಮಃ".

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಈ ರಾಶಿಯವರು ತಮ್ಮ ಚಿಂತೆಯಲ್ಲಿ ವ್ಯಾಕುಲರಾಗಿರುತ್ತಾರೆ. ತಮ್ಮ ಮನಸ್ಸನ್ನು ಆವಾಗವಾಗ ಬದಲಾಯಿಸಿಕೊಂಡು ಅದಕ್ಕಾಗಿ ಚಿಂತಿಸುವವರಾಗಿದ್ದಾರೆ. "ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದ್ಮಹೇ ವಿಷ್ಣು ಪತ್ಮಿಯೇ ಚ ಧೀಮಹಿ ತನ್ನೊ ಲಕ್ಷ್ಮಿ ಪ್ರಚೋದಯಾತ್ ಓಂ".

ಲಕ್ಷ್ಮಿ ಮಂತ್ರ ಸಿಂಹ ರಾಶಿಗಾಗಿ

ಲಕ್ಷ್ಮಿ ಮಂತ್ರ ಸಿಂಹ ರಾಶಿಗಾಗಿ

ಧೈರ್ಯವಂತರೂ, ಪ್ರಸಿದ್ಧರಾಗಿ ಕೀರ್ತಿವಂತರೂ ಆಗುವುದು ಈ ರಾಶಿಯ ಗುಣವಾಗಿದೆ. ಇವರಿಗಾಗಿ ಇರುವ ಮಂತ್ರ "ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ".

ಕನ್ಯಾರಾಶಿಗಾಗಿ ಲಕ್ಷ್ಮಿ ಮಂತ್ರ

ಕನ್ಯಾರಾಶಿಗಾಗಿ ಲಕ್ಷ್ಮಿ ಮಂತ್ರ

ಇವರು ಸ್ವಭಾವದಲ್ಲಿ ನಿಷ್ಟಾವಂತರಾಗಿದ್ದು ಹೆಚ್ಚು ಕೆಲಸ ಮಾಡುವವರಾಗಿದ್ದಾರೆ. "ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮಿ ನಮಃ".

ತುಲಾ ರಾಶಿಗಾಗಿ ಲಕ್ಷ್ಮಿ ಮಂತ್ರ

ತುಲಾ ರಾಶಿಗಾಗಿ ಲಕ್ಷ್ಮಿ ಮಂತ್ರ

ಇವರು ಭಾವುಕರು ಮತ್ತು ಆಕರ್ಷಣೆಯುಳ್ಳವರಾಗಿದ್ದಾರೆ. ನಿಷ್ಟೆ ಮತ್ತು ನ್ಯಾಯ ಇವರುಗಳ ಮೂಲವಾಗಿದೆ. ಓಂ ಶ್ರೀಂ ಶ್ರೀ ಏ ನಮಃ ಎಂಬ ಮಂತ್ರವನ್ನು ಲಕ್ಷ್ಮಿ ಕೃಪೆಗಾಗಿ ಇವರು ಉಚ್ಛರಿಸಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳಿಗೆ ಇವರುಗಳು ಒಳಗಾಗುತ್ತಾರೆ. ತಮ್ಮ 28 ರ ಹರೆಯದಲ್ಲಿ ಶುಭವನ್ನು ಈ ರಾಶಿಯವರು ಕಂಡುಕೊಳ್ಳುತ್ತಾರೆ. ಇವರಿಗಾಗಿ ಇರುವ ಮಂತ್ರ: ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ.

ಧನು ರಾಶಿ

ಧನು ರಾಶಿ

ಈ ರಾಶಿಯವರು ದೇವಗುರು ಬೃಹಸ್ಪತಿಯ ಗುಣಗಳನ್ನು ಹೊಂದಿರುತ್ತಾರೆ. ಇವರು ಸ್ನೇಹಪರರಾಗಿದ್ದು ಹೆಚ್ಚು ಗಮನ ಸೆಳೆಯುವವರಾಗಿದ್ದಾರೆ. "ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲೆಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ".

ಮಕರ ರಾಶಿ

ಮಕರ ರಾಶಿ

ತಮ್ಮ ಬುದ್ಧಿವಂತಿಕೆಗೆ ಈ ರಾಶಿಯವರು ಹೆಸರುವಾಸಿಯಾಗಿದ್ದು ತಾಳ್ಮೆ ಮತ್ತು ಪರಿಶ್ರಮಿಗಳಾಗಿ ದುಡಿಯುತ್ತಾರೆ. ಟೀಕೆಗಳಿಂದ ಇವರು ನೋವನ್ನು ಅನುಭವಿಸುತ್ತಾರೆ. "ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಏಂಗ್ ಸಾಂಗ್ ಓಂ ಹ್ರಿಂಗ್ ಕಾ ಎ ಲ ಹ್ರಿಂಗ್ ಹ ಸ ಕ ಹ ಲ ಹ್ರಿಂಗ್ ಸಕಲ ಹ್ರಿಂಗ್ ಸಾಂಗ್ ಏಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ".

ಕುಂಭ ರಾಶಿ

ಕುಂಭ ರಾಶಿ

ಇವರು ಉತ್ಸಾಹಿಗಳು ಮತ್ತು ಚತುರರಾಗಿದ್ದು ಸ್ವತಂತ್ರತೆಯನ್ನು ಬಯಸುವವರಾಗಿದ್ದಾರೆ. ಇವರಿಗಾಗಿರುವ ಮಂತ್ರ: "ಏಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯೇ ಹ್ರೀಂ ರಿಮ್ ಸಿದ್‌ವಯೇ ಮಾಮ್ ಗ್ರಿಹೆ ಅಗಚ್ಚಾಗಚ್ ನಮಃ ಸ್ವಾಹಾ".

ಮೀನ ರಾಶಿ

ಮೀನ ರಾಶಿ

ಇವರು ಸೂಕ್ಷ್ಮ ಸ್ವಭಾವದವರಾಗಿದ್ದು ದಾನಿಗಳು ಎಂದೆನಿಸಿದ್ದಾರೆ. ಇವರು ತಾಳ್ಮೆ ಮತ್ತು ಪ್ರೀತಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. "ಓಂ ಶ್ರೀಂ ಹ್ರೀಂ ಕಮಲೆ ಕಮಲಲಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ" ಎಂದಾಗಿದೆ.

 

For Quick Alerts
ALLOW NOTIFICATIONS
For Daily Alerts

    English summary

    Laxmi Mantras for all Zodiac Signs

    In today’s world, wealth is a crucial prerequisite to satiate a materialistic need, which explains the never-ending chase to acquire it. There’s no doubt that most of us, leave no stone unturned to make enough money to fulfil our needs, and desires, but a few are only able to achieve it.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more