For Quick Alerts
ALLOW NOTIFICATIONS  
For Daily Alerts

ವರ್ಷದ ಕೊನೆಯ ಏಕಾದಶಿ ಯಾವಾಗ? ಅದರ ಮಹತ್ವವೇನು?

|

ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಪ್ರಾಮುಖ್ಯತೆಯಿದ್ದು, ಈ ದಿನದಂದು ಉಪವಾಸ ಮತ್ತು ಪೂಜೆಗೆ ಬಹಳ ಪ್ರಾಶಸ್ತ್ಯವಿದೆ. ಅದೇ ರೀತಿ, 2021 ರ ಕೊನೆಯ ಏಕಾದಶಿಯು ಡಿಸೆಂಬರ್ 30ರಂದು ಬಂದಿದೆ. ಈ ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು, ಶ್ರದ್ಧೆಯಿಂದ ಮಾಡುವ ಉಪವಾಸವು ಎಲ್ಲಾ ಕಾರ್ಯಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಈ ಉಪವಾಸದ ಮಹಿಮೆಯನ್ನು ಮಹಾಭಾರತದಲ್ಲಿ ಶ್ರೀ ಕೃಷ್ಣನೇ ವಿವರಿಸಿದ್ದಾನೆ. ಸಫಲ ಏಕಾದಶಿಯ ತಿಥಿ, ಮುಹೂರ್ತ ಮತ್ತು ಪೂಜಾ ವಿಧಾನದ ಬಗ್ಗೆ ತಿಳಿಯೋಣ.

ಸಫಲ ಏಕಾದಶಿಯ ದಿನಾಂಕ, ಸಮಯ ಹಾಗೂ ಮಹತ್ವದ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸಫಲ ಏಕಾದಶಿ ದಿನಾಂಕ ಮತ್ತು ಸಮಯ:

ಸಫಲ ಏಕಾದಶಿ ದಿನಾಂಕ ಮತ್ತು ಸಮಯ:

ಮಾರ್ಗಶಿರ ಮಾಸದ ಕೃಷ್ಣ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಮಾಸದ ಏಕಾದಶಿಯ ದಿನಾಂಕವು ಡಿಸೆಂಬರ್ 29 ರಂದು ಸಂಜೆ 04.00 ರಿಂದ ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ ಕೊನೆಗೊಳ್ಳುತ್ತದೆ. ಡಿಸೆಂಬರ್ 30 ರಂದು ಏಕಾದಶಿಯಂದು ಸೂರ್ಯೋದಯವಾಗುವುದರಿಂದ, ಸಫಲ ಏಕಾದಶಿಯ ಉಪವಾಸವನ್ನು ಈ ದಿನ ಮಾತ್ರ ಆಚರಿಸಲಾಗುತ್ತದೆ. ಮರುದಿನ ಡಿಸೆಂಬರ್ 31ರ ದ್ವಾದಶಿಯಂದು ಉಪವಾಸ ಅಂತ್ಯಗೊಳ್ಳಲಿದೆ.

ಏಕಾದಶಿ ತಿಥಿ ಆರಂಭ: ಡಿಸೆಂಬರ್ 29 ರಂದು ಸಂಜೆ 04.00

ಏಕಾದಶಿ ತಿಥಿ ಮುಕ್ತಾಯ: ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ

ಪಾರಣ ಸಮಯ: ಡಿಸೆಂಬರ್ 31ರಂದು ಬೆಳಗ್ಗೆ 06:41ರಿಂದ 08:58ರವರೆಗೆ

ಸಫಲ ಏಕಾದಶಿಯ ಮಹತ್ವ:

ಸಫಲ ಏಕಾದಶಿಯ ಮಹತ್ವ:

ಮಾರ್ಗಶಿರ-ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲಾ ಏಕಾದಶಿ ಎಂದು ಹೇಳಲಾಗುತ್ತದೆ. ಈ ಏಕಾದಶಿಯನ್ನು ಹಿಂದೂ ಪಂಚಾಂಗದಲ್ಲಿ ಸರ್ವೈಕಾದಶೀ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಭಾರತದಾದ್ಯಂತ ಈ ಏಕಾದಶಿಯನ್ನು ಪುಷ್ಯ ಏಕಾದಶಿಯೆಂದೂ ಕರೆಯುತ್ತಾರೆ. ಈ ದಿನ ವಿಷ್ಣು ಮತ್ತು ಅವನ ಎಲ್ಲಾ ಅವತಾರಗಳನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಏಕಾದಶಿಯ ಎಲ್ಲಾ ಉಪವಾಸಗಳಲ್ಲಿ, ಸಫಲ ಏಕಾದಶಿಯ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ನಿಜವಾದ ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಈ ಉಪವಾಸವನ್ನು ಆಚರಿಸುವ ಮೂಲಕ, ನಿಮಗೆ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ.

ಸಫಲ ಏಕಾದಶಿಯ ಪೂಜಾ ವಿಧಾನ:

ಸಫಲ ಏಕಾದಶಿಯ ಪೂಜಾ ವಿಧಾನ:

ಸಫಲ ಏಕಾದಶಿ ದಿನದಂದು ಬೆಳಗ್ಗೆ ಎದ್ದ ಸ್ನಾನ ಮಾಡಿ ನಂತರ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿಕೊಳ್ಳಬೇಕು.

ನಂತರ ನಿಮ್ಮ ಪೂಜಾ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ ವಿಷ್ಣುವನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಿ.

ತುಳಸಿ ಎಲೆಗಳು, ಧೂಪದ್ರವ್ಯ, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಹಳದಿ ಬಣ್ಣದ ಹಣ್ಣುಗಳು ಮತ್ತು ತೆಂಗಿನಕಾಯಿಗಳು ಭಗವಾನ್‌ ವಿಷ್ಣುವಿನ ಅಚ್ಚುಮೆಚ್ಚಿನ ವಸ್ತುಗಳು. ಪೂಜಿಸಿದ ನಂತರ ಇದನ್ನು ಅವರಿಗೆ ಅರ್ಪಿಸಿ.

ಈ ಶುಭ ಸಂದರ್ಭದಲ್ಲಿ ವಿಷ್ಣುವಿನೊಂದಿಗೆ ಕೃಷ್ಣನನ್ನೂ ಪೂಜಿಸಲಾಗುತ್ತದೆ.

ಈ ಸಂದರ್ಭದಲ್ಲಿ ಕೆಲವರು ತಮ್ಮ ಮನೆಯಲ್ಲಿ ಭಗವಾನ್ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ ಹಾಗೂ ಓದುತ್ತಾರೆ.

ಉಪವಾಸದ ಕಥೆಯನ್ನು ಓದಿ ನಂತರ ಭೋಗವನ್ನು ಅರ್ಪಿಸಿ.

English summary

Last Ekadshi 2021 Date, Muhurta and Significance in Kannada

Here we talking about Last Ekadshi 2021 Date, Muhurta and Significance in Kannada, read on
Story first published: Monday, December 20, 2021, 17:32 [IST]
X
Desktop Bottom Promotion