For Quick Alerts
ALLOW NOTIFICATIONS  
For Daily Alerts

ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

|

ಸೂರ್ಯಪುತ್ರನಾಗಿರುವಂತಹ ಶನಿದೇವರು ಶನಿಗ್ರಹದ ಅಧಿಪತಿ. ಕರ್ಮ ಫಲದಾತನಾಗಿರುವಂತಹ ಶನಿದೇವರು ಒಲಿದರೆ ಆ ವ್ಯಕ್ತಿಯನ್ನು ತಡೆಯುವವರು ಯಾರು ಇಲ್ಲ. ಅದೇ ಶನಿ ದೇವರು ಮುನಿದರೆ ಆಗ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ನಿರ್ಗತಿಕನಾಗಿ ಹೋಗುತ್ತಾನೆ ಎನ್ನುವ ಮಾತಿದೆ. ಹಿಂದಿನ ಕಾಲದಲ್ಲಿ ನಳ ಮಹಾರಾಜನೇ ಇದಕ್ಕೆ ಸಾಕ್ಷಿ. ಒಂದು ಸಾಮ್ರಾಜ್ಯದ ರಾಜನಾಗಿದ್ದಂತಹ ನಳಮಹಾರಾಜನು ಶನಿಯ ಮುನಿಸಿಗೆ ತುತ್ತಾಗಿ ಬಳಿಕ ತನ್ನ ಸಾಮ್ರಾಜ್ಯವನ್ನು ಕಳೆದೊಂಡು ಅಡುಗೆಯವನಾಗಿ ಕೆಲಸ ಮಾಡುವಂತಹ ಪರಿಸ್ಥಿತಿ ಬರುವುದು. ಶನಿಯು ಒಂದು ರಾಶಿಯಲ್ಲಿ ಏಳು ವರ್ಷಗಳ ತನಕ ಉಳಿಯಬಲ್ಲರು.

ಇದರಿಂದಾಗಿ ಈ ಸಮಯವನ್ನು ಧೈಯಾ ಅಥವಾ ಸಾಡೇ ಸಾತಿ ಎಂದು ಕರೆಯಲಾಗುತ್ತದೆ. ಜ್ಯೋತಿಷಿಗಳು ಜನ್ಮ ಜಾತಕವನ್ನು ನೋಡಿಕೊಂಡು ಶನಿ ಸಾಡೇಸಾತಿ ಬಗ್ಗೆ ಹೇಳುವರು. ಧೈಯಾ ಎಂದರೆ ಎರಡುವರೆ ವರ್ಷಗಳ ಕಾಲ ಶನಿಯು ನಿಮ್ಮ ರಾಶಿಯಲ್ಲಿ ಇರುವುದು ಮತ್ತು ಸಾಡೇಸಾತಿ ಎಂದರೆ ಏಳು ವರ್ಷಗಳ ಕಾಲ ಶನಿಯು ರಾಶಿಯಲ್ಲಿ ಇರುವುದು.

Shani Dev

ನಿಮ್ಮ ಜನ್ಮ ಕುಂಡಲಿಯ ಎಷ್ಟನೇ ಮನೆಯಲ್ಲಿ ಶನಿಯು ಕುಳಿತುಕೊಂಡಿದ್ದಾನೆ ಮತ್ತು ಅವನಿಗೆ ಪರ ಹಾಗೂ ವಿರುದ್ಧವಾಗಿರುವಂತಹ ಗ್ರಹಗಳು ಯಾವ ಮನೆಗಳಲ್ಲಿ ಇವೆ ಎನ್ನುವುದನ್ನು ಆಧರಿಸಿಕೊಂಡು ನಿಮ್ಮ ರಾಶಿಗೆ ಇದು ಪರಿಣಾಮ ಬೀರುವುದು. ಶನಿಯು ಇರುವಂತಹ ಸಮಯವು ಕೆಟ್ಟದಾಗಿಯಾ ಮತ್ತು ಎಷ್ಟು ಕಾಲ ಇರಲಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಶನಿ ದೇವರು ನಿಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯುವ.

ಅಶ್ವತ್ಥ ಮರ

ಅಶ್ವತ್ಥ ಮರ

ನಿಮ್ಮ ಮನೆಯ ಸಮೀಪ ಅಶ್ವತ್ಥ ಮರ ಬೆಳೆಯುತ್ತಲಿದ್ದರೆ ಮತ್ತು ನೀವು ಅದನ್ನು ಕಿತ್ತು ಹಾಕಿದರೂ ಮತ್ತೆ ಬೆಳೆಯುತ್ತಲಿದ್ದರೆ ಆಗ ನಿಮ್ಮ ಮೇಲೆ ಶನಿ ದೇವರು ಮುನಿಸಿಕೊಂಡಿದ್ದಾರೆ ಎಂದು ತಿಳಿಯಬೇಕು. ನೀವು ಅವರನ್ನು ಸಂತುಷ್ಟಿಗೊಳಿಸಲು ಪರಿಹಾರ ಹುಡುಕಬೇಕು.

ಗೋಡೆ ಕುಸಿಯುವುದು

ಗೋಡೆ ಕುಸಿಯುವುದು

ಮನೆಯ ಗೋಡೆಯು ಕುಸಿಯುವುದು ಅಥವಾ ಬಿರುಕು ಬಿಡುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇದರಿಂದ ಮನೆಯಲ್ಲಿ ಕುಟುಂಬ ಸದಸ್ಯರ ಮಧ್ಯೆ ವಾಗ್ವಾದ ಹೆಚ್ಚಾಗಬಹುದು. ಮುನ್ನೆಚ್ಚರಿಕೆ ತೆಗೆದುಕೊಂಡು ಅಥವಾ ನೀವು ಇದನ್ನು ಸರಿಪಡಿಸಿದರೂ ಮನೆಯ ಗೋಡೆಯು ಕುಸಿದರೆ ಆಗ ಶನಿ ದೇವರು ನಿಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿಯಿರಿ.

Most Read: 'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

ಜೇಡರಬಲೆ

ಜೇಡರಬಲೆ

ಮನೆಯಲ್ಲಿ ಜೇಡರಬಲೆಯು ಕಟ್ಟುವುದು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ. ಜೇಡರಬಲೆಯು ಯಾರು ಇಲ್ಲದೆ ಇರುವಂತಹ ಮತ್ತು ಸ್ವಚ್ಛವಾಗಿರದ ಜಾಗದಲ್ಲಿ ಮಾತ್ರ ಕಂಡುಬರುವುದು. ಇದರಿಂದ ಜೀವನದಲ್ಲಿ ಅಸಂತೋಷ ಹಾಗೂ ಅತೃಪ್ತಿ ಕಾಣಿಸಬಹುದು. ವೇದಗಳಲ್ಲಿ ಕೂಡ ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿರುವುದು. ಮನೆಯಲ್ಲಿ ಜೇಡರಬಲೆ ಮತ್ತು ಜೇಡಗಳ ಸಂಖ್ಯೆಯು ಹೆಚ್ಚಾಗುತ್ತಲಿದ್ದರೆ ಇದು ಶನಿ ದೇವರು ಕುಪಿತರಾಗಿರುವ ಸೂಚನೆ. ನೀವು ಪ್ರತಿನಿತ್ಯವು ಸ್ವಚ್ಛ ಮಾಡುತ್ತಲಿದ್ದರೂ ಇದು ಬರುತ್ತಲಿದ್ದರೆ ಆಗ ಖಂಡಿತವಾಗಿಯೂ ಇದು ಶನಿ ದೇವರ ಪ್ರಭಾವ.

ಕಪ್ಪು ಬೆಕ್ಕು

ಕಪ್ಪು ಬೆಕ್ಕು

ಕಪ್ಪು ಬೆಕ್ಕು ನಿಮ್ಮ ಮನೆಯನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದರೆ ಆಗ ಅದು ಶನಿ ದೇವರು ಉಗ್ರ ಕೋಪದ ಪರಿಣಾಮ ಎಂದು ತಿಳಿಯಿರಿ.

Most Read: ಜ್ಯೋತಿಷ್ಯ ಶಾಸ್ತ್ರ: ಶನಿವಾರದಂದು ಈ ಏಳು ವಸ್ತುಗಳನ್ನು ಮನೆಗೆ ತರಬೇಡಿ!

ಇರುವೆ

ಇರುವೆ

ಇರುವೆ ಬರುವುದು ಮತ್ತೊಂದು ಅಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ಇರುವೆಗಳು ಮನೆ ಮಾಡಿದ್ದರೆ ಆಗ ನೀವು ಶನಿ ದೇವರನ್ನು ಶಾಂತಗೊಳಿಸಲು ಪ್ರಯತ್ನಿಸಬೇಕು. ಸತತ ಪ್ರಯತ್ನದ ಹೊರತಾಗಿಯೂ ನೀವು ಕೋರ್ಟ್ ವ್ಯಾಜ್ಯಗಳಲ್ಲಿ ಸೋಲುವುದು, ಬಾಸ್ ಜತೆಗೆ ಮನಸ್ತಾಪವು ಶನಿ ದೇವರು ಬೇಸರಗೊಂಡಿರುವ ಇತರ ಕೆಲವು ಲಕ್ಷಣಗಳು. ಪ್ರತಿನಿತ್ಯ ಅಥವಾ ನಿಯಮಿತವಾಗಿ ನೀವು ಸಮಸ್ಯೆಗಳನ್ನು ಎದುರಿಸುವುದು ದೊಡ್ಡ ವಿಚಾರವಲ್ಲ. ಆದರೆ ಅತಿಯಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಒಂದು ಸಮಸ್ಯೆ ಕೊನೆಗೊಳ್ಳುವ ಮೊದಲೇ ಮತ್ತೊಂದು ಸಮಸ್ಯೆಯು ಕಾಣಿಸಿಕೊಂಡರೆ ಆಗ ನೀವು ಶನಿ ದೇವರನ್ನು ಪೂಜಿಸಲು ಆರಂಬಿಸಬೇಕು ಮತ್ತು ಅವರನ್ನು ಶಾಂತಗೊಳಿಸಲು ಪ್ರಯತ್ನಿಸಬೇಕು. ಅವರು ನ್ಯಾಯದ ದೇವರು. ಒಬ್ಬ ವ್ಯಕ್ತಿಯ ಕರ್ಮಕ್ಕೆ ಅನುಸಾರವಾಗಿ ಅವರು ಫಲ ನೀಡುವರು. ಹಿಂದಿನ ಜನ್ಮದಲ್ಲಿ ಮಾಡಿರುವಂತಹ ಕೆಟ್ಟ ಕೆಲಸಗಳಿಂದ ನಿಮಗೆ ಈ ಜನ್ಮದಲ್ಲಿ ಕೆಟ್ಟದಾಗುವುದು ಮತ್ತು ಒಳ್ಳೆಯದು ಮಾಡಿದ್ದರೆ ಆಗ ಒಳ್ಳೆಯದಾಗುವುದು. ನೀವು ನ್ಯಾಯದ ದೇವರನ್ನು ಆರಾಧಿಸಿ, ಹಿಂದಿನ ಜನ್ಮ ಕರ್ಮಗಳಿಗೆ ಕ್ಷಮೆ ನೀಡಬೇಕೆಂದು ಭೇಡಿಕೊಳ್ಳಬೇಕು. ಶನಿ ದೇವರು ಭಕ್ತರ ಪ್ರಾರ್ಥನೆ ಕೇಳಿ ಅವರನ್ನು ಅರಸುವರು.

English summary

Know If Shani Dev Is Disappointed With You

Shani Dev is the lord of the planet Saturn. He is known for the extreme level of results he gives, both positive as well as negative. If pleased, he will give you the best of results and if disappointed, it might become too difficult to pacify the situations. When the bad effects start, they might continue for a period as long as seven years. While other planets stay in a zodiac for a few months, he might stay for a period up to more than seven years. There are terms such as 'Dhaiya' and 'Saade-Saati', often used while discussing the position of Saturn in the birth chart by the astrologers.
X
Desktop Bottom Promotion