For Quick Alerts
ALLOW NOTIFICATIONS  
For Daily Alerts

ಇಂತಹ ದೇವಾಲಯಗಳಿಗೆ ಭೇಟಿ ನೀಡಿದರೆ- ಕಾಳ ಸರ್ಪ ದೋಷ ಪರಿಹಾರವಾಗುತ್ತದೆ

By Divya Pandit
|

ಸರ್ಪ ದೋಷ ಎನ್ನುವುದು ಒಂದು ಗಂಭೀರವಾದ ಸಮಸ್ಯೆ. ಈ ದೋಷ ಇರುವವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಎಂದು ಹೇಳಲಾಗುವುದು. ಸರ್ಪ ದೋಷಗಳಲ್ಲಿ ಕಾಳ ಸರ್ಪ ದೋಷವು ಅತ್ಯಂತ ನಕಾರಾತ್ಮಕವಾದ ದೋಷ ಎಂದು ಪರಿಗಣಿಸಲಾಗುವುದು. ಈ ದೋಷಗಳು ನಮ್ಮ ಕುಂಡಲಿಯಲ್ಲಿ ಕಂಡುಬರುವುದು. ಈ ದೋಷಗಳು ಇವೆ ಎಂದಾದರೆ ಅದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕಾಗುವುದು. ಇಲ್ಲವಾದರೆ ಮುಟ್ಟಿದ ಕೆಲಸ ಕಾರ್ಯಗಳೆಲ್ಲವೂ ನಷ್ಟವನ್ನುಂಟುಮಾಡುವುದು. ಇಲ್ಲವೇ ಮಾನಸಿಕ ನೋವನ್ನು ಸೃಷ್ಟಿಸುವುದು ಎಂದು ಹೇಳಲಾಗುತ್ತದೆ.

ಕಾಳ ಸರ್ಪ ದೋಷವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ದುಃಖಕರವಾದ ದೋಷ ಎಂದು ಪರಿಗಣಿಸಲಾಗಿದೆ. ಈ ದೋಷದಿಂದ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಋಣಾತ್ಮಕ ಸ್ಥಿತಿಯನ್ನು ಎದುರಿಸಬೇಕಾಗುವುದು. ಈ ದೋಷದ ಬಗ್ಗೆ ಸೂಕ್ತ ಮಾಹಿತಿ ಹಾಗೂ ಅದರ ಪರಿಹಾರ ಕ್ರಮಕ್ಕೆ ಕೆಲವು ಮಾಹಿತಿಗಳನ್ನು ಬೋಲ್ಡ್ ಸ್ಕೈ ನಿಮಗಾಗಿ ತಿಳಿಸಿಕೊಡುತ್ತಿದೆ.

ಸರ್ಪ ದೋಷ ಅಂದರೆ ಏನು? ಯಾಕೆ ಬರುತ್ತೆ? ಇದಕ್ಕೆ ಪರಿಹಾರವೇನು?

ಕಾಳ ಸರ್ಪ ದೋಷದ ಸೂಚನೆಗಳು

ಕಾಳ ಸರ್ಪ ದೋಷ ಹೊಂದಿರುವ ವ್ಯಕ್ತಿಗಳ ಕುಂಡಲಿಯಲ್ಲಿ ಅದು ಗೋಚರವಾಗುವುದು. ಅಲ್ಲದೆ ನಿದ್ರೆಯಲ್ಲಿ ಆಗಾಗ ಹಾವಿನ ಕನಸು ಬೀಳುವುದು. ಇಲ್ಲವೇ ಹಾವು ಬಂದು ಕಡಿದಂತೆ ಕಾಣುವುದು. ಈ ದೋಷ ಹೊಂದಿದವರಿಗೆ ಕನಸಿನಲ್ಲಿ ಪದೇ ಪದೇ ನೀರು ಹಾಗೂ ಸ್ವಂತ ಮನೆಯ ಕನಸು ಬೀಳುವುದು. ಕಾಳ ಸರ್ಪ ದೋಷಕ್ಕೆ ಒಳಗಾದ ವ್ಯಕ್ತಿ ಸಮಾಜಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಸೂಕ್ತ ಹೊಂದಾಣಿಕೆಯನ್ನು ಹೊಂದಿರುತ್ತಾರೆ.

ಈ ದೋಷದಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳನ್ನು ತಡೆಯಲು ಕೆಲವು ಪರಿಹಾರಕ್ರಮಗಳಿವೆ. ಅವುಗಳೆಂದರೆ ಕೆಲವು ಜನಪ್ರಿಯ ದೇವಾಲಯಕ್ಕೆ ಭೇಟಿ ನೀಡುವುದು. ನಾಗರ ಪಂಚಮಿಯ ದಿನ ಕೆಲವು ಪ್ರಮುಖ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಮಂಗಳಕರವಾದ ಬದಲಾವಣೆ ಪಡೆಯಬಹುದು.

ನಾಗಚಂದ್ರೇಶ್ವರ ದೇವಾಲಯ

ನಾಗಚಂದ್ರೇಶ್ವರ ದೇವಾಲಯ

ಈ ದೇವಾಲಯವು ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರದಲ್ಲಿದೆ. ಇಲ್ಲಿ ಶಿವನು ಪಾರ್ವತಿ ದೇವಿಯೊಂದಿಗೆ ಹಾವಿನ ಆಕಾರದಲ್ಲಿ ವಿನ್ಯಾಸಗೊಳಿಸಿರುವ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಹಾವಿನ ಅಧಿಪತಿಯು ಆಶೀರ್ವದಿಸುವನು ಎಂದು ಹೇಳಲಾಗುತ್ತದೆ. ಕಾಳಸರ್ಪ ದೋಷ ಹೊಂದಿರುವವರು ಋಣಾತ್ಮಕ ತೊಂದರೆಗಳಿಂದ ಮುಕ್ತಿ ಪಡೆಯಲು ನಾಗರ ಪಂಚಮಿಯದಿನ ಈ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಹೇಳಲಾಗುವುದು.

ಮನ್ನಾರಸಲ ದೇವಸ್ಥಾನ

ಮನ್ನಾರಸಲ ದೇವಸ್ಥಾನ

ಈ ದೇವಾಲಯವು ಅಂತಾರಾಷ್ಟ್ರಿಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಸರ್ಪ ದೇವರ ದೇವಸ್ಥಾನವಾದ ಇದು ಕೇರಳದ ಅಲ್ಹಪುಳ ಜಿಲ್ಲೆಯಿಂದ 40.ಕಿ.ಮೀ. ದೂರದಲ್ಲಿದೆ. ಪರಶುರಾಮನು ಈ ಸ್ಥಳವನ್ನು ಆವಿಷ್ಕರಿಸಿದನು ಎಂದು ಹೇಳಲಾಗುವುದು. ನಂತರ ಇಲ್ಲಿ ಕಾಣಿಸಿಕೊಂಡ ನಾಗರ ಹಾವುಗಳು ಕಾಣಿಸಿಕೊಂಡು, ಭಕ್ತರ ರಕ್ಷಣೆಯ ಭರವಸೆ ನೀಡಿದವು ಎನ್ನುವ ಇತಿಹಾಸವನ್ನು ಪಡೆದುಕೊಂಡಿದೆ. ಈ ದೇವಸ್ಥಾನದಲ್ಲಿ 30,000 ಹಾವುಗಳಿವೆ ಎನ್ನಲಾಗುವುದು. ನಾಗನು ಯಕ್ಷಿ ದೇವಿಯೊಂದಿಗೆ ಇರುವ ನಾಗದೇವರನ್ನು ಇಲ್ಲಿ ಪೂಜಿಸಲಾಗುವುದು. ಈ ದೇವರಿಗೆ ಪಾರ್ಥನೆ ಹಾಗೂ ಪೂಜೆ ಸಲ್ಲಿಸುವುದರಿಂದ ದೋಷ ನಿವಾರಣೆಯಾಗುವುದು.

ನಾಗ ವಾಸುಕಿ ದೇವಾಲಯ

ನಾಗ ವಾಸುಕಿ ದೇವಾಲಯ

ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಗಂಗಾನದಿಯ ದಡದಲ್ಲಿ ಈ ದೇವಾಲಯವಿದೆ. ಈ ದೇವಾಲಯದಲ್ಲಿ ನಗದೇವತೆ, ಶಿವ, ಗಣೇಶ, ದೇವಿ ಪಾರ್ವತಿ, ಪಾಂಡವರ ಚಿಕ್ಕಪ್ಪ, ಭೀಷ್ಮಾ ಪಿಟಮಾದವರ ಚಿತ್ರಗಳಿರುವುದನ್ನು ಕಾಣಬಹುದು. ಈ ದೇವಾಲಯವು ಸರ್ಪಗಳ ರಾಜ ವಾಸುಕಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಕುರಿತು ಮತ್ಸ್ಯ ಪುರಾಣದಲ್ಲಿ ಉಲ್ಲೇಖವಿರುವುದನ್ನು ಕಾಣಬಹುದು.

ತಕ್ಷೇಶ್ವರ ನಾಥ್ ದೇವಾಲಯ

ತಕ್ಷೇಶ್ವರ ನಾಥ್ ದೇವಾಲಯ

ಅಲಹಾಬಾದ್ ಅಲ್ಲಿರುವ ಯಮುನಾ ನದಿಯ ತೀರದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ವಿವರಣೆಯನ್ನು ಪದ್ಮ ಪುರಾಣದಲ್ಲಿ ಕಾಣಬಹುದು. ಈ ದೇವಾಲಯದಲ್ಲಿ ಪ್ರಾರ್ಥನೆ ಹಾಗೂ ಆರಾಧನೆ ಕೈಗೊಳ್ಳುವುದರಿಂದ ಹಾವುಗಳ ಭಯವನ್ನು ತೊಡೆದುಹಾಕಬಹುದು ಎನ್ನಲಾಗುತ್ತದೆ. ಅಲ್ಲದೆ ಆ ವ್ಯಕ್ತಿಯ ಕುಲಕ್ಕೆ ಹಾವುಗಳಿಂದ ರಕ್ಷಿಸಲಾಗುವುದು ಎನ್ನುವ ನಂಬಿಕೆಯಿದೆ.

ಸೆಮ್ ಮುಖೇಮ್ ನಾಗರಾಜ ದೇವಸ್ಥಾನ

ಸೆಮ್ ಮುಖೇಮ್ ನಾಗರಾಜ ದೇವಸ್ಥಾನ

ಸೆಮ್ ಮುಖೇಮ್ ನಾಗರಾಜ ದೇವಸ್ಥಾನವು ಉತ್ತರಖಂಡದ ತೆಹ್ರಿ ಜಿಲ್ಲೆಯಲ್ಲಿದೆ. ದ್ವಾರಕಾ ನಗರವು ನೀರಿನಲ್ಲಿ ಮುಳುಗಿ ಹೋದ ನಂತರ ಕೃಷ್ಣ ಪರಮಾತ್ಮನು ಅಲ್ಲಿ ಹಾವಿನ ದೇವತೆಯಾಗಿ ಕಾಣಿಸಿಕೊಂಡನು ಎಂದು ಹೇಳಲಾಗುವುದು. ಈ ದೇವಾಲಯದಲ್ಲಿ ನಾಗರಾಜನಿಗೆ ಪೂಜೆ ಮಾಡಲಾಗುವುದು. ಪುರಾತನ ಶೈಲಿಯ ವಾಸ್ತುಶಿಲ್ಪಗಳಿಂದ ನಿರ್ಮಾಣಗೊಂಡಿದೆ. ಈ ದೇವಾಲಯದ ಬಾಗಿಲುಗಳ ಮೇಲೆ ಶ್ರೀಕೃಷ್ಣನು ಹಾವಿನ ತಲೆಯ ಮೇಲೆ ಕೊಳಲನ್ನು ನುಡಿಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಇಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಕಾಳ ಸರ್ಪ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.

ಕಾಳ ಸರ್ಪ ಯೋಗ - ವಿಧಗಳು ಮತ್ತು ಅದರ ಪರಿಣಾಮಗಳು

English summary

Kalsarpa Dosha Remedy: Visit These Temples

Kalsarpa Dosha or Kalsarpa Yog is found in some birth charts and considered to be mostly inauspicious. It is believed to be caused by one of the twelve types of snakes affecting the birth chart, as mentioned in the Hindu scriptures. However, it is not always considered to be inauspicious, and the effects might be negligible as well. But it becomes problematic when its presence brings a lot of negative effects with it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more