For Quick Alerts
ALLOW NOTIFICATIONS  
For Daily Alerts

ಕಾಲಭೈರವನ ರೂಪಗಳು, ಮಂತ್ರದ ಅರ್ಥ ಹಾಗೂ ಅದನ್ನು ಪಠಿಸುವುದರಿಂದಾಗುವ ಪ್ರಯೋಜನಗಳು

|

ಕಾಲಭೈರವನು ಭಗವಾನ್ ಶಿವನ ಭಯಾನಕ ಸ್ವರೂಪ. ಕಾಲ ಎಂಬ ಪದವು ಶಿವನು ಕಾಲನಿಯಾಮಕನು ಎಂಬ ಅರ್ಥವನ್ನು ಸೂಚಿಸಿದರೆ, ಭೈರವ ಎಂಬ ಪದವು ಆತನ ಅತ್ಯಂತ ಭಯಾನಕ ಸ್ವರೂಪವನ್ನು ಸೂಚಿಸುತ್ತದೆ. ಆತನ ಸ್ವರೂಪವು ಭಯಾನಕವೇ ಆಗಿದ್ದರೂ, ತನ್ನ ಭಕ್ತರ ಪಾಲಿಗೆ ಶಿವನು ಅತ್ಯಂತ ಕರುಣಾಪೂರ್ಣನು ಹಾಗೂ ಆತನ ಆರಾಧನೆಯು ಅನೇಕ ಪ್ರಯೋಜನಗಳನ್ನು ಅನುಗ್ರಹಿಸುತ್ತದೆ. ಕಾಲಭೈರವನ ಎಂಟು ಸ್ವರೂಪಗಳಿವೆ, ಆ ಪ್ರತಿಯೊಂದು ಸ್ವರೂಪದ ಆರಾಧನೆಯು ಅನನ್ಯ ಲಾಭಗಳನ್ನು ತಂದುಕೊಡುತ್ತದೆ.

1) ಆಸಿತಾಂಗ ಭೈರವ

1) ಆಸಿತಾಂಗ ಭೈರವ

ಆಸಿತಾಂಗ ಭೈರವನ ರೂಪದಲ್ಲಿ ಶಿವನು ಬಂಗಾರ ವರ್ಣದವನಾಗಿದ್ದು, ತ್ರಿಶೂಲ, ಢಮರು, ಪಾಶ ಮತ್ತು ಖಡ್ಗಗಳೆಂಬ ನಾಲ್ಕು ಆಯುಧಗಳನ್ನು ಧರಿಸಿರುತ್ತಾನೆ ಹಾಗೂ ಹಂಸವಾಹನನಾಗಿರುತ್ತಾನೆ.

ಮಂತ್ರ: ಓಂ ಹ್ರೀಂ ಹ್ರಾಂ ಹ್ರೀಂ ಹ್ರಂ ಜಮ್ ಕ್ಲಾಂ ಕ್ಲೀಂ ಕ್ಲುಮ್

ಬ್ರಾಹ್ಮೀ ದೇವೀ ಸಮೇತ್ಯಾಯ ಅಸಿತಾಂಗ ಭೈರವಾಯ

ಸರ್ವಶಾಪ ನಿವರ್ತಿತಾಯ ಓಂ ಹ್ರೀಂ ಪಠ್ ಸ್ವಾಹಾ

ಮಂತ್ರದ ಭಾವಾರ್ಥ: ತಾಯಿ ಬ್ರಾಹ್ಮೀ ದೇವಿಯೊಂದಿಗೆ ಕಾಣಿಸಿಕೊಳ್ಳುವ ಹಾಗೂ ಸಕಲ ಶಾಪಗಳನ್ನು ವಿಮೋಚನೆ ಮಾಡುವ ಅಸಿತಾಂಗ ಭೈರವನಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಸೃಜನಶೀಲ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಎಲ್ಲಾ ಮಹತ್ಕಾರ್ಯಗಳಲ್ಲಿಯೂ ಯಶಸ್ಸನ್ನು ತಂದುಕೊಡುತ್ತದೆ.

2) ರುರು ಭೈರವ

2) ರುರು ಭೈರವ

ರುರು ಭೈರವ ರೂಪದಲ್ಲಿ ಶಿವನು ಮಾಣಿಕ್ಯಗಳೊಂದಿಗೆ ಅಲಂಕೃತಗೊಂಡಿರುವ ಅನೇಕ ಆಭರಣಗಳೊಂದಿಗೆ ಶ್ವೇತವರ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಕ್ಷಮಾಲೆಯನ್ನೂ, ಅಂಕುಶವನ್ನೂ, ಪುಸ್ತಕವೊಂದನ್ನೂ ಹಾಗೂ ವೀಣೆಯೊಂದನ್ನೂ ಹಿಡಿದಿರುತ್ತಾನೆ ಹಾಗೂ ನಂದಿವಾಹನನಾಗಿರುತ್ತಾನೆ.

ಮಂತ್ರ: ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀಂ ಶ್ರೀಂ ಕ್ಲೀಂ ಶ್ರೀಂ

ಸರ್ವ ರಾಜ ವಶೀಕರಾಯ ಸರ್ವ ಜನ ಮೋಹನಾಯ

ಸರ್ವ ವಶ್ಯ ಶೀಘ್ರಂ ಶೀಘ್ರಂ ಶ್ರೀಂ ಕ್ಲೀಂ ಶ್ರೀಂ ಸ್ವಾಹಾ

ಮಂತ್ರದ ಭಾವಾರ್ಥ: ಸಮಸ್ತ ಜನಸಮುದಾಯವನ್ನೂ ತನ್ನ ಅಧೀನದಲ್ಲಿರಿಸಿಕೊಳ್ಳಬಲ್ಲ ಸಾಮರ್ಥ್ಯವುಳ್ಳ ರುರು ಭೈರವನಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಜನರನ್ನು ಜಯಿಸಲು ಆತನು ನನ್ನನ್ನು ಹರಸಲಿ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಶತ್ರುಗಳ ಮೇಲೆ ವಿಜಯವನ್ನು ಸಾಧಿಸಲು ನೆರವಾಗುತ್ತದೆ ಮತ್ತು ಜನರನ್ನು ನಿಮ್ಮ ಅಧೀನರನ್ನಾಗಿಸುತ್ತದೆ.

3) ಚಂಡ ಭೈರವ

3) ಚಂಡ ಭೈರವ

ಚಂಡ ಭೈರವನು ಸುಂದರವದನನಾಗಿ ನೀಲಬಣ್ಣದಲ್ಲಿ ಕಾಣಿಸಿಕೊಳ್ಳುವನು. ಈ ವೇ‍ಷದಲ್ಲಿ ಮಹಾದೇವನು ಅಗ್ನಿ, ಶಕ್ತಿ (ಶೂಲ), ಗದೆ, ಮತ್ತು ಕುಂಡವನ್ನು ಧರಿಸಿರುತ್ತಾನೆ ಹಾಗೂ ಮಯೂರವಾಹನನಾಗಿದ್ದಾನೆ.

ಮಂತ್ರ: ಓಂ ಹ್ರೀಂ ಸರ್ವಶಕ್ತಿ ರೂಪಾಯ ನೀಲ ವರ್ಣಾಯ

ಮಹಾ ಚಂಡ ಭೈರವಾಯ ನಮ:

ಮಂತ್ರದ ಭಾವಾರ್ಥ: ನೀಲವರ್ಣದವನಾಗಿರುವ ಹಾಗೂ ಸಕಲ ಚೈತನ್ಯಗಳ ಆಗರನೇ ಆಗಿರುವ ಚಂಡ ಭೈರವನಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಅತ್ಯುನ್ನತ ಮಟ್ಟದ ಆತ್ಮವಿಶ್ವಾಸವನ್ನುಂಟು ಮಾಡುತ್ತದೆ. ಸ್ಪರ್ಧೆಗಳನ್ನು ಮತ್ತು ಶತ್ರುಗಳನ್ನು ಜಯಿಸಲು ನೆರವಾಗುತ್ತದೆ.

4) ಕ್ರೋಧ ಭೈರವ

4) ಕ್ರೋಧ ಭೈರವ

ಬೂದುಬಣ್ಣದಲ್ಲಿ ಕಾಣಿಸಿಕೊಳ್ಳುವನು ಹಾಗೂ ಕೇತಕವೆಂಬ ಹೆಸರಿನ ಉದ್ದನೆಯ ಖಡ್ಗವನ್ನು ಹಾಗೂ ಕೊಡಲಿಯನ್ನು ಧರಿಸಿರುವನೇ ಕ್ರೋಧ ಭೈರವ. ಈ ರೂಪದಲ್ಲಿ ಕಾಲಭೈರವನು ಗಿಡುಗನ ಮೇಲೆ ಸವಾರಿ ಮಾಡುವನು.

ಮಂತ್ರ: ಓಂ ಶ್ರೀಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ

ಸರ್ವ ವಿಘ್ನ ನಿವಾರಣಾಯ ಮಹಾ ಕ್ರೋಧ ಭೈರವಾಯ ನಮ:

ಮಂತ್ರದ ಭಾವಾರ್ಥ: ಸಕಲ ವಿಘ್ನಗಳನ್ನೂ ಹೋಗಲಾಡಿಸುವ ಮಹಾ ಕ್ರೋಧ ಭೈರವನಿಗೆ ನಾನು ತಲೆಬಾಗಿ ನಮಿಸುವೆನು.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಜೀವನದಲ್ಲಿ ಪ್ರಬಲವಾದ ಮತ್ತು ಮಹತ್ತರವಾದ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿಯನ್ನು ಪಡೆಯಲು ಈ ಮಂತ್ರ ಪಠಣ ನಿಮಗೆ ಸಹಕಾರಿ.

5) ಉನ್ಮತ್ತ ಭೈರವ

5) ಉನ್ಮತ್ತ ಭೈರವ

ಉನ್ಮತ್ತ ಭೈರವನು ಕುಂಡವನ್ನೂ, ಕೇತಕವನ್ನೂ, ಪರಿಘವನ್ನೂ ಹಾಗೂ ಭಿಂಡಿಫಲ (ಈಟಿ) ಯನ್ನೂ ಧರಿಸಿರುವ ಕಾಲಭೈರವನ ಈ ಸ್ವರೂಪವು ನಗುಮುಖದೊಂದಿಗೆ ಶ್ವೇತವರ್ಣದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಈ ಸ್ವರೂಪದ ಕಾಲಭೈರವನು ಅಶ್ವವಾಹನನಾಗಿದ್ದಾನೆ.

ಮಂತ್ರ: ಓಂ ಹ್ರೀಂ ವಾರಾಹಿ ಸಮೇತಾಯ ಮಹಾ ಉನ್ಮತ್ತಾಯ ಭೈರವಾಯ ಹ್ರೀಂ ಓಂ ಸ್ವಾಹಾ

ಮಂತ್ರದ ಭಾವಾರ್ಥ: ತಾಯಿ ವಾರಾಹಿಯೊಂದಿಗೆ ಕಾಣಿಸಿಕೊಳ್ಳುವ ಉನ್ಮತ ಭೈರವನಿಗೆ ನಾನು ನತಮಸ್ತಕನಾಗಿದ್ದೇನೆ. ಪ್ರಭಾವಶಾಲಿಯಾದ ವಾಕ್ಚಾತುರ್ಯದೊಂದಿಗೆ ಆತನು ನನ್ನನ್ನು ಹರಸಲಿ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ನಿಮ್ಮ ಮಾತುಗಳ ಮೇಲೆ ನಿಮಗೆ ನಿಯಂತ್ರಣವನ್ನು ಸಾಧಿಸಲು ನೆರವಾಗುತ್ತದೆ ಹಾಗೂ ಅಮೋಘವಾದ ವಾಕ್ಚಾತುರ್ಯದೊಂದಿಗೆ ನಿಮ್ಮನ್ನು ಹರಸುತ್ತದೆ.

6) ಕಪಾಲ ಭೈರವ

6) ಕಪಾಲ ಭೈರವ

ಕಪಾಲ ಭೈರವನು ಹಳದಿ ಮೈಬಣ್ಣದವನಾಗಿದ್ದು, ಉನ್ಮತ್ತ ಭೈರವನದ್ದೇ ಆಯುಧಗಳನ್ನು ಧರಿಸಿರುವನು ಹಾಗೂ ಗಜವಾಹನನಾಗಿರುವನು.

ಮಂತ್ರ: ಓಂ ಹ್ರೀಂ ಕ್ರೀಂ ಹ್ರೀಂ ಶ್ರೀಂ

ಕಪಾಲ ಭೈರವಾಯ ನಮ:

ಮಂತ್ರದ ಭಾವಾರ್ಥ: ನಾನು ಕಪಾಲ ಭೈರವನಿಗೆ ಶಿರಬಾಗಿ ನಮಿಸುವೆ ಹಾಗೂ ಆತನ ಆಶೀರ್ವಾದಗಳನ್ನು ಬೇಡುವೆ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಅನುತ್ಪಾದಕ ಕೆಲಸಗಳು ಹಾಗೂ ಕ್ರಿಯೆಗಳೆಲ್ಲವುಗಳಿಗೂ ಮಂಗಳ ಹಾಡುತ್ತದೆ.

7) ಭೀಷಣ ಭೈರವ

7) ಭೀಷಣ ಭೈರವ

ಭೀಷಣ ಭೈರವ ಕೆಂಪು ವರ್ಣದಲ್ಲಿ ಕಾಣಿಸಿಕೊಳ್ಳುವವನಾಗಿದ್ದು, ಉನ್ಮತ್ತ ಭೈರವನದ್ದೇ ಆಯುಧಗಳನ್ನು ಧರಿಸಿರುವನು ಹಾಗೂ ಶವವಾಹನನಾಗಿರುವನು.

ಮಂತ್ರ: ಓಂ ಹ್ರೀಂ ಭೀಷಣ ಭೈರವಾಯ ಸರ್ವ ಶಾಪ ನಿವಾರಣಾಯ

ಮಮ ವಶಂ ಕುರು ಕುರು ಸ್ವಾಹಾ

ಮಂತ್ರದ ಭಾವಾರ್ಥ: ಎಲ್ಲಾ ಬಗೆಯ ಶಾಪಗಳನ್ನೂ ಮತ್ತು ವಶೀಕರಣದ ಅಥವಾ ಮಾಟಮಂತ್ರಾದಿಗಳ ಪ್ರಭಾವಗಳನ್ನೂ ನಿವಾರಿಸುವ ಭೀಷಣ ಭೈರವನಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ದುಷ್ಟಶಕ್ತಿಗಳನ್ನೂ ಹಾಗೂ ಋಣಾತ್ಮಕ ಶಕ್ತಿಗಳನ್ನೂ ಜಯಿಸುವಲ್ಲಿ ಭೀಷಣ ಭೈರವನು ನನಗೆ ನೆರವಾಗಲಿ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಎಲ್ಲಾ ಬಗೆಯ ದುಷ್ಟಶಕ್ತಿಗಳನ್ನೂ ಹಾಗೂ ನೇತ್ಯಾತ್ಮಕ ಶಕ್ತಿಗಳನ್ನೂ ಮೆಟ್ಟಿನಿಲ್ಲಲು ನೆರವಾಗುತ್ತದೆ.

8) ಸಂಹಾರ ಭೈರವ

8) ಸಂಹಾರ ಭೈರವ

ಸಂಹಾರ ಭೈರವ ಮಿಂಚಿನಂತೆ ಕಾಣಿಸಿಕೊಳ್ಳುವ ಸ್ವರೂಪಿಯು ಈತನಾಗಿರುವನು, ಉನ್ಮತ್ತ ಭೈರವನದ್ದೇ ಆಯುಧಗಳನ್ನು ಧರಿಸಿರುವನು ಹಾಗೂ ಸಿಂಹಸವಾರನಾಗಿರುವನು.

ಮಂತ್ರ: ಓಂ ನಮೋ ಭಗವತೇ ಸಂಹರ ಭೈರವಾಯ ಭೂತ ಪ್ರೇತ ಪಿಶಾಚ ಬ್ರಹ್ಮ ರಾಕ್ಷಸಾನ್ ಉಚ್ಛಾಟಾಯ ಉಚ್ಛಾಟಾಯ ಸಂಹರಾಯ ಸಂಹರಾಯ ಸರ್ವ ಭಯ ಛೇದನಂ ಕುರು ಕುರು ಸ್ವಾಹಾ ||

ಮಂತ್ರದ ಭಾವಾರ್ಥ: ಭೂತಗಳು, ಪಿಶಾಚಿಗಳು, ರಕ್ಕಸರು ಹಾಗೂ ಇನ್ನಿತರ ಎಲ್ಲಾ ದುಷ್ಟಶಕ್ತಿಗಳನ್ನು ಇಲ್ಲವಾಗಿಸುವ ಸಂಹಾರ ಭೈರವನಿಗೆ ತಲೆಬಾಗಿ ನಮಿಸುವೆನು. ಎಲ್ಲಾ ನೇತ್ಯಾತ್ಮಕ ಶಕ್ತಿಗಳನ್ನು ಮೆಟ್ಟಿನಿಲ್ಲಲು ಆತನು ನನಗೆ ನೆರವಾಗಲಿ.

ಮಂತ್ರ ಪಠಿಸುವುದರಿಂದಾಗುವ ಲಾಭಗಳು: ಹಿಂದಿನ ಕೃತ್ಯಗಳ ಎಲ್ಲಾ ದುಷ್ಪರಿಣಾಮಗಳನ್ನೂ ನಿವಾರಿಸಲು ನೆರವಾಗುತ್ತದೆ.

English summary

Kala Bhairava Roopas, Mantra Meaning And Benefits

Kala Bhairava is the fearful manifestation of Lord Shiva. The word Kala suggests that he is the controller of time and the word Bhairav suggests that he is the most terrible form. Though his form is fearful, Lord Kalabhairav is highly merciful to his devotees and worshipping Him shall bestow several benefits. There are eight forms of Kala Bhairava. Worshipping each of them gives exclusive benefits.
X
Desktop Bottom Promotion