For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2019: ಅಷ್ಟಮಿಯಂದು ಭಕ್ತರು ಯಾಕೆ ಉಪವಾಸ ಮಾಡುತ್ತಾರೆ?

By Viswanath S
|

ವಿಶ್ವದಾದ್ಯಂತ ಸಂತೋಷ, ಉತ್ಸಾಹ ಮತ್ತು ಹುರುಪಿನಿಂದ ಆಚರಿಸುವ ಹಿಂದೂಗಳ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಜನ್ಮಾಷ್ಟಮಿ ಶ್ರೀ ಕೃಷ್ಣನು ಜನ್ಮ ಹೊಂದಿದ ದಿನ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಘಟನೆಗಳನ್ನು ಜನ್ಮಾಷ್ಟಮಿ ಪ್ರಯುಕ್ತ ಆಚರಿಸುತ್ತಾರೆ. 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು.

ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ: ಉಪವಾಸಮಾಡುವುದು ಈ ಹಿಂದೂ ಹಬ್ಬದಲ್ಲಿ ಸಾಮಾನ್ಯ ಆಚರಣೆಯಾಗಿದೆ. ಇದನ್ನು ಜನ್ಮಾಷ್ಟಮಿ ವ್ರತವೆಂದು ಕರೆದು, ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ.

Janmashtami Fasting For Lord Krishna

ಶ್ರೀ ಕೃಷ್ಣನು ಮಧ್ಯರಾತ್ರಿ 12 ಗಂಟೆಗೆ ಜನ್ಮತಾಳಿದನೆಂದು ಜನಗಳ ನಂಬಿಕೆ. ಈ ಸಮಯದಲ್ಲಿಯೇ ಭಕ್ತರು ತುಂಟ 'ಮಾಖನ್ ಚೋರ್' (ಬೆಣ್ಣೆ ಕಳ್ಳ) ಕೃಷ್ಣನನ್ನು ಕುರಿತು ಪ್ರಾರ್ಥನೆ ಮಾಡಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ. ಶ್ರೀ ಕೃಷ್ಣನಿಗೆ ಸಿಹಿತಿಂಡಿಯೆಂದರೆ ಬಹಳ ಪ್ರೀತಿಯೆಂದು ಬಗೆ ಬಗೆಯ ಸಿಹಿತಿನಿಸುಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಹಾಗೆ ಸಿದ್ಧಪಡಿಸಿದ ಸಿಹಿತಿನಿಸುಗಳೆಲ್ಲವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸಿ ನಂತರ 'ಭೋಗ್' ಪ್ರಸಾದವೆಂದು ಸ್ವೀಕರಿಸುತ್ತಾರೆ.

ಜನ್ಮಾಷ್ಟಮಿಯಂದು ಉಪವಾಸಮಾಡುವುದು ಕೃಷ್ಣನ ಭಜನೆಮಾಡಿ ತಮ್ಮ ಶರೀರ, ಮನಸ್ಸು ಮತ್ತು ಆತ್ಮ ಇವುಗಳಲ್ಲಿರುವ ಕಲ್ಮಶಗಳ ಶುದ್ಧೀಕರಣವಾಗುವುದಕ್ಕೆ ಆಚರಿಸುತ್ತಾರೆ. ಭಕ್ತರು ಉಪವಾಸ ವ್ರತದ ಇಡೀ ದಿನವನ್ನು ಕೃಷ್ಣನ ಭಜನೆಯಲ್ಲಿ ತೊಡಗಿರುತ್ತಾರೆ. ಅದನ್ನು ಶ್ರೀ ಕೃಷ್ಣನ ಜನ್ಮವನ್ನು ಆಚರಿಸಲೂ ಸಹ ಮಾಡುತ್ತಾರೆ ಮತ್ತು ಹಾಗೆ ತಾವು ಮಾಡುವುದೆಲ್ಲಾ 'ಬಾಲ ಗೋಪಾಲನಿಗೆ' ಎಂದು ಅರ್ಪಣೆಮಾಡುತ್ತಾರೆ. ಈ ಮಂಗಳಕರ ಹಿಂದೂ ಹಬ್ಬದಲ್ಲಿ ಕೃಷ್ಣನ ಭಕ್ತರು ಸಾಮಾನ್ಯವಾಗಿ ಎರಡು ವಿಧಗಳ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುತ್ತಾರೆ. ಅವುಗಳ ವಿವರಗಳು ಹೀಗಿವೆ:

ಗಾಂಧಾರಿ ಶಾಪ; ಶ್ರೀಕೃಷ್ಣಾವತಾರದ ಪರಿಸಮಾಪ್ತಿ ಹೇಗೆ?

ಜನ್ಮಾಷ್ಟಮಿಯಂದು ಉಪವಾಸ ಆಚರಿಸುವ ವಿಧಗಳು:

1. ಫಲಹಾರ ಉಪವಾಸ: 'ಪಲಹಾರ ಉಪವಾಸ ವ್ರತ' ವೆಂದು ಕರೆಯುವ ಜನ್ಮಾಷ್ಟಮಿ ಉಪವಾಸ ಅತ್ಯಂತ ಸಾಮಾನ್ಯ ರೀತಿಯಲ್ಲಿ ಒಂದು. ಕೆಲವು ಭಕ್ತರು ಧಾನ್ಯಗಳು, ಕಾಳುಗಳು, ಉಪ್ಪು ಮತ್ತು ಅನ್ನದಿಂದ ದೂರವಿದ್ದು ಉಪವಾಸ ಆಚರಿಸುತ್ತಾರೆ. ಕೇವಲ ಹುರುಳಿ ಹಿಟ್ಟು ಮತ್ತು ಆಲೂಗಡ್ಡೆಯಿಂದ ತಯಾರಿಸಿದ ತಿನಿಸನ್ನು ದಿನದಲ್ಲಿ ಒಮ್ಮೆಮಾತ್ರ ಸೇವಿಸುತ್ತಾರೆ. ಮಧ್ಯರಾತ್ರಿ ಶ್ರೀ ಕೃಷ್ಣನಿಗೆ ಪ್ರಾರ್ಥನೆ ಮತ್ತು ನೈವೈದ್ಯ ಮಾಡಿದ ನಂತರವೇ ಪಲಹಾರವನ್ನು ತೆಗೆದುಕೊಳ್ಳುತ್ತಾರೆ. ಅಂತಹ ಭಕ್ತರು ಸೂರ್ಯಾಸ್ತಮವಾಗುವ ಮೊದಲು ಹಣ್ಣು ಮತ್ತು ಹಾಲನ್ನು ತೆಗೆದುಕೊಳ್ಳಬಹುದು.

2. ನಿರ್ಜಲ ಉಪವಾಸ: ಭಕ್ತರು ನೀರನ್ನು ಸಹ ಸೇವಿಸದೇ ಆಚರಿಸುವ ಇದೊಂದು ಜನ್ಮಾಷ್ಟಮಿಯಂದು ಮಾಡುವ ಕಠಿಣ ಉಪವಾಸ. ಇದನ್ನು ಆಚರಿಸುವ ಭಕ್ತರು ಮಧ್ಯರಾತ್ರಿಯಲ್ಲಿ ಜನ್ಮಾಷ್ಟಮಿಯ ಪೂಜೆ ಮಾಡಿ ಕೃಷ್ಣನಿಗೆ ನೈವೈದ್ಯ ಸಲ್ಲಿಸುವವರೆಗೂ ಯಾವ ಆಹಾರ ಅಥವ ಪಾನೀಯವನ್ನು ತೆಗೆದುಕೊಳ್ಳುವುದಿಲ್ಲ.

ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ ತಿಳಿದುಕೊಳ್ಳಿ

ಜನ್ಮಾಷ್ಟಮಿ ಉಪಾವಾಸದ ಮಹತ್ವ
ಹೀಗೆ ಜನ್ಮಾಷ್ಟಮಿಯಂದು ಉಪವಾಸವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಸಾಧಾರಣವಾಗಿ ಏಕಾದಶಿಯಂದು ಉಪವಾಸ ಆಚರಿಸುವುದಕ್ಕಿಂತಾ ಒಂದು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿಯೆಂದು ಭಕ್ತರ ನಂಬಿಕೆ. ಭಗವಾನ್ ವಿಷ್ಣು ಜನ್ಮಾಷ್ಟಮಿಯ ಮಧ್ಯರಾತ್ರಿ ಶ್ರೀ ಕೃಷ್ಣನಾಗಿ ಜನ್ಮ ತಾಳಿದನು. ಯುಧಿಷ್ಠಿರನು ಶ್ರೀ ಕೃಷ್ಣನನ್ನು ಜನ್ಮಾಷ್ಟಮಿಯ ಉಪವಾಸದಿಂದ ಆಗುವ ಪ್ರಯೋಜನವೇನೆಂದು ಕೇಳಿದಾಗ, ಅವನು ಹೀಗೆ ಉತ್ತರಿಸಿದನು: "ಜನ್ಮಾಷ್ಟಮಿಯಂದು ಉಪವಾಸ ಆಚರಿಸಿದವರಿಗೆ ಸಂಪತ್ತು, ಆಹಾರ ಮತ್ತು ಕೀರ್ತಿಯ ಕೊರತೆ ಎಂದೆಂದಿಗೂ ಇರುವುದಿಲ್ಲ." ಅಂದಿನ ದಿನ ಭಕ್ತ ದಂಪತಿಗಳು ಲೈಂಗಿಕ ಕಾರ್ಯಗಳಿಂದ ದೂರವಿರುವರೆಂದು ಹೇಳುತ್ತಾರೆ.

ಜನ್ಮಾಷ್ಟಮಿಯಂದು ಉಪವಾಸ ಆಚರಿಸುವುದಕ್ಕೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು? ಶ್ರೀ ಕೃಷ್ಣನಿಗೆ ಸಿಹಿತಿನಿಸು, ವಿಶೇಷವಾಗಿ ಹಾಲುಖೋಯಾದಿಂದ ತಯಾರು ಮಾಡಿದ ತಿನಿಸುಗಳು ಅಧಿಕ ಪ್ರೀತಿ. ನಿಮ್ಮ ಉಪವಾಸವನ್ನು ಹಾಲು ಅಥವ ಖೋಯಾದಿಂದ ಮಾಡಿದ ಸಿಹಿತಿನಿಸು ಸೇವಿಸಿ ಕೊನೆಗೊಳಿಸಬಹುದು. ಇನ್ನುಳಿದ ತಿನಿಸುಗಳನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಉಪಯೋಗಿಸದೇ ತಯಾರುಮಾಡುತ್ತಾರೆ. ಉಪವಾಸವನ್ನು ಹುರುಳಿ ಹಿಟ್ಟಿನ ರೊಟ್ಟಿ ಜೊತೆಗೆ ಬೇಯಿಸಿದ ಅಲೂಗಡ್ಡೆ ಮತ್ತು ಟೊಮ್ಯಾಟೋ ಪಲ್ಯಗಳನ್ನು (ಸಾಮಾನ್ಯ ಉಪ್ಪು, ಈರುಳ್ಳಿ ಮತ್ತು ಬೆಳ್ಳುಳ್ಳಿ ರಹಿತ) ಸೇವಿಸಿ ಅಂತ್ಯಗೊಳಿಸುತ್ತಾರೆ.

English summary

Janmashtami 2019: Fasting For Lord Krishna

Janmashtami has almost arrived. The much awaited Hindu festival is celebrated worldwide with lots of joy, enthusiasm and vigour. During Janmashtami fasting, people either eat fruits or do not eat anything and survive just on water till they offer prayers at midnight.
X
Desktop Bottom Promotion