Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ವಿಸ್ಮಯ ನಗರಿ: ದೇವಸ್ಥಾನದ ಹಿಂದಿರುವ 'ಧನಾತ್ಮಕ ಶಕ್ತಿ'
ವಿಶ್ವದಲ್ಲಿ ಅತ್ಯಂತ ಪುರಾತನ ಸಂಸ್ಕೃತಿಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ದೇಶಗಳಲ್ಲಿ ಭಾರತ ಪ್ರಮುಖವಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿವಾರವೇ. ಅದರಲ್ಲೂ ಸಾವಿರಾರು ವರ್ಷ ಪುರಾತನ ದೇವಾಲಯ ಮತ್ತು ಆರಾಧನಾ ಕೇಂದ್ರಗಳನ್ನು ಭಾರತ ಈಗಲೂ ಉಳಿಸಿಕೊಂಡು ಬಂದಿವೆ. ಇದಕ್ಕೆ ಉತ್ತಮ ಉಹಾಹರಣೆ ತಮಿಳುನಾಡು.
ನಮಗೆಲ್ಲಾ ಗೊತ್ತಿರಬಹುದು, ಹಿಂದಿನ ಕಾಲದಲ್ಲಿ ಮನೆಯ ಹಿರಿಯರು, ಸಾವಿರಾರು ವರುಷಗಳ ಪುರಾತನ ದೇಗುಲಗಳಿಗೆ ಭೇಟಿ ನೀಡಿ ತಮ್ಮ ಇಷ್ಟದೇವರಿಗೆ ಪೂಜೆ ಸಲ್ಲಿಸಿ ದೇವರಿಂದ ರಕ್ಷಣೆ ಮತ್ತು ಅನುಗ್ರಹವನ್ನು ಅಪೇಕ್ಷಿಸುವುದನ್ನು ನಮ್ಮ ಮನೆಯ ಹಿರಿಯರಿಂದ ಕೇಳಿರುತ್ತೇವೆ. ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...
ಆದರೆ, ಇದರ ಮಹತ್ವ ಅರಿಯದ ಯುವಜನತೆಗೆ ಇದೊಂದು ಸಮಯ ಪೋಲು ಮಾಡುವ ಬೂಟಾಟಿಕೆ ಎಂದು ಅನ್ನಿಸಬಹುದು. ಆದರೆ ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕ ಈ ವಿಧಿಯಲ್ಲಿ ನಿಜವಾಗಿಯೂ ಪ್ರಯೋಜನವಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಹಾಗಾದರೆ ಇದರ ಹಿಂದಿರುವ ಧನಾತ್ಮಕ ಶಕ್ತಿಗಳಾವುದು ಎಂಬುದನ್ನು ಮುಂದೆ ಓದಿ...

ಭಾರತದ ದೇಗುಲಗಳು
ಭಾರತದ ಹೆಚ್ಚಿನ ದೇಗುಲಗಳು ಗುಡ್ಡದ ತುದಿಯಲ್ಲಿ, ಬಟಾಬಯಲಿನಲ್ಲಿ, ಸಮುದ್ರ ತೀರದಲ್ಲಿ, ನದಿ ತೀರದಲ್ಲಿ ಹಾಗೂ ಎತ್ತರದ ಸ್ಥಳಗಳಲ್ಲಿಯೇ ನಿರ್ಮಿಸಲ್ಪಟ್ಟಿವೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ದೇವಾಲಯವನ್ನು ನಿರ್ಮಿಸುವ ಮೊದಲು ಈ ಸ್ಥಳದ ಅಕ್ಕಪಕ್ಕ ಸದಾ ಧನಾತ್ಮಕ ಶಕ್ತಿ ಪ್ರವಹಿಸುತ್ತಿದೆ ಎಂದು ಖಾತರಿಪಡಿಸಿಕೊಂಡ ಬಳಿಕವೇ ಅಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿತ್ತಂತೆ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಾರತದ ದೇಗುಲಗಳು
ವೈಜ್ಞಾನಿಕವಾಗಿ ಈ ಸ್ಥಳಗಳನ್ನು ಅವಲೋಕಿಸಿದಾಗ ಭೂಮಿಯ ಆಯಸ್ಕಾಂತೀಯ ಅಲೆಗಳು ಮತ್ತು ವಿದ್ಯುತ್ ಅಲೆಗಳು ಉತ್ತರ ಧ್ರುವದಿಂದ ದಕ್ಷಿಣ ಧೃವದತ್ತ ಯಾವುದೇ ಅಡೆತಡೆಯಿಲ್ಲದೇ ಈ ದೇಗುಲದ ಮೂಲಕ ಹಾದು ಹೋಗುತ್ತಿದೆ, ಎಂದು ಸಮೀಕ್ಷೆಗಳು ಈಗಾಗಲೇ ದೃಢಪಡಿಸಿವೆ.

ಪಾದರಕ್ಷೆಗಳು
ಯಾವುದೇ ದೇವಸ್ಥಾನದಲ್ಲಿ ಪಾದರಕ್ಷೆಗಳೊಂದಿಗೆ ಯಾರಿಗೂ ಪ್ರವೇಶವಿಲ್ಲ. ಬರಿಗಾಲಿನಲ್ಲಿಯೇ ದೇವಸ್ಥಾನದ ಒಳಗಡಿಯಿಡಬೇಕು. ದೇವಸ್ಥಾನದ ಒಳಗೆ ಬರಿಗಾಲಿನಲ್ಲಿ ನಡೆದಾಡಿದಾಗ ನೆಲದಲ್ಲಿ ಸಂಗ್ರಹವಾಗಿದ್ದ ಶಕ್ತಿ ದೇಹಕ್ಕೆ ಪ್ರವಹಿಸಿ ಮನಸ್ಸು ಮತ್ತು ದೇಹಗಳನ್ನು ಉತ್ತಮ ಸ್ವಾಸ್ಥ್ಯದಲ್ಲಿಡುತ್ತವೆ ಮತ್ತು ಧನಾತ್ಮಕ ಚಿಂತನೆಗೆ ನೆರವಾಗುತ್ತದೆ, ಎಂದು ಸಮೀಕ್ಷೆಗಳು ಈಗಾಗಲೇ ದೃಢಪಡಿಸಿವೆ.

ಕರ್ಪೂರದ ಆರತಿ
ಪೂಜಾಕಾಲದಲ್ಲಿ ಪ್ರತಿಯೊ೦ದು ವಿಧಿಯನ್ನೂ ಕೂಡ ಆಧ್ಯಾತ್ಮಿಕ ವಿಜ್ಞಾನದ ನಿಯಮಾನುಸಾರವಾಗಿ ನಡೆಸುವುದು ಅತೀ ಪ್ರಮುಖವಾದ ವಿಚಾರವಾಗಿದೆ. ಇದಕ್ಕೆ ಉತ್ತಮ ಉದಾಹರಣೆ, ದೇವರಿಗೆ ಪೂಜಿಸುವ ಕರ್ಪೂರದ ಆರತಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರ್ಪೂರದ ಆರತಿ
ಗರ್ಭಗುಡಿಯ ಭಾಗವನ್ನು ಕತ್ತಲಾಗಿರಿಸಿ ಕರ್ಪೂರ ಮತ್ತು ದೀವಟಿಗೆಗಳ ಬೆಳಕಿನಲ್ಲಿ ವಿಗ್ರಹವನ್ನು ನೋಡುವಂತೆ ಸ್ಥಾಪಿಸಲಾಗಿರುತ್ತದೆ. ಇದರಿಂದ ಕಡಿಮೆ ಬೆಳಕಿನಲ್ಲಿ ವಿಗ್ರಹವನ್ನು ಗಮನಿಸುವ ಪ್ರಯತ್ನದಲ್ಲಿ ಕಣ್ಣುಗಳ ಪಾಪೆಗಳು ಹಿಗ್ಗಿ ಉತ್ತಮವಾದ ವ್ಯಾಯಾಮವನ್ನು ಪಡೆಯುತ್ತವೆ.

ಮಂದಿರಗಳಲ್ಲಿ ಹೂವಿನ ಮಹತ್ವ
ಪೂಜೆಯಲ್ಲಿ ಹೂವು ಮತ್ತು ಹೂವಿನ ದಳಗಳಿಗೆ ವಿಶೇಷ ಮಹತ್ವವಿದೆ. ಹೂವುಗಳು ಸ್ವಚ್ಛ, ಕೋಮಲ ಹಾಗೂ ಸುವಾಸನೆಯಿಂದ ಕೂಡಿರುತ್ತವೆ. ಅಷ್ಟೇ ಅಲ್ಲದೆ, ದೇವರ ಗರ್ಭಗುಡಿಯಲ್ಲಿರುವ, ಅಗರಬತ್ತಿ, ಕರ್ಪೂರ ಮೊದಲಾದವುಗಳ ಸುವಾಸನೆ ಮಂದಿರದಲ್ಲಿ ತುಂಬಿದ್ದು ಇದು ನಾಸಿಕಗಳ ಗ್ರಹಣಶಕ್ತಿಯನ್ನು ಚುರುಕುಗೊಳಿಸುತ್ತವೆ.

ಗರ್ಭಗುಡಿಯ ಸುತ್ತ ಸುತ್ತುಬರುವುದು....
ಪೂಜೆಯ ಬಳಿಕ ಗರ್ಭಗುಡಿಯ ಸುತ್ತ ಸುತ್ತುಬರುವುದು, ಹಿಂದೂ ಧರ್ಮದಲ್ಲಿ ಧಾರ್ಮಿಕ ವಿಧಿಯಾಗಿದೆ, ಈ ವಿಧಿಯ ವೈಜ್ಞಾನಿಕ ಕಾರಣವನ್ನು ಅವಲೋಕಿಸಿದರೆ ಇದಕ್ಕೂ ಆಯಸ್ಕಾಂತೀಯ ಅಲೆ ಕಾರಣವಾಗಿರುವುದು ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಮಾನಸಿಕ ಶಾಂತಿ ಮನದಲ್ಲಿ ನೆಲೆಸಲು ಸಾಧ್ಯವಾಗುತ್ತದೆ.



Click it and Unblock the Notifications
